ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಡೇಟ್ ಘೋಷಣೆ!
ಆನ್‌ಲೈನ್ ಶಾಪಿಂಗ್ ಪ್ರಿಯರ ಪಾಲಿಗೆ ಫ್ಲಿಪ್‌ಕಾರ್ಟ್ ನೆಚ್ಚಿನ ತಾಣ ಎನಿಸಿಕೊಂಡಿದೆ. ಫ್ಲಿಪ್‌ಕಾರ್ಟ್ ಕೂಡ ತನ್ನ ಗ್ರಾಹಕರಿಗಾಗಿ ವಿಶೇಷ ಸೇಲ್‌ಗಳನ್ನು ನಡೆಸುತ್ತಲೇ ಬಂದಿದೆ. ವಿಕೆಂಡ್, ಮಂತ್‌ಎಂಡ್ ಮಾತ್ರವಲ್ಲದೆ ವಿಶೇಷ ದಿನಗಳಲ್ಲಿ ಡಿಸ್ಕೌಂಟ್ ಮೇಳಗಳ ಮೂಲಕ ರಿಯಾಯಿತಿ ನೀಡಲಿದೆ. ಸದ್ಯ ಇದೀಗ ತನ್ನ ಬಿಗ್ ಸೇವಿಂಗ್ ಡೇಸ್ ಸೇಲ್ ಡೇಟ್ ಅನ್ನು ಬಹಿರಂಗಪಡಿಸಿದೆ. ಈ ಸೇಲ್ ಇದೇ ಮಾರ್ಚ್ 12ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 16 ರವರೆಗೆ ಲೈವ್ ಆಗಿರಲಿದೆ.

ಹೌದು, ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಡೇಟ್ ಘೋಷಣೆ ಮಾಡಿದೆ. ಈ ಸೇಲ್ ಐದು ದಿನಗಳ ಕಾಲ ನಡೆಯಲಿದ್ದು, ಈ ಸಮಯದಲ್ಲಿ ವಿವಿಧ ಮೊಬೈಲ್ ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಲ್ಯಾಪ್‌ಟಾಪ್‌ಗಳು, ಕ್ಯಾಮೆರಾಗಳ ಮೇಲೆ ಆಕರ್ಷಕ ರಿಯಾಯಿತಿ ಮತ್ತು ಡಿಸ್ಕೌಂಟ್ ನೀಡುವುದಾಗಿ ಹೇಳಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಏನೆಲ್ಲಾ ಡಿಸ್ಕೌಂಟ್ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಮಾರ್ಚ್ 12ರಿಂದ ಪ್ರಾರಂಭಿಸಲಿದೆ. ಈ ಸೇಲ್‌ನಲ್ಲಿ ಆಪಲ್, ರಿಯಲ್‌ಮಿ, ಪೊಕೊ ಮತ್ತು ಸ್ಯಾಮ್‌ಸಂಗ್ ಬ್ರ್ಯಾಂಡ್‌ಗಳ ಮೇಲೆ ವಿವಿಧ ರೀತಿಯ ಡಿಸ್ಕೌಂಟ್ ಮತ್ತು ಆಫರ್‌ಗಳನ್ನು ನೀಡಲಿದೆ. ಅಲ್ಲದೆ SBI ಕ್ರೆಡಿಟ್ ಕಾರ್ಡ್ ಅನ್ನು ಬಳಸುವ ಗ್ರಾಹಕರು ಹಲವಾರು ಮಾದರಿಗಳ ಮೇಲೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು ಎನ್ನಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಫ್ಲಿಪ್‌ಕಾರ್ಟ್ ವಿವಿಧ ವಿನಿಮಯ ರಿಯಾಯಿತಿಗಳು ಮತ್ತು ನೋ-ಕಾಸ್ಟ್ EMI ಆಯ್ಕೆಗಳನ್ನು ಕೂಡ ದೊರೆಯಲಿದೆ.

