ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಡೇಟ್ ಬಹಿರಂಗ! ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಆಫರ್!
ಆನ್‌ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣಗಳಲ್ಲಿ ಫ್ಲಿಪ್‌ಕಾರ್ಟ್ ಕೂಡ ಒಂದಾಗಿದೆ. ಫ್ಲಿಪ್‌ಕಾರ್ಟ್ ಗ್ರಾಹಕರಿಗಾಗಿ ಒಂದಿಲ್ಲೊಂದು ವಿಶೇಷ ಡಿಸ್ಕೌಂಟ್ ಸೇಲ್ ನಡೆಸುತ್ತಲೇ ಬಂದಿದೆ. ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಆಯೋಜಿಸುವುದಾಗಿ ಘೋಷಿಸಿದೆ. ಈ ಸೇಲ್ ಇದೇ ಮೇ 5 ರಿಂದ ಮೇ 10 ರವರೆಗೆ ನಡೆಯಲಿದೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಡೇಟ್ ಘೋಷಣೆ ಮಾಡಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಡಿವೈಸ್‌ಗಳ ಖರೀದಿಯ ಮೇಲೆ ವಿಶೇಷ ಡಿಸ್ಕೌಂಟ್ ಆಫರ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇದರೊಮದಿಗೆ ಲ್ಯಾಪ್‌ಟಾಪ್‌ಗಳು, ಮಾನಿಟರ್‌ಗಳು, ಪ್ರಿಂಟರ್‌ಗಳ ಮೇಲೂ ಕೂಡ ಆಫರ್ ಲಭ್ಯವಾಗಲಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಏನೆಲ್ಲಾ ಆಫರ್ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಮೂಲಕ ಸಮ್ಮರ್ ಸಮಯದಲ್ಲಿ ಹೊಸ ಡಿಸ್ಕೌಂಟ್ ಸೇಲ್ ಅನ್ನು ಫ್ಲಿಪ್‌ಕಾರ್ಟ್ ಹೊತ್ತುತಂದಿದೆ. ಈ ಸೇಲ್‌ನಲ್ಲಿ ವಿವಿಧ ಉತ್ಪನ್ನಗಳ ಖರೀದಿಗೆ ನಿರ್ದಿಷ್ಟ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ, ಕಂಪನಿಯು ಫ್ಲಿಪ್‌ಕಾರ್ಟ್ ಪೇ ಲೇಟರ್, 1,000ರೂ, ಮೌಲ್ಯದ ಗಿಫ್ಟ್ ಕಾರ್ಡ್, ಇನ್ಸ್‌ಟಂಟ್ ಕ್ರೆಡಿಟ್‌ಗಳು, ನೋ-ಕಾಸ್ಟ್ ಇಎಂಐ ಮತ್ತು ಎಕ್ಸ್‌ಚೇಂಜ್ ಆಫರ್‌ಗಳನ್ನು ಸಹ ನೀಡ್ತಾ ಇದೆ.
ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್ ಲಭ್ಯ!
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಪ್ರಮುಖವಾಗಿ ಐಫೋನ್ 13 ಖರೀದಿಯ ಮೇಲೆ ಬಿಗ್ ಡಿಸ್ಕೌಂಟ್ ನೀಡುವುದಾಗಿ ಹೇಳಿದೆ. ಪ್ರಸ್ತುತ ನೀವು ಐಫೋನ್ 13 ಅನ್ನು ಕೇವಲ 69,999 ರೂ.ಗಳಿಗೆ ಖರೀದಿಸಬಹುದು ಎಂದು ಹೇಳಿದೆ. ಆದರೆ ಫ್ಲಿಪ್‌ಕಾರ್ಟ್ ಐಫೋನ್ 13 ಮೇಲೆ ಎಷ್ಟು ಡಿಸ್ಕೌಂಟ್ ನೀಡಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.
