Home
ಸುದ್ದಿಜಾಲ

Flipkart Electronics 2020 sale‌!..ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ!

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಗ್ರಾಹಕರಿಗೆ ವಿಶೇಷ ರಿಯಾಯಿತಿ ಸೇಲ್‌ಗಳನ್ನ ಆಯೋಜಿಸುತ್ತಲೇ ಇದೆ. ವಿಶೇಷ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಗ್ರಾಹಕರಿಗೆ ಆಫರ್‌ಗಳ ಸುರಿಮಳೆಯನ್ನೇ ನೀಡುತ್ತಿದೆ. ಸದ್ಯ ಫ್ಲಿಪ್‌ಕಾರ್ಟ್ ಇತ್ತೀಚಿಗಷ್ಟೇ ಬಿಗ್ ಸೇವಿಂಗ್ ಡೇಸ್ ಸೇಲ್‌ ಅನ್ನು ಎಂಡ್‌ ಮಾಡಿದೆ. ಈಗ, ಮತ್ತೊಂದು ವರ್ಷಾಂತ್ಯದ ಸೇಲ್‌ ಅನ್ನು ಆಯೋಜಿಸಲು ಸಜ್ಜಾಗಿದೆ. ಈ ಹೊಸ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ 2020 ಸೇಲ್‌ ಡಿಸೆಂಬರ್ 26 ರಿಂದ ಡಿಸೆಂಬರ್ 28 ರವರೆಗೆ ನಡೆಯಲಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಗ್ರಾಹಕರಿಗಾಗಿ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ 2020 ಸೇಲ್‌ ಅನ್ನು ಡಿಸೆಂಬರ್‌ 26 ರಿಂದ ಆಯೋಜಿಸುತ್ತಿದೆ. ಇನ್ನು ಈ ಸೇಲ್‌ನಲ್ಲಿ ಐಸಿಐಸಿಐ ಬ್ಯಾಂಕ್ ಕಾರ್ಡ್‌ದಾರರಿಗೆ 10% ರಿಯಾಯಿತಿ ಲಭ್ಯವಿದ್ದು, ಗ್ರಾಹಕರು ಎಕ್ಸ್‌ಚೇಂಜ್‌ ಆಫರ್‌ ಅನ್ನು ಸಹ ಪಡೆಯಬಹುದು. ಅಲ್ಲದೆ ಫ್ಲಿಪ್‌ಕಾರ್ಟ್ ಈಗಾಗಲೇ ಈ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋnffಳಿಗೆ ರಿಯಾಯಿತಿ ಅನ್ನೊ ಮಾಹಿತಿಯನ್ನು ಬಹಿರಂಗಪಡಿಸಿದೆ. ಇನ್ನುಳಿದಂತೆ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ 2020 ಸೇಲ್‌ ನಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್ SE 2020

ಐಫೋನ್ SE 2020

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ 2020 ಸೇಲ್‌ ನಲ್ಲಿ ನೀವು ಐಫೋನ್‌ ಖರೀದಿಸುವುದಾದರೆ ಐಫೋನ್ SE 2020 ಯನ್ನು ಖರೀದಿಸಬಹುದಾಗಿದೆ. ಈ ಐಫೋನ್‌ ಮೇಲೆ ಸಾಕಷ್ಟು ರಿಯಾಯಿತಿಯನ್ನು ಘೋಷಿಸಲಾಗಿದ್ದು, ಐಫೋನ್‌ SE 2020 ಕೇವಲ 32,999 ರೂ ಗಳಿಗೆ ಲಭ್ಯವಾಗಲಿದೆ. ಇದು 64GB ಸ್ಟೋರೇಜ್ ಮೋಡ್‌ನ ಬೆಲೆಯಾಗಿದೆ. ಈ ವರ್ಷದ ಆರಂಭದಲ್ಲಿ, ಬಿಡುಗಡೆಯಾದ ಈ ಐಫೋನ್‌ 42,500 ರೂ.ಗಳ ಮೂಲ ಬೆಲೆಯನ್ನು ಹೊಂದಿದೆ.

