Home
ಸುದ್ದಿಜಾಲ

ಇಂದಿನಿಂದ 'ಫ್ಲಿಪ್‌ಕಾರ್ಟ್' ಮೊಬೈಲ್ಸ್ ಬೊನಾನ್ಜಾ ಸೇಲ್ ಆರಂಭ!

ಭಾರತದ ಪ್ರಖ್ಯಾತ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್ ಪ್ರಿಯರಿಗೆ ಮತ್ತೊಂದು ಮಾರಾಟ ಮೇಳವನ್ನು ಇಂದಿನಿಂದ ಆರಂಭವಿಸಿದೆ. ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತು ಬ್ರಾಂಡ್‌ಗಳಲ್ಲಿ ದೊಡ್ಡ ರಿಯಾಯಿತಿಯನ್ನು ನೀಡುವ ಸಲುವಾಗಿ, ಇದೇ ಜೂನ್ 17 ರಿಂದ ಜೂನ್ 21 ರವರೆಗೂ ಜನಪ್ರಿಯ ಮೊಬೈಲ್ಸ್ ಬೊನಾನ್ಜಾ ಮಾರಾಟವನ್ನು ಆಯೋಜಿಸಿದೆ.

ಇನ್ನು ಈ ಮೊಬೈಲ್ಸ್ ಬೊನಾನ್ಜಾ ಮಾರಾಟ ಮೇಳದಲ್ಲಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದ್ದು, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಶಾಪಿಂಗ್ ಮಾಡುವ ಖರೀದಿದಾರರಿಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಹಾಗೂ ಇಎಂಐ ವಹಿವಾಟು ಖರೀದಿಗೆ ಹೆಚ್ಚುವರಿಯಾಗಿ 250 ರೂಪಾಯಿಗಳ ಆಫರ್ ಅನ್ನು ಸಹ ನೀಡಿದೆ.

ಇಂದಿನಿಂದ 'ಫ್ಲಿಪ್‌ಕಾರ್ಟ್' ಮೊಬೈಲ್ಸ್ ಬೊನಾನ್ಜಾ ಸೇಲ್ ಆರಂಭ!

ರೆಡ್ಮಿ ನೋಟ್ 6 ಪ್ರೊ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 50 ಮತ್ತು ಓಪೊ ಎಫ್11 ಸೇರಿದಂತೆ ಹತ್ತು ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಬೆಸ್ಟ್ ಆಫರ್‌ಗಳು ಲಭ್ಯವಿದ್ದು, ಹಾಗಾದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ನೀವು ನೋಡುತ್ತಿದ್ದರೆ. ಮೊಬೈಲ್ ಬೊನಾನ್ಜಾ ಮಾರಾಟದಲ್ಲಿ ಲಭ್ಯವಿರುವ ಅತ್ಯುತ್ತಮ ಕೊಡುಗೆಗಳ ಬಗ್ಗೆ ಮುಂದೆ ಓದಿ ತಿಳಿಯಿರಿ.

ಶಿಯೋಮಿ ರೆಡ್‌ಮಿ 6:

ಶಿಯೋಮಿ ರೆಡ್‌ಮಿ 6:

ಮೊಬೈಲ್ಸ್ ಬೊನಾನ್ಜಾ ಮಾರಾಟದ ಸಮಯದಲ್ಲಿ ಫ್ಲಿಪ್‌ಕಾರ್ಟ್ ರೆಡ್‌ಮಿ 6 ಅನ್ನು 7499 ರೂ.ಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಆದ್ದರಿಂದ, ನೀವು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಹುಡುಕುತ್ತಿದ್ದರೆ ಇದು ನಿಮಗೆ ಉತ್ತಮ ಖರೀದಿಯಾಗಬಹುದು. ಉತ್ತಮ ಮೌಲ್ಯವನ್ನು ರೆಡ್ಮಿ 6 ಅನ್ನು ಬೆಸ್ಟ್ ಸ್ಮಾರ್ಟ್‌ಫೋನ್ ಎಂದು ಪರಿಗಣಿಸಬಹುದು.

