Home
ಸುದ್ದಿಜಾಲ

Flipkart ಮೆಗಾ ಬೊನಾಂಜಾ ಸೇಲ್; ರೂ. 15,000 ದೊಳಗೆ ಸಿಗಲಿವೆ ಈ ಟಾಪ್ 5 ಸ್ಮಾರ್ಟ್‌ಫೋನ್‌ಗಳು !

ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದಾಗಿ ಇ-ಕಾಮರ್ಸ್‌ ಸಂಸ್ಥೆಗಳು ಆಗಾಗಿ ಭರ್ಜರಿ ರಿಯಾಯಿತಿ ನೀಡುವುದನ್ನು ಗಮನಿಸಿದ್ದೇವೆ. ಇದೀಗ ಅಂದರೆ ಜೂನ್‌ 13ರಿಂದ ಫ್ಲಿಪ್‌ಕಾರ್ಟ್‌ (Flipkart) ಸಂಸ್ಥೆ ಮೆಗಾ ಜೂನ್‌ ಬೊನಾಂಜಾ ಸೇಲ್ ಅನ್ನು ಆರಂಭಿಸಿದೆ. ಇನ್ನೂ ಈ ರಿಯಾಯಿತಿ ಮಾರಾಟ ಜೂನ್ 19ರವರೆಗೆ ಲಭ್ಯವಿರಲಿದೆ. ಅದರಲ್ಲಿಯೂ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗಿದ್ದು, ಮೊಬೈಲ್‌ ಖರೀದಿಸುವ ಯೋಜನೆ ಹೊಂದಿರುವವರು ಈ ಬೊನಾಂಜಾ ಸೇಲ್‌ನಲ್ಲಿ ಖರೀದಿಸುವುದರಿಂದ ಅಧಿಕ ಹಣ ಉಳಿತಾಯ ಮಾಡಬಹುದಾಗಿದೆ.

ಫ್ಲಿಪ್‌ಕಾರ್ಟ್ ಮೆಗಾ ಜೂನ್ ಬೊನಾಂಜಾ ಮಾರಾಟವು ಈಗ ಲೈವ್ ಇದ್ದು, ಎಲ್ಲಾ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯುತ್ತಮ ರಿಯಾಯಿತಿ ನೀಡಲಾಗುತ್ತಿದೆ. ಮಾರಾಟದ ಸಮಯದಲ್ಲಿ ಸಾರ್ವಕಾಲಿಕ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ. ಇದಲ್ಲದೆ ನಿಮ್ಮ ಹಳೆಯ ಫೋನ್ ಅನ್ನು ಕೂಡ ಎಕ್ಸ್‌ಚೇಂಜ್ ಮಾಡುವ ಅವಕಾಶವನ್ನು ಕೂಡ ಫ್ಲಿಪ್‌ಕಾರ್ಟ್‌ ನೀಡಿದೆ. ಜೊತೆಗೆ ಫ್ಲಿಪ್‌ಕಾರ್ಟ್ ಆಯ್ದ ಬ್ಯಾಂಕ್ ಕಾರ್ಡ್‌ಗಳು ಮತ್ತು ನೋ-ಕಾಸ್ಟ್ ಇಎಂಐ ಆಯ್ಕೆಗಳಲ್ಲಿ ಕ್ಯಾಶ್‌ಬ್ಯಾಕ್ ಅನ್ನು ಸಹ ನೀಡುತ್ತಿದೆ.

Flipkart  ಬೊನಾಂಜಾ ಸೇಲ್‌ನಲ್ಲಿ ಈ ಮೊಬೈಲ್‌ಗಳ ಮೇಲೆ ಭಾರೀ ರಿಯಾಯಿತಿ !

ಗಮನಾರ್ಹವಾದ ಅಂಶವೆಂದರೆ ಈ ಆಫರ್‌ಗಳು ಜೂನ್ 19 ರವರೆಗೆ ಲಭ್ಯವಿರಲಿದ್ದು, ನೀವು 5G ಸ್ಮಾರ್ಟ್‌ಫೋನ್ ಅಥವಾ ಬಜೆಟ್‌ ಸ್ನೇಹಿ ಫೋನ್‌ ಖರೀದಿಸುವ ಯೋಜನೆ ಹೊಂದಿದ್ದರೆ ನೀವು ಈ ಅವಕಾಶವನ್ನು ಬಳಸಿಕೊಳ್ಳಬಹುದು. ನಿಮ್ಮ ಕೆಲಸವನ್ನು ಸುಲಭಗೊಳಿಸಲು ಫ್ಲಿಪ್‌ಕಾರ್ಟ್ ಮೆಗಾ ಜೂನ್ ಬೊನಾಂಜಾ ಸೇಲ್ 2024 ರ ಸಮಯದಲ್ಲಿ ನೀವು 15,000 ರೂ. ಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳ ಕುರಿತು ಇಲ್ಲಿ ನಾವು ಪಟ್ಟಿ ಮಾಡಿದ್ದೇವೆ ನೋಡಿ.

