Home
ಸುದ್ದಿಜಾಲ

ಬೆಂಗಳೂರು ಮೂಲದ ಕಂಪೆನಿಗೆ 650 ಕೋಟಿ ಹೂಡಿಕೆ ಮಾಡಿದ 'ಸಚಿನ್ ಬನ್ಸಾಲ್'!!

ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ತೊರೆದ ನಂತರ ಸಚಿನ್ ಬನ್ಸಾಲ್ ಅವರ ಮುಂದಿನ ನಡೆ ಏನು ಎಂಬುದಕ್ಕೆ ಇದೀಗ ಉತ್ತರ ದೊರೆತಿದೆ. ಇತ್ತೀಚಿನ ಇಂಟರ್‌ನೆಟ್‍ ವಲಯದ ಮುಂಚೂಣಿ ಉದ್ಯಮಿಯಾಗಿರುವ ಸಚಿನ್ ಬನ್ಸಾಲ್ ಅವರು ಇದೀಗ ವಿಶ್ವದ ಅತಿದೊಡ್ಡ ಬಾಡಿಗೆ ಕಾರು ಕಂಪೆನಿಗಳಲ್ಲಿ ಒಂದಾದ 'ಓಲಾ'ದಲ್ಲಿ ಹೂಡಿಕೆ ಮಾಡುತ್ತಿರುವುದು ಇದೀಗ ಅಧಿಕೃತವಾಗಿ ದೃಢೀಕೃತವಾಗಿದ್ದು, ಬನ್ಸಾಲ್ ಅವರು ಓಲಾದಲ್ಲಿ ಒಟ್ಟು 650 ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.

ಹೌದು, ಇತ್ತೀಚಿಗಷ್ಟೇ 699 ಕೋಟಿಯಷ್ಟು ಭಾರೀ ತೆರಿಗೆ ಪಾವತಿಸುವ ಮೂಲಕ ಗಮನಸೆಳೆದಿದ್ದ ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್, ಇದೀಗ ಆಪ್ ಆಧಾರಿತ ಟ್ಯಾಕ್ಸಿ ಸಂಸ್ಥೆ ಓಲಾದಲ್ಲಿ ಹೂಡಿಕೆ ಮಾಡಿರುವ ವಿಷಯ ಅಧಿಕೃತವಾಗಿ ತಿಳಿದುಬಂದಿದೆ. ಸಚಿನ್ ಬನ್ಸಾಲ್ ಅವರು 650 ಕೋಟಿ ರೂ. ಹೂಡಿಕೆ ಮಾಡುತ್ತಿರುವುದನ್ನು ಓಲಾ ಸಂಸ್ಥೆಯೂ ಅಧಿಕೃತವಾಗಿ ದೃಢಪಡಿಸಿದ್ದು, ಈ ಹೂಡಿಕೆಯು ಓಲಾದ ಜಾಗತಿಕ ನಿಧಿ ಸಂಗ್ರಹದ ಭಾಗವಾಗಿದ್ದು, ಇದು ಹೂಡಿಕೆದಾರರಾಗಿ ಸಚಿನ್ ಅವರ ವೈಯಕ್ತಿಕ ಸಾಮರ್ಥ್ಯವನ್ನು ತೋರಿದೆ ಎಂದು ಓಲಾ ಹೇಳಿದೆ.

 ಬೆಂಗಳೂರು ಮೂಲದ ಕಂಪೆನಿಗೆ 650 ಕೋಟಿ ಹೂಡಿಕೆ ಮಾಡಿದ 'ಸಚಿನ್ ಬನ್ಸಾಲ್'!!

