Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ ಬಿಗ್ ದೀಪಾವಳಿ ಸೇಲ್ ಪ್ರಾರಂಭ: ಈ ಫೋನ್‌ಗಳಿಗೆ ಭಾರಿ ಡಿಸ್ಕೌಂಟ್‌!

ಹಬ್ಬಗಳ ಸೀಸನ್‌ ಶುರುವಾಗ್ತಿದ್ದ ಹಾಗೇ ಇ-ಕಾಮರ್ಸ್‌ ತಾಣಗಳು ಆಫರ್‌ಗಳ ಸುರಿಮಳೆಯನ್ನೇ ನೀಡುತ್ತವೆ. ಇನ್ನು ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಸೇಲ್ ಕೆಲ ದಿನಗಳ ಹಿಂದೆಯಷ್ಟೇ ಮುಗಿದಿದೆ. ಇದೀಗ ಪುನಃ ದೀಪಾವಳಿ ಆಫರ್ ಗಳನ್ನ ನೀಡಲು ಸಿದ್ದತೆ ನಡೆಸಿದೆ. ದೀಪಗಳ ಹಬ್ಬ ದೀಪಾವಳಿ ಇನ್ನೇನು ಸಮೀಪಿಸುತ್ತಿದೆ. ನಿಮ್ಮ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವುದಕ್ಕೆ ಫ್ಲಿಪ್‌ಕಾರ್ಟ್‌ ಸಜ್ಜಾಗಿದ್ದು, ಇಂದಿನಿಂದ ನವೆಂಬರ್‌ 4 ರವರೆಗೆ ಫ್ಲಿಪ್ಕಾರ್ಟ್ ಬಿಗ್‌ ದೀಪಾವಳಿ ಸೇಲ್‌ ಅನ್ನು ನಡೆಸಲಿದೆ.

ಫ್ಲಿಪ್ಕಾರ್ಟ್

ಹೌದು, ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್ಕಾರ್ಟ್ ತನ್ನ ಬಿಗ್ ದೀಪಾವಳಿ ಸೇಲ್‌ 2020 ಅನ್ನು ಇಂದಿನಿಂದ ಪ್ರಾರಂಭಿಸಿದೆ. ಫ್ಲಿಪ್‌ಕಾರ್ಟ್‌ನ ಈ ದೀಪಾವಳಿ ಸೇಲ್‌ನಲ್ಲಿ ಗ್ಯಾಜೆಟ್ಸ್‌ಗಳಿಗೆ ಬಿಗ್ ಡಿಸ್ಕೌಂಟ್‌ಗಳು ದೊರೆಯಲಿದ್ದು, ಮುಖ್ಯವಾಗಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌ಗಳು ಮತ್ತು ಸ್ಮಾರ್ಟ್‌ಟಿವಿಗಳಿಗೆ ವಿಶೇಷ ರಿಯಾಯಿತಿಗಳು ಸಿಗಲಿವೆ. ಹಾಗಾದರೇ ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಬೆಸ್ಟ್ ಡಿಸ್ಕೌಂಟ್‌ ಪಡೆಯುವ ಲಿಸ್ಟ್‌ನಲ್ಲಿವೆ ಮತ್ತು ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿಗಳಿಗೆ ಡಿಸ್ಕೌಂಟ್‌ ಎಷ್ಟು?.ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆಪಲ್ ಐಫೋನ್ XR

ಆಪಲ್ ಐಫೋನ್ XR

ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್‌ 2020 ಐಫೋನ್ ಎಕ್ಸ್‌ಆರ್ ರಿಯಾಯಿತಿ ದರದಲ್ಲಿ ದೊರೆಯಲಿದೆ. ಐಫೋನ್ ಎಕ್ಸ್‌ಆರ್ 64 GB ಮೂಲ ಬೆಲೆ 52,500 ರೂ ಆಗಿದ್ದು, ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 39,999 ರೂ ಗಳಿಗೆ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ. ಜೊತೆಗೆ ಎಕ್ಸ್‌ಚೇಂಜ್‌ ಆಫರ್‌ನಲ್ಲಿ ನಿಮಗೆ ರೂ. 14,360.ರವೆಗೆ ದೊರೆಯಲಿದೆ. ಅಲ್ಲದೆ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ ಪಾವತಿ ಮಾಡಿದರೆ 10% ರಿಯಾಯಿತಿ ದೊರೆಯಲಿದೆ.

ಐಫೋನ್ SE

ಐಫೋನ್ SE

ಆಪಲ್‌ನ ಐಫೋನ್ SE 64GB ಫೋನ್‌ ಮತ್ತೆ ರಿಯಾಯಿತಿ ದೊರೆಯಲಿದೆ. 42,500ರೂ. ಮೂಲ ಬೆಲೆಯ ಈ ಐಫೋನ್‌ ಇದೀಗ ರಿಯಾಯಿತಿ ದರದಲ್ಲಿ 32,999ರೂ ಗಳಿಗೆ ದೊರೆಯಲಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರು ಖರೀದಿಸಿದರೆ 3,000 ರೂ. ಗಳವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 +

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 +

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ 2020ನಲ್ಲಿ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎಸ್ 20 + ಗೆ ಭಾರಿ ರಿಯಾಯಿತಿ ಯನ್ನು ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 83,000 ರೂ ಮೂಲಬೆಲೆಯನ್ನು ಹೊಂದಿದ್ದು, 49,999ರೂ ಗಳಿಗೆ ಖರೀದಿಸಬಹುದಾಗಿದೆ. ವಾಲ್ಮಾರ್ಟ್ ಒಡೆತನದ ಕಂಪನಿಯು ಹೆಚ್ಚುವರಿ 14,850 ರೂ. ರಿಯಾಯಿತಿ ನೀಡಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ಫ್ಲಿಪ್‌ಕಾರ್ಟ್‌ ಬಿಗ್ ದೀಪಾವಳಿ ಸೇಲ್‌ನಲ್ಲಿ 59,999 ರೂ.ಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ನೋ ಕಾಸ್ಟ್‌ EMI ಆಯ್ಕೆಯನ್ನು ಸಹ ಪಡೆಯಬಹುದಾಗಿದೆ. ಗ್ಯಾಲಕ್ಸಿ ನೋಟ್ 10+ 6.8-ಇಂಚಿನ ಬೃಹತ್ ಸೂಪರ್ ಅಮೋಲೆಡ್ ಡಿಸ್ಪ್ಲೇ ಮತ್ತು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.

ಎಲ್‌ಜಿ G8 X ಥಿನ್‌ಕ್ಯೂ

ಎಲ್‌ಜಿ G8 X ಥಿನ್‌ಕ್ಯೂ

ಫ್ಲಿಪ್‌ಕಾರ್ಟ್ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಎಲ್‌ಜಿ G8 Xಥಿನ್‌ಕ್ಯೂ ಅನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಲು ಮತ್ತೊಂದು ಅವಕಾಶವನ್ನು ನೀಡುತ್ತಿದೆ. ನವೆಂಬರ್ 3 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುವ ಫ್ಲ್ಯಾಷ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ 24,990 ರೂ ಗಳಿಗೆ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 70,000ರೂ ಆಗಿದೆ.

Best Mobiles in India

English summary
The Walmart-owned company has tied up with Axis Bank to offer 10 percent instant discount to the bank's credit and debit card users.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+