Home
ಸುದ್ದಿಜಾಲ

ಭಾರತದಲ್ಲಿ ಹೊಸ ಸೇವೆ ಪರಿಚಯಿಸಲು ಫ್ಲಿಪ್‌ಕಾರ್ಟ್‌ ತಯಾರಿ! ಇದು ಸಂಪೂರ್ಣ ಉಚಿತ!

ಜನಪ್ರಿಯ ಇ-ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್‌ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನು ನೀಡುತ್ತಾ ಬಂದಿದೆ. ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡೋರಿಗೆ ವಿಶೇಷ ಸೇವೆಗಳನ್ನು ಪರಿಚಯಿಸಿರುವ ಫ್ಲಿಪ್‌ಕಾರ್ಟ್‌ ಇದೀಗ ಹೊಸ 'ಫ್ಲಿಪ್‌ಕಾರ್ಟ್‌ ಪ್ಲಸ್‌ ಪ್ರೀಮಿಯಂ' ಸೇವೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ಹೌದು, ಪ್ಲಿಪ್‌ಕಾರ್ಟ್‌ ತನ್ನ ಬಳಕೆದಾರರಿಗೆ ಹೊಸ ಫ್ಲಿಪ್‌ಕಾರ್ಟ್‌ ಪ್ಲಸ್‌ ಪ್ರೀಮಿಯಂ ಸೇವೆ ನೀಡುವುದಕ್ಕೆ ಸಜ್ಜಾಗಿದೆ. ಇದು ಈಗಾಗಲೇ ಲಭ್ಯವಿರುವ ಫ್ಲಿಪ್‌ಕಾರ್ಟ್‌ ಪ್ಲಸ್‌ ಪ್ರೋಗ್ರಾಂಗಿಂತ ಹಲವು ಉತ್ತಮ ಪ್ರಯೋಜನಗಳನ್ನು ನೀಡಲಿದೆ ಎಂದು ಹೇಳಿದೆ