Home
ಸುದ್ದಿಜಾಲ

ಫ್ಲಿಪ್ ಕಾರ್ಟ್ ನಲ್ಲಿ ವಿಶ್ವ ಟಿವಿ ದಿನಾಚರಣೆ- ಸ್ಮಾರ್ಟ್ ಟಿವಿಗಳಿಗೆ ಬಂಪರ್ ಆಫರ್

By Gizbot Bureau

ಮನೆಯ ಮನರಂಜನೆ ಪರಿಕರಗಳಲ್ಲಿ ಸ್ಮಾರ್ಟ್ ಟಿವಿಗಳಿಗೆ ಇದೀಗ ಬಹಳ ಪ್ರಾಮುಖ್ಯತೆ. ಹಳೆಯ ಸಾಂಪ್ರದಾಯಿಕ ಟಿವಿಗಳಿಗಿಂತ ಇದೀಗ ಸ್ಮಾರ್ಟ್ ಟಿವಿಗಳಿಗೆ ಬೇಡಿಕೆ ಹೆಚ್ಚು.ಇವುಗಳು ಸಾಕಷ್ಟು ಅಧ್ಬುತ ಫೀಚರ್ ಗಳಿಂದ ಗ್ರಾಹಕರನ್ನು ಸೆಳೆಯುತ್ತಿದೆ. ಬ್ಲೂಟೂತ್,ಎನ್ಎಫ್ ಸಿ, ಯುಎಸ್ ಬಿ ಟೈಪ್-ಸಿ, ವೆಬ್ ಸ್ಟ್ರೀಮಿಂಗ್ ಸೇವೆಗಳು ಮತ್ತು ಇತ್ಯಾದಿ ಹಲವು ಬಳಕೆಯೋಗ್ಯ ಆಪ್ಸ್ ಗಳು ಈ ಸ್ಮಾರ್ಟ್ ಟಿವಿಗಳ ಫೀಚರ್ ಗಳಲ್ಲಿ ಪ್ರಮುಖವಾದವುಗಳಾಗಿವೆ. ಸದ್ಯ ಇವುಗಳು ಬೇಡಿಕೆಯ ವಸ್ತುಗಳಾಗಿರುವುದರಿಂದಾಗಿ ಸ್ವಲ್ಪ ದುಬಾರಿಯೂ ಆಗಿದೆ. ಆದರೆ ಇದೀಗ ಫ್ಲಿಪ್ ಕಾರ್ಟ್ ನಲ್ಲಿರುವ “ವರ್ಲ್ಡ್ ಟಿವಿ ಡೇಸ್” ರಿಯಾಯಿತಿ ಬೆಲೆಗೆ ಇವುಗಳನ್ನು ಖರೀದಿಸುವ ಅವಕಾಶ ಲಭ್ಯವಿದೆ.

ಬೆಸ್ಟ್ ಸ್ಮಾರ್ಟ್ ಟಿವಿಗಳು

ಕೆಲವು ಬೆಸ್ಟ್ ಸ್ಮಾರ್ಟ್ ಟಿವಿಗಳು 10% ಕ್ಯಾಷ್ ಬ್ಯಾಕ್, 5% ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಅನಿಯಮಿತ ಕ್ಯಾಷ್ ಬ್ಯಾಕ್, ಕ್ರೆಡಿಟ್/ಡೆಬಿಟ್/ನೆಟ್ ಬ್ಯಾಂಕಿಂಗ್ ನಲ್ಲಿ ಕ್ಯಾಷ್ ಬ್ಯಾಕ್ ಗಳು, ಇಎಂಐ ಪ್ಲಾನ್ ಗಳು, ಅತ್ಯಂತ ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳು, ಹೆಚ್ಚುವರಿ ರಿಯಾಯಿತಿಗಳು ಇತ್ಯಾದಿಗಳು ಈ ಬಾರಿ ಫ್ಲಿಪ್ ಕಾರ್ಟ್ ನಲ್ಲಿ ಸಿಗುತ್ತದೆ.

ಮೊಟೋರೊಲಾ ಟಿವಿಗಳಿಗೆ 50% ದ ವರೆಗೆ ರಿಯಾಯಿತಿ:

ಮೊಟೋರೊಲಾ ಟಿವಿಗಳಿಗೆ 50% ದ ವರೆಗೆ ರಿಯಾಯಿತಿ:

ಫ್ಲಿಪ್ ಕಾರ್ಟ್ ನಲ್ಲಿ ಕೆಲವು ಮೊಟೋರೊಲಾ ಟಿವಿಗಳನ್ನು 50% ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವಿದೆ. ಈ ಟಿವಿಗಳು 19,500 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ನಲ್ಲಿ ಲಭ್ಯವಿದೆ ಮತ್ತು ನೀವು 2000 ರುಪಾಯಿಯ ಹೆಚ್ಚುವರಿ ಎಕ್ಸ್ ಚೇಂಜ್ ಮೊತ್ತವನ್ನು ಕೂಡ ಪಡೆದುಕೊಳ್ಳಬಹುದು.