ರಿಯಲ್‌ಮಿ X3 ಸೂಪರ್‌ ಜೂಮ್‌

ರಿಯಲ್‌ಮಿ X3 ಸೂಪರ್‌ ಜೂಮ್‌

ರಿಯಲ್‌ಮಿ X3 ಸೂಪರ್‌ ಜೂಮ್ ಸ್ಮಾರ್ಟ್‌ಫೋನ್ ಕೂಡ ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್‌ ಸೇಲ್‌ನಲ್ಲಿ ಆಫರ್‌ನಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಮೂಲ ಬೆಲೆ 27,999 ರೂ. ಆಗಿದ್ದು, ಸದ್ಯ ಇದನ್ನು 23,999 ರೂ.ಗಳಿಗೆ ಖರೀದಿಸಬಹುದಾಗಿದೆ. ಅಂದರೆ ಈ ಹ್ಯಾಂಡ್‌ಸೆಟ್‌ನಲ್ಲಿ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ 4,000 ರೂ ರಿಯಾಯಿತಿ ನೀಡುತ್ತದೆ.

ಐಫೋನ್‌ 11 ಪ್ರೊ

ಐಫೋನ್‌ 11 ಪ್ರೊ

ಫ್ಲಿಪ್‌ಕಾರ್ಟ್ ತನ್ನ ಎಲೆಕ್ಟ್ರಾನಿಕ್ಸ್ 2020 ಸೇಲ್ ನಲ್ಲಿ 64GB ಸಾಮರ್ಥ್ಯದ ಐಫೋನ್ 11 ಪ್ರೊ ಅನ್ನು 79,999 ರೂಗಳಿಗೆ ಮಾರಾಟ ಮಾಡುತ್ತಿದೆ. ಈ ಐಫೋನ್ 13,200 ರೂ.ಗಳ ಎಕ್ಸಚೇಂಜ್‌ ಆಫರ್‌ನಲ್ಲಿ ಸಹ ಲಭ್ಯವಾಗಲಿದೆ. ಪ್ರಸ್ತುತ, ಇ-ಕಾಮರ್ಸ್ ದೈತ್ಯ ಐಫೋನ್ 11 ಪ್ರೊ ಅನ್ನು 84,900 ರೂ. ಮೂಲ ಬೆಲೆ ಹೊಂದಿದ್ದು, ಈ ಐಫೋನ್‌ನಲ್ಲಿ ನಿಮಗೆ 4,901 ರೂ ರಿಯಾಯಿತಿ ಸಿಗಲಿದೆ.

ಇತರೆ ಸ್ಮಾರ್ಟ್‌ಫೋನ್‌ಗಳು

ಇತರೆ ಸ್ಮಾರ್ಟ್‌ಫೋನ್‌ಗಳು

ಇನ್ನು ಈ ಸೇಲ್‌ನಲ್ಲಿ ವಿವೋ V20 ಸ್ಮಾರ್ಟ್‌ಫೋನ್‌ ಕೇವಲ 24,990 ರೂ.ಗಳಿಗೆ ಲಭ್ಯವಾಗಲಿದೆ. ಐಫೋನ್ XR ಕೇವಲ 38,999 ರೂ.ಗಳ ರಿಯಾಯಿತಿ ದರದಲ್ಲಿ ಲಭ್ಯವಿದೆ. ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ಫ್ಲಿಪ್‌ಕಾರ್ಟ್‌ನ ವರ್ಷಾಂತ್ಯದ ಸೇಲ್‌ನಲ್ಲಿ 54,999 ರೂ.ಗಳಿಗೆ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.

Best Mobiles in India

English summary
The new Flipkart Electronics 2020 sale will take place on December 26 and will continue until December 28. Check out the best smartphone deals that will be available during the sale.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+