ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌: ಡಿಸ್ಕೌಂಟ್‌ನಲ್ಲಿ ಲಭ್ಯವಾಗುವ ಫೋನ್‌ಗಳು!

|

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಪ್ರೈಮ್‌ ಡೇ 2020 ಸೇಲ್‌ ಹಮ್ಮಿಕೊಂಡ ಸಮಯದಲ್ಲಿಯೇ ಫ್ಲಿಪ್‌ಕಾರ್ಟ್‌ ಕೂಡ ಬಿಗ್‌ ಸೇವಿಂಗ್‌ ಡೇಸ್‌ ಸೇಲ್ ಅನ್ನು ಹಮ್ಮಿಕೊಂಡಿರೋದು ಗೊತ್ತೆ ಇದೆ. ಸದ್ಯ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಎಂಡ್‌ ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಇದೇ ಆಗಸ್ಟ್‌ 10 ರಂದು ಕೊನೆ ಆಗಲಿದೆ. ಸದ್ಯ ಫ್ಲಿಪ್‌ಕಾರ್ಟ್ ತನ್ನ ಬಿಗ್‌ ಸೇವಿಂಗ್ಸ್‌ ಸೇಲ್‌ನಲ್ಲಿ ಜನಪ್ರಿಯ ಮೊಬೈಲ್ ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್‌ಗಳು, ಆಡಿಯೊ ಗೇರ್ ಮತ್ತು ಇತರ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್‌ಗಳ ಮೇಲೆ ಸಾಕಷ್ಟು ರಿಯಾಯಿತಿಗಳನ್ನ ನೀಡುತ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್ಸ್‌ ಡೇಸ್‌ ಸೇಲ್‌ನಲ್ಲಿ ಅತಿ ಹೆಚ್ಚು ಮಾರಾಟವಾಗುವ ಫೋನ್‌ಗಳ ಮೇಲೆ 'ಭಾರಿ ರಿಯಾತಿಗಳನ್ನ ನೀಡುತ್ತಿದೆ. ಈ ಸಮಯದಲ್ಲಿ ನಿಮ್ಮ ಹಣಕ್ಕೆ ಯೋಗ್ಯವಾದ ಸಾಕಷ್ಟು ವ್ಯವಹಾರಗಳನ್ನ ನಿವಿಲ್ಲಿ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ, ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿಗಳ ಮೇಲೂ ಭಾರಿ ರಿಯಾಯಿತಿ ದೊರೆಯುತ್ತಿದೆ. ಹಾಗಾದ್ರೆ ಬಿಗ್‌ ಸೇವಿಂಗ್ಸ್‌ ಡೇಸ್‌ ಸೇಲ್‌ ನಲ್ಲಿ ಪಡೆದುಕೊಳ್ಳಬಹುದಾದ ಪ್ರಾಡಕ್ಟ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟ - ಮೊಬೈಲ್ ಫೋನ್‌ಗಳಲ್ಲಿ ಉತ್ತಮ ಕೊಡುಗೆಗಳು

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟ - ಮೊಬೈಲ್ ಫೋನ್‌ಗಳಲ್ಲಿ ಉತ್ತಮ ಕೊಡುಗೆಗಳು

ಆಪಲ್ ಐಫೋನ್ ಎಕ್ಸ್ಆರ್

ಆಪಲ್‌ನ ಐಫೋನ್ ಎಕ್ಸ್‌ಆರ್ ಈ ವಾರ ಬಿಗ್ ಸೇವಿಂಗ್ ಡೇಸ್ ಮಾರಾಟದ ಸಮಯದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 44,999 (MRP ರೂ. 52,500) ರೂ ಬೆಲೆಯನ್ನ ಹೊಂದಿದೆ. ಅಲ್ಲದೆ ಎಕ್ಸ್‌ಚೇಂಜ್‌ ಆಫರ್ ಅನ್ನು ಸಹ ಒಳಗೊಂಡಿದೆ. ಐಫೋನ್ ಎಕ್ಸ್‌ಆರ್ ಆಪಲ್‌ನ A12 ಬಯೋನಿಕ್ ಚಿಪ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇನ್ನು ಐಫೋನ್‌ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, 12 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಹೊಂದಿದೆ. ಅಲ್ಲದೆ 7 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಆಪಲ್ ಐಫೋನ್ SE (2020)

ಆಪಲ್ ಐಫೋನ್ SE (2020)

ಆಪಲ್‌ನ ಐಫೋನ್ SE(2020) ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 36,999 (MRP ರೂ. 42,500) ರೂ ಬೆಲೆಯನ್ನ ಹೊಂದಿದೆ. ಇನ್ನು ಈ ಐ ಫೋನ್ ಆಪಲ್‌ನ A​​13 ಬಯೋನಿಕ್ ಚಿಪ್ ನಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ 4.7 ಇಂಚಿನ ರೆಟಿನಾ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ.