ಸ್ಯಾಮ್ ಸಂಗ್ ಟಿವಿಗಳಿಗೆ 60% ದ ವರೆಗೆ ರಿಯಾಯಿತಿ

ಸ್ಯಾಮ್ ಸಂಗ್ ಟಿವಿಗಳಿಗೆ 60% ದ ವರೆಗೆ ರಿಯಾಯಿತಿ

ಹಲವು ಸ್ಯಾಮ್ ಸಂಗ್ ಟಿವಿಗಳು 60% ದವರೆಗಿನ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಟಿವಿಗಳು ವೆಬ್ ಸ್ಟ್ರೀಮಿಂಗ್ ಸೇವೆಗಳಿಂದ ಕೂಡಿರುತ್ತವೆ. ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್ ಮತ್ತು ಯುಟ್ಯೂಬ್ ಗಳು ಲಭ್ಯವಿದೆ. ಇವು ಟೈಜನ್ ಔಟ್-ಆಫ್- ಬಾಕ್ಸ್ ನಲ್ಲಿ ರನ್ ಆಗುತ್ತವೆ ಮತ್ತು ಸ್ಪ್ರೋಟ್ ಅಲ್ಟ್ರಾ HD ಡಿಸ್ಪ್ಲೇಯನ್ನು ಹೊಂದಿರುತ್ತವೆ.

ಎಲ್ ಜಿ ಟಿವಿಗಳಿಗೆ 45% ದ ವರೆಗೆ ರಿಯಾಯಿತಿ

ಎಲ್ ಜಿ ಟಿವಿಗಳಿಗೆ 45% ದ ವರೆಗೆ ರಿಯಾಯಿತಿ

ಎಲ್ ಜಿ ಟಿವಿಗಳನ್ನು ಗ್ರಾಹಕರು 45% ರಿಯಾಯಿತಿಯಲ್ಲಿ ಖರೀದಿಸಬಹುದು.ಎಲ್ ಜಿ ಬಿ9 138cm (55ಇಂಚಿನ) ಆಲ್ಟ್ರಾHD (4K) OLED ಸ್ಮಾರ್ಟ್ ಟಿವಿಯನ್ನು ಆರಂಭಿಕ ಇಎಂಐ ಪ್ರತಿ ತಿಂಗಳಿಗೆ 7,233 ಪಾವತಿಸುವ ಮೂಲಕ ಖರೀದಿಸಬಹುದು. ಹೆಚ್ಚುವರಿಯಾಗಿ 74,991 ರುಪಾಯಿಯ ರಿಯಾಯಿತಿ ಈ ಟಿವಿಗೆ ಲಭ್ಯವಾಗುತ್ತದೆ.

ಟಿವಿಎಲ್ ನ ಐಎಫ್ ಫಾಲ್ಕನ್ ಟಿವಿಗಳಿಗೆ 55% ದ ವರೆಗೆ ರಿಯಾಯಿತಿ

ಟಿವಿಎಲ್ ನ ಐಎಫ್ ಫಾಲ್ಕನ್ ಟಿವಿಗಳಿಗೆ 55% ದ ವರೆಗೆ ರಿಯಾಯಿತಿ

ಗ್ರಾಹಕರು ಇದನ್ನು 55% ದ ವರೆಗಿನ ರಿಯಾಯಿತಿಯಲ್ಲಿ ಖರೀದಿಸಬಹುದು. ಈ ಟಿವಿಯಲ್ಲಿ ಕೆಲವು ವೆಬ್ ಬ್ರೌಸಿಂಗ್ ಸೇವೆಗಳಿದೆ. ಉದಾಹರಣೆಗೆ ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್ ಮತ್ತು ಯುಟ್ಯೂಬ್. ಇವು ಆಂಡ್ರಾಯ್ಡ್ ಓಎಸ್ ನಲ್ಲಿ ರನ್ ಆಗುತ್ತದೆ. ಗೂಗಲ್ ಅಸಿಸ್ಟೆಂಟ್ ಮತ್ತು ಕ್ರೋಮ್ ಇನ್-ಬಿಲ್ಟ್ ಗೆ ಫೀಚರ್ ನ್ನು ಹೊಂದಿದೆ. ಅಷ್ಟೇ ಅಲ್ಲ ಸ್ಪೋರ್ಟ್ ಫುಲ್ HD ರೆಸಲ್ಯೂಷನ್ 1920 x 1080 ಪಿಕ್ಸಲ್ಸ್ ನ್ನು ಹೊಂದಿವೆ.

