ಇಂದನಿಂದ Flipkart Buy Buy ಸೇಲ್: Nothing ಉತ್ಪನ್ನಗಳಿಗೆ ಭಾರೀ ರಿಯಾಯಿತಿ!
ಇ-ಕಾಮರ್ಸ್ ದೈತ್ಯ Flipkart ತನ್ನ Buy Buy 2025 ಸೇಲ್ ಅನ್ನು ಇಂದಿನಿಂದ (ಡಿಸೆಂಬರ್ 5ರಿಂದ) ಆರಂಭಿಸಿದೆ. ಈ ಸೇಲ್‌ನಲ್ಲಿ Nothing ಮತ್ತು ಇದರ ಒಡೆತನದ CMF by Nothing ಬ್ರಾಂಡ್‌ಗಳ ಮೇಲೆ ಗಮನಾರ್ಹ ರಿಯಾಯಿತಿಗಳು ಲಭ್ಯವಾಗಲಿದ್ದು, ಹೊಸ ಮತ್ತು ಜನಪ್ರಿಯ ಸ್ಮಾರ್ಟ್‌ಫೋನ್ ಮಾದರಿಗಳ ಜೊತೆಗೆ ಆಡಿಯೋ ಹಾಗೂ ವೇರಬಲ್‌ಗಳಿಗೂ ಕಡಿತ ಬೆಲೆ ನೀಡಲಾಗುತ್ತಿದೆ. ಹಾಗಾಗಿ, Nothing ಪ್ರಿಯರಿಗೆ ಈ ಸೇಲ್ ಒಮದು ಉತ್ತಮ ಅವಕಾಶವಾಗಿದೆ. ಹಾಗಾದರೆ, Flipkart Buy Buy 2025 ಸೇಲ್ನಲ್ಲಿ ಗಮನಾರ್ಹ ರಿಯಯಿತಿಗಳನ್ನು ಪಡೆದಿರುವ Nothing ಸಾಧನಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Nothing ಮತ್ತು CMF ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಆಫರ್‌ಗಳು
Flipkart Buy Buy 2025 ಸೇಲ್ ಸೇಲ್ ಅವಧಿಯಲ್ಲಿ Nothing Phone 3 ಅನ್ನು ರೂ. 49,999 ಆರಂಭಿಕ ದರದಲ್ಲಿ ಖರೀದಿಸಬಹುದು. ಈ ಫ್ಲ್ಯಾಗ್‌ಶಿಪ್ ಮೊದಲು ರೂ. 79,999 ದಲ್ಲಿ ಬಿಡುಗಡೆಯಾಗಿದ್ದುದನ್ನು ಗಮನಿಸಿದರೆ, ಇದು ದೊಡ್ಡ ಮಟ್ಟದ ಬೆಲೆ ಕಡಿತವಾಗಿದೆ. ಹಾಗೆಯೇ,
Nothing Phone 3a: ರೂ. 21,999 (ಹಳೆಯ ಬೆಲೆ: ರೂ. 22,999)
Nothing Phone 3a Pro: ರೂ. 26,999 (ಹಳೆಯ ಬೆಲೆ: ರೂ. 27,999)
CMF Phone 2 Pro ಅನ್ನು ರೂ. 17,499 ಕ್ಕೆ ಪಡೆಯಬಹುದು, ಇದು ಅದರ ಮೂಲ ಬೆಲೆಯಿಗಿಂತ ಸಾಕಷ್ಟು ಕಡಿತವಾಗಿದೆ.
ಇದರ ಜೊತೆಗೆ ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ್ ಮತ್ತು SBI ಸೇರಿದಂತೆ ಪಾಲುದಾರ ಬ್ಯಾಂಕ್‌ಗಳಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದ ಖರೀದಿಗಳ ಮೇಲೆ ಈ ಸೇಲ್ 10% ವರೆಗೆ ತ್ವರಿತ ರಿಯಾಯಿತಿಯನ್ನು Flipkart ನೀಡುತ್ತಿದೆ. ಇದರಿಂದ ಈ ಎಲ್ಲಾ ಫೋನ್‌ಗಳನ್ನು ಮತ್ತಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.

