Flipkart BBD ಸೇಲ್: ₹79,999 ಬೆಲೆಯ ನಥಿಂಗ್ ಫೋನ್ (3) ₹34,999 ಕ್ಕೆ!
ಇದೇ ಸೆಪ್ಟೆಂಬರ್ 23 ರಿಂದ ಆರಂಭವಾಗಲಿರುವ ಫ್ಲಿಪ್‌ಕಾರ್ಟ್‌ನ ಬಹು ನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ ಸೇಲ್ ಸ್ಮಾರ್ಟ್‌ಫೋನ್ ಪ್ರಿಯರಿಗೆ ಆಕರ್ಷಕ ಡೀಲ್‌ಗಳನ್ನು ತರುತ್ತಿದೆ. ಈ ಸೇಲ್‌ನಲ್ಲಿ ನಥಿಂಗ್ ಮತ್ತು ಅದರ ಉಪ-ಬ್ರ್ಯಾಂಡ್ CMF ನ ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಿದೆ. ಈ ಮಾರಾಟದ ಪ್ರಮುಖ ಆಕರ್ಷಣೆಗಳಲ್ಲಿ, ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ನಥಿಂಗ್ ಫೋನ್ (3) ಕೂಡ ಒಂದಾಗಬಹುದು. ಏಕೆಂದರೆ ₹79,999 ಬೆಲೆಗೆ ಪರಿಚಯಗೊಂಡಿದ್ದ ನಥಿಂಗ್ ಫೋನ್ (3) ಸಾಧನವು ಈ ಸೇಲ್ ಸಮಯದಲ್ಲಿ ಕೇವಲ ₹34,999 ಕ್ಕೆ ದೊರೆಯಲಿದೆ.!
ಹೌದು, ₹79,999 ಬೆಲೆಗೆ ಬಿಡುಗಡೆಯಾಗುದ್ದ ನಥಿಂಗ್ ಫೋನ್ (3) ಈ ಸೇಲ್ ಸಮಯದಲ್ಲಿ ಕೇವಲ ₹34,999 ಕ್ಕೆ ದೊರೆಯಲಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ. ಇದು ಮೂಲ ಬೆಲೆಗಿಂತ ಸುಮಾರು 56% ರಷ್ಟು ಕಡಿಮೆಯಿದ್ದು, ₹45,000 ರಷ್ಟು ಭಾರಿ ರಿಯಾಯಿತಿಯನ್ನು ನೀಡುತ್ತದೆ. ಈ ಬೆಲೆ ಇಳಿಕೆಯು ಅನೇಕರನ್ನು ಅಚ್ಚರಿಗೊಳಿಸಬಹುದು. ಆದರೆ, ಈ ಬೃಹತ್ ರಿಯಾಯಿತಿಯನ್ನು ಪಡೆಯಲು ಕೆಲವು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಇದರ ಕುರಿತು ಸಂಪೂರ್ಣ ಮಾಹಿತಿ ಫ್ಲಿಪ್‌ಕಾರ್ಟ್‌ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದ್ದು, ಅವುಗಳನ್ನು ಸಹ ನೋಡೋಣ ಬನ್ನಿ.

ನಥಿಂಗ್ ಫೋನ್ (3) ನ ಮೇಲೆ ಲಭ್ಯವಿರುವ ಈ ಭಾರಿ ರಿಯಾಯಿತಿ ಎಲ್ಲರಿಗೂ ಸುಲಭವಾಗಿ ದೊರೆಯುವುದಿಲ್ಲ.! ನಥಿಂಗ್ ಫೋನ್ (3) ಬಿಗ್ ಬಿಲಿಯನ್ ಡೇಸ್ ಆಫರ್‌ಗಳು₹34,999 ರ ರಿಯಾಯಿತಿ ಬೆಲೆಯು "ಎಲ್ಲವನ್ನೂ ಒಳಗೊಂಡ" ಬೆಲೆಯಾಗಿದ್ದು, ಇದು ಮಾರಾಟದ ಸಮಯದಲ್ಲಿ ವಿನಿಮಯ ಕೊಡುಗೆಗಳು, ಬ್ಯಾಂಕ್ ರಿಯಾಯಿತಿಗಳು ಮತ್ತು ಇತರ ಪ್ರಚಾರಗಳನ್ನು ಒಳಗೊಂಡಿದೆ. ಕೆಲವು ವರದಿಗಳು, ಈ ಮೇಲೆ ತಿಳಿದಲಾದ ಸಂಪೂರ್ಣ ಕೊಡುಗೆಯ ಲಾಭ ಪಡೆಯಲು ಗ್ರಾಹಕರು ನಥಿಂಗ್ ಫೋನ್ (1) ಅಥವಾ ಫೋನ್ (2) ಮಾದರಿಗಳನ್ನು ಹೊಂದಿರಬೇಕು ಎಂದು ಹೇಳಿವೆ.
ಈಗ ತಿಳಿಸಲಾಗಿರುವಂತೆನಥಿಂಗ್ ಫೋನ್ (3) ಮೇಲೆ ಆಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ತ್ವರಿತ 10% ರಿಯಾಯಿತಿ ದೊರೆಯಲಿದೆ. . ಇದರ ಜೊತೆಗೆ, ಇತರ ಹಳೆಯ ಫೋನ್‌ಗಳ ವಿನಿಮಯಕ್ಕೆ ₹7,000 ವರೆಗಿನ ಬೋನಸ್ ದೊರೆಯಲಿದೆ. ಅಲ್ಲದೆ, ಆಯ್ದ ಬ್ಯಾಂಕ್ ಕಾರ್ಡ್‌ಗಳ ಬಳಕೆಯಿಂದ ಹೆಚ್ಚುವರಿ ₹5,000 ರಿಯಾಯಿತಿ ಕೂಡಾ ಪಡೆಯಬಹುದು. ಈ ಎಲ್ಲಾ ಕೊಡುಗೆಗಳನ್ನು ಒಟ್ಟುಗೂಡಿಸಿದಾಗ ಮಾತ್ರ ₹34,999 ರ ಅಂತಿಮ ಬೆಲೆಗೆ ಫೋನ್ ಲಭ್ಯವಾಗುತ್ತದೆ. ಈ ಕುರಿತು ಫ್ಲಿಪ್‌ಕಾರ್ಟ್‌ನಿಂದ ಹೆಚ್ಚಿನ ಮಾಃಇತಿಯನ್ನು ನಿರೀಕ್ಷಿಸಲಾಗಿದೆ.