ರೆಡ್ಮಿ ನೋಟ್ 6 ಪ್ರೊ:

ರೆಡ್ಮಿ ನೋಟ್ 6 ಪ್ರೊ:

ಈ ಮೊಬೈಲ್ಸ್ ಬೊನಾನ್ಜಾ ಮಾರಾಟ ಮೇಳದಲ್ಲಿ ಗಮನಾರ್ಹವಾಗಿ ರೆಡ್‌ಮಿ ನೋಟ್ 6 ಪ್ರೊ ಫೋನಿನ 6 ಜಿಬಿ RAM ಮತ್ತು 64 ಜಿಬಿ ಶೇಖರಣಾ ಮಾದರಿ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ. ಬೊನಾನ್ಜಾ ಮಾರಾಟದ ಸಮಯದಲ್ಲಿ 13,999 ರೂ.ಗಳಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ನೋಟ್ 6 ಪ್ರೊ ಸ್ಮಾರ್ಟ್‌ಫೋನ್ ನಿಮ್ಮ ಖರೀದಿ ಆಯ್ಕೆಯಾಗಬಹುದು.

ಆಸುಸ್ 5 ಜೆಡ್:

ಆಸುಸ್ 5 ಜೆಡ್:

ಆಸುಸ್ ಕಂಪೆನಿ ಇನ್ನೇನು ಕೆಲವು ದಿನಗಳಲ್ಲಿ ಭಾರತದಲ್ಲಿ 6 ಜೆಡ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಹಾಗಾಗಿ, ಫ್ಲಿಪ್ಕಾರ್ಟ್ ಮೊಬೈಲ್ ಬೋನಾಂಜಾ ಡೇಸ್ ಮಾರಾಟದ ಸಮಯದಲ್ಲಿ ಆಸುಸ್ 5Z ಭಾರಿ ರಿಯಾಯಿತಿಗಳನ್ನು ಪಡೆದಿದೆ. ಆಸುಸ್ 6 ಜೆಡ್ ಬರುತ್ತಿರುವುದರಿಂದ ಆಸುಸ್ 5 ಜಡ್ 5 21,999 ರೂ.ಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ .

ಗ್ಯಾಲಕ್ಸಿ ಎ 50:

ಗ್ಯಾಲಕ್ಸಿ ಎ 50:

ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾನ್ಜಾ ಮಾರಾಟದ ಸಮಯದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 50: ಸ್ಮಾರ್ಟ್‌ಫೋನ್ 18,490 ರೂ.ಗಳ ಬೆಲೆಗೆ ಮಾರಾಟವಾಗುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ 50 ಅನ್ನು ಖರೀದಿಸಲು ಇದು ಉತ್ತಮ ಸಮಯವಾಗಿದ್ದು, ನೀವು 20,000 ರೂ.ಗಳ ಉತ್ತಮ ಆಲ್‌ರೌಂಡರ್ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ ಇದು ಕೂಡ ಬೆಸ್ಟ್ ಆಯ್ಕೆಯಾಗಲಿದೆ.

ರೆಡ್ಮಿ ನೋಟ್ 5 ಪ್ರೊ:

ರೆಡ್ಮಿ ನೋಟ್ 5 ಪ್ರೊ:

ಶಿಯೋಮಿಯ ಈ ಸಾಧನವು ಸುಮಾರು ಒಂದೂವರೆ ವರ್ಷ ಹಳೆಯದಾದರೂ ಸಹ, ಇದು ಕಂಪನಿಯ ಅತಿದೊಡ್ಡ ಮತ್ತು ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿದೆ. ಫ್ಲಿಪ್ಕಾರ್ಟ್ ಬೊನಾನ್ಜಾ ಮಾರಾಟದ ಸಂದರ್ಭದಲ್ಲಿ ರೆಡ್ಮಿ ನೋಟ್ 5 ಪ್ರೊ ರೂ. 11,999 ಬೆಲೆಯಲ್ಲಿ ಮಾರಾಟವಾಗಿದೆ. ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಪಡೆಯಲು ಇದು ಉತ್ತಮ ಸಮಯವಾಗಿದೆ.

ಐಫೋನ್ ಎಕ್ಸ್:

ಐಫೋನ್ ಎಕ್ಸ್:

ಇತ್ತೀಚಿಗಷ್ಟೇ ಮತ್ತೊಮ್ಮೆ ಬೆಲೆ ಕಳೆದುಕೊಂಡಿರುವ ಆಪಲ್‌ನ ಐಫೋನ್ ಎಕ್ಸ್ ಸಹ ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಒಂದು ಹೈ ಎಂಡ್ ಸ್ಮಾರ್ಟ್‌ಫೋನ್ ಪಡೆಯಲು ಮಾರಾಟದ ಸಮಯದಲ್ಲಿ ಲಭ್ಯವಿರುವ ಕೊಡುಗೆಗಳನ್ನು ಬಳಸಿಕೊಂಡರೆ ಐಫೋನ್ ಎಕ್ಸ್ ಬೆಲೆ 66,499 ರೂಪಾಯಿಗಳಾಗಿರುವುದು ಹೊರೆಯಾಗುವುದಿಲ್ಲ.