ಒಪ್ಪೋ ರೆನೋ 2

ಒಪ್ಪೋ ರೆನೋ 2

ಇದಲ್ಲದೆ ಫ್ಲಿಪ್‌ಕಾರ್ಟ್‌ನ ಈ ಸೇಲ್‌ನಲ್ಲಿ ಒಪ್ಪೋ ರೆನೋ 2 ಅನ್ನು ಖರೀದಿಸಿದಾಗ 10,000 ಇನ್ಸಟಂಟ್‌ ರಿಯಾಯಿ ಪಡೆದುಕೊಳ್ಳಬಹುದಾಗಿದೆ. ಅಂದರೆ ಒಪ್ಪೋ ರೆನೋ 2 ಅನ್ನು ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಕೇವಲ 28,990ರೂ.ಗಳಿಗೆ ಪಡೆದುಕೊಳ್ಳಬಹುದಾಗಿದೆ(ನಿಯಮಿತ ಮಾರಾಟ ಬೆಲೆ ರೂ. 38,990).

ಎಲ್‌ಜಿ V30 +

ಎಲ್‌ಜಿ V30 +

ಎಲ್‌ಜಿ V30 + ಸ್ಮಾರ್ಟ್‌ಫೋನ್‌ ಕೂಡ ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 19,999 (ಎಂಆರ್‌ಪಿ ರೂ. 60,000)ರೂ.ಗಳಿಗೆ ಲಭ್ಯವಾಗಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ನ ಸೇಲ್‌ನಲ್ಲಿ ಐಸಿಐಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಸಿಟಿಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ನೀಡುತ್ತದೆ.

ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು

ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು

ಆಪಲ್ ಹೋಮ್‌ಪಾಡ್

ಇನ್ನು ಆಪಲ್ ಹೋಮ್‌ಪಾಡ್ ಸ್ಮಾರ್ಟ್ ಸ್ಪೀಕರ್ ಅನ್ನು ಬಿಗ್ ಸೇವಿಂಗ್ ಡೇಸ್ ಮಾರಾಟದಲ್ಲಿ 18,900 (ಎಂಆರ್‌ಪಿ ರೂ. 19,900) ರೂಗಳಿಗೆ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಇನ್ನು ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಲು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಸಿಟಿಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಗೂಗಲ್ ಹೋಮ್ ಮಿನಿ

ಗೂಗಲ್ ಹೋಮ್ ಮಿನಿ

ಇದಲ್ಲದೆ ಗೂಗಲ್ ಹೋಮ್ ಮಿನಿ ಅನ್ನು ಬಿಗ್‌ಸೆವಿಂಗ್ಸ್‌ ಡೇ ಸೇಲ್‌ನಲ್ಲಿ ಕೇವಲ 2,299.ರೂ ಗಳಿಗೆ ಲಭ್ಯವಾಗಲಿದೆ. ಅಲ್ಲದೆ ಗೂಗಲ್ ಹೋಮ್ ಮಿನಿ ಗೂಗಲ್ ವಾಯ್ಸ್‌ ಬೆಂಬಲಿಸುವ ಸ್ಮಾರ್ಟ್ ಸ್ಪೀಕರ್ ಆಗಿದೆ. ಮ್ಯೂಸಿಕ್‌ ಪ್ಲೇ ಮಾಡುವ, ಪ್ರಶ್ನೆಗಳನ್ನು ಕೇಳಲು, ನಿಮ್ಮ ಮನೆಯ ಸುತ್ತ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಕಂಟ್ರೋಲ್‌ ಮಾಡಲು ಬಳಸಬಹುದಾಗಿದೆ.

Most Read Articles
Best Mobiles in India

English summary
Flipkart's sale promises 'lowest' prices on bestselling phones, there aren't a lot of deals that are worth your time or money this time.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X