'ಫ್ಲಿಪ್‌ಕಾರ್ಟ್' ಉದ್ಯೋಗಿಗಳಿಗೆ ಬಂಪರ್!..ಪ್ರತಿ ಷೇರಿಗೆ ನಿಗದಿಯಾದ ಬೆಲೆ ಎಷ್ಟು ಗೊತ್ತಾ?

    ವಾಲ್‌ಮಾರ್ಟ್ ಮತ್ತು ಫ್ಲಿಪ್‌ಕಾರ್ಟ್ ನಡುವಿನ ಮೇಗಾಡೀಲ್ ನಂತರ ಫ್ಲಿಪ್‌ಕಾರ್ಟ್ ಕಂಪೆನಿ ಹಲವು ಉದ್ಯೋಗಿಗಳು ಕೋಟ್ಯಾದೀಶರಾಗುತ್ತಾರೆ ಎಂಬ ಸುದ್ದಿ ನಿಮಗೆಲ್ಲಾ ಈಗಾಗಲೇ ತಿಳಿದಿದೆ ಎನ್ನಬಹುದು. ಅದಕ್ಕೆ ಪೂರಕವಾಗಿ ನೌಕರರ ಬಳಿ ಇರುವ, ಉದ್ಯೋಗಿಗಳ ಷೇರು ಮಾಲೀಕತ್ವ ಯೋಜನೆಗಳನ್ನು ಫ್ಲಿಪ್‌ಕಾರ್ಟ್ ಮುಂದಾಗಿದೆ.!

    ಹೌದು, ಫ್ಲಿಪ್‌ಕಾರ್ಟ್ ನಲ್ಲಿನ ಶೇ 77ರಷ್ಟು ಪಾಲು ಬಂಡವಾಳವನ್ನು ₹ 1.07 ಲಕ್ಷ ಕೋಟಿಗೆ ಖರೀದಿಸಲು ಮುಂದಾದ ಬೆನ್ನಲ್ಲೇ ಸಂಸ್ಥೆಯ ನೌಕರರಿಗೆ ಈ ಕೊಡುಗೆ ಪ್ರಸ್ತಾಪ ಮುಂದಿಡಲಾಗಿದೆ. ಸಂಸ್ಥೆಯ ಹಾಲಿ ಮತ್ತು ಮಾಜಿ ನೌಕರರು ತಮ್ಮ 'ಇಎಸ್‌ಒಪಿ'ಗಳನ್ನು ಈಗಲೇ ನಗದುಗೊಳಿಸಲು ಫ್ಲಿಪ್‌ಕಾರ್ಟ್ ಸಂಸ್ಥೆ ಅವಕಾಶ ಒದಗಿಸಿದೆ.!

    'ಫ್ಲಿಪ್‌ಕಾರ್ಟ್' ಉದ್ಯೋಗಿಗಳಿಗೆ ಬಂಪರ್!..ಪ್ರತಿ ಷೇರಿಗೆ ನಿಗದಿಯಾದ ಬೆಲೆ ಎಷ್ಟು?

    ಸಂಸ್ಥೆಯು ತನ್ನ ಉದ್ಯೋಗಿಗಳ ಸಂಪತ್ತು ವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತ ಬಂದಿದೆ. ಈಗಲೂ ಅದಕ್ಕೆ ಬದ್ಧವಾಗಿರುವುದಾಗಿ ಫ್ಲಿಪ್‌ಕಾರ್ಟ್ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಹಾಗಾದರೆ, ಏನಿದು ಇಎಸ್‌ಒಪಿ ? ಫ್ಲಿಪ್‌ಕಾರ್ಟ್ ಮರು ಖರೀದಿಸುತ್ತಿರುವ ಷೇರುಗಳ ಬೆಲೆ ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯಿರಿ. ‌

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಏನಿದು ‘ಇಎಸ್‌ಒಪಿ’?

    ಇಎಸ್‌ಒಪಿಯ ವಿಸ್ತೃತ ರೂಪ 'ಉದ್ಯೋಗಿಗಳ ಷೇರು ಮಾಲೀಕತ್ವ ಯೋಜನೆಯಾಗಿದೆ'. ಯಾವುದೇ ಸಂಸ್ಥೆಯೊಂದು ತನ್ನ ನೌಕರರ ಕಾರ್ಯದಕ್ಷತೆಗೆ ಪ್ರತಿಯಾಗಿ ಅವರಿಗೆ ಷೇರುಗಳ ರೂಪದಲ್ಲಿ ನೀಡುವ ಪ್ರತಿಫಲವಾಗಿರುತ್ತದೆ. ಈ ಮೂಲಕ ನೌಕರರು ಸಂಸ್ಥೆಯ ಮಾಲೀಕತ್ವದಲ್ಲಿ ಭಾಗಿಯಾಗಿರುತ್ತಾರೆ.