ಓಪ್ಪೊ ಎಫ್11:

ಓಪ್ಪೊ ಎಫ್11:

ಬಹಳ ಹಿಂದೆಯೇ ಬಿಡುಗಡೆ ಮಾಡಲಾಗಿರುವ ಒಪ್ಪೊ ಕಂಪೆನಿಯ ಜನಪ್ರಿಯ ಸ್ಮಾರ್ಟ್‌ಫೋನ್ ಓಪ್ಪೊ ಎಫ್11 ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಫ್ಲಿಪ್ಕಾರ್ಟ್ ಬೊನಾನ್ಝಾ ಮಾರಾಟ ಮೇಳ ಸಮಯದಲ್ಲಿ ಓಪ್ಪೊ ಎಫ್11 ಸ್ಮಾರ್ಟ್‌ಫೋನ್ ಬೆಲೆ 17,990 ರೂಪಾಯಿಗಳಾಗಿವೆ. ಕ್ಯಾಮೆರಾ ಪ್ರಿಯರು ಖರೀದಿಸಬಹುದಾದ ಉತ್ತಮ ಸ್ಮಾರ್ಟ್‌ಫೋನ್ ಇದಾಗಿದೆ.

ಗ್ಯಾಲಕ್ಸಿ ನೋಟ್ 8:

ಗ್ಯಾಲಕ್ಸಿ ನೋಟ್ 8:

ಸ್ಯಾಮ್‌ಸಂಗ್ ಕಂಪೆನಿಯ ಗ್ಯಾಲಕ್ಸಿ ನೋಟ್ 8 ಸಾಕಷ್ಟು ಹಳೆಯ ಸಾಧನವಾಗಿದ್ದರೂ 40,000 ರೂ.ಗಿಂತ ಕಡಿಮೆ ಬೆಲೆಗೆ ಇದು ಉತ್ತಮ ವ್ಯವಹಾರವಾಗಿದೆ. ಏಕೆಂದರೆ, ಫ್ಲಿಪ್ಕಾರ್ಟ್ ಬೊನಾನ್ಝಾ ಮಾರಾಟದ ಸಮಯದಲ್ಲಿ ಗ್ಯಾಲಕ್ಸಿ ನೋಟ್ 8 36,990 ರೂ.ಗಳ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಪ್ರೀಮಿಯಂ ಫೋನ್ ಪ್ರಿಯರಿಗೆ ಇದು ಉತ್ತಮ ಡೀಲ್ ಎನ್ನಬಹುದು.

ವಿ 40 ಥಿಂಕ್ಯೂ:

ವಿ 40 ಥಿಂಕ್ಯೂ:

ನೀವು ಎಲ್‌ಜಿ ಅಭಿಮಾನಿಯಾಗಿದ್ದರೆಫ್ಲಿಪ್ಕಾರ್ಟ್ ಬೊನಾನ್ಝಾ ಮಾರಾಟದ ಸಮಯದಲ್ಲಿ ಎಲ್‌ಜಿ ವಿ 40 ಥಿಂಕ್ಯೂ ಸ್ಮಾರ್ಟ್‌ಫೋನ್ ಖರೀದಿಗೆ ಉತ್ತಮ ಸಮಯ ಎಂದು ಹೇಳಬಹುದು. ಏಕೆಂದರೆ, ಪ್ರೀಮಿಯಂ ಸ್ಮಾರ್ಟ್‌ಫೋನ್ ಎಲ್‌ಜಿ ವಿ 40 ಥಿನ್ಕ್ಯೂ ಫೋನ್ ಬೆಲೆ ಇದೀಗ 39,999 ರೂ.ಗಳಾಗಿವೆ. ಎಲ್‌ಜಿ ಕಂಪೆನಿ ವಿ30+ ಫೋನ್ ಕೂಡ 27,999 ರೂ.ಗಳಿಗೆ ಲಭ್ಯವಿದೆ.

Best Mobiles in India

English summary
Flipkart is offering big discounts on smartphones across price segments and brands. So, if you have been looking to buy a smartphone for a long time at the lowest ever price head to the Flipkart Mobiles Bonanza sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+