ಔಟ್ ಆಫ್ ಸ್ಟಾಕ್ ಆದ ಫ್ಲಿಪ್ ಕಾರ್ಟ್ ಬಿಲಿಯನ್ ಕ್ಯಾಪ್ಚರ್+, ಮುಂದಿನ ಸೇಲ್ ನವಂಬರ್ 20ಕ್ಕೆ

By Tejaswini P G
|

ಕೆಲ ದಿನಗಳ ಹಿಂದಷ್ಟೇ ಫ್ಲಿಪ್ ಕಾರ್ಟ್ ತನ್ನ ಹೊಸ ಸ್ಮಾರ್ಟ್ ಫೋನ್ ಬಿಲಿಯನ್ ಕ್ಯಾಪ್ಚರ್+ ಅನ್ನು ಲಾಂಚ್ ಮಾಡಿತ್ತು.32GB ಮತ್ತು 64GB ಸ್ಟೋರೇಜ್ ಹೊಂದಿರುವ ಎರಡು ವಿಭಿನ್ನ ಆವೃತ್ತಿಗಳಲ್ಲಿ ಲಾಂಚ್ ಆಗಿರುವ ಈ ಮೊಬೈಲ್ ನ ಬೆಲೆ ಅನುಕ್ರಮವಾಗಿ ರೂ 10,999 ಮತ್ತು ರೂ 12,999 ಇದೆ.

ಔಟ್ ಆಫ್ ಸ್ಟಾಕ್ ಆದ ಫ್ಲಿಪ್ ಕಾರ್ಟ್ ಬಿಲಿಯನ್ ಕ್ಯಾಪ್ಚರ್+

ಸ್ಮಾರ್ಟ್ ರನ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಫ್ಲಿಪ್ ಕಾರ್ಟ್ ಬಿಲಿಯನ್ ಕ್ಯಾಪ್ಚರ್+ ನವಂಬರ್ 15ರಂದು ಮೊದಲ ಬಾರಿಗೆ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಗೆ ಲಭ್ಯವಾಗಿತ್ತು. ಸೇಲ್ ಪ್ರಾರಂಭವಾದ 24 ಘಂಟೆಗಳೊಳಗೆ ಬಿಲಿಯನ್ ಕ್ಯಾಪ್ಚರ್+ ಸ್ಮಾರ್ಟ್ಫೋನಿನ ಎಲ್ಲಾ ಯುನಿಟ್ಗಳು ಮಾರಾಟವಾಗಿದೆ ಎಂದು ಫ್ಲಿಪ್ಕಾರ್ಟ್ ತಿಳಿಸಿದೆ. ಆದರೆ ಎಷ್ಟು ಯುನಿಟ್ಗಳು ಮಾರಾಟವಾಗಿದೆ ಎಂದು ನಿಖರವಾದ ಸಂಖ್ಯೆಯನ್ನು ಫ್ಲಿಪ್ಕಾರ್ಟ್ ತಿಳಿಸಿಲ್ಲ.

ನೀವು ಫಿಪ್ಕಾರ್ಟ್ ಬಿಲಿಯನ್ ಕ್ಯಾಪ್ಚರ್+ ಮೊಬೈಲ್ ಖರೀದಿಸಲು ಬಯಸಿದ್ದು ಮೊದಲ ಸೇಲ್ ನಿಮಗೆ ತಪ್ಪಿ ಹೋಗಿತ್ತೇ? ಚಿಂತಿಸದಿರಿ!! ಎರಡನೇ ಬಾರಿಗೆ ಬಿಲಿಯನ್ ಕ್ಯಾಪ್ಚರ್+ ನ ಸೇಲ್ ಪ್ರಾರಂಭವಾಗಲಿದೆ ನೊವಂಬರ್ 20ರಂದು. ಅಲ್ಲದೆ ಇದರೊಂದಿಗೆ ಹಲವು ಕ್ಯಾಶ್ಬ್ಯಾಕ್ ಆಫರ್ಗಳು, EMI ಪಾವತಿಯ ಆಯ್ಕೆಗಳು ಮತ್ತು ಎಕ್ಸ್ಚೇಂಜ್ ರಿಯಾಯಿತಿಗಳು ಕೂಡ ಸಿಗಲಿದೆ. ಲಾಂಚ್ ಆಫರ್ ನ ಅಂಗವಾಗಿ ಐಡಿಯಾ ಸೆಲ್ಯುಲಾರ್ ವತಿಯಿಂದ ಪ್ರೀಪೇಯ್ಡ್ ಗ್ರಾಹಕರಿಗೆ 60GB 4G ಡೇಟಾ ಉಚಿತವಾಗಿ ದೊರೆಯಲಿದೆ. ಅಲ್ಲದೆ ಈ ಮೊಬೈಲ್ ಖರೀದಿಸಿದವರಿಗೆ ರೂ 249 ರ 10-ರೈಡ್ ಓಲಾ ಶೇರ್ ಪಾಸ್ ಉಚಿತವಾಗಿ ಸಿಗಲಿದೆ.

