Flipkart Big Billion Days sale: ಪೊಕೊ ಸಂಸ್ಥೆಯ ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!
ಶಿಯೋಮಿಯಿಂದ ಸ್ವತಂತ್ರಗೊಂಡ ನಂತರ ಪೊಕೊ ಸಂಸ್ಥೆ ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಪೊಕೊ ಸಿ 3, ಪೊಕೊ ಎಂ 2, ಪೊಕೊ ಎಂ 2 ಪ್ರೊ, ಪೊಕೊ ಎಕ್ಸ್ 2 ಮತ್ತು ಪೊಕೊ ಎಕ್ಸ್ 3 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಪೊಕೊ ಸಂಸ್ಥೆ ಇದೀಗ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿಯನ್ನು ಘೋಷಿಸಿದೆ. ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಈ ರಿಯಾಯಿತಿ ದೊರೆಯಲಿದೆ.

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಪೊಕೊ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್ ನೀಡುವುದಾಗಿ ಹೇಳಿದೆ. ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 16 ರಂದು ಪ್ರಾರಂಭವಾಗಲಿದ್ದು, ಅಕ್ಟೋಬರ್ 21 ರವರೆಗೆ ಮುಂದುವರಿಯಲಿದೆ. ಇದೇ ಸೇಲ್ ನಲ್ಲಿ ಪೊಕೊ ತನ್ನ ಸ್ಮಾರ್ಟ್‌ಫೋನ್‌ಗಳನ್ನು ರಿಯಾಯಿತಿಯೊಂದಿಗೆ ನೀಡುವುದಾಗಿ ಘೋಷಿಸಿದೆ. ಹಾಗಾದ್ರೆ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿಯನ್ನು ನೀಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಪ್ಲಿಪ್‌ಕಾರ್ಟ್ ತನ್ನ ದಿ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಸಾಕಷ್ಟು ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ ಘೋಷಿಸಿದೆ. ಇದೇ ಸೇಲ್‌ನಲ್ಲಿ ಇದೀಗ ಪೊಕೊ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಕೂಡ ರಿಯಾಯಿತಿ ದರದಲ್ಲಿ ದೊರೆಯಲಿವೆ. ಇನ್ನು ಈ ಸೇಲ್‌ನಲ್ಲಿ ಇತ್ತಿಚೀಗಷ್ಟೇ ಬಿಡುಗಡೆ ಆಗಿರುವ ಪೊಕೊ C3, ಪೊಕೊ M2, ಪೊಕೊ M2 ಪ್ರೊ, ಪೊಕೊ X2 ಮತ್ತು ಪೊಕೊ X3 ಸ್ಮಾರ್ಟ್‌ಫೋನ್‌ಗಳು ಸೇರಿದ್ದು, 500 ರೂ ರಿಂದ 1,000ರೂ ಗಲವರೆಗೆ ರಿಯಾಯಿತಿ ದೊರೆಯಲಿದೆ.

ಪೊಕೊ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ 10,999 ರೂ ಮೂಲ ಬೆಲೆಯ ಪೊಕೊ M2 ಫ್ಲಿಪ್‌ಕಾರ್ಟ್ ಬಿ್‌ಬಿಲಿಯನ್ ಡೇಸ್ ಸೇಲ್‌ನಲ್ಲಿ 10,499ರೂಗಳಿಗೆ ಲಭ್ಯವಾಗಲಿದೆ. ಇದರಲ್ಲಿ ಖರೀದಿದಾರರಿಗೆ 500 ರೂ ಗಳ ರಿಯಾಯಿತಿ ದೊರೆಯಲಿದೆ. ಅಲ್ಲದೆ ಪೊಕೊ M2 ಪ್ರೊ ಸ್ಮಾರ್ಟ್‌ಫೋನ್ ಮೂಲಬೆಲೆ 13,999 ರಿಂದ, 12,999 ರೂ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಜೊತೆಗೆ ಪೊಕೊ X2 ಸ್ಮಾರ್ಟ್‌ಫೋನ್ 1,000 ರಿಯಾಯಿತಿಯನ್ನು ಪಡೆದುಕೊಂಡಿದೆ. ಇದರ ಬೆಲೆ,17,499 ರಿಂದ, 16,499 ರೂ,ಗಳಿಗೆ ಇಳಿಕೆ ಮಾಡುವ ಸೂಚನೆ ನೀಡಿದೆ.

ಇನ್ನು ಪೊಕೊ X3 ಸ್ಮಾರ್ಟ್‌ಫೋನ್ ಅನ್ನು ಸಹ ಪಟ್ಟಿ ಮಾಡಲಾಗಿದೆ ಆದರೆ ಈ ಸ್ಮಾರ್ಟ್‌ಫೋನ್‌ಗೆ ಯಾವುದೇ ಬೆಲೆ ಕಡಿತವನ್ನು ಮಾಡಿಲ್ಲ. ಪೊಕೊ X3 ಸ್ಮಾರ್ಟ್‌ಫೋನ್ 16,999ರೂ, ಆರಂಭಿಕ ದರದಲ್ಲಿ ಲಭ್ಯವಿದೆ. ಆದಾಗ್ಯೂ, ಈ ಫೋನ್‌ಗಳಿಗೆ ಅನ್ವಯಿಸಬಹುದಾದ ಎಸ್‌ಬಿಐ ಕಾರ್ಡ್‌ಗಳಿಗೆ 10% ತ್ವರಿತ ರಿಯಾಯಿತಿ ಇದೆ. ಇವುಗಳ ಜೊತೆಗೆ ಪೊಕೊ ಕಂಪನಿ ಇತ್ತಿಚಿಗೆ ಬಿಡುಗಡೆ ಮಾಡಿದ ಪೊಕೊ C3 ಸ್ಮಾರ್ಟ್‌ಫೋನ್ ಕೂಡ ಲಭ್ಯವಾಗಲಿದೆ. ಇದು ಬಜೆಟ್ ಸ್ಮಾರ್ಟ್‌ಫೋನ್ ಆಗಿದ್ದು, 3GB + 32GB ಮತ್ತು 4GB + 64GB ಯ ಎರಡು ರೂಪಾಂತರಗಳಲ್ಲಿ ಲಬ್ಯವಾಗಲಿದೆ. ಇದರ ಬೆಲೆ, 8,999.ರೂ ಆಗಿದೆ.


Click it and Unblock the Notifications