ಇದಲ್ಲದೆ ಫ್ಲಿಪ್‌ಕಾರ್ಟ್ ತನ್ನ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G ಫೋನ್ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡುವುದಾಗಿ ಹೇಳಿದೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 74,999ರೂ. ಬೆಲೆಗೆ ಲಭ್ಯವಿದೆ. ಆದರೆ ಫ್ಲಿಪ್‌ಕಾರ್ಟ್ ಇನ್ನೂ ರಿಯಾಯಿತಿ ದರವನ್ನು ಬಹಿರಂಗಪಡಿಸಿಲ್ಲ.
ಇನ್ನು ಫ್ಲಿಪ್‌ಕಾರ್ಟ್ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್ ಮೇಲೆ ವಿಶೇಷ ಡಿಸ್ಕೌಂಟ್ ನೀಡುವುದಾಗಿ ಹೇಳಿದೆ. ಇದರಿಂದ 59,999ರೂ. ಬೆಲೆಯ ಸ್ಮಾರ್ಟ್‌ಫೋನ್ 44,999ರೂ. ಬೆಲೆಗೆ ನೀಡುತ್ತಿದೆ. ಜೊತೆಗೆ, ಆಸಕ್ತ ಖರೀದಿದಾರರು ತಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಎಕ್ಸ್‌ಚೇಂಜ್ ಮಾಡಿಕೊಂಡರೆ 3,000 ರೂ.ವರೆಗೆ ರಿಯಾಯಿತಿ ಪಡೆಯಬಹುದು ಎಂದು ಹೇಳಿದೆ.

ಇದರೊಂದಿಗೆ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಫೋಲ್ಡಬಲ್ ಸ್ಮಾರ್ಟ್‌ಫೋನ್ ಖರೀದಿಸಬೇಕೆಂದುಕೊಂಡರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 ಅನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಸದ್ಯ ಫ್ಲಿಪ್‌ಕಾರ್ಟ್ ಇನ್ನು ಕೂಡ ರಿಯಾಯಿತಿ ದರವನ್ನು ಬಹಿರಂಗಪಡಿಸಿಲ್ಲ.
ಇದೇ ಸಮಯದಲ್ಲಿ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಕೂಡ ಶುರುವಾಗಲಿದೆ. ಆದರೆ ಈ ಸೇಲ್ ಡೇಟ್ ಅಧಿಕೃತವಾಗಿಲ್ಲವಾದರೂ ಸೇಲ್‌ನ ಟೀಸರ್ ಈಗಾಗಲೇ ಬಹಿರಂಗವಾಗಿದೆ. ಇನ್ನು ಈ ಗ್ರೇಟ್ ಸಮ್ಮರ್ ಸೇಲ್ ಟೀಸರ್‌ನಲ್ಲಿ ಅನೇಕ ವಿವರಗಳು ಬಹಿರಂಗವಾಗಿದ್ದು, ಅದರಲ್ಲೂ ಫೋನ್‌ಗಳ ಮೇಲೆ 40% ಡಿಸ್ಕೌಂಟ್ ಲಭ್ಯವಾಗಲಿದೆ ಅನ್ನೊದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಟೀಸರ್ ಪ್ರಕಾರ ಸೇಲ್ ಸಮಯದಲ್ಲಿ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಹೆಡ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ ದೊರೆಯಲಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ 40% ಡಿಸ್ಕೌಂಟ್ ದೊರೆಯಲಿದೆ ಅನ್ನೊದು ಟೀಸರ್‌ನಲ್ಲಿ ಬಹಿರಂಗವಾಗಿದೆ. ಇದರಲ್ಲಿ ಒನ್‌ಪ್ಲಸ್, ಸ್ಯಾಮ್‌ಸಂಗ್, ಶಿಯೋಮಿ, ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಇದಲ್ಲದೆ ತಿಂಗಳಿಗೆ 1,555ರೂ.ಗಳಿಂದ ಪ್ರಾರಂಭವಾಗುವ ನೋ ಕಾಸ್ಟ್ EMI ಆಯ್ಕೆಗಳು ಕೂಡ ದೊರೆಯಲಿವೆ.


Click it and Unblock the Notifications








