Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್‌ ಸೇಲ್‌: ಸ್ಮಾರ್ಟ್‌ಟಿವಿಗಳ ಮೇಲೆ ಭಾರಿ ರಿಯಾಯಿತಿ!

ಜನಪ್ರಿಯ ಇ-ಕಾಮರ್ಸ್‌ ಸೈಟ್‌ ಫ್ಲಿಪ್‌ಕಾರ್ಟ್‌ ತನ್ನ ಆನ್‌ಲೈನ್‌ ಗ್ರಾಹಕರಿಗಾಗಿ ಹೊಸ ಹೊಸ ರಿಯಾಯಿತಿ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮಾರ್ಚ್ 16 ರಿಂದ ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್ ಸೇಲ್‌ ನಡೆಯುತ್ತಿದೆ. ಈ ಸೇಲ್‌ ಇಂದು ಮಧ್ಯರಾತ್ರಿಯವರಿಗೆ ಲೈವ್‌ ಆಗಿರಲಿದೆ. ಇನ್ನು ಈ ಸೇಲ್‌ನಲ್ಲಿ ಫ್ಲಿಪ್ಕಾರ್ಟ್‌ ಹಲವು ಮಾದರಿಯ ರಿಯಾಯಿತಿಗಳನ್ನು ನೀಡಿದ್ದು, ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಸೇರಿದಂತೆ ಅನೇಕ ಸ್ಮಾರ್ಟ್‌ಡಿವೈಸ್‌ಗಳಿಗೆ ರಿಯಾಯಿತಿಯನ್ನು ನೀಡುತ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್‌ ಸೇಲ್‌ ಇಂದು ರಾತ್ರಿ ಎಂಡ್‌ ಆಗಲಿದೆ. ಈಗಾಗಲೇ ಈ ಸೇಲ್‌ನಲ್ಲಿ ಅನೇಕ ಆಫರ್‌ಗಳನ್ನು ಫ್ಲಿಪ್‌ಕಾರ್ಟ್‌ ನೀಡಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೂ ಕೂಡ ನೀಡಲಾಗಿದೆ. ಈ ವಿಶೇಷ ಸೇಲ್‌ನಲ್ಲಿ 32 ಇಂಚಿನ ಟಿವಿಗಳಿಂದ ಹಿಡಿದು 65 ಇಂಚಿನ ಸ್ಮಾರ್ಟ್‌ಟಿವಿಗಳ ತನಕ ಆಫರ್‌ ಅನ್ನು ಘೋಷಿಸಲಾಗಿದೆ. ಇದಲ್ಲದೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು 10% ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ವಿಶೇಷ ಆಫರ್‌ನಲ್ಲಿ ಲಭ್ಯವಾಗುವ ಸ್ಮಾರ್ಟ್‌ಟಿವಿಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಫರ್‌ನಲ್ಲಿ ಲಭ್ಯವಾಗುವ 32 ಇಂಚಿನ ಸ್ಮಾರ್ಟ್ ಟಿವಿಗಳು

ಆಫರ್‌ನಲ್ಲಿ ಲಭ್ಯವಾಗುವ 32 ಇಂಚಿನ ಸ್ಮಾರ್ಟ್ ಟಿವಿಗಳು

ರಿಯಲ್‌ಮಿ 32 ಇಂಚಿನ ಹೆಚ್‌ಡಿ ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್‌ ಸೇಲ್‌ನಲ್ಲಿ 13,999. ರೂ ಗೆ ಲಬ್ಯವಾಗಲಿದೆ. ಇನ್ನು ಮಿ 4A ಪ್ರೊ 32 ಇಂಚಿನ ಹೆಚ್‌ಡಿ ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ, 14,498 ಕ್ಕೆ ಮಾರಾಟವಾಗುತ್ತಿದೆ. ಹಾಗೆಯೇ ಎಲ್‌ಜಿ 32 ಇಂಚಿನ ಹೆಚ್‌ಡಿ ರೆಡಿ ಸ್ಮಾರ್ಟ್ ಟಿವಿ, 16,999 ಕ್ಕೆ ಮಾರಾಟವಾಗುತ್ತಿದೆ. ಇದಲ್ಲದೆ ಒನ್‌ಪ್ಲಸ್ ವೈ ಸರಣಿ 32 ಇಂಚಿನ ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್‌ ಸೇಲ್‌ನಲ್ಲಿ 15,499 ರೂ ಗಳಿಗೆ ಖರೀದಿಸಬಹುದಾಗಿದೆ.