CMF ಆಡಿಯೋ ಮತ್ತು ವೇರಬಲ್‌ಗಳ ಮೇಲೂ ಆಕರ್ಷಕ ಬೆಲೆ ಕಡಿತ
Nothing ಮತ್ತು CMF ಸ್ಮಾರ್ಟ್‌ಫೋನ್‌ಗಳ ಜೊತೆಗೆ, CMF by Nothing ತನ್ನ ಆಡಿಯೋ ಮತ್ತು ವಾಚ್ ಉತ್ಪನ್ನಗಳಿಗೂ ವಿಶೇಷ ದರಗಳನ್ನು ಅನ್ವಯಿಸಿದೆ. ಈ ಸೇಲ್ ಸಮಯದಲ್ಲಿ,
CMF Buds 2a: ರೂ. 1,899
CMF Buds 2: ರೂ. 2,399
CMF Buds 2 Plus: ರೂ. 2,599
CMF Watch Pro 2: ರೂ. 4,199
ರಿಯಾಯಿತಿ ಬೆಲೆಗಳಲ್ಲಿ ಲಭ್ಯವಾಗುತ್ತದೆ. ಇಲ್ಲಿ ಗಮನಿಸಿಬೇಕಾದ ಮತ್ತೊಂದು ಅಂಶವೆಂದರೆ, ಈ ಗ್ಯಾಜೆಟ್‌ಗಳ ಮೇಲಿನ ಕೊಡುಗೆಗಳು ಡಿಸೆಂಬರ್ 4ರಿಂದ 7ರವರೆಗೆ ಮಾನ್ಯವಾಗಿರಲಿದೆ. ಉಳಿದ CMF ಮತ್ತು Nothing ಉತ್ಪನ್ನಗಳ ವಿಶೇಷ ದರಗಳು ಡಿಸೆಂಬರ್ 4ರಿಂದ 10ರವರೆಗೆ ಅನ್ವಯಿಸುತ್ತವೆ.
ಖರೀದಿದಾರರಿಗೆ ಉಪಯುಕ್ತ ಸಲಹೆ
ಈ ಬಾರಿ Flipkart Buy Buy 2025 ಸೇಲ್ Nothing ಮತ್ತು CMF ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಪಡೆಯಲು ಉತ್ತಮ ಅವಕಾಶ ಒದಗಿಸುತ್ತಿದೆ. ನೀವು ಹೊಸ ಫೋನ್‌ಗಾಗಿ ಹುಡುಕುತ್ತಿದ್ದರೂ ಅಥವಾ ಉತ್ತಮ ಬಜೆಟ್ ಆಡಿಯೋ ಗ್ಯಾಜೆಟ್ ಬಯಸುತ್ತಿದ್ದರೂ, ಈ ಸೇಲ್ ನಿಮ್ಮ ಅಗತ್ಯಗಳನ್ನು ಪೂರೈಸುವ ಸಾಧ್ಯತೆ ಇದೆ. ರಿಯಾಯಿತಿ ದರಗಳು, ಬ್ಯಾಂಕ್ ಆಫರ್‌ಗಳು ಮತ್ತು ಸೀಮಿತ ಸ್ಟಾಕ್ ಆದ್ದರಿಂದ ಸೇಲ್ ಆರಂಭಕ್ಕೂ ಮುನ್ನ ನಿಮ್ಮ ಫೇವರಿಟ್ ಉತ್ಪನ್ನಗಳನ್ನು ವಿಶ್‌ಲಿಸ್ಟ್‌ಗೆ ಸೇರಿಸಿಕೊಳ್ಳಿ. ಮತ್ತು ಈ ಸೇಲ್‌ನಲ್ಲಿ ನಿಮ್ಮ ಗಮನಸೆಳೆದ ರಿಯಾಯಿತಿ ಯಾವುವು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








