ಫ್ಲಿಪ್‌ಕಾರ್ಟ್‌ ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ಈ ಡಿವೈಸ್‌ಗಳಿಗೆ ಬಿಗ್‌ ಆಫರ್‌!

|

ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ಸೆಲ್‌ ನಡೆಸುತ್ತಲೇ ಬಂದಿದೆ. ವಿಶೇಷ ಸೇಲ್‌ಗಳ ಮೂಲಕ ಗ್ರಾಹಕರಿಗೆ ಡಿಸ್ಕೌಂಟ್‌ ಆಫರ್‌ ನೀಡೋದು ಸಾಮಾನ್ಯವಾಗಿದೆ. ಅದರಂತೆ ಇದೀಗ ಫ್ಲಿಪ್‌ಕಾರ್ಟ್‌ ತನ್ನ್ ಪ್ಲಾಟ್‌ಫಾರ್ಮ್‌ನಲ್ಲಿ ಬ್ಲ್ಯಾಕ್‌ ಫ್ರೈಡೇ ಸೇಲ್‌ ಅನ್ನು ನಡೆಸುತ್ತಿದೆ. ಈ ಸೇಲ್‌ನಲ್ಲಿ ಹಲವು ಎಲೆಕ್ಟ್ರಾನಿಕ್ಸ್‌ ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಘೋಷಿಸಲಾಗಿದೆ. ಇದಲ್ಲದೆ ಆಪಲ್‌ ಕಂಪೆನಿಯ ಪ್ರಾಡಕ್ಟ್‌ಗಳಾದ ಮ್ಯಾಕ್‌ಬುಕ್‌ ಏರ್‌, ಏರ್‌ಪಾಡ್ಸ್‌ ಪ್ರೊ ಮತ್ತು ಐಫೋನ್‌ 13 ಮೇಲೆ ವಿಶೇಷ ರಿಯಾಯಿತಿ ನೀಡಲಾಗ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬ್ಲ್ಯಾಕ್‌ ಫ್ರೈಡೇ ಸೇಲ್‌ ಆಯೋಜಿಸಿದೆ. ಈ ಸೇಲ್‌ನಲ್ಲಿ ಆಪಲ್‌ ಪ್ರಾಡಕ್ಟ್‌ಗಳ ಮೇಲೆ ಬಿಗ್‌ ಆಫರ್‌ ದೊರೆಯಲಿದೆ. ಅದರಲ್ಲೂ ದೀಪಾವಳಿ ಸೇಲ್‌ನಂತರ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುತ್ತಿರುವ ಬಿಗ್‌ ಡಿಸ್ಕೌಂಟ್‌ ಇದಾಗಿದೆ. ಆದರಿಂದ ಗ್ರಾಹಕರಿಗೆ ಈ ಸೇಲ್‌ನಲ್ಲಿ ಸಾಕಷ್ಟು ರಿಯಾಯಿತಿ ಪಡೆದುಕೊಳ್ಳುವ ಅವಕಾಶ ಸಿಗಲಿದೆ. ಇನ್ನುಳಿದಂತೆ ಈ ಫ್ಲಿಪ್‌ಕಾರ್ಟ್‌ ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ನೀವು ಪಡೆದುಕೊಳ್ಳಬಹುದಾದ ಆಫರ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಪಾಡ್‌ಗಳ ಮೇಲೆ ಬಿಗ್‌ ಆಫರ್‌