ಆಫರ್‌ನಲ್ಲಿ ಲಭ್ಯವಾಗುವ 43 ಇಂಚಿನ ಸ್ಮಾರ್ಟ್‌ಟಿವಿಗಳು

ಆಫರ್‌ನಲ್ಲಿ ಲಭ್ಯವಾಗುವ 43 ಇಂಚಿನ ಸ್ಮಾರ್ಟ್‌ಟಿವಿಗಳು

ಇದರಲ್ಲಿ ಮಿ 4A 43 ಇಂಚಿನ ಫುಲ್‌ಹೆಚ್‌ಡಿ ಸ್ಮಾರ್ಟ್‌ಟಿವಿಯ ಬೆಲೆ 23,998ರೂ. ಆಗಿದೆ. ಅಲ್ಲದೆ ರಿಯಲ್‌ಮಿ 43 ಇಂಚಿನ ಫುಲ್‌ಹೆಚ್‌ಡಿ ಸ್ಮಾರ್ಟ್ ಟಿವಿ, 22,999 ಕ್ಕೆ ಮಾರಾಟವಾಗುತ್ತಿದೆ. ಹಾಗೆಯೇ ಎಲ್‌ಜಿ 43 ಇಂಚಿನ ಸ್ಮಾರ್ಟ್ ಎಲ್ಇಡಿ ಟಿವಿ, 29,999 ಕ್ಕೆ ಮಾರಾಟವಾಗುತ್ತಿದೆ. ಇನ್ನು ಒನ್‌ಪ್ಲಸ್ ವೈ ಸರಣಿ 43 ಇಂಚಿನ ಫುಲ್‌ಹೆಚ್‌ಡಿ ಟಿವಿಯ ಬೆಲೆ, 25,999 ರೂ ಆಗಿದ್ದು, ನೋಕಿಯಾದ 43 ಇಂಚಿನ ಫುಲ್‌ ಹೆಚ್‌ಡಿ ಟಿವಿ, 23,999 ರೂ ಬೆಲೆಗೆ ಮಾರಾಟವಾಗುತ್ತಿದೆ.

50 ಇಂಚಿನ ಟಿವಿಗಳ ಮೇಲಿನ ಆಫರ್‌ಗಳು

50 ಇಂಚಿನ ಟಿವಿಗಳ ಮೇಲಿನ ಆಫರ್‌ಗಳು

ಇನ್ನು 50 ಇಂಚಿನ ಟಿವಿಗಳ ಮೇಲೂ ವಿಶೇಷ ಆಫರ್‌ಗಳನ್ನು ಘೋಷಿಸಲಾಗಿದೆ. ಇದರಲ್ಲಿ ಮಿ 4X 50 ಇಂಚಿನ ಅಲ್ಟ್ರಾ ಹೆಚ್‌ಡಿ 4K ಟಿವಿಯ ಬೆಲೆ 34,999 ರೂ ಆಗಿದೆ. ಇದಲ್ಲದೆ ಪ್ಯಾನಾಸೋನಿಕ್ 50 ಇಂಚಿನ ಅಲ್ಟ್ರಾ ಹೆಚ್‌ಡಿ ಎಲ್ಇಡಿ ಸ್ಮಾರ್ಟ್ ಟಿವಿ ಬೆಲೆ 32,999 ರೂ ಆಗಿದ್ದು, ಥಾಮ್ಸನ್ 50 ಇಂಚಿನ ಅಲ್ಟ್ರಾ ಹೆಚ್‌ಡಿ 4K ಟಿವಿಯ ಬೆಲೆ 32,999 ರೂ ಆಗಿದೆ. ಇನ್ನು ಆಂಡ್ರಾಯ್ಡ್ ಹೊಂದಿರುವ ನೋಕಿಯಾ 50 ಇಂಚಿನ ಅಲ್ಟ್ರಾ ಹೆಚ್‌ಡಿ ಟಿವಿ 37,999 ರೂ ಗಳಿಗೆ ಲಭ್ಯವಾಗಲಿದೆ. ಜೊತೆಗೆ ಎಲ್‌ಜಿ ಆಲ್ ಇನ್ ಒನ್ 50 ಇಂಚಿನ ಅಲ್ಟ್ರಾ ಹೆಚ್‌ಡಿ ಟಿವಿಯ ಬೆಲೆ 43,999 ರೂ. ಆಗಿದೆ.

55 ಇಂಚಿನ ಸ್ಮಾರ್ಟ್‌ಟಿವಿಗಳ ಮೇಲೆ ರಿಯಾಯಿತಿ

55 ಇಂಚಿನ ಸ್ಮಾರ್ಟ್‌ಟಿವಿಗಳ ಮೇಲೆ ರಿಯಾಯಿತಿ

ನೋಕಿಯಾ 55-ಇಂಚಿನ ಅಲ್ಟ್ರಾಹೆಚ್ಡಿ 4K ಟಿವಿಯ ಬೆಲೆ, 39,999 ರೂ. ಆಗಿದೆ. ಹಾಗೆಯೇ ಎಲ್‌ಜಿ 55 ಇಂಚಿನ ಅಲ್ಟ್ರಾ ಹೆಚ್ಡಿ 4K ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 48,999 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ. ಇನ್ನು ಥಾಮ್ಸನ್ 55-ಇಂಚಿನ ಅಲ್ಟ್ರಾ ಹೆಚ್‌ಡಿ ಆಂಡ್ರಾಯ್ಡ್ ಟಿವಿ 37,999 ರೂ ಬೆಲೆಯನ್ನು ಹೊಂದಿದ್ದು, ಟಿಸಿಎಲ್‌ನ 55-ಇಂಚಿನ ಅಲ್ಟ್ರಾ ಹೆಚ್‌ಡಿ 4K ಟಿವಿಯ ಇಫಾಕ್ಲ್‌ಕಾನ್ 37,999 ರೂ.ಗಳಿಗೆ ಮಾರಾಟವಾಗುತ್ತಿದೆ.

65 ಇಂಚಿನ ಸ್ಮಾರ್ಟ್‌ಟಿವಿಗಳು

65 ಇಂಚಿನ ಸ್ಮಾರ್ಟ್‌ಟಿವಿಗಳು

ಮೊಟೊರೊಲಾ ZX 65 ಇಂಚಿನ 4K ಸ್ಮಾರ್ಟ್‌ಟಿವಿ 54,999 ಬೆಲೆಗ ಲಭ್ಯವಾಗಲಿದ್ದು, ವು ಸಿನೆಮಾದ ಆಕ್ಷನ್ ಸರಣಿ 65 ಇಂಚಿನ 4K ಟಿವಿ, 69,999 ಕ್ಕೆ ಮಾರಾಟವಾಗಲಿದೆ.

Best Mobiles in India

English summary
Flipkart electornic sale is offering discounts on smartTVs.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+