ಫ್ಲಿಪ್‌ಕಾರ್ಟ್ ಧಮಾಕಾ ಸೇಲ್..! ಆಫರ್‌ಗಳ ಸುರಿಮಳೆ..!
ವಾರದ ಹಿಂದಷ್ಟೇ ಒಂದು ಸುತ್ತಿನ ಹಬ್ಬದ ಮಾರಾಟವನ್ನು ಮುಗಿಸಿ ಗ್ರಾಹಕರಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದ ಫ್ಲಿಪ್‌ಕಾರ್ಟ್ ಸೇಲ್ ಅಮೆಜಾನ್‌ನ ಗ್ರೇಟ್ ಇಂಡಿಯನ್ ಸೇಲ್‌ಗೆ ಎದುರಾಗಿ ಮತ್ತೇ ಬರುತ್ತಿದೆ. ಭಾರತದಲ್ಲಿ ಹಬ್ಬದ ಸೀಸನ್ ಪ್ರಾರಂಭವಾಗಿದ್ದು, ದೀಪಾವಳಿಯಂತಹ ಪ್ರಮುಖ ಹಬ್ಬಕ್ಕೆ ಅಮೆಜಾನ್ ಮತ್ತೊಂದು ಮಾರಾಟವನ್ನು ಇಟ್ಟುಕೊಂಡಿತ್ತು. ಅಮೆಜಾನ್‌ಗೆ ಸ್ಪರ್ಧೆ ನೀಡಲು ಫ್ಲಿಪ್‌ಕಾರ್ಟ್ ಅದೇ ದಿನಗಳಂದು ಧಮಾಕಾ ಸೇಲ್‌ನ್ನು ನಡೆಸುತ್ತಿದೆ.

ಹೌದು, ಇದೇ ಅಂದರೆ ಅಕ್ಟೋಬರ್ 24 ರಿಂದ 28ರವರೆಗೆ ಮತ್ತೆ ಭರ್ಜರಿ ಆಫರ್‌ಗಳನ್ನು ಹೊತ್ತುಕೊಂಡು ಫ್ಲಿಪ್‌ಕಾರ್ಟ್ ತನ್ನ ಧಮಾಕಾ ಸೇಲ್ ನಿಮ್ಮ ಮುಂದೆ ಬರಲಿದೆ. ಇತ್ತೀಚೆಗೆ ನಡೆದ 5 ದಿನಗಳ ಸೇಲ್ ಮಿಸ್ ಮಾಡಿಕೊಂಡಿದ್ದರೆ ಇದನ್ನು ನೀವು ಮಿಸ್ ಮಾಡಿಕೊಳ್ಳಬೇಡಿ. ಅನೇಕ ಉತ್ಪನ್ನಗಳಿಗೆ ಆಫರ್‌ಗಳು ಲಭ್ಯವಿದ್ದು, ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಪೀಕರ್ ಮತ್ತು ಕ್ಯಾಮೆರಾಗಳ ಮೇಲೆ ಮುಂಬರುವ ಸೇಲ್‌ನಲ್ಲಿ ಭಾರೀ ಆಫರ್ ದೊರೆಯಲಿದೆ. ಆಗಿದ್ದರೆ, ಫ್ಲಿಪ್‌ಕಾರ್ಟ್ ಫೆಸ್ಟಿವ್ ಧಮಾಕಾ ಸೇಲ್ ಏನೆಲ್ಲಾ ವಿಶೇಷತೆ ಹೊಂದಿರುತ್ತೆ ಎಂಬುದನ್ನು ಮುಂದೆ ನೋಡಿ...

ಫ್ಲಾಶ್ ಸೇಲ್
ಬಿಗ್ ಬಿಲಿಯನ್ ಡೇ ಸೇಲ್‌ನಂತೆ ಫ್ಲಿಪ್‌ಕಾರ್ಟ್ ಫೆಸ್ಟಿವ್ ಧಮಾಕಾ ಸೇಲ್‌ನಲ್ಲಿ ಫ್ಲಾಶ್ ಸೇಲ್ ಇದ್ದು, ಪ್ರತಿ 8 ಗಂಟೆಗೊಮ್ಮೆ ಅಪ್‌ಡೇಟ್ ಆಗುತ್ತಿರುತ್ತವೆ. ಮೊಬೈಲ್, ಸ್ಮಾರ್ಟ್ ಟಿವಿ, ಲ್ಯಾಪ್‌ಟಾಪ್ ಮತ್ತೀತರ ಗ್ಯಾಜೆಟ್‌ಗಳು ಫ್ಲಾಶ್ ಸೇಲ್‌ನಲ್ಲಿ ಮಾರಾಟವಾಗುತ್ತಿದ್ದು, ಆಯ್ದ ಉತ್ಪನ್ನಗಳು ಹೆಚ್ಚುವರಿ ಶೇ.10ರಷ್ಟು ರಿಯಾಯಿತಿಯೊಂದಿಗೆ ಮಾರಾಟವಾಗಲಿವೆ.

ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್‌ಗಳ ಧಮಾಕಾ
ಸ್ಮಾರ್ಟ್‌ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್ ಧಮಾಕಾ ಸೇಲ್‌ನಲ್ಲಿ ಭಾರೀ ರಿಯಾಯಿತಿ ಲಭ್ಯವಿವೆ. ಹೀಗಾಗಲೇ ಫ್ಲಿಪ್‌ಕಾರ್ಟ್ ಒಂದಿಷ್ಟು ಸ್ಮಾರ್ಟ್‌ಫೋನ್‌ಗಳ ಆಫರ್ ಬೆಲೆಯನ್ನು ಬಿಡುಗಡೆ ಮಾಡಿದೆ. ಒಪ್ಪೋ F9 (4GB, 64GB) ರೂ. 18,990 (ರೂ. 21,990), ವಿವೋ V9 (4GB, 64GB) ರೂ. 15,990 (ರೂ. 23,990) ಮತ್ತು ಲೆನೊವೋ K8 ಪ್ಲಸ್ (3GB, 32GB) ಮುಂತಾದ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ. ಅದಲ್ಲದೇ ಫ್ಲಿಪ್‌ಕಾರ್ಟ್ ಸಂಪೂರ್ಣ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್, ಎಕ್ಸ್‌ಚೆಂಜ್ ಆಫರ್‌ಗಳು, ಬಯ್‌ಬ್ಯಾಕ್ ಗ್ಯಾರಂಟಿ ಆಫರ್‌ಗಳನ್ನು ನೀಡಿದೆ.

ಕ್ಯಾಮೆರಾಗಳ ಮೇಲೆ ಶೇ.80ರವರೆಗೆ ರಿಯಾಯಿತಿ
ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಶೇ.80ರಷ್ಟು ರಿಯಾಯಿತಿಯು ಫ್ಲಿಪ್‌ಕಾರ್ಟ್ ಧಮಾಕಾ ಸೇಲ್‌ನಲ್ಲಿ ದೊರೆಯಲಿದೆ. Canon, Nikon, Sony ಕಂಪನಿಗಳ DSLR ಕ್ಯಾಮೆರಾಗಳ ಮೇಲೆ ರೂ.15,000 ದವರೆಗೂ ಉಳಿಸಬಹುದಾಗಿದ್ದು, ಉತ್ತಮ ರೀತಿಯ ಆಫರ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಹೆಡ್‌ಫೋನ್, ಸ್ಪೀಕರ್‌ಗಳ ಮೇಲೆ ಶೇ.75ರಷ್ಟು ರಿಯಾಯಿತಿ
JBL, ಸೋನಿ ಮತ್ತು ಸ್ಕಲ್‌ಕ್ಯಾಂಡಿ ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳ ಮೇಲೆ ಶೇ. 75ರವರೆಗೆ ರಿಯಾಯಿತಿ ದೊರೆಯಲಿದೆ. ಅದಲ್ಲದೇ ಇಂಟೆಲ್ ಕೋರ್ i3 ಬೆಂಬಲಿತ ಲ್ಯಾಪ್‌ಟಾಪ್‌ಗಳನ್ನು ಫ್ಲಿಪ್‌ಕಾರ್ಟ್ ರೂ.21,990 (ರೂ.27,490)ಗೆ ಮಾರಾಟ ಮಾಡುತ್ತಿದೆ. ಆದರೆ, ಲ್ಯಾಪ್‌ಟಾಪ್ ಯಾವ ಬ್ರಾಂಡ್‌ನದ್ದು ಎಂದು ಫ್ಲಿಪ್‌ಕಾರ್ಟ್ ಇನ್ನು ಬಹಿರಂಗಪಡಿಸಿಲ್ಲ.

ಸ್ಮಾರ್ಟ್ ಟಿವಿಗಳಿಗೂ ಬಿಗ್ ಆಫರ್
ಸ್ಮಾರ್ಟ್ ಟಿವಿಗಳ ಮೇಲೆ ಫ್ಲಿಪ್‌ಕಾರ್ಟ್ ರಿಯಾಯಿತಿ ಮತ್ತು ಬಂಡಲ್ ಆಫರ್‌ಗಳನ್ನು ನೀಡುತ್ತಿದೆ. ಸ್ಯಾಮ್‌ಸಂಗ್‌ನ 32 ಇಂಚ್ HD TV ರೂ. 15,999 (ರೂ.. 25,900) ಮತ್ತು iFfalcon 55 ಇಂಚಿನ 4K ಸ್ಮಾರ್ಟ್ LED TV ರೂ. 41,999 (ರೂ. 59,990)ಗೆ ದೊರೆಯಲಿದ್ದು, ಗ್ರಾಹಕರಿಗೆ ಹಣ ಉಳಿಸಲು ಉತ್ತಮ ವೇದಿಕೆ ಸೃಷ್ಟಿಯಾಗಿದೆ.

ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಬಂಪರ್
ಫ್ಲಿಪ್‌ಕಾರ್ಟ್ ಧಮಾಕಾ ಸೇಲ್‌ನಲ್ಲಿ ಮಾಸ್ಟರ್ ಕಾರ್ಡ್ ಬಳಸಿ ಉತ್ಪನ್ನಗಳನ್ನು ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ದೊರೆಯುತ್ತದೆ. ಮತ್ತು ಆಕ್ಸಿಸ್ ಬ್ಯಾಂಕ್ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್‌ನಿಂದ ಖರೀದಿಸಿದರೆ ಇನ್ನು ಹೆಚ್ಚಿನ ರಿಯಾಯಿತಿ ದೊರೆಯುತ್ತದೆ.


Click it and Unblock the Notifications