ಏರ್‌ಪಾಡ್‌ಗಳ ಮೇಲೆ ಬಿಗ್‌ ಆಫರ್‌

2019ರಲ್ಲಿ ಆಪಲ್‌ ಕಂಪೆನಿ ಪರಿಚಯಿಸಿದ ಮೊದಲ ತಲೆಮಾರಿನ ಏರ್‌ಪಾಡ್ಸ್‌ ಪ್ರೊ ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ವಿಶೇಷ ರಿಯಾಯಿತಿ ಪಡೆದಿದೆ. ಆಪಲ್‌ ಏರ್‌ಪಾಡ್‌ ಪ್ರಸ್ತುತ 19,999ರೂ. ಬೆಲೆಯಲ್ಲಿ ಸೇಲ್‌ ಆಗ್ತಿದೆ. ಇನ್ನು ಏರ್‌ಪಾಡ್ಸ್‌ ಪ್ರೊ (2 ನೇ ಜನ್) ಫ್ಲಿಪ್‌ಕಾರ್ಟ್‌ನಲ್ಲಿ 26,600ರೂ. ಬೆಲೆಯಲ್ಲಿ ಸೇಲ್‌ ಆಗ್ತಿದೆ. ಇದಲ್ಲದೆ ಏರ್‌ಪಾಡ್ಸ್‌ 2 ಫ್ಲಿಪ್‌ಕಾರ್ಟ್‌ನಲ್ಲಿ ಡಿಸ್ಕೌಂಟ್‌ನಲ್ಲಿ ಕೇವಲ 11,999ರೂ. ಬೆಲೆಗೆ ದೊರೆಯಲಿದೆ.

ಮ್ಯಾಕ್‌ಬುಕ್ ಏರ್ M1

ಮ್ಯಾಕ್‌ಬುಕ್ ಏರ್ M1

ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್‌ ಸಮಯದಲ್ಲಿ ಮ್ಯಾಕ್‌ಬುಕ್ ಏರ್ M1 ಕೇವಲ 88,990ರೂ. ಬೆಲೆಗೆ ದೊರೆಯಲಿದೆ. ಇದಲ್ಲದೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ 10,000ರೂ. ಹೆಚ್ಚುವರಿ ರಿಯಾಯಿತಿಯೂ ಕೂಡ ದೊರೆಯಲಿದೆ. ಇನ್ನು ಈ ಮ್ಯಾಕ್‌ಬುಕ್‌ ಏರ್‌ M1 8GB RAM ಮತ್ತು 256GB ಸ್ಟೋರೇಜ್‌ ಅನ್ನು ಪಡೆದಿದೆ. ಇದು 13 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 8-ಕೋರ್ CPU, 7-ಕೋರ್ GPU ಮತ್ತು 16-ಕೋರ್ ನ್ಯೂರಲ್ ಎಂಜಿನ್‌ನೊಂದಿಗೆ Apple ನ M1 ಚಿಪ್ ಅನ್ನು ಬಳಸುತ್ತಿದೆ.

ಐಫೋನ್‌ 13

ಐಫೋನ್‌ 13

ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್‌ ನಲ್ಲಿ ಐಫೋನ್ 13 ಕೂಡ ತಾತ್ಕಾಲಿಕ ಬೆಲೆ ಕಡಿತವನ್ನು ಸಹ ಪಡೆದುಕೊಂಡಿದೆ. ಇದನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ 62,999ರೂ. ಬೆಲೆಯಲ್ಲಿ ದೊರೆಯಲಿದೆ. ಇದಲ್ಲದೆ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ಗಳ ಮೇಲೆ 1,000 ರೂಪಾಯಿಗಳ ಹೆಚ್ಚುವರಿ ರಿಯಾಯಿತಿಯೂ ಇದೆ. ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಹೊಂದಿದ್ದು, 1200 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ.

ಐಫೋನ್‌ 14

ಐಫೋನ್‌ 14

ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಐಫೋನ್ 14 ಅನ್ನು 77,400 ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇನ್ನು ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ.

ಐಫೋನ್‌ 12

ಐಫೋನ್‌ 12

ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಐಫೋನ್ 12 ಅನ್ನು 48,999 ರೂಗಳಿಗೆ ಖರೀದಿಸಬಹುದು. ಇನ್ನು ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್‌ಗಳನ್ನು ಹೊಂದಿವೆ.

Best Mobiles in India

Read more about:
English summary
Flipkart Black Friday sale: Discounts on AirPods, iPhone 13 and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X