ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ ಪ್ರಕಟ: ಏನೆಲ್ಲಾ ಆಫರ್‌ ಲಭ್ಯ!

|

ದೀಪಾವಳಿ ಹಬ್ಬ ಹತ್ತಿರ ಬರ್ತಿದ್ದ ಹಾಗೇ ಇ-ಕಾಮರ್ಸ್‌ ತಾಣಗಳು ಕಲರ್‌ಫುಲ್‌ ಸೇಲ್‌ಗಳ ಮೂಲಕ ಮರಳಿವೆ. ಇದೀಗ ಫ್ಲಿಪ್‌ಕಾರ್ಟ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಿಗ್‌ ದೀಪಾವಳಿ ಸೇಲ್‌ ಅನ್ನು ಘೋಷಿಸಿದೆ. ಈ ಸೇಲ್‌ ಇದೇ ಅಕ್ಟೋಬರ್‌ 19 ರಂದು ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಮಿಸ್‌ ಮಾಡಿಕೊಂಡವರು, ದೀಪಾವಳಿ ಸೆಲ್‌ನಲ್ಲಿ ಆಫರ್‌ಗಳನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿದೆ. ಇನ್ನು ಈ ಸೇಲ್‌ನಲ್ಲಿ ಹೆಚ್ಚುವರಿಯಾಗಿ 10% ರಿಯಾಯಿತಿಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮೂಲಕ ಪಡೆದುಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ ಇದೇ ಅಕ್ಟೋಬರ್‌ 19 ರಂದು ಪ್ರಾರಂಭವಾಗಲಿದೆ. ಈಗಾಗಲೇ ಸೇಲ್‌ ಅನ್ನು ಘೋಷಣೆ ಮಾಡಿರುವ ಫ್ಲಿಪ್‌ಕಾರ್ಟ್‌ ಲಭ್ಯವಾಗುವ ಡಿಸ್ಕೌಂಟ್‌ಗಳ ಬಗ್ಗೆ ಮಾಹಿತಿಯನ್ನು ರಿವೀಲ್‌ ಮಾಡಿದೆ. ಮಾರಾಟದ ಸಮಯದಲ್ಲಿ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಇಎಂಐ ವಹಿವಾಟುಗಳು ಸೇರಿದಂತೆ ಎಲ್ಲಾ ಖರೀದಿಗಳ ಮೇಲೂ ವಿಶೇಷ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಏನೆಲ್ಲಾ ಡಿಸ್ಕೌಂಟ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರವರೆಗೆ

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ ಅಕ್ಟೋಬರ್ 19 ರಿಂದ ಅಕ್ಟೋಬರ್ 23 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಇಂದಿನಿಂದಲೇ (ಅಕ್ಟೋಬರ್ 18) ಸೇಲ್‌ ಲೈವ್‌ ಆಗಿದೆ. ಫ್ಲಿಪ್‌ಕಾರ್ಟ್‌ ಪ್ಲಸ್‌ ಸದ್ಯಸರು ಆಫರ್‌ನಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಪ್ಲಸ್‌ ಅಲ್ಲದ ಸದಸ್ಯರು ಅಕ್ಟೋಬರ್ 19ರಿಂದ ಸೇಲ್‌ ಪ್ರವೇಶಿಸಲು ಸಾಧ್ಯವಾಗಲಿದೆ. ಇನ್ನು ಸೇಲ್‌ ಸಮಯದಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಇಎಂಐ ವಹಿವಾಟುಗಳು ಸೇರಿದಂತೆ ತಮ್ಮ ಎಲ್ಲಾ ಖರೀದಿಗಳ ಮೇಲೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಫ್ಲಿಪ್‌ಕಾರ್ಟ್‌

ಇದಲ್ಲದೆ ಫ್ಲಿಪ್‌ಕಾರ್ಟ್‌ ಸೇಲ್‌ ಸಮಯದಲ್ಲಿ ಪೇಟಿಎಂ ಬಳಕೆದಾರರಿಗೂ ವಿಶೇಷ ಡಿಸ್ಕೌಂಟ್‌ ಲಭ್ಯವಾಗಲಿದೆ. ಬಳಕೆದಾರರು ಪೇಟಿಎಂ ವಾಲೆಟ್‌ ಮತ್ತು ಯುಪಿಐ ಮೂಲಕ ವಹಿವಾಟು ನಡೆಸಿದರೆ 10% ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳ ಬಹುದಾಗಿದೆ. ಇದಲ್ಲದೆ, ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್‌ ಸಮಯದಲ್ಲಿ ಹಣವಿಲ್ಲದೆ ಹೋದರೂ ಕೂಡ ಖರೀದಿಸುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ಫ್ಲಿಪ್‌ಕಾರ್ಟ್ ಪೇ ಲೇಟರ್ ವಿಧಾನವನ್ನು ಸಹ ನೀಡುತ್ತಿದೆ.

ಫ್ಲಿಪ್‌ಕಾರ್ಟ್‌

ಇನ್ನು ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿದಾರರಿಗೆ 199 ರೂ.ಗಳ ಮೊಬೈಲ್ ಪ್ರೊಟೆಕ್ಷನ್‌ ಪ್ಲಾನ್‌ ಕೂಡ ಲಭ್ಯವಾಗಲಿದೆ. ಇದಲ್ಲದೆ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳ ಮೇಲೆ ವಿಶೇಷ ಡೀಲ್‌ ಆಫರ್‌ ಕೂಡ ದೊರೆಯಲಿದೆ. ಇನ್ನು ಇದೇ ಸಮಯದಲ್ಲಿ ಸೌಂಡ್‌ಬಾರ್‌ಗಳನ್ನು 1,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವುದಕ್ಕೆ ಕೂಡ ಅವಕಾಶ ನೀಡಿದೆ. ಅಲ್ಲದೆ ಖರೀದಿದಾರರು ಎಲ್ಲಾ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ 80% ರಿಯಾಯಿತಿಯನ್ನು ಪಡೆದುಕೊಳ್ಳುವುದಕ್ಕೆ ಕೂಡ ಸಾಧ್ಯವಾಗಲಿದೆ.

ಮೇಲೆ

ಫ್ಲಿಪ್‌ಕಾರ್ಟ್ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ನೀಡುವ ಆಫರ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ ಟೀಸರ್‌ಗಳಲ್ಲಿ ರಿಯಲ್‌ಮಿ, ಪೊಕೊ, ಒಪ್ಪೊ, ರೆಡ್‌ಮಿ ಮತ್ತು ಇತರೆ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿಯನ್ನು ಕಾಣಬಹುದಾಗಿದೆ. ಇದಲ್ಲದೆ ಎಕ್ಸ್‌ಚೇಂಜ್‌ ಆಫರ್‌ ಕೂಡ ಲಭ್ಯವಾಗುವ ಸಾಧ್ಯತೆಯಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್ ಸೇಲ್‌ ನಲ್ಲಿ ಸ್ಮಾರ್ಟ್‌ಟಿವಿಗಳು ಮತ್ತು ಇತರ ಗೃಹೋಪಯೋಗಿ ಉಪಕರಣಗಳ ಮೇಲೆ 80% ಡಿಸ್ಕೌಂಟ್‌ ಲಭ್ಯವಾಗಲಿದೆ.

Best Mobiles in India

Read more about:
English summary
Flipkart Big Diwali Sale: discounts, bank offers, best deals

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X