Home
ಸುದ್ದಿಜಾಲ

ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್: ಐಫೋನ್ ಎಸ್ಇ ಮೇಲೆ ಶೇ.30ರಷ್ಟು ಕಡಿತ..!

By Gizbot Bureau

ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಎರಡೂ ಕೂಡ ಸ್ಪರ್ಧೆಯಲ್ಲಿ ಆಫರ್ ಗಳ ಸುರಿಮಳೆ ಇಟ್ಟು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಒಂದು ವೇಳೆ ನೀವು ಇಂದು ಯಾವುದು ಬೆಸ್ಟ್ ಸ್ಮಾರ್ಟ್ ಫೋನ್ ಡೀಲ್ ಇದೆ ಎಂದು ಪ್ರಶ್ನಿಸುವುದೇ ಆದರೆ ನಾವು ಐಫೋನ್ ಎಸ್ಇ ಎಂದು ಹೇಳಬೇಕಾಗುತ್ತದೆ.

ಹೌದು ಫ್ಲಿಪ್ ಕಾರ್ಟ್ ನ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಐಫೋನ್ ಎಸ್ಇ ಭಾರೀ ರಿಯಾಯಿತಿಯಲ್ಲಿ ಲಭ್ಯವಾಗುತ್ತಿದೆ. 32 ಜಿಬಿಯ ಆಫಲ್ ನ ಅತ್ಯಂತ ಹೆಚ್ಚು ಪ್ರಸಿದ್ಧ ಫೋನ್ ಭಾರತದಲ್ಲಿ ಕೇವಲ 16,999 ರುಪಾಯಿಗೆ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಾಗುತ್ತಿದೆ. ಈ ಮೊದಲು ಅಂದರೆ ಈ ವರ್ಷದ ಆರಂಭದಲ್ಲಿ ಇದರ ಬೆಲೆಯನ್ನು 20,000 ಕ್ಕೆ ಗಮನಿಸಲಾಗಿತ್ತು. ಈಗ ಮತ್ತೆ ಪುನಃ ಅತ್ಯುತ್ತಮ ಬೆಲೆಯಲ್ಲಿ ಐಫೋನ್ ಎಸ್ಇ ಖರೀದಿಗೆ ಲಭ್ಯವಾಗುತ್ತಿದೆ.

ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್: ಐಫೋನ್ ಎಸ್ಇ ಮೇಲೆ ಶೇ.30ರಷ್ಟು ಕಡಿತ..!

ಅತ್ಯಂತ ಕಡಿಮೆ ಬೆಲೆಯೊಂದಕ್ಕೆ ಐಫೋನ್ ಎಸ್ ಇ ಖರೀದಿಸಬೇಕು ಎಂದು ನೀವೇನಾದರೂ ಇಚ್ಛಿಸುತ್ತಿದ್ದಾರೆ ಖಂಡಿತ ಐಫೋನ್ ಎಸ್ಇ ಈ ಬೆಲೆಗೆ ಸಿಗುತ್ತಿರುವುದರಿಂದಾಗಿ ಇದನ್ನೇ ಖರೀದಿಸಬಹುದು. ನಿಜಕ್ಕೂ ಹೇಳಬೇಕಂದರೆ ಐಫೋನ್ ಎಸ್ಇ ಯನ್ನು ಖರೀದಿಸುವುದರಲ್ಲಿ ಹಲವು ಲಾಭಗಳಿಗೆ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಎರಡು ವರ್ಷದ ಹಿಂದೆ ಅಂದರೆ 2016 ರಲ್ಲಿ ಐಫೋನ್ ಎಸ್ ಇ ಬಿಡುಗಡೆಗೊಂಡಿತ್ತು. ಆದರೆ ಬಿಡುಗಡೆಗೊಂಡು ಎರಡು ವರ್ಷ ಕಳೆದರೂ ಆಂಡ್ರಾಯ್ಡ್ ಫೋನ್ ಗಳಂತೆ ಇದು ಹಳತು ಎಂದು ಅನ್ನಿಸಿಕೊಂಡಿಲ್ಲ. ಇಂದಿಗೂ ಕೂಡ ಬಹು ಬೇಡಿಕೆಯ ಫೋನ್ ಗಳಲ್ಲಿ ಒಂದೆನಿಸಿದೆ. ಯಾಕೆಂದರೆ ಇದರ ಒಳಗಿರುವ ಹಾರ್ಡ್ ವೇರ್ ಗಳು ಅಷ್ಟು ಶಕ್ತಿಶಾಲಿಯಾಗಿವೆ. ಹೌದು ಇದು ಎ9 ಪ್ರೊಸೆಸರ್ ನ್ನು ಹೊಂದಿದೆ ಮತ್ತು 2ಜಿಬಿ ಮೆಮೊರಿ ಸಾಮರ್ಥ್ಯವಿದೆ. ಮೆಟಲ್ ಮತ್ತು ಗ್ಲಾಸ್ ನ ಡಿಸೈನ್ ನ್ನು ಇದು ಹೊಂದಿದ್ದು ಕ್ಲಾಸಿಕ್ ಐಫೋನ್ 4 ನಂತಹ ಡಿಸೈನ್ ಹೊಂದಿದೆ.

ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್: ಐಫೋನ್ ಎಸ್ಇ ಮೇಲೆ ಶೇ.30ರಷ್ಟು ಕಡಿತ..!

