Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ವಾಯರ್‌ಲೆಸ್‌ ನೆಕ್‌ಬ್ಯಾಂಡ್‌ಗಳಿಗೆ 84% ವರೆಗೆ ಡಿಸ್ಕೌಂಟ್‌!

ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗ್ತಿದೆ. ಗ್ರಾಹಕರು ತಾವು ಖರೀದಿಸಿದ ಪ್ರತಿ ಗ್ಯಾಜೆಟ್ಸ್‌ಗಳ ಮೇಲೂ ವಿಶೇಷ ರಿಯಾಯಿತಿ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಹಲವು ಸ್ಮಾರ್ಟ್‌ ಡಿವೈಸ್‌ಗಳ ಮೇಲೆ ಬಿಗ್‌ ಆಫರ್‌ ನೀಡುತ್ತಿದೆ. ಇದೇ ಸಮಯದಲ್ಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಖರೀದಿಸುವವರಿಗೆ ಹೆಚ್ಚಿನ ರಿಯಾಯಿತಿ ನೀಡಲಾಗ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ ಇದೇ ಅಕ್ಟೋಬರ್‌ 16ರಂದು ಕೊನೆಗೊಳ್ಳಲಿದೆ. ಈ ಸಮಯದಲ್ಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಗ್ರಾಹಕರ ಊಹೆಗೂ ಮೀರಿದ ಬೆಲೆಯಲ್ಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಫ್ಲಿಪ್‌ಕಾರ್ಟ್‌ ನೀಡುತ್ತಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ನೀವು ಕೇವಲ 2,000ರೂ. ಒಳಗಿನ ಬೆಲೆಯಲ್ಲಿ ಖರೀದಿಸಬಹುದಾದ ನೆಕ್‌ಬ್ಯಾಂಡ್ ಶೈಲಿಯ ವಾಯರ್‌ಲೆಸ್ ಇಯರ್‌ಫೋನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒನ್‌ಪ್ಲಸ್‌ ಬುಲೆಟ್ಸ್‌ ವಾಯರ್‌ಲೆಸ್‌ Z2

ಒನ್‌ಪ್ಲಸ್‌ ಬುಲೆಟ್ಸ್‌ ವಾಯರ್‌ಲೆಸ್‌ Z2

ಒನ್‌ಪ್ಲಸ್‌ ಬುಲೆಟ್ಸ್‌ ವಾಯರ್‌ಲೆಸ್‌ Z2 ಇಯರ್‌ಫೋನ್‌ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 30% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ನೆಕ್‌ಬ್ಯಾಂಡ್‌ ಶೈಲಿಯ ಇಯರ್‌ಫೋನ್‌ ನಿಮಗೆ ಕೇವಲ 1,699ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಇಯರ್‌ಫೊನ್‌ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು, 30 ಗಂಟೆಗಳವರೆಗಿನ ಬ್ಯಾಟರಿ ಅವಧಿಯನ್ನು ಹೊಂದಿದೆ. ಇದು ಇನ್‌ಲೈನ್ ಮೈಕ್ರೊಫೋನ್ ಹೊಂದಿದ್ದು, ವಾಯರ್‌ಲೆಸ್‌ ಕನೆಕ್ಟಿವಿಟಿಗಾಗಿ ಬ್ಲೂಟೂತ್ ಆವೃತ್ತಿ 5.0 ಅನ್ನು ಒಳಗೊಂಡಿದೆ. ಈ ವಾಯರ್‌ಲೆಸ್‌ ಇಯರ್‌ಫೋನ್‌ ಕೆಂಪು, ನೀಲಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಬೋಟ್ ರಾಕರ್ಜ್ 255 ಪ್ರೊ+

ಬೋಟ್ ರಾಕರ್ಜ್ 255 ಪ್ರೊ+

ಬೋಟ್ ರಾಕರ್ಜ್ 255 ಪ್ರೊ+ ಫ್ಲಿಪ್‌ಕಾರ್ಟ್‌ನಲ್ಲಿ ಮೂಲಬೆಲೆಗಿಂತ 74% ಡಿಸ್ಕೌಂಟ್‌ ಪಡೆದುಕೊಂಡಿದೆ. ಆದರಿಂದ ಈ ಇಯರ್‌ಫೋನ್‌ 999ರೂ. ಬೆಲೆಯಲ್ಲಿ ದೊರೆಯಲಿದೆ. ಇನ್ನು ಈ ವಾಯರ್‌ಲೆಸ್‌ ಇಯರ್‌ಫೋನ್ ಬ್ಲೂಟೂತ್ ಆವೃತ್ತಿ 5.2 ಅನ್ನು ಬೆಂಬಲಿಸಲಿದೆ. ಇದು 10 ವಾಯರ್‌ಲೆಸ್‌ ರೇಂಜ್‌ ಅನ್ನು ಹೊಂದಿದೆ. ಈ ಡಿವೈಸ್‌ 40 ಗಂಟೆಗಳವರೆಗಿನ ಬ್ಯಾಟರಿ ಅವಧಿಯನ್ನು ನೀಡಲಿದೆ. ಇದಲ್ಲದೆ ಈ ವಾಯರ್‌ಲೆಸ್‌ ಇಯರ್‌ಫೋನ್‌ USB ಟೈಪ್-C ಚಾರ್ಜಿಂಗ್ ಫೀಚರ್ಸ್‌ ಅನ್ನು ಹೊಂದಿದ್ದು, IPX7 ರೇಟಿಂಗ್‌ ಬೆಂಬಲಿಸಲಿದೆ.

