Home
ಸುದ್ದಿಜಾಲ

ಗ್ರಾಹಕರ ಸೋಗಿನಲ್ಲಿ ಫ್ಲಿಪ್‌ಕಾರ್ಟ್‌ಗೆ ರಾಜ್ಯದಲ್ಲಿ ಕೋಟ್ಯಾಂತರ ರೂ.ವಂಚನೆ!..ಇದು ಬೆಚ್ಚಿಬೀಳಿಸುವ ಐಡಿಯಾ!!

Flipkart, Fraud, online, ಫ್ಲಿಪ್‌ಕಾರ್ಟ್, ಐಡಿಯಾ, ಆನ್‌ಲೈನ್, news

By Bhaskar N J

ಭಾರತದ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಸಂಸ್ಥೆ ಫ್ಲಿಪ್‌ಕಾರ್ಟ್‌ಗೆ ರಾಜ್ಯದಲ್ಲಿಯೇ 1.5 ಕೋಟಿಯಷ್ಟು ಹಣವನ್ನು ವಂಚಿಸಿರುವ ಘಟನೆಯೊಂದು ನಡೆದಿದೆ. ಫ್ಲಿಪ್‌ಕಾರ್ಟ್ ಜಾಲತಾಣದಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸಿದ್ದ ಕೆಲ ಗ್ರಾಹಕರು, ಅವುಗಳ ಪೊಟ್ಟಣದಲ್ಲಿ ಕಲ್ಲು, ಮಣ್ಣು ಇರುವುದಾಗಿ ಹೆದರಿಸಿ ಕೆಲ ಖದೀಮ ಗ್ರಾಹಕರು ವಂಚಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಆರೋಪಿಗಳು, ಫ್ಲಿಪ್‌ಕಾರ್ಟ್‌ಗೆ ವಂಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲು ಹೋರಾಡುವ ಇ ಕಾಮರ್ಸ್ ಕಂಪೆನಿಗಳ ನಿರ್ಧಾರವನ್ನೇ ತಮ್ಮ ಬಂಡವಾಳ ಮಾಡಿಕೊಂಡಿದ್ದ ಈ ಗ್ರಾಹಕರು ತಾವೇ ಪೊಟ್ಟಣಗಳಲ್ಲಿದ್ದ ವಸ್ತುಗಳನ್ನು ತೆಗೆದು, ಅದರಲ್ಲಿ ಕಲ್ಲು- ಮಣ್ಣು ಇಟ್ಟು ವಂಚಿಸಿರುವುದು ಬೆಳಕಿಗೆ ಬಂದಿದೆ.

ಗ್ರಾಹಕರ ಸೋಗಿನಲ್ಲಿ ಫ್ಲಿಪ್‌ಕಾರ್ಟ್‌ಗೆ ರಾಜ್ಯದಲ್ಲಿ ಕೋಟ್ಯಾಂತರ ರೂ.ವಂಚನೆ!!

ಇಂತಹ ಘಟನೆಗಳು ಸಾಮಾನ್ಯವಾಗಿ ಜರುಗಿವೆ. ಆದರೆ, ಫ್ಲಿಪ್‌ಕಾರ್ಟ್‌ಗೆ 1.5 ಕೋಟಿಯಷ್ಟು ಹಣವನ್ನು ವಂಚಿಸಿರುವ ಈ ಆರೋಪಿಗಳು ಬೆಚ್ಚಿಬೀಳಿಸುವ ಐಡಿಯಾ ಒಂದನ್ನು ಮಾಡಿಕೊಂಡಿದ್ದಾರೆ. ಇದು ಪೊಲೀಸರಿಗೆ ಆರೋಪಿಗಳನ್ನು ಹಿಡಿಯಲು ತೊಡಕಾಗಿದ್ದು, ಹಾಗಾದರೆ, ಖದೀಮರು ಮಾಡಿರುವ ಐಡಿಯಾ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಕಳೆದ ಒಂದು ವರ್ಷದಿಂದ ವಂಚನೆ!

ಕಳೆದ ಒಂದು ವರ್ಷದಿಂದ ವಂಚನೆ!

ಗ್ರಾಹಕರ ಯೋಗಕ್ಷೇಮಕ್ಕಾಗಿ ಫ್ಲಿಪ್‌ಕಾರ್ಟ್ ಅವರ ಬೇಡಿಕೆಗಳನ್ನು ಬಹುಬೇಗ ಪೂರೈಸುತ್ತದೆ. ಅದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಒಂದು ವರ್ಷದಿಂದ 200ಕ್ಕೂ ಹೆಚ್ಚು ವಸ್ತುಗಳನ್ನು ಖರೀದಿ ಮಾಡಿ ವಂಚಿಸಿದ್ದಾರೆ. ಇದು ಹಲವು ಗ್ರಾಹಕರು ಸೇರಿ ಮಾಡಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೋಸ ಮಾಡುತ್ತಿದ್ದು ಹೇಗೆ?