Vivo T3x 5G: ಇದರ 6GB RAM, 128GB ROM ವೇರಿಯಂಟ್‌ ಮೊಬೈಲ್‌ನ ಮೂಲ ಬೆಲೆ 18,999 ರೂ. ಗಳಾಗಿವೆ ನೀವು ಫ್ಲಿಪ್‌ಕಾರ್ಟ್‌ ಬೊನಾಂಜಾ ಸೇಲ್‌ನಲ್ಲಿ ಖರೀದಿಸಿದರೆ ಬರೋಬ್ಬರಿ 21% ರಿಯಾಯಿತಿ ಜೊತೆಗೆ 14,999 ರೂ. ಗಳಿಗೆ ಖರೀದಿಸಬಹುದಾಗಿದೆ.

Motorola G64 5G: ಇದರ 8GB RAM, 128GB ROM ಡಿವೈಸ್‌ನ ಮೂಲ ಬೆಲೆ 17,999 ರೂ. ಗಳಾಗಿದ್ದು, ಇದೀಗ 22% ರಿಯಾಯಿತಿ ಜೊತೆಗೆ ಕೇವಲ 13,999 ರೂ. ಗಳಲ್ಲಿ ನೀವು ಖರೀದಿಸಬಹುದಾಗಿದೆ.

Realme C65 5G: ಇದರ 6GB RAM, 128GB ROM ಸ್ಟೋರೇಜೆ ಮಾದರಿ ಸ್ಮಾರ್ಟ್‌ಫೋನ್‌ ಕೂಡ ಮೂಲ ಬೆಲೆ 15,999 ರೂ. ಬೆಲೆ ಹೊಂದಿದೆ ಇದೀಗ ಜೂನ್ ಮೆಗಾ ಬೊನಾಂಜಾ ಸೇಲ್‌ನಲ್ಲಿ 21% ರಿಯಾಯಿತಿ ಪಡೆಯಲಿದ್ದು ಈಗ ನೀವು ಕೇವಲ 12,499 ರೂ. ಗಳಿಗೆ ಖರೀದಿಸಬಹುದಾಗಿದೆ.

Samsung Galaxy F34 5G: ಈ ಮೊಬೈಲ್‌ನ 6GB RAM, 128GB ROM ಮಾದರಿಯ ಮೇಲೆ ಭರ್ಜರಿ 46% ರಿಯಾಯಿತಿ ನೀಡಿದ್ದು, ಆ ಮೂಲಕ ನೀವು ಈ ರಿಯಾಯಿತಿ ಸೇಲ್ ಸಮಯದಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಿದರೆ ಕೇವಲ 12,499 ರೂ. ಗಳಿಗೆ ಪಡೆಯಬಹುದಾಗಿದೆ. ಇದರ ಮೂಲ ಬೆಲೆ 24,999 ರೂ. ಎಂಬುದನ್ನು ಗಮನಿಸಬಹುದಾಗಿದೆ.

Redmi 12 5G: 4GB RAM, 128GB ROM ವೇರಿಯಂಟ್‌ ಸ್ಮಾರ್ಟ್‌ಫೋನ್‌ ಮೂಲ ಬೆಲೆ ಡೀಲ್ ಬೆಲೆ 15,999 ಹೊಂದಿದ್ದು, ಇದೀಗ ಫ್ಲಿಪ್‌ಕಾರ್ಟ್‌ ಭರ್ಜರಿ 25% ರಿಯಾಯಿತಿ ನೀಡಿದ್ದು ಆ ಮೂಲಕ ನೀವು ಬೊನಾಂಜಾ ಸೇಲ್‌ನಲ್ಲಿ ಕೇವಲ 11,999 ರೂ. ಗಳಿಗೆ ಖರೀದಿಸಬಹುದಾಗಿದೆ.

ನೀವು iPhone ಅಥವಾ Android ಯವುದನ್ನೇ ಆಗಲಿ ಖರೀದಿಸಲು ಯೋಜಿಸುತ್ತಿದ್ದರೆ ಅದರಲ್ಲಿ ಒಂದನ್ನು ಖರೀದಿಸಲು ಇದು ಸೂಕ್ತ ಸಮಯವಾಗಿದ್ದು, ಅದನ್ನು ಬಳಸಿಕೊಂಡು ನೀವು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದಾಗಿದೆ.

Best Mobiles in India

English summary
The Flipkart Mega June Bonanza sale is now live, offering great discounts on smartphones of all price. You can buy your favorite smartphone at an all-time low price during the sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+