ಗೂಗಲ್, ಫೇಸ್‌ಬುಕ್‌, ಟ್ವಿಟರ್ ಒಟ್ಟಿಗೆ ಸೇರಿ 'ದಿ ಟ್ರಸ್ಟ್ ಪ್ರಾಜೆಕ್ಟ್' ಆರಂಭಿಸಿವೆ!!..ಏಕೆ ಗೊತ್ತಾ?ಗೂಗಲ್, ಫೇಸ್‌ಬುಕ್‌, ಟ್ವಿಟರ್ ಒಟ್ಟಿಗೆ ಸೇರಿ 'ದಿ ಟ್ರಸ್ಟ್ ಪ್ರಾಜೆಕ್ಟ್' ಆರಂಭಿಸಿವೆ!!..ಏಕೆ ಗೊತ್ತಾ?

ಇನ್ನು ಬಿಲಿಯನ್ ಕ್ಯಾಪ್ಚರ್+ ನ ಆಕರ್ಷಕ ವಿನ್ಯಾಸ ಹೊಂದಿದೆ ಎನ್ನುವದರಲ್ಲಿ ಸಂಶಯವಿಲ್ಲ. ಮೆಟಲ್ ಯುನಿಬಾಡಿ ವಿನ್ಯಾಸ ಮತ್ತು ಹಿಂಬದಿಯಲ್ಲಿ ಮೇಲ್ಭಾಗದ ಎಡಬದಿಯಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಹಾರಿಜಾಂಟಲ್ ಆಗಿ ಹೊಂದಿದ್ದು ಪಕ್ಕದಲ್ಲಿ LED ಫ್ಲ್ಯಾಶ್ ಕೂಡ ಇದೆ.

ಬಿಲಿಯನ್ ಕ್ಯಾಪ್ಚರ್+ ಸ್ಮಾರ್ಟ್ಫೋನಿನ ಫೀಚರ್ಗಳ ಕುರಿತು ಹೇಳುವುದಾದರೆ, ಇದರಲ್ಲಿದೆ 5.5 ಇಂಚ್ FHD 1080p ಡಿಸ್ಪ್ಲೇ 2.5Dಕರ್ವ್ಡ್ ಗ್ಲಾಸ್ ಜೊತೆಗೆ.ಒಕ್ಟಾ-ಕೋರ್ ಸ್ನ್ಯಾಪ್ಡ್ರಾಗನ್ 625 SoC ಪ್ರಾಸೆಸರ್ ಹೊಂದಿರುವ ಈ ಮೊಬೈಲ್ 3GB/4GB RAM ಮತ್ತು 32GB/64GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಬಿಲಿಯನ್ ಕ್ಯಾಪ್ಚರ್+ ನಲ್ಲಿದೆ 13MP ಡ್ಯುಯಲ್ ಪ್ರೈಮರಿ ಕ್ಯಾಮೆರಾ ಪೋರ್ಟ್ರೇಯ್ಟ್ ಮೋಡ್ ಮತ್ತು ಸೂಪರ್ ನೈಟ್ ಮೋಡ್ನೊಂದಿಗೆ ಹಾಗೂ 8MP ಸೆಲ್ಫೀ ಕ್ಯಾಮೆರಾ.

ಫ್ಲಿಪ್ಕಾರ್ಟ್ ಬಿಲಿಯನ್ ಕ್ಯಾಪ್ಚರ್+ 3500mAh ಬ್ಯಾಟರಿ ಹೊಂದಿದ್ದು ಕ್ವಿಕ್ ಚಾರ್ಜ್ ಫೀಚರ್ ಹೊಂದಿದೆ. ಇದರ ಬ್ಯಾಟರಿ ಒಮ್ಮೆ ಚಾರ್ಜ್ ಮಾಡಿದರೆ 2 ದಿನಗಳ ಕಾಲ ನಿರಂತರ ಕೆಲಸಮಾಡುತ್ತದೆ.ಅಲ್ಲದೆ 4G VoLTE, ಬ್ಲೂಟೂತ್, ವೈಫೈ, USB ಟೈಪ್-ಸಿ ಪೋರ್ಟ್ ಮತ್ತು ಡ್ಯುಯಲ್ ಸಿಮ್ ಸಪೋರ್ಟ್ ಕೂಡ ಇದೆ. ಬಿಲಿಯನ್ ಕ್ಯಾಪ್ಚರ್+ ಆಂಡ್ರಾಯ್ಡ್ 7.1.2 ನುಗಾಟ್ OS ಹೊಂದಿದ್ದು ಶೀಘ್ರದಲ್ಲಿಯೇ ಆಂಡ್ರಾಯ್ಡ್ ಓರಿಯೋ ಅಪ್ಡೇಟ್ ಪಡೆಯಲಿದೆ ಎಂಬ ಸುದ್ದಿಯಿದೆ.

Best Mobiles in India

Read more about:
English summary
Flipkart Billion Capture+ smartphone that went on sale on November 15 has gone out of stock in just 24 hours.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X