ಒಂದೇ ಒಂದು ಕಾರಣಕ್ಕೆ ನೀವು ಐಫೋನ್ ಎಸ್ ಇಯನ್ನು 16,999 ರುಪಾಯಿಗೆ ಖರೀದಿಸಲು ಹಿಂದೇಟು ಹಾಕಬಹುದು. ಅದೇನು ಎಂದರೆ ಇದರ ಚಿಕ್ಕ ಸ್ಕ್ರೀನ್, ಹೌದು 2018 ನೇ ಇಸವಿಗೆ ಈ ಸ್ಕ್ರೀನ್ ಸ್ವಲ್ಪ ಮಟ್ಟಿಗೆ ಗ್ರಾಹಕರಿಗೆ ಸಣ್ಣದು ಅನ್ನಿಸಬಹುದು ಯಾಕೆಂದರೆ 4 ಇಂಚಿನ ಸ್ಕ್ರೀನ್ ನ್ನು ಇದು ಹೊಂದಿದೆ.

ಒಂದು ವೇಳೆ ನಿಮಗೆ ಸ್ಕ್ರೀನ್ ಸಮಸ್ಯೆ ಎಂದು ಅನ್ನಿಸದೇ ಇದ್ದಲ್ಲಿ, ಐಫೋನ್ ಎಸ್ಇ ಯಿಂದ ಹಲವು ಲಾಭಗಳಿವೆ ಮತ್ತು ಅತ್ಯುತ್ತಮ ಫೋನ್ ಆಗಲಿದೆ. ಯಾಕೆಂದರೆ ಈಗಲೂ ಇದು ಫಾಸ್ಟ್ ಆಗಿ ಕೆಲಸ ನಿರ್ವಹಿಸಲು ಸಹಕಾರ ನೀಡುವ ಫೋನ್ ಆಗಿದೆ.ಅಷ್ಟೇ ಅಲ್ಲ ಕೆಲವೇ ದಿನದಲ್ಲಿ ಆಪಲ್ ಬಿಡುಗಡೆಗೊಳಿಸುವ ಐಓಎಸ್12 ಅಪ್ ಡೇಟನ್ನು ಈ ಫೋನ್ ಕೂಡ ಪಡಯಲಿದೆ. ಯಾವುದೇ ತರ್ಕಕ್ಕೆ ಒಳಪಡಿಸದೇ ಹೇಳುವುದಾದರೆ 20000 ರುಪಾಯಿ ಒಳಗೆ ಸಿಗುವ ಅತ್ಯುತ್ತಮ ಕ್ಯಾಮರಾ ಒಳಗೊಂಡಿರುವ ಫೋನ್ ಎಂದು ಐಫೋನ್ ಎಸ್ಇ ಯನ್ನು ಪರಿಗಣಿಸಲು ಯಾವುದೇ ಅನುಮಾನ ಬೇಡ. 12 ಮೆಗಾಪಿಕ್ಸಲ್ ಕ್ಯಾಮರಾವನ್ನು ಇದು ಒಳಗೊಂಡಿದೆ.

ಆದರೆ 2018 ಕ್ಕೆ ಇನ್ನು ಹೆಚ್ಚಿನ ಫೋನ್ ಗಳು ಬಿಡುಗಡೆಗೊಂಡಿರುವಾಗ ಹಳೆಯದೊಂದು ಫೋನನ್ನು ಖರೀದಿಸಲು ಗ್ರಾಹಕನಿಗೆ ಮನಸ್ಸು ಬರದೇ ಇರುವ ಸಾಧ್ಯತೆಗಳಿವೆ. ಆದರೆ ಐಫೋನ್ ಎಸ್ಇ ಎಲ್ಲರಿಗೂ ಹೇಳಿ ಮಾಡಿಸಿದ ಫೋನ್ ಅಲ್ಲ. ಒಂದು ವೇಳೆ ನೀವು ಅತೀ ಹೆಚ್ಚು ವೀಡಿಯೋಗಳನ್ನು ನೋಡುವವರಾಗಿದ್ದು ಅಥವಾ ಅತೀ ಹೆಚ್ಚು ಓದುಗಾರಿಕೆಗೆ ಮೊಬೈಲ್ ಬಳಸುವವರಾಗಿದ್ದರೆ ಖಂಡಿತ ಅವರಿಗೆ ಐಫೋನ್ ಎಸ್ಇ ಉತ್ತಮ ಫೋನ್ ಅಲ್ಲವೇ ಅಲ್ಲ. ಅಂತವರು ಶಿಯೋಮಿ ರೆಡ್ ಮಿ ನೋಟ್ 5 ಪ್ರೋ ಖರೀದಿಗೆ ಮುಂದಾಗಬಹುದು ಅಥವಾ ಶಿಯೋಮಿ ಎಮ್ಐ ಎ2 ಬಿಡುಗಡೆಗೊಳ್ಳುವವರೆಗೆ ಕಾಯಲೂ ಬಹುದು.

ಒಂದು ವೇಳೆ ನೀವು ಆಂಡ್ರಾಯ್ಡ್ ಫೋನ್ ಬಳಸಲು ಇಚ್ಛಿಸುತ್ತಿಲ್ಲ ಮತ್ತು ಐಓಎಸ್ ಫೋನ್ ಬೇಕು ಎಂದು ಬಯಸುತ್ತಿದ್ದೀರಾದರೆ ಖಂಡಿತ ಈ ಬೆಲೆಗೆ ಐಫೋನ್ ಎಸ್ಇ ಖರೀದಿಸುವುದು ಬಹಳ ಒಳ್ಳೆಯದು.. ಮುಂದಿನದ್ದು ನಿಮ್ಮ ಆಯ್ಕೆಗೆ ಬಿಟ್ಟದ್ದು.ಒಟ್ಟಾರೆ ಹ್ಯಾವ್ ಎ ವಂಡರ್ ಫುಲ್ ಶಾಪಿಂಗ್ ಅಷ್ಟೇ.

Best Mobiles in India

English summary
Flipkart Big Shopping Days: iPhone SE 32GB with over 30 per cent discount is a deal you must know about. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+