ನಥಿಂಗ್ ಫೋನ್ (3): ಪ್ರಮುಖ ವೈಶಿಷ್ಟ್ಯಗಳು
ನಥಿಂಗ್ ಫೋನ್ (3) ಬಲಿಷ್ಠ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಇದು ಸ್ನಾಪ್‌ಡ್ರಾಗನ್ 8s Gen 4 ಪ್ರೊಸೆಸರ್‌ನಿಂದ ಶಕ್ತಿ ಪಡೆದಿದ್ದು, ಆಂಡ್ರಾಯ್ಡ್ 15 ಆಧಾರಿತ ನಥಿಂಗ್ OS 3.5 ನಲ್ಲಿ ಕಾರ್ಯನಿರ್ವಹಿಸುತ್ತದೆ. 120 Hz ರಿಫ್ರೆಶ್ ರೇಟ್ ಹೊಂದಿರುವ 6.67 ಇಂಚಿನ AMOLED ಡಿಸ್‌ಪ್ಲೇ ಮತ್ತು ಅತ್ಯುತ್ತಮ ಆಡಿಯೋ ಅನುಭವಕ್ಕಾಗಿ ಡ್ಯುಯಲ್ ಸ್ಪೀಕರ್ಸ್ ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, ಈ ಪೋನ್ ಮೂರು ಹಿಂಬದಿಯ ಕ್ಯಾಮೆರಾಗಳನ್ನು ಒಳಗೊಂಡಿದೆ.
ಈ ಕ್ಯಾಮೆರಾ ಸೆಟಪ್ 50 MP ಪ್ರಾಥಮಿಕ ಲೆನ್ಸ್, 3x ಆಪ್ಟಿಕಲ್ ಜೂಮ್ ಹೊಂದಿರುವ 50 MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಮತ್ತು 50 MP ಅಲ್ಟ್ರಾವೈಡ್ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ 50 MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 65W ವೇಗದ ಚಾರ್ಜಿಂಗ್ ಬೆಂಬಲಿಸುವ 5,500mAh ಬ್ಯಾಟರಿಯನ್ನು ಹೊಂದಿದೆ. ಈ ಎಲ್ಲ ವೈಶಿಷ್ಟ್ಯಗಳ ಜೊತೆಗೆ, ಇದರ ಪಾರದರ್ಶಕ ವಿನ್ಯಾಸ ಮತ್ತು ಗ್ಲಿಫ್ ಇಂಟರ್‌ಫೇಸ್ ಬಳಕೆದಾರರಿಗೆ ವಿಶಿಷ್ಟ ಅನುಭವ ನೀಡುತ್ತದೆ.
ಇತರ ನಥಿಂಗ್ ಮತ್ತು CMF ಫೋನ್‌ಗಳ ಮೇಲೆ ಆಕರ್ಷಕ ಕೊಡುಗೆಗಳು
ನಥಿಂಗ್ ಫೋನ್ (3) ಮಾತ್ರವಲ್ಲದೆ, ಫ್ಲಿಪ್‌ಕಾರ್ಟ್ ಈ ಮಾರಾಟದಲ್ಲಿ ನಥಿಂಗ್ ಮತ್ತು CMF ಬ್ರ್ಯಾಂಡ್‌ಗಳ ಇತರ ಫೋನ್‌ಗಳ ಮೇಲೂ ಗಣನೀಯ ರಿಯಾಯಿತಿಗಳನ್ನು ನೀಡುತ್ತಿದೆ. ಇದರ ವಿವರಗಳು ಈ ಕೆಳಗಿವೆ,
CMF ಫೋನ್ 2 ಪ್ರೊ: ₹16,999 ರ ಬದಲು ₹14,999
ನಥಿಂಗ್ ಫೋನ್ (3a): ₹24,999 ರ ಬದಲು ₹20,999
ನಥಿಂಗ್ ಫೋನ್ (3a) ಪ್ರೊ: ₹29,999 ರ ಬದಲು ₹24,999
ನಥಿಂಗ್ ಫೋನ್ (2a): ₹23,999 ರ ಬದಲು ₹17,999
ನಥಿಂಗ್ ಫೋನ್ (2a) ಪ್ಲಸ್: ₹27,999 ರ ಬದಲು ₹19,999
ಫ್ಲಿಪ್‌ಕಾರ್ಟ್‌ನ ಬಹು ನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ ಸೇಲ್ ಮಾರಾಟದಲ್ಲಿ ಪಾರದರಶಕ ಮತ್ತು ವಿಶೇಷ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ನಥಿಂಗ್ ಮತ್ತು CMF ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ನಿಮ್ಮ ಬಜೆಟ್ ಮತ್ತು ಅವಶ್ಯಕತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ಹಲವು ಆಯ್ಕೆಗಳಿವೆ. ಹಾಗಾಗಿ, ಈ ಮಾರಾಟ ಮೇಳವನ್ನು ಮಿಸ್ ಮಾಡದಿರಿ.!


Click it and Unblock the Notifications








