ಅ.10ರಿಂದ ಬಿಗ್ ಬಿಲಿಯನ್ ಡೇ ಸೇಲ್..! ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌ಗಳ ಸುರಿಮಳೆ..!
ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ನ ಐದನೇ ಆವೃತ್ತಿಯು ಇದೇ ಅಕ್ಟೊಬರ್ 10 ರಿಂದ ಆರಂಭವಾಗಲಿದೆ.ಐದು ದಿನಗಳು ನಡೆಯುವ ಈ ಸೇಲ್ ನಲ್ಲಿ ಆಫರ್ ಗಳು, ರಿಯಾಯಿತಿಗಳನ್ನು ಮೊಬೈಲ್ , ಗೆಜೆಟ್ಸ್, ಟಿವಿ, ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಪಡೆಯುವುದಕ್ಕೆ ಗ್ರಾಹಕರಿಗೆ ಅವಕಾಶವಿದೆ.

ಮಾಸ್ಟರ್ ಕಾರ್ಡ್ ಗಳ ಜೊತೆಗೆ ಕೈಜೋಡಿಸಿರುವ ಈ ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್ ಹಲವು ರೀತಿಯ ಪೇಮೆಂಟ್ ಆಯ್ಕೆಗಳು ಮತ್ತು ಅದರಲ್ಲಿ ವಿಭಿನ್ನ ರಿಯಾಯಿತಿಗಳನ್ನು ಆಫರ್ ಮಾಡುತ್ತಿದೆ. ಅಮೇಜಾನ್ ಕೂಡ ತನ್ನ ಫೇಸ್ಟೀವ್ ಸೀಸನ್ ಸೇಲ್ ನ್ನು ಆಯೋಜಿಸಲಿದ್ದು ಅದರ ದಿನಾಂಕ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ವಿಭಿನ್ನ ಹಂತಗಳು:
ಹಿಂದಿನ ಮಾರಾಟದಂತೆಯೇ ಈ ಬಾರಿಯೂ ಕೂಡ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ವಿಭಿನ್ನ ಹಂತಗಳು ಇರಲಿದೆ.
1. ಮೊದಲ ದಿನ - ಫ್ಯಾಷನ್ ವಸ್ತುಗಳು, ಟಿವಿ ಮತ್ತು ಅಪ್ಲಯನ್ಸ್ ಗಳು, ಪಿಠೋಪಕರಣಗಳು, ಸ್ಮಾರ್ಟ್ ಡಿವೈಸ್ ಗಳು ಮತ್ತು ಇತರೆ ವಸ್ತುಗಳ ಕೆಟಗರಿಯ ಮೇಲೆ ರಿಯಾಯಿತಿ ಇರಲಿದೆ.
2. ಎರಡನೇ ದಿನ - ಸ್ಮಾರ್ಟ್ ಫೋನ್ ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ರಿಯಾಯಿತಿ.
3. ಕೊನೆಯ ಮೂರು ದಿನ - ಎಲ್ಲಾ ವಸ್ತುಗಳ ಮೇಲೂ ವಿಭಿನ್ನ ರಿಯಾಯಿತಿಗಳನ್ನು ನೀಡಲಾಗುತ್ತದೆ.
ಸಾಮಾನ್ಯ ರಿಯಾಯಿತಿಗಳ ಜೊತೆಗೆ ಪ್ರತಿ ಘಂಟೆಗೆ ಒಮ್ಮೆ ಫ್ಲ್ಯಾಶ್ ಸೇಲ್ ನ್ನು ಕೂಡ ಫ್ಲಿಪ್ ಕಾರ್ಟ್ ಆಯೋಜಿಸುತ್ತಿದೆ ಮತ್ತು ಪ್ರತಿ ಎಂಟು ಗಂಟೆಗಳಿಗೊಮ್ಮೆ ಹೊಸ ಆಫರ್ ಗಳನ್ನು ನೀಡಲಾಗುತ್ತದೆ ಎಂದು ಕಂಪೆನಿಯು ತಿಳಿಸಿದೆ.