ರಿಯಲ್‌ಮಿ ಬಡ್ಸ್ ವಾಯರ್‌ಲೆಸ್ 2 ನಿಯೋ

ರಿಯಲ್‌ಮಿ ಬಡ್ಸ್ ವಾಯರ್‌ಲೆಸ್ 2 ನಿಯೋ

ರಿಯಲ್‌ಮಿ ಬಡ್ಸ್ ವಾಯರ್‌ಲೆಸ್ 2 ನಿಯೋ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ 52% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಈ ಇಯರ್‌ಫೋನ್‌ ಅನ್ನು 1,199ರೂ. ಬೆಲೆಯಲ್ಲಿ ಖರೀದಿಸಲು ಸಾಧ್ಯವಾಗಲಿದೆ. ಇದು 11.2mm ಬಾಸ್ ಬೂಸ್ಟ್ ಡ್ರೈವರ್ ಅನ್ನು ಹೊಂದಿದೆ. ಇದು ವಾಟರ್‌ಪ್ರೂಫ್‌ ಆಗಿದ್ದು IPX4 ರೇಟಿಂಗ್‌ ನೀಡಲಿದೆ. ಇನ್ನು ಈ ಇಯರ್‌ಫೋನ್‌ ಒಟ್ಟು 17 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಜೊತೆಗೆ ಈ ವಾಯರ್‌ಲೆಸ್‌ ಇಯರ್‌ಫೋನ್‌ ಎನ್ವಿರನ್‌ಮೆಂಟ್‌ ನಾಯ್ಸ್‌ ಕ್ಯಾನ್ಸಲೇಶನ್‌ ಸಿಸ್ಟಂ ಅನ್ನು ಕೂಡ ಹೊಂದಿದೆ.

ಒಪ್ಪೋ ಎನ್ಕೋ M32 ಬ್ಲೂಟೂತ್ ಹೆಡ್‌ಸೆಟ್

ಒಪ್ಪೋ ಎನ್ಕೋ M32 ಬ್ಲೂಟೂತ್ ಹೆಡ್‌ಸೆಟ್

ಒಪ್ಪೋ ಎನ್ಕೋ M32 ಬ್ಲೂಟೂತ್ ಹೆಡ್‌ಸೆಟ್ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ 53% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ಹೆಡ್‌ಸೆಟ್‌ 2,999ರೂ. ಗಳ ಬದಲಿಗೆ 1,399ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಬ್ಲೂಟೂತ್‌ ಹೆಡ್‌ಸೆಟ್‌ ಸೂಪರ್ ಫಾಸ್ಟ್ ಚಾರ್ಜ್‌ ಬೆಂಬಲಿಸಲಿದ್ದು, 10 ನಿಮಿಷಗಳ ಚಾರ್ಜ್‌ನಲ್ಲಿ 20 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಜೊತೆಗೆ ಇದು 28 ಗಂಟೆಗಳವರಿಗೆ ಒಟ್ಟು ಪ್ಲೇಬ್ಯಾಕ್ ಟೈಂ ನೀಡಲಿದೆ. ಇದಲ್ಲದೆ ಬಳಕೆದಾರರಿಗೆ ಸಂಪರ್ಕಿತ ಸಾಧನಗಳ ನಡುವೆ ಕೇವಲ ಒಂದು ಕ್ಲಿಕ್‌ನಲ್ಲಿ ಬದಲಾಯಿಸಲು ಅನುವು ಮಾಡಿಕೊಡುವ ಡ್ಯುಯಲ್-ಡಿವೈಸ್ ಸ್ವಿಚ್ ಅನ್ನು ಕೂಡ ಪಡೆದುಕೊಂಡಿದೆ.

ಬೋಲ್ಟ್ ಆಡಿಯೊ ಪ್ರೊಬಾಸ್ ಚಾರ್ಜ್

ಬೋಲ್ಟ್ ಆಡಿಯೊ ಪ್ರೊಬಾಸ್ ಚಾರ್ಜ್

ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಇದು 84% ಡಿಸ್ಕೌಂಟ್‌ ಪಡೆದುಕೊಂಡಿದೆ. ಆದರಿಂದ 4,999ರೂ. ಬೆಲೆಯ ಇಯರ್‌ಫೋನ್‌ ನಿಮಗೆ ಕೇವಲ 799ರೂ. ಬೆಲೆಯಲ್ಲಿ ಖರೀದಿಸಲು ಸಾಧ್ಯವಾಗಲಿದೆ. ಇನ್ನು ಈ ಇಯರ್‌ಫೋನ್‌ 40 ಗಂಟೆಗಳ ಪ್ಲೇಟೈಮ್ ಅನ್ನು ನೀಡಲಿದೆ. ಇದು ಎನ್‌ವಿರನ್ಮೆಂಟ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಕೂಡ ಒಳಗೊಂಡಿದೆ. ಈ ವಾಯರ್‌ಲೆಸ್‌ ಇಯರ್‌ಫೋನ್‌ ಪ್ರೊ+ ಕಾಲಿಂಗ್ ಮೈಕ್ ಟೆಕ್ನಾಲಜಿಯನ್ನು ಒಳಗೊಂಡಿದೆ.

Best Mobiles in India

English summary
Flipkart Big Diwali sale: Up to 84% Discounts on Wireless Neckbands
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+