ಫ್ಲಿಪ್‌ಕಾರ್ಟ್‌ನಲ್ಲಿ ನಂಬಲಾದ ಬೆಲೆಗೆ TV, ಫ್ರಿಡ್ಜ್, ವಾಷಿಂಗ್ ಮಿಷಿನ್, AC ಮಾರಾಟ..!
ಇಷ್ಡು ದಿನ ಮೊಬೈಲ್ ಫೋನ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡುತ್ತಿದ್ದ ಫ್ಲಿಪ್‌ಕಾರ್ಟ್ ಈ ಬಾರಿ ಗೃಹೋಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಇದಕ್ಕಾಗಿ ಫ್ಲಿಪ್ ಗ್ರಾಂಡ್ ಹೋಮ್ ಆಪ್ಲೆಯನ್ಸ್ ಸೇಲ್ ಆರಂಭವಾಗಿದೆ. ಇಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿದ್ದು, ಲಾಭ ಸಹ ಇದೆ ಎನ್ನಲಾಗಿದೆ.

ಈ ಬಾರಿ ಫ್ಲಿಪ್‌ಕಾರ್ಟ್‌ನಲ್ಲಿ ವಾಷಿಂಗ್ ಮಿಷಿನ್, ಫ್ರಿಡ್ಜ್, ಟಿವಿ ಸೇರಿದಂತೆ ಮನೆಯಲ್ಲಿ ಬಳಕೆ ಮಾಡಿಕೊಳ್ಳುವ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭರ್ಜರಿ ಆಫರ್ ನೀಡಲಿದೆ. ಮನೆಗೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಸೂರಿನಲ್ಲಿ ದೊರೆಯಲಿದೆ. ಈ ಆಫರ್ ನವೆಂಬರ್ 19 ನೇ ತಾರೀಖಿನ ವರೆಗೂ ಜಾರಿಯಲ್ಲಿ ಇರಲಿದೆ.

ಕ್ಯಾಷ್ ಬ್ಯಾಕ್ ಇದೆ:
ಗೃಹೋಪಯೋಗಿ ವಸ್ತುಗಳ ಮೇಲೆ ಶೇ. 50% ವರೆಗೂ ಆಫರ್ ಲಭ್ಯವಿದ್ದು, ಸಿಟಿ ಬ್ಯಾಂಕ್ ಕಾರ್ಡುದಾರರು ಶೇ. 10% ಕ್ಯಾಷ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ. ಇದರಿಂದಾಗಿ ಗ್ರಾಹಕರು ಈ ಆಫರ್ ಮಿಸ್ ಮಾಡಿಕೊಂಡರೆ ಮತ್ತೇ ಬಹು ದಿನಗಳ ವರೆಗೂ ಕಾಯಬೇಕಾಗಿದೆ.

ಟಿವಿಗಳ ಮೇಲೆ ಆಫರ್:
ಫ್ಲಿಪ್‌ಕಾರ್ಟ್‌ನಲ್ಲಿ HD & FHD ಗುಣಮಟ್ಟದ TVಗಳ ಮೇಲೆ ಭರ್ಜರಿ ಆಫರ್ ಅನ್ನು ನೀಡಲಾಗಿದೆ. ಶೇ.22% ವರೆಗೂ ಬೆಲೆಗಳಲ್ಲಿ ಕಡಿತವನ್ನು ನಾವು ಕಾಣಬಹುದಾಗಿದೆ ಎನ್ನಲಾಗಿದೆ.

ಫ್ರಿಡ್ಜ್‌ಗಳ ಮೇಲೆಯೂ ಆಫರ್:
ಇದಲ್ಲದೇ ಫ್ಲಿಪ್‌ಕಾರ್ಟ್ ಫ್ರಿಡ್ಜ್‌ಗಳ ಮೇಲೆಯೂ ಆಫರ್ ಘೋಷಣೆ ಮಾಡಿದ್ದು, ಶೇ.31% ವರೆಗೂ ಬೆಲೆಗಳ ಮೇಲೆ ಕಡಿತವನ್ನು ಮಾಡಿದೆ ಎನ್ನಲಾಗಿದ್ದು, ಡಬ್ಬಲ್ ಡೋರ್ ಮೇಲೆ ಹೆಚ್ಚಿನ ಆಫರ್ ಲಭ್ಯವಿದೆ.

ವಾಷಿಂಗ್ ಮಿಷನ್ ಮೇಲೆ ಆಫರ್:
ಇದರೊಂದಿಗೆ ವಿವಿಧ ಬ್ರಾಂಡ್‌ನ ವಾಷಿಂಗ್ ಮಿಷನ್ ಮೇಲೆ ಸಹ ಆಫರ್ ನೀಡಿದ್ದು, ರೂ.3000ದ ವರೆಗೂ ಕಡಿತವನ್ನು ಪಡೆಯಬಹುದಾಗಿದೆ. ಬೆಲೆಗಳು ರೂ. 8,999ರಿಂದ ಶುರುವಾಗಲಿದೆ.

ಆಫರ್‌ನಲ್ಲಿ ಏರ್‌ಕಂಡಿಷನರ್‌ಗಳು ಲಭ್ಯ:
ಫ್ಲಿಪ್‌ಕಾರ್ಟಿನಲ್ಲಿ ಏರ್‌ಕಂಡಿಷನರ್‌ಗಳು ದೊರೆಯುತ್ತಿದ್ದು, ಶೇ.28% ವರೆಗೂ ಕಡಿತವನ್ನು ಕಾಣಬಹುದಾಗಿದೆ. ಅಲ್ಲದೇ ಏರ್‌ಪ್ಯೂರಿಫೈರ್‌ಗಳ ಮೇಲೆಯೂ ಶೇ.50%ರಷ್ಟು ಕಡಿತವನ್ನು ಮಾಡಲಾಗಿದೆ.


Click it and Unblock the Notifications