ಇನ್ನು ಸ್ಮಾರ್ಟ್‌ಫೋನ್‌ಗಳ ಜೊತೆಗೆ, ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್‌ಗಳ ಮೇಲೆ 80% ರಿಯಾಯಿತಿಯನ್ನು ನೀಡಲಿದೆ ಎಂದು ಹೇಳಲಾಗಿದೆ. ಅದರಲ್ಲೂ ಸ್ಮಾರ್ಟ್‌ವಾಚ್‌ಗಳು ಮತ್ತು ವೇರಿಯೆಬಲ್ಸ್ ಡಿವೈಸ್‌ಗಳ ಮೇಲೆ 60% ಡಿಸ್ಕೌಂಟ್ ದೊರೆಯಲಿದೆ. ಹಾಗೆಯೇ ಲ್ಯಾಪ್‌ಟಾಪ್‌ಗಳು 40% ರಿಯಾಯಿತಿಯನ್ನು ಪಡೆಯುತ್ತವೆ. ಇನ್ನು ಫ್ಲಿಪ್‌ಕಾರ್ಟ್ ಸೇಲ್ ಸಮಯದಲ್ಲಿ ಡಿಜೊ ವಾಚ್ 2, ರಿಯಲ್‌ಮಿ ವಾಚ್ 2, ಫೈರ್-ಬೋಲ್ಟ್ ನಿಂಜಾ ಪ್ರೊ ಮ್ಯಾಕ್ಸ್ ಮತ್ತು ಅಮಾಜ್‌ಫಿಟ್ ಬಿಪ್ ಯು ವಾಚ್‌ಗಳು ರಿಯಾಯಿತಿ ಪಡೆದುಕೊಳ್ಳಲಿವೆ.

ಇದರೊಂದಿಗೆ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಆಸುಸ್, ಡೆಲ್, ಹೆಚ್‌ಪಿ ಮತ್ತು ಲೆನೊವೊ ಸೇರಿದಂತೆ ಅನೇಕ ಬ್ರಾಂಡ್‌ಗಳ ಲ್ಯಾಪ್‌ಟಾಪ್‌ಗಳು ರಿಯಾಯಿತಿ ಪಡೆದುಕೊಂಡಿವೆ. ಅಲ್ಲದೆ ಡಿಎಸ್‌ಎಲ್‌ಆರ್‌ಗಳು ಮತ್ತು ಮಿರರ್‌ಲೆಸ್ ಕ್ಯಾಮೆರಾಗಳು ಮತ್ತು ಸೌಂಡ್‌ಬಾರ್‌ಗಳ ಮೇಲೆ ರಿಯಾಯಿತಿಗಳು ಮತ್ತು ಕೊಡುಗೆಗಳು ಸಹ ಇರುತ್ತವೆ. ಇದಲ್ಲದೆ, ಫ್ಲಿಪ್‌ಕಾರ್ಟ್ ಮಾರಾಟವು ಕೀಬೋರ್ಡ್‌ಗಳು ಮತ್ತು ಮೌಸ್‌ನಂತಹ ಕಂಪ್ಯೂಟರ್ ಪರಿಕರಗಳ ಮೇಲೆ 50% ರಿಯಾಯಿತಿಯನ್ನು ನೀಡುತ್ತದೆ. ಇನ್ನು ಟ್ಯಾಬ್ಲೆಟ್‌ಗಳ ಮೇಲೆ ಶೇಕಡಾ 45% ರಷ್ಟು ರಿಯಾಯಿತಿಗಳು ಇರುತ್ತವೆ ಎಂದು ಫ್ಲಿಪ್‌ಕಾರ್ಟ್ ವೆಬ್‌ಪೇಜ್‌ನಲ್ಲಿ ಹೇಳಲಾಗಿದೆ.

ಇದಲ್ಲದೆ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಸ್ಮಾರ್ಟ್ ಮತ್ತು ಬ್ಲೂಟೂತ್ ಸ್ಪೀಕರ್‌ಗಳು ಕೂಡ 80% ರಿಯಾಯಿತಿಯಲ್ಲಿ ದೊರೆಯಲಿವೆ. ಇದರಲ್ಲಿ ರಿಯಲ್‌ಮಿ ಮತ್ತು ಒನ್‌ಪ್ಲಸ್ ಸೇರಿದಂತೆ ಅನೇಕ ಬ್ರಾಂಡ್‌ಗಳ ಟ್ರೂಲಿ ವಾಯರ್‌ಲೆಸ್ ಇಯರ್‌ಬಡ್ಸ್ ಹೊಂದಿದೆ ಎಂದು ಟೀಸ್ ಮಾಡಲಾಗಿದೆ. ಹಾಗೆಯೇ iPad Air (2020), ಲೆನೊವೊ ಟ್ಯಾಬ್ M8 2nd Gen, ರಿಯಲ್‌ಮಿ ಪಾಡ್ ಮತ್ತು ಲೆನೊವೊ ಯೋಗ ಟ್ಯಾಬ್ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಬಿಗ್ ಡಿಸ್ಕೌಂಟ್ ನಲ್ಲಿ ದೊರೆಯಲಿದೆ. ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ಗಳು, ಎಚ್‌ಡಿಡಿಗಳು ಮತ್ತು ಎಸ್‌ಎಸ್‌ಡಿಗಳಂತಹ ಡೇಟಾ ಸ್ಟೋರೇಜ್ ಡಿವೈಸ್‌ಗಳ ಮೇಲೆ 60% ವರೆಗೆ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ.


Click it and Unblock the Notifications








