ಲ್ಯಾಪ್‌ಟಾಪ್ ಖರೀದಿಸುವುದಕ್ಕೆ ಇದೇ ಬೆಸ್ಟ್ ಟೈಂ! ಫ್ಲಿಪ್‌ಕಾರ್ಟ್‌ನಲ್ಲಿ 50% ವರೆಗೆ ಡಿಸ್ಕೌಂಟ್!
ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಹಬ್ಬದ ಸೀಸನ್ ಪ್ರಯುಕ್ತ ಬಿಗ್ ಬಿಲಿಯನ್ ಡೇಸ್ ಸೇಲ್ ನಡೆಸುತ್ತಿದೆ. ಈ ಮೂಲಕ ನವರಾತ್ರಿ ಮತ್ತು ದೀಪಾವಳಿ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿವೆ. ಹಬ್ಬ ಶುರುವಾಗುವ ಮುನ್ನವೇ ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ಡಿಸ್ಕೌಂಟ್ ಆಫರ್‌ಗಳ ಸುರಿಮಳೆ ಆಗಿದೆ. ಇನ್ನು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಎಲೆಕ್ಟ್ರಿಕಲ್ ಡಿವೈಸ್‌ಗಳ ಮೇಲೆ ಕೂಡ ಭಾರಿ ರಿಯಾಯಿತಿ ದೊರೆಯುತ್ತಿದೆ. ಇದಲ್ಲದೆ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ಡಿಸ್ಕೌಂಟ್ ಕೂಡ ಲಭ್ಯವಾಗ್ತಿದೆ.

ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2022 ನಲ್ಲಿ ಲ್ಯಾಪ್‌ಟಾಪ್ ಖರೀದಿಸಿದರೆ ಭಾರಿ ರಿಯಾಯಿತಿ ದೊರೆಯಲಿದೆ. ಇದರಲ್ಲಿ ICICI ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಹೆಚ್ಚಿನ ಡಿಸ್ಕೌಂಟ್ ಕೂಡ ಲಭ್ಯವಿದೆ. ಇದಲ್ಲದೆ ಪೇಟಿಎಂ ಗ್ರಾಹಕರು ಕೂಡ 10% ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ರಿಯಾಯಿತಿ ಪಡೆದಿರುವ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸುಸ್ ವಿವೋಬುಕ್ 15 (2021)
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಆಸುಸ್ ವಿವೋಬುಕ್ 15 (2021) ಲ್ಯಾಪ್‌ಟಾಪ್ 44% ಡಿಸ್ಕೌಂಟ್ ಪಡೆದಿದೆ. ಆದರಿಂದ ಈ ಲ್ಯಾಪ್‌ಟಾಪ್ ಅನ್ನು ನೀವು 35,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರು 10% ಕ್ಯಾಶ್‌ಬ್ಯಾಕ್ ಕೂಡ ಪಡೆಯಲಿದ್ದಾರೆ. ಇನ್ನು ಈ ಲ್ಯಾಪ್‌ಟಾಪ್ 15.6 ಇಂಚಿನ ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 10ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಲೆನೊವೊ ಐಡಿಯಾಪ್ಯಾಡ್ 3
ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಲೆನೊವೊ ಐಡಿಯಾಪ್ಯಾಡ್ 3 ಲ್ಯಾಪ್‌ಟಾಪ್ 42% ಡಿಸ್ಕೌಂಟ್ ಹೊಂದಿದೆ. ಇದರಿಂದ ಈ ಲ್ಯಾಪ್‌ಟಾಪ್ ಅನ್ನು ನೀವು ಕೇವಲ 33,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್ ಅನ್ನು 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 11 ನೇ ತಲೆಮಾರಿನ ಇಂಟೆಲ್ ಕೋರ್ i3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಹೆಚ್‌ಪಿ ಕೋರ್ i3 11ನೇ Gen 14s - dy2508TU
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಈ ಲ್ಯಾಪ್‌ಟಾಪ್ 21%ಆಫರ್ ಪಡೆದುಕೊಂಡಿದೆ. ಇದರಿಂದ ಈ ಲ್ಯಾಪ್‌ಟಾಪ್ ಅನ್ನು ನೀವು ಕೇವಲ 38,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್ 14 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 11ನೇ ತಲೆಮಾರಿನ ಇಂಟೆಲ್ ಕೋರ್ i3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್ 4G LTE ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.

ನೋಕಿಯಾ ಪ್ಯೂರ್ ಬುಕ್ X14
ನೋಕಿಯಾ ಪ್ಯೂರ್ ಬುಕ್ X14 ಲ್ಯಾಪ್‌ಟಾಪ್ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 57% ಡಿಸ್ಕೌಂಟ್ ಪಡೆದಿದೆ. ಇದರಿಂದ ಈ ಲ್ಯಾಪ್‌ಟಾಪ್ ನಿಮಗೆ 37,890ರೂ. ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್ 14 ಇಂಚಿನ ಫುಲ್ ಹೆಚ್‌ಡಿ ಎಲ್‌ಇಡಿ ಬ್ಯಾಕ್‌ಲಿಟ್ IPS ಡಿಸ್‌ಪ್ಲೇಯನ್ನು ಹೊಂದಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್ ಸಾಕಷ್ಟು ಸ್ಟೈಲಿಶ್ ಮತ್ತು ಪೋರ್ಟಬಲ್ ಥಿನ್ ಆಗಿದೆ. ಇದು ಆಪ್ಟಿಕಲ್ ಡಿಸ್ಕ್ ಡ್ರೈವ್ ಇಲ್ಲದ ಲೈಟ್ ಲ್ಯಾಪ್‌ಟಾಪ್ ಆಗಿದೆ.

ರೆಡ್ಮಿಬುಕ್ ಪ್ರೊ
ರೆಡ್ಮಿಬುಕ್ ಪ್ರೊ ಲ್ಯಾಪ್‌ಟಾಪ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ 35% ಡಿಸ್ಕೌಂಟ್ ಪಡೆದಿದೆ. ಇದರಿಂದ ಈ ಲ್ಯಾಪ್‌ಟಾಪ್ ನಿಮಗೆ ಕೇವಲ 38,990ರೂ. ಬೆಲೆಯಲ್ಲಿ ದೊರೆಯಲಿದೆ. ಇನ್ನು ಈ ಲ್ಯಾಪ್‌ಟಾಪ್ 15.6-ಇಂಚಿನ ಫುಲ್ ಹೆಚ್‌ಡಿ ಆಂಟಿ ಗ್ಲೇರ್ ಡಿಸ್‌ಪ್ಲೇಯ್ನು ಹೊಂದಿದೆ. ಈ ಡಿಸ್‌ಪ್ಲೇ ಡಿಸಿ ಡಿಮ್ಮಿಂಗ್‌ನೊಂದಿಗೆ 81.8% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದು ಇಂಟೆಲ್ ಕೋರ್ i5 CPU ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ವಿಂಡೋಸ್ 11 ನಲ್ಲಿ ರನ್ ಆಗಲಿದೆ.


Click it and Unblock the Notifications