ಮೋಸ ಮಾಡುತ್ತಿದ್ದು ಹೇಗೆ?

ಕೋರಿಯರ್ ಹುಡುಗ ಬಂದಿದ್ದ ಸ್ಥಳಕ್ಕೆ ಹೋಗುತ್ತಿದ್ದ ಆರೋಪಿಗಳು, ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದರು. ನಂತರ ಮರುದಿನವೇ ಫ್ಲಿಪ್‌ಕಾರ್ಟ್ ಸಹಾಯವಾಣಿಗೆ ಕರೆ ಮಾಡಿ, ನೀವು ಕಳುಹಿಸಿದ್ದ ವಸ್ತುವಿನ ಪೊಟ್ಟಣದಲ್ಲಿ ಕಲ್ಲುಗಳಿವೆ ಎಂದು ಬೆದರಿಸುತ್ತಿದ್ದರು. ಇದರಿಂದ ಕೂಡಲೇ ಫ್ಲಿಪ್‌ಕಾರ್ಟ್ ಅಧಿಕಾರಿಗಳು ಹಣವನ್ನು ವಾಪಸ್ ಮಾಡುತ್ತಿದ್ದರು.

ಫ್ಲಿಪ್‌ಕಾರ್ಟ್‌ಗೆ ವಿಶ್ವಾಸ ಭಯ!!

ಫ್ಲಿಪ್‌ಕಾರ್ಟ್‌ಗೆ ವಿಶ್ವಾಸ ಭಯ!!

ಆನ್‌ಲೈನ್ ಮಾರುಕಟ್ಟೆಯಲ್ಲಿ ವಿಶ್ವಾಸ ಮೂಡಿಸುವುದು ಕಷ್ಟ. ಅದರಲ್ಲಿಯೂ ಇಂತಹ ಘಟನೆಗಳೂ ನಡೆದರೆ ಕಷ್ಟ ಎಂಬುದು ಫ್ಲಿಪ್‌ಕಾರ್ಟ್‌ಗೆ ಸಹ ಗೊತ್ತಿದೆ. ಹಾಗಾಗಿ, ಆರೋಪಿಗಳ ಮಾಹಿತಿ ನಿಜವೆಂದು ತಿಳಿಯುತ್ತಿದ್ದ ಸಂಸ್ಥೆಯ ಸಿಬ್ಬಂದಿ, ವಿಚಾರಣೆ ಸಹ ನಡೆಸುತ್ತಿರಲಿಲ್ಲ. ಆರೋಪಿಗಳು ನೀಡುತ್ತಿದ್ದ ಬ್ಯಾಂಕ್‌ ಖಾತೆಗೆ ತ್ವರಿತವಾಗಿಯೇ ಹಣ ವಾಪಸ್‌ ಜಮೆ ಮಾಡುತ್ತಿದ್ದರು.

ಬ್ಯಾಂಕ್‌ ಖಾತೆಗಳಿಂದ ಅನುಮಾನ!

ಬ್ಯಾಂಕ್‌ ಖಾತೆಗಳಿಂದ ಅನುಮಾನ!

ವಸ್ತುಗಳನ್ನು ಖರೀದಿಸಲು ಆರೋಪಿಗಳು ನೀಡುತ್ತಿದ್ದ ಬ್ಯಾಂಕ್‌ ಖಾತೆಗಳು ಒಂದೇ ಆಗಿರುತ್ತಿದ್ದವು. ಪ್ರತಿ ಬಾರಿಯೂ ಅಂಥ ಖಾತೆಯಿಂದಲೇ ವಹಿವಾಟು ಆಗುತ್ತಿತ್ತು. ಜತೆಗೆ, ಅದೇ ಖಾತೆಗೆ ವಾಪಸ್‌ ಹಣ ಜಮೆ ಸಹ ಮಾಡಿಸಿಕೊಳ್ಳುತ್ತಿದ್ದರು. ಅಂಥ ಕೆಲ ಖಾತೆಗಳನ್ನು ಫ್ಲಿಪ್‌ಕಾರ್ಟ್ ಸಿಬ್ಬಂದಿ ಪಟ್ಟಿ ಮಾಡಿದಾಗಲೇ ವಂಚನೆ ಬಗ್ಗೆ ಅನುಮಾನ ಬಂದಿದೆ .