    ಮಾರಾಟ ಮಾಡಿ ನಗದು ಪಡೆಯಬಹುದು.!!

    ಯಾವುದೇ ಸಂಸ್ಥೆಯ ನೌಕರರಿಗೆ ಕೊಡಮಾಡುವ ಷೇರುಗಳು ಉದ್ಯೋಗಿ ನಿವೃತ್ತರಾಗುವವರೆಗೆ ಅಥವಾ ಸಂಸ್ಥೆ ತೊರೆಯುವವರೆಗೆ ‘ಇಎಸ್‌ಒಪಿ' ಟ್ರಸ್ಟ್‌ನಲ್ಲಿ ಇರುತ್ತವೆ. ಇವುಗಳನ್ನು ಸಂಸ್ಥೆಗೆ ಮಾರಾಟ ಮಾಡಿ ನಗದು ಪಡೆಯಬಹುದಾಗಿದೆ. ನೌಕರರು ಹೊಂದಿರುವ ಪ್ರತಿ ಷೇರಿನ ಬೆಲೆ ಪ್ರಸ್ತುತ ಕಂಪೆನಿ ಹೊಂದಿರುವ ಷೇರಿನ ಬೆಲೆಗೆ ಬಹುತೇಕ ಸಮವಾಗಿರುತ್ತದೆ.

    ಶೇ 50ರಷ್ಟನ್ನು ಮಾರಾಟ ಮಾಡಬಹುದು!!

    ಯಾವುದೇ ಸಂಸ್ಥೆಯ ಹಾಲಿ ನೌಕರರು ತಮ್ಮ ಷೇರು ಆಯ್ಕೆಯಲ್ಲಿನ ಶೇ 50ರಷ್ಟನ್ನು ಮಾರಾಟ ಮಾಡಬಹುದು. ನಂತರದ ವರ್ಷಗಳಲ್ಲಿ 2 ಕಂತಿನಲ್ಲಿ ಶೇ 25ರಂತೆ ನಗದಿಗೆ ಪರಿವರ್ತಿಸಿಕೊಳ್ಳಬಹುದು. ಮಾಜಿ ನೌಕರರು ಶೇ 30ರಷ್ಟು ಷೇರುಗಳನ್ನು ಮಾರಾಟ ಮಾಡಬಹುದು.

    ಪ್ರತಿ ಷೇರಿಗೆ ₹ 8,375!!

    ಇದೀಗ ಉದ್ಯೋಗಿಗಳ ಷೇರು ಮಾಲೀಕತ್ವ ಯೋಜನೆಗಳನ್ನು ಫ್ಲಿಪ್‌ಕಾರ್ಟ್ ಕಂಪೆನಿ ಮುಂದಾಗಿದ್ದು, (ಇಎಸ್‌ಒಪಿ) ಪ್ರತಿ ಷೇರಿಗೆ ₹ 8,375 ರಿಂದ ₹ 8,643 ದರದಲ್ಲಿ ಮರು ಖರೀದಿಸಲು ಫ್ಲಿಪ್‌ಕಾರ್ಟ್ ಸಿದ್ದವಾಗಿದೆ. ಸಂಸ್ಥೆಯು ಕಳೆದ ವರ್ಷ ತನ್ನ ಮೂರು ಸಾವಿರ ಉದ್ಯೋಗಿಗಳ ಷೇರುಗಳನ್ನು ₹ 670 ಕೋಟಿಗಳಿಗೆ ಮರು ಖರೀದಿಸಿತ್ತು.

    How to send WhatsApp Payments invitation to others - GIZBOT KANNADA
    13,400 ಕೋಟಿ ಹೊಸ ಬಂಡವಾಳ!!

    13,400 ಕೋಟಿ ಹೊಸ ಬಂಡವಾಳ!!

    ಫ್ಲಿಪ್‌ಕಾರ್ಟ್‌ನ ಬಹುಪಾಲು ಬಂಡವಾಳವನ್ನು ಸ್ವಾಧೀನಪಡಿರುವ ವಾಲ್‌ಮಾರ್ಟ್ ಇದೀಗ ಹೊಸದಾಗಿ 13,400 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಲಿದೆ. ಇದು ಅಮೆಜಾನ್‌ನ ಪೈಪೋಟಿ ಎದುರಿಸಲು ಫ್ಲಿಪ್‌ಕಾರ್ಟ್‌ಗೆ ನೆರವಾಗಲಿದೆ. ಮತ್ತು ಅಮೆಜಾನ್‌ಗೆ ಫ್ಲಿಪ್‌ಕಾರ್ಟ್‌ನಿಂದ ಮತ್ತಷ್ಟು ಪೈಪೋಟಿ ಹೆಚ್ಚಾಗಲಿದೆ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    Flipkart has about 145 entities as shareholders,. to know more visit to kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more