ಫ್ಲಿಪ್ ಕಾರ್ಟ್ ಹಬ್ಬದ ಸೀಸನ್ ಸೇಲ್ ನಲ್ಲಿ ಹೆಚ್ಚೆಚ್ಚು ಪೇಮೆಂಟ್ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸುತ್ತದೆ.
1. HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚಿನ ಆಫರ್ ಗಳನ್ನು ಈ ಸೇಲ್ ನಲ್ಲಿ ಪಡೆಯಲಿದ್ದಾರೆ.
2. Bajaj's Finserv EMI ಕಾರ್ಡ್ಸ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯ ಆಫರ್
3. 60,000 ದ ವರೆಗೆ ಕಾರ್ಡ್ ಲೆಸ್ ಕ್ರೆಡಿಟ್ ಆಯ್ಕೆಯನ್ನು ಫ್ಲಿಪ್ ಕಾರ್ಡ್ ನೀಡುತ್ತಿದ್ದು, ಸುಲಭದ ಕಂತುಗಳಲ್ಲಿ ಗ್ರಾಹಕರಿಗೆ ಇದನ್ನು ಪಾವತಿಸುವುದಕ್ಕೆ ಅವಕಾಶವಿರುತ್ತದೆ.
4. ಪೇ ಲೇಟರ್ ಪೇಮೆಂಟ್ ಮೆಥೆಡ್ ನ್ನು ಗ್ರಾಹಕರು ಖರೀದಿ ಮಾಡಲು ಫ್ಲಿಪ್ ಕಾರ್ಟ್ ಅವಕಾಶ ನೀಡುತ್ತದೆ. ಅಂದರೆ ಈ ತಿಂಗಳು ಖರೀದಿಸಿರುವುದಕ್ಕೆ ಮುಂದಿನ ತಿಂಗಳು ಪಾವತಿ ಮಾಡಲು ಫ್ಲಿಪ್ ಕಾರ್ಟ್ ಅವಕಾಶ ನೀಡುತ್ತದೆ.
5. ಫೋನ್ ಪೇ ಮೂಲಕ ಪಾವತಿ ಮಾಡುವ ಬಳಕೆದಾರರಿಗೂ ಕೂಡ ಹೆಚ್ಚೆಚ್ಚು ಕ್ಯಾಷ್ ಬ್ಯಾಕ್ ಆಯ್ಕೆಗಳು ಲಭ್ಯವಿರುತ್ತದೆ.
6. ಟ್ರಾವೆಲ್ ಮತ್ತು ಮೊಬೈಲ್ ರೀಚಾರ್ಜ್ ಮಾಡಿಕೊಂಡ ಬಳಕೆದಾರರಿಗೆ ಫ್ಲಿಪ್ ಕಾರ್ಟ್ ನಲ್ಲಿ ಕುತೂಹಲಕಾರಿ ರಿಯಾಯಿತಿಗಳು ಲಭ್ಯವಾಗುವ ಸಾಧ್ಯತೆ ಇದೆ.

ಪ್ಲಸ್ ಸದಸ್ಯರಿಗೆ ಸೇಲ್ ಗೂ ಮುನ್ನವೇ ಆಕ್ಸಿಸ್ ಆಯ್ಕೆ:
ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರಿಗೆ ಬಿಗ್ ಬಿಲಿಯನ್ ಡೇ ಸೇಲ್ ಗೆ ಬೇಗನೆ ಆಕ್ಸಿಸ್ ನೀಡಲಾಗುತ್ತದೆ. ಸೇಲ್ ಆರಂಭವಾಗುವುದಕ್ಕೂ 3 ಘಂಟೆಗಳ ಮುನ್ನವೇ ಆಕ್ಸಿಸ್ ಮಾಡುವುದಕ್ಕೆ ಇವರಿಗೆ ಅವಕಾಶವಿರುತ್ತದೆ.

ಪ್ರಮೋಷನ್ ಗೆ ಸೆಲೆಬ್ರೆಟಿಗಳ ದಂಡು:
ಈ ಬಾರಿಯ ಫೇಸ್ಟೀವ್ ಸೀಸನ್ ಸೇಲ್ ನ ಪ್ರಮೋಷನ್ ಗೆ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ವೀರಾಟ್ ಕೊಹ್ಲಿ ಸೇರಿದಂತೆ ಇನ್ನೂ ಹಲವು ಸೆಲೆಬ್ರೆಟಿಗಳನ್ನು ಬಳಸಿಕೊಂಡಿರುವ ಬಗ್ಗೆ ಫ್ಲಿಪ್ ಕಾರ್ಟ್ ತಿಳಿಸಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಪ್ರಚಾರ ಕೈಗೊಳ್ಳಲಾಗುತ್ತದೆ.

ಅಮೇಜಾನ್ ಸೇಲ್ ಯಾವಾಗ?
ಈಗಾಗಲೇ ಮೇಲೆ ತಿಳಿಸಿರುವಂತೆ ಅಮೇಜಾನ್ ಕೂಡ ಫೇಸ್ಟೀವ್ ಸೀಸನ್ ಸೇಲ್ ನ್ನು ಆರಂಭಿಸಲಿದ್ದು ಅದಕ್ಕೆ ದಿ ಗ್ರೇಟ್ ಇಂಡಿಯನ್ ಫೇಸ್ಟೀವಲ್ ಎಂದು ಹೆಸರಿಸುವ ನಿರೀಕ್ಷೆ ಇದೆ. ಸದ್ಯಕ್ಕೆ ಅಧಿಕೃತ ದಿನಾಂಕವನ್ನು ಪ್ರಕಟಿಸದೇ ಇದ್ದರೂ ಕೂಡ ಎಲ್ಲರಿಗೂ ತಿಳಿದಿರುವಂತೆ ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಯಾವಾಗಲೂ ಒಂದೇ ಟೈಮ್ ನಲ್ಲೇ ಸೇಲ್ ನ್ನು ಆರಂಭಿಸಿ ಒಬ್ಬರಿಗೊಬ್ಬರು ಸ್ಪರ್ಧೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಗ್ರಾಹಕರು ಅಕ್ಟೋಬರ್ 10 ಆಸುಪಾಸಿನಲ್ಲೇ ಅಮೇಜಾನ್ ಸೇಲ್ ನ್ನೂ ಕೂಡ ನಿರೀಕ್ಷಿಸಬಹುದು.


Click it and Unblock the Notifications