ಮನೆಯ ಗುರುತು ನೀಡುತ್ತಿರಲಿಲ್ಲ.

ಮನೆಯ ಗುರುತು ನೀಡುತ್ತಿರಲಿಲ್ಲ.

ಫ್ಲಿಪ್‌ಕಾರ್ಟ್‌ನಲ್ಲಿ ಕ್ಯಾಮೆರಾ, ಮೊಬೈಲ್ ಸೇರಿದಂತೆ ಹಲವು ದುಬಾರಿ ಬೆಲೆಯ ವಸ್ತುಗಳನ್ನು ಬುಕ್ ಮಾಡುತ್ತಿದ್ದ ಖದೀಮರು ತಮ್ಮ ಉಳಿತಾಯ ಖಾತೆಯಿಂದ ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕವೇ ಅದಕ್ಕೆ ಹಣ ಪಾವತಿಸುತ್ತಿದ್ದರು. ಅದೇ ವೇಳೆ, ಬಸ್ ನಿಲ್ದಾಣ ಹಾಗೂ ರಸ್ತೆಗಳ ವಿಳಾಸವನ್ನಷ್ಟೇ ನೀಡುತ್ತಿದ್ದರು. ಮನೆಯ ಗುರುತು ನೀಡುತ್ತಿರಲಿಲ್ಲ.

ಅಪರಿಚಿತರ ದಾಖಲೆ!!

ಅಪರಿಚಿತರ ದಾಖಲೆ!!

ಅಂತರ್ಜಾಲದಲ್ಲಿ ಅಪ್‌ಲೋಡ್‌ ಮಾಡಿರುತ್ತಿದ್ದ ಅಪರಿಚಿತರ ದಾಖಲೆಗಳನ್ನು ಮುದ್ರಿಸಿಕೊಳ್ಳುತ್ತಿದ್ದ ಆರೋಪಿಗಳು, ಅವುಗಳನ್ನು ಬಳಸಿಕೊಂಡು ಬ್ಯಾಂಕೊಂದರಲ್ಲಿ ಉಳಿತಾಯ ಖಾತೆ ತೆರೆದಿದ್ದಾರೆ. ಅದೇ ದಾಖಲೆಗಳನ್ನು ಮೊಬೈಲ್ ಸೇವಾ ಕಂಪನಿಗಳಿಗೆ ಕೊಟ್ಟು ಸಿಮ್‌ ಕಾರ್ಡ್‌ ಸಹ ಖರೀದಿಸಿದ್ದಾರೆ. ಇದು ಪೊಲೀಸರಿಗೆ ತಲೆನೊವ್ವಾಗಿ ಪರಿಣಮಿಸಿದೆ.

How to Send Message to Multiple Contacts on WhatsApp - GIZBOT KANNADA
ದಾಖಲೆಗಳನ್ನು ಹುಡುಕಿ ಹೊರಟರೆ?

ದಾಖಲೆಗಳನ್ನು ಹುಡುಕಿ ಹೊರಟರೆ?

ಖಾತೆ ಇದ್ದ ಬ್ಯಾಂಕ್‌ ಅಧಿಕಾರಿಗಳನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಜತೆಗೆ, ಆರೋಪಿಗಳು ಬಳಸಿದ್ದ ಸಿಮ್ ಕಾರ್ಡ್‌ ಸಹ ನಕಲಿ ಎಂಬುದು ಗೊತ್ತಾಗಿತ್ತು. ಹೀಗಾಗಿ, ಫ್ಲಿಪ್‌ಕಾರ್ಟ್ ಪ್ರತಿನಿಧಿ ಠಾಣೆಗೆ ದೂರು ನೀಡಿದ್ದಾರೆ. ದಾಖಲೆಗಳನ್ನು ಹುಡುಕಿ ಹೊರಟರೆ ಈ ಬಗ್ಗೆ ತಿಳಿದೇ ಇಲ್ಲದ ಜನರತ್ತ ಪ್ರಕರಣ ತೆರಳುತ್ತಿದೆ. ಹಾಗಾಗಿ, ನಿಮ್ಮ ದಾಖಲೆಗಳು ಆನ್‌ಲೈನಿನಲ್ಲಿ ಲೀಕ್ ಆಗದಂತೆ ಎಚ್ಚರವಹಿಸಿ.

Best Mobiles in India

English summary
Flipkart Fills complaint Against Over Fraud. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+