ಅಕ್ಟೋಬರ್ 21 ರಿಂದ ಫ್ಲಿಪ್‌ಕಾರ್ಟ್ ದೀಪಾವಳಿ ಹಬ್ಬದ ಸೇಲ್ ಆರಂಭ!
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೇಲುತ್ತಿರುವ ದೇಶದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಇದೇ ತಿಂಗಳಲ್ಲಿ ಮೂರನೇ ಮಾರಾಟ ಮೇಳವನ್ನು ಹಮ್ಮಿಕೊಂಡಿದೆ. ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಫ್ಲಿಪ್‌ಕಾರ್ಟ್ ದೀಪಾವಳಿ ಮಾರಾಟ ಮೇಳ ಇದೇ ಅಕ್ಟೋಬರ್‌ನಿಂದ 21 ರಿಂದ 25 ರವರೆಗೆ ನಡೆಯಲಿದ್ದು, ಈ ಮಾರಾಟ ಮೇಳದಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಆಕರ್ಷಕ ಕೊಡುಗೆಗಳನ್ನು ನೋಡಬಹುದು. ಜೊತೆಗೆ ಎಸ್‌ಬಿಐ ಬ್ಯಾಂಕ್ ಬಳಕೆದಾರರು 10% ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು.

ಈ ಸೇಲ್‌ನಲ್ಲಿ ಕಡಿಮೆ ಬೆಲೆಯಲ್ಲಿ ಹಲವಾರು ಮೊಬೈಲ್‌ಗಳನ್ನು ಗ್ರಾಹಕರು ಖರೀದಿಸಬಹುದು. ಖರೀದಿಸಿದ ಎಲ್ಲಾ ಸಾಧನಗಳ ಮೇಲೆ ಬಳಕೆದಾರರು ಸಂಪೂರ್ಣ ಮೊಬೈಲ್ ರಕ್ಷಣೆ ಯೋಜನೆಯನ್ನು ಸಹ ಗ್ರಾಹಕರು ಪಡೆಯುತ್ತಾರೆ. ಟಿವಿ ಮತ್ತು ಉಪಕರಣಗಳಲ್ಲಿ 50% ವರೆಗೆ ರಿಯಾಯಿತಿ ನೀವು ಹಲವಾರು ಟಿವಿಗಳು ಮತ್ತು ಉಪಕರಣಗಳಲ್ಲಿ 50% ವರೆಗೆ ರಿಯಾಯಿತಿ ನೀಡಲಾಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ಒಡೆತನದಲ್ಲಿರುವ ಎಲ್ಲಾ ಉತ್ಪನ್ನಗಳ ಮೇಲೆ ಶೇ.40 ರಿಂದ 60% ವರೆಗೆ ರಿಯಾಯಿತಿ ನೀಡುತ್ತಿರುವುದಾಗಿ ಫ್ಲಿಪ್‌ಕಾರ್ಟ್ ಸಂಸ್ಥೆ ತಿಳಿಸಿದೆ.

ಇನ್ನು ಕೆಲವು ಟಿವಿಗಳು ಮತ್ತು ಉಪಕರಣಗಳಲ್ಲಿ ಬಳಕೆದಾರರು 60% ವರೆಗೆ ರಿಯಾಯಿತಿ ಪಡೆಯುತ್ತಾರೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಮತ್ತು 4ಕೆ ಕ್ಯೂಎಲ್‌ಇಡಿ ಟಿವಿಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದ್ದು, ರೆಫ್ರಿಜರೇಟರ್‌ಗಳು, ವಾಷಿಂಗ್ ಮಷಿನ್ ಮತ್ತು ಮನೆಉ ಇತರೆ ಉತ್ಪನ್ನಗಳು ರಿಯಾಯಿತಿ ದರ ಆಯ್ಕೆಗಳಲ್ಲಿ ಲಭ್ಯವಿದೆ. ಕಡಿಮೆ ಬೆಲೆ ಆಯ್ಕೆಗಳಲ್ಲಿ ಸಾವಿರಾರು ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಫ್ಯಾಷನ್ ಉತ್ಪನ್ನಗಳಿಗೆ ಬಳಕೆದಾರರು ಶೆ.90ರಷ್ಟು ರಿಯಾಯಿತಿ ಪಡೆಯುತ್ತಾರೆ ಎಂದು ಸಂಸ್ಥೆ ತಿಳಿಸಿದೆ.

ಇಷ್ಟು ಮಾತ್ರವಲ್ಲದೇ, ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಖರೀದಿ ಮೇಲೆ ಶೇ. 90% ವರೆಗೆ ಡಿಸ್ಕೌಂಟ್ ನೀಡಲಾಗಿದೆ.ಈ ಉತ್ಪನ್ನಗಳಲ್ಲಿ ಡಿಎಸ್‌ಎಲ್‌ಆರ್‌ಗಳು, ಮಿರರ್‌ಲೆಸ್ ಕ್ಯಾಮೆರಾಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇನ್ನೂ ಹಲವು ಸೇರಿವೆ. ನೀವು ಡ್ಯುಯಲ್-ಲೆನ್ಸ್ ಹೊಂದಿರುವ ನಿಕಾನ್ ಡಿ 5600 ಡಿಎಸ್ಎಲ್ಆರ್ ಬಾಡಿ ಹೆಸರಿನ ಡಿಎಸ್ಎಲ್ಆರ್ ಅನ್ನು ರೂ. 30% ( 45,999ರೂ.ಗಳಲ್ಲಿ) ರಿಯಾಯಿತಿಯೊಂದಿಗೆ ಪಡೆಯಬಹುದಾಗಿದೆ. ನೀವು 50% ವರೆಗೆ ರಿಯಾಯಿತಿ ಹೊಂದಿರುವ ಕೆಲವು ಲ್ಯಾಪ್‌ಟಾಪ್‌ಗಳನ್ನು ಸಹ ಹೊಂದಬಹುದು ಕಂಪೆನಿ ತಿಳಿಸಿದೆ.

ಫ್ಲಿಪ್‌ಕಾರ್ಟ್ ಕೊಡುಗೆಗಳಲ್ಲಿ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳ ಮೇಲೆ ಬೋನಸ್ ಕೊಡುಗೆಯೊಂದಿಗೆ 10% ತ್ವರಿತ ರಿಯಾಯಿತಿ, ಇಎಂಐ ವಹಿವಾಟುಗಳು, ವಿನಿಮಯ ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳು, ಡಬಲ್ ಡೇಟಾ ಕೊಡುಗೆಗಳು ಮತ್ತು ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳು ಸೇರಿದೆ. ಇಷ್ಟು ಮಾತ್ರವಲ್ಲದೇ, ಕೆಲವು ಡೆಬಿಟ್ ಕಾರ್ಡ್‌ಗಳ ಮೇಲೆ 1 ಲಕ್ಷ ರೂ.ಗಳ ವರೆಗೆ ಸಾಲವನ್ನು ನೀಡಲಾಗುತ್ತಿದೆ. ಇನ್ನುಳಿದಂತೆ ಬಜಾಜ್ ಫಿನ್‌ಸರ್ವ್ ಕಾರ್ಡ್ ಬಳಸುವಾಗ 100 ಆಫರ್ ಮತ್ತು ವಿಮಾನ ಕಾಯ್ದಿರಿಸುವಾಗ 250 ಕ್ಯಾಶ್‌ಬ್ಯಾಕ್ ಸಿಗಲಿದೆ.


Click it and Unblock the Notifications