ಸೋನಿ ಟಿವಿಗಳಿಗೆ 45% ದ ವರೆಗೆ ರಿಯಾಯಿತಿ

ಸೋನಿ ಟಿವಿಗಳಿಗೆ 45% ದ ವರೆಗೆ ರಿಯಾಯಿತಿ

ಸೋನಿ ಟಿವಿಗಳಿಗೆ 45% ದ ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಹಲವು ರೀತಿಯ ಇಎಂಐ ಕಾರ್ಡ್ ಆಯ್ಕೆಗಳು ಈ ಟಿವಿಗೆ ಲಭ್ಯವಿದೆ. ಅದರಲ್ಲಿ ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆ, ಬಜಾಜ್ ಫಿನ್ ಸರ್ವ್ ಕಾರ್ಡ್ ಮತ್ತು ಇತರೆ ಹಲವು ಕ್ರೆಡಿಟ್ ಕಾರ್ಡ್ ಗಳಲ್ಲಿ ಇಎಂಐ ಆಯ್ಕೆಗಳಿವೆ.

ವಿಯು ಟಿವಿಗಳಿಗೆ 40% ದ ವರೆಗೆ ರಿಯಾಯಿತಿ

ವಿಯು ಟಿವಿಗಳಿಗೆ 40% ದ ವರೆಗೆ ರಿಯಾಯಿತಿ

ವಿಯು ಟಿವಿಗಳನ್ನು 40% ರಿಯಾಯಿತಿಯಲ್ಲಿ ಖರೀದಿಸಬಹುದು. ಈ ಪ್ರೊಡಕ್ಟ್ ಗಳನ್ನು ಖರೀದಿಸುವ ಮೂಲಕ ನಿಮಗೆ 20 ಲಕ್ಷ ಬೆಲೆಬಾಳುವ ವಿಯು ಟಿವಿಯನ್ನು ಗೆಲ್ಲುವ ಅವಕಾಶವೂ ಇರುತ್ತದೆ.

ಬಿಪಿಎಲ್ ಟಿವಿಗಳಿಗೆ 54% ದ ವರೆಗೆ ರಿಯಾಯಿತಿ

ಬಿಪಿಎಲ್ ಟಿವಿಗಳಿಗೆ 54% ದ ವರೆಗೆ ರಿಯಾಯಿತಿ

ಬಿಪಿಎಲ್ ಸ್ಮಾರ್ಟ್ ಟಿವಿಗಳನ್ನು 54% ರಿಯಾಯಿತಿಯಲ್ಲಿ ಖರೀದಿಸಬಹುದು. BPL 102cm (40 ಇಂಚಿನ) ಫುಲ್ HD LED ಸ್ಮಾಟ್ ಟಿವಿಯನ್ನು ಆರಂಭಿಕ ಇಎಂಐ ಮಾಸಿಕ 1,292 ರುಪಾಯಿ ಪಾವತಿಸಿ ಖರೀದಿಸುವ ಅವಕಾಶವಿದೆ. ಸ್ಟ್ಯಾಂಡರ್ಡ್ ಇಎಂಐ ಮೂಲಕವೂ ಕೂಡ ಖರೀದಿಸಬಹುದು.

ಥಾಮ್ಸನ್ ಟಿವಿಗಳಿಗೆ 49% ದ ವರೆಗೆ ರಿಯಾಯಿತಿ

ಥಾಮ್ಸನ್ ಟಿವಿಗಳಿಗೆ 49% ದ ವರೆಗೆ ರಿಯಾಯಿತಿ

ಈ ಟಿವಿ ಖರೀದಿಸುವ ಮೂಲಕ ನಿಮಗೆ 49% ರಿಯಾಯಿತಿ ಸಿಗುತ್ತದೆ. ಥಾಮ್ಸನ್ UD9 102cm (40 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿಯನ್ನು ನೀವು ಹೆಚ್ಚುವರಿಯಾದಿ 2,500 ರುಪಾಯಿ ರಿಯಾಯಿತಿ ಮೂಲಕ ಪಡೆಯಬಹುದು. ಅಷ್ಟೇ ಅಲ್ಲ 6,583 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ನಲ್ಲೂ ಕೂಡ ಇದು ಲಭ್ಯವಿದೆ.

Best Mobiles in India

English summary
The list that we have shared comes with Smart TVs which despite coming at little high prices can be availed with greater discounts under a scheme called “World TV Days” by Flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+