ಈ ಬಗ್ಗೆ ಓಲಾ ಸಹ-ಸಂಸ್ಥಾಪಕ ಮತ್ತು ಸಿಇಒ ಭಾವಿಶ್ ಅಗರ್ ವಾಲ್‍ ಅವರು ಮಾತನಾಡಿ, ಓಲಾದಲ್ಲಿ ಸಚಿನ್‍ ಅವರು ಹೂಡಿಕೆದಾರರಾಗಿರುವುದಕ್ಕೆ ಕಂಪೆನಿ ಹೆಮ್ಮೆ ಪಡುತ್ತಿದೆ. ಸಚಿನ್ ಅವರ ಉದ್ಯಮಶೀಲತೆ ಭಾರತದ ಅತ್ಯಂತ ಗೌರವಾನ್ವಿತ ವ್ಯವಹಾರಗಳನ್ನು ನಿರ್ಮಿಸುವಲ್ಲಿ ಅವರ ಅನುಭವಕ್ಕೆ ಸರಿಸಾಟಿಯಿಲ್ಲ. ಒಂದು ಶತಕೋಟಿ ಜನರಿಗೆ ಸೇವೆ ಸಲ್ಲಿಸಲು ಅವರ ಹೂಡಿಕೆಯು ಕಂಪೆನಿಗೆ ದೊಡ್ಡ ಪ್ರೋತ್ಸಾಹವಾಗಿದೆ ಎಂದು ಓಲಾದಲ್ಲಿ ಸಚಿನ್ ಬನ್ಸಾಲ್ ಅವರ ಹುಡಿಕೆಯನ್ನು ಸ್ವಾಗತಿಸಿದ್ದಾರೆ.

ಇನ್ನು ಹೂಡಿಕೆ ಬಗ್ಗೆ ಮಾತನಾಡಿರುವ ಬನ್ಸಾಲ್, ಓಲಾ ಭಾರತದ ಅತ್ಯಂತ ಭರವಸೆಯ ಗ್ರಾಹಕರ ಉದ್ಯಮಗಳಲ್ಲಿ ಒಂದಾಗಿದ್ದು, ಪ್ರಯಾಣಿಕ ಸಾರಿಗೆ ವ್ಯವಸ್ಥೆಯಲ್ಲಿ ಆಳವಾದ ಪ್ರಭಾವವನ್ನು ಮತ್ತು ಶಾಶ್ವತ ಮೌಲ್ಯವನ್ನು ಸೃಷ್ಟಿಸುತ್ತಿದೆ. ಇದಲ್ಲದೆ, ಪ್ರಯಾಣಿಕ ಸಾರಿಗೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿರುವ ಓಲಾ, ತನ್ನ ವೇದಿಕೆ ಮೂಲಕ ಮೂಲಕ ಶತಕೋಟಿ ಭಾರತೀಯರ ವಿವಿಧ ಅಗತ್ಯಗಳನ್ನು ಪೂರೈಸುತ್ತಿದ್ದು, ವಿಶ್ವಾಸಾರ್ಹ ಕಂಪೆನಿಯಾಗಿ ಮನೆಮಾತಾಗಿದೆ' ಎಂದು ಹೇಳಿದ್ದಾರೆ.

 ಬೆಂಗಳೂರು ಮೂಲದ ಕಂಪೆನಿಗೆ 650 ಕೋಟಿ ಹೂಡಿಕೆ ಮಾಡಿದ 'ಸಚಿನ್ ಬನ್ಸಾಲ್'!!

ಕೇವಲ 8 ವರ್ಷಗಳಲ್ಲಿ ಕಂಪೆನಿಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದ ಆಡಳಿತ ಮಂಡಳಿಯ ಶ್ರಮ ಶ್ಲಾಘನೀಯ. ಓಲಾ ಪ್ರಗತಿಯ ಪಯಣದಲ್ಲಿ ಭಾಗವಾಗಿರುವುದಕ್ಕೆ ವೈಯಕ್ತಿಕವಾಗಿ ಖುಷಿಯಾಗುತ್ತಿದೆ. ಕಂಪೆನಿಯ ಯಶಸ್ಸಿಗೆ ಸಾಧ್ಯವಾದ ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ ಎಂದು ಬನ್ಸಾಲ್ ಹೇಳಿದ್ದಾರೆ. ಖಚಿತ ಮೂಲಗಳ ಪ್ರಕಾರ ಸಚಿನ್‌ ಬನ್ಸಾಲ್ ಅವರು ಮೊದಲ ಹಂತದಲ್ಲಿ 150 ಕೋಟಿ ರೂ.ಹೂಡಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಹಂತಹಂತವಾಗಿ ಒಟ್ಟು 650 ಕೋಟಿ ರೂ.ಹೂಡಿಕೆ ಮಾಡಲಿದ್ದಾರಂತೆ.

Best Mobiles in India

English summary
The investment is not only Bansal's largest individual investment, but also accounts as the largest financing by an individual in Ola to date.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+