ದೀಪಾವಳಿಗೆ ಫ್ಲಿಪ್‌ಕಾರ್ಟ್‌ನಿಂದ ಮತ್ತೊಂದು ಸೇಲ್..! 75%ರಷ್ಟು ಬಿಗ್ ಡಿಸ್ಕೌಂಟ್..!
ಇತ್ತೀಚೆಗೆ ತಾನೇ ಬಿಗ್ ಬಿಲಿಯನ್ ಡೇ ಸೇಲ್ ಮತ್ತು ಧಮಾಕಾ ಸೇಲ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಮತ್ತೊಂದು ಬಾರಿ ಆಫರ್‌ಗಳ ಮಳೆ ಸುರಿಸುವ ಕುರಿತು ಘೋಷಣೆ ಮಾಡಿದೆ. ಈ ಸಲದ ದೀಪಾವಳಿ ಸಂಭ್ರಮವನ್ನು ಹೆಚ್ಚಿಸಲು ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನ್ನು ಆಯೋಜಿಸಿದ್ದು, ಟಿವಿ, ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ.75ರವರೆಗೂ ರಿಯಾಯಿತಿ ನೀಡುತ್ತಿದೆ.

ಹೌದು, ಇದೇ ನವೆಂಬರ್ 1 ರಿಂದ 5ರವರೆಗೆ ನಡೆಯುವ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಗ್ರಾಹಕರಿಗೆ ಬಂಪರ್ ಆಫರ್‌ಗಳನ್ನು ನೀಡುತ್ತಿದೆ. 5 ದಿನಗಳ ಕಾಲ ನಡೆಯುವ ದೀಪಾವಳಿ ಸೇಲ್ ಸ್ಮಾರ್ಟ್‌ಫೋನ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಕೇಂದ್ರಿಕೃತವಾಗಿದೆ. ಸ್ಯಾಮ್‌ಸಂಗ್, ವಿವೋ, ಒಪ್ಪೋ ಮತ್ತು ಐಫೋನ್ ಸೇರಿದಂತೆ ಅನೇಕ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಹಾಗೂ ಟಿವಿ ಮತ್ತೀತರ ಉತ್ಪನ್ನಗಳು ಶೇ.75ರಷ್ಟು ರಿಯಾಯಿತಿಯಲ್ಲಿ ದೊರೆಯಲಿದ್ದು, ಗ್ರಾಹಕನಿಗೆ ಬರಪೂರ ಲಾಭ ಮಾಡಿಕೊಡಲಿವೆ.

ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್ ಡಿಸ್ಕೌಂಟ್
ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ದೊರೆಯುತ್ತಿದ್ದು, ಶಿಯೋಮಿ ರೆಡ್‌ಮಿ ನೋಟ್ 5 ಪ್ರೋ ರೂ. 2000 ರಿಯಾಯಿತಿಯೊಂದಿಗೆ ರೂ.12,999ಕ್ಕೆ ಮಾರಾಟವಾಗುತ್ತಿದೆ. ವಿವೋ V11 ಸ್ಮಾರ್ಟ್‌ಫೋನ್ ಕೂಡ ರೂ.2000 ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಅದಲ್ಲದೇ ಆಸುಸ್ ಜೆನ್‌ಫೋನ್ 5Z ಸ್ಮಾರ್ಟ್‌ಫೋನ್ ರೂ.5000 ರಿಯಾಯಿತಿಯೊಂದಿಗೆ ರೂ.24,999ಗೆ ಲಭ್ಯವಾಗುತ್ತಿದೆ. ಇನ್ನು ಹಾನರ್ 9N ಸ್ಮಾರ್ಟ್‌ಫೋನ್ ರೂ.10,379ಗೆ ಲಭ್ಯವಿದೆ.

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಆಫರ್
ಸ್ಯಾಮ್‌ಸಂಗ್ ಆನ್ 8 ಸ್ಮಾರ್ಟ್‌ಫೋನ್‌ನ 4GB+64GB ಆವೃತ್ತಿ ರೂ.5,000 ರಿಯಾಯಿತಿಯೊಂದಿಗೆ ರೂ.14,990ಕ್ಕೆ ಖರೀದಿಸಬಹುದಾಗಿದ್ದು, ಸ್ಯಾಮ್‌ಸಂಗ್ ಆನ್ 6 ಸ್ಮಾರ್ಟ್‌ಫೋನ್ ರೂ.2,000 ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದ್ದು, ಗ್ರಾಹಕರು ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಇದು ಬೆಸ್ಟ್ ಟೈಮ್ ಆಗಿದೆ.

ಒಪ್ಪೋ ಫೋನ್‌ಗಳ ಮೇಲೆ ರಿಯಾಯಿತಿ
ಒಪ್ಪೋದ ಉಪಬ್ರಾಂಡ್ ಆಗಿರುವ ರಿಯಲ್‌ಮಿ 2 ಪ್ರೋ ಸ್ಮಾರ್ಟ್‌ಫೋನ್ ರೂ.13,999ಕ್ಕೆ ಲಭ್ಯವಿದ್ದರೆ, ರಿಯಲ್‌ಮಿ C1 ಸ್ಮಾರ್ಟ್‌ಫೋನ್ ರೂ.6,999ಕ್ಕೆ ಲಭ್ಯವಿದೆ. ಅದಲ್ಲದೇ, ಒಪ್ಪೋ A71 ಸ್ಮಾರ್ಟ್‌ಫೋನ್ ರೂ.2000 ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಅದರ ಜತೆಗೆ, ದೀಪಾವಳಿ ಸೇಲ್‌ನಲ್ಲಿ ಖರೀದಿಸಿದ ಸ್ಮಾರ್ಟ್‌ಫೋನ್‌ಗಳಿಗೆ ಶೇ.90ರಷ್ಟು ಮರುಖರೀದಿ ಮೌಲ್ಯದ ಆಫರ್‌ನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ.

ಬಿಗ್ ಸೇಲ್‌ನಲ್ಲಿ ಲೆನೊವೋ ಸ್ಮಾರ್ಟ್‌ಫೋನ್‌ಗಳು
ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್‌ನಲ್ಲಿ ಲೆನೊವೋ ಸ್ಮಾರ್ಟ್‌ಫೋನ್‌ಗಳು ಸಹ ಮಾರಾಟವಾಗುತ್ತಿದ್ದು, ನವೆಂಬರ್ 1ರಂದು ಮಧ್ಯರಾತ್ರಿ 12ಕ್ಕೆ ಲೆನೊವೋ A5 ಮತ್ತು ಲೆನೊವೋ K9 ಸ್ಮಾರ್ಟ್‌ಫೋನ್‌ಗಳು ಮೊದಲ ಬಾರಿಗೆ ಮಾರಾಟವಾಗಲಿವೆ. ಎರಡು ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ ರೂ.5,999 ಮತ್ತು ರೂ.8,999 ಬೆಲೆಯನ್ನು ಹೊಂದಿವೆ. ಅದಲ್ಲದೇ ಗ್ರಾಹಕರು ಹೆಚ್ಚುವರಿಯಾಗಿ ರೂ.1,000 ವಿಶೇಷ ರಿಯಾಯಿತಿ ಪಡೆಯಬಹುದಾಗಿದೆ.

ಟಿವಿ ಮತ್ತೀತರ ಉತ್ಪನ್ನಗಳ ಮೇಲೆ ಬಂಪರ್
ದೀಪಾವಳಿ ಸೇಲ್‌ನಲ್ಲಿ ಫ್ಲಿಪ್‌ಕಾರ್ 500ಕ್ಕೂ ಹೆಚ್ಚು ಉತ್ಪನ್ನಗಳ 20,000ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ವಾಷಿಂಗ್ ಮಷೀನ್, ಗೀಸರ್ ಮತ್ತು ಟಿವಿ ಸೇರಿದಂತೆ ಅನೇಕ ಉತ್ಪನ್ನಗಳ ಮೇಲೆ ಶೇ.75ರಷ್ಟು ರಿಯಾಯಿತಿ ಇದೆ.

Mi ಟಿವಿಗೆ ಬಿಗ್ ಆಫರ್
ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ 55 ಇಂಚಿನ Mi TV LED ಸ್ಮಾರ್ಟ್‌ಟಿವಿ 4 ಪ್ರೋ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಫ್ಲಾಶ್ ಮಾರಾಟಕ್ಕೆ ಬರಲಿದ್ದು, ರೂ.49,999ಕ್ಕೆ ದೊರೆಯಲಿದೆ. ಎಲ್ಲಾ ಉತ್ಪನ್ನಗಳು ಫ್ಲಿಪ್‌ಕಾರ್ಟ್ ಖಚಿತ ಬ್ರಾಂಡ್ ವಾರಂಟಿಯನ್ನು ಹೊಂದಿವೆ.

ಐಫೋನ್ X ಗೆಲ್ಲುವ ಅವಕಾಶ
ಬಿಗ್ ದೀಪಾವಳಿ ಸೇಲ್‌ನಲ್ಲಿ ಗ್ರಾಹಕರು ಬೇರೆ ಉತ್ಪನ್ನಗಳನ್ನು ಖರೀದಿಸಿ ಐಫೋನ್ X ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಅದಲ್ಲದೇ ಬ್ಲೂಟೂಥ್ ಸ್ಪೀಕರ್ ಮತ್ತೀತರ ಉತ್ಪನ್ನಗಳನ್ನು ಹಾಗೂ ಶೇ.100ರಷ್ಟು ಕ್ಯಾಶ್‌ಬ್ಯಾಕ್ ಆಫರ್‌ನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ.

ಮತ್ತೀತರ ಆಫರ್‌ಗಳು
ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ ರೂ.22,000ದವರೆಗೆ ಎಕ್ಸ್‌ಚೆಂಜ್ ಲಭ್ಯವಿದೆ. ನೋ ಕಾಸ್ಟ್ EMI ಸೌಲಭ್ಯ, ರೂ.399 ಮೌಲ್ಯದ ಫ್ಲಿಪ್‌ಕಾರ್ಟ್ ಪ್ರೊಟೆಕ್ಟ್ ಹೆಚ್ಚುವರಿ ವಾರಂಟಿ ಕೂಡ ಗ್ರಾಹಕರಿಗೆ ಲಭ್ಯವಿದ್ದು, SBI ಗ್ರಾಹಕರಿಗೆ ವಿಶೇಷ ಆಫರ್‌ಗಳು ಲಭ್ಯವಾಗುತ್ತವೆ. ಅದಲ್ಲದೇ ಕ್ರೇಜಿ ಡೀಲ್ಸ್, ರಷ್ ಅವರ್ಸ್, ಪ್ರೈಸ್ ಕ್ರಾಶ್ ಮುಂತಾದ ಆಫರ್‌ಗಳು ನಿಮಗೆ ಕಾಯುತ್ತಿವೆ.


Click it and Unblock the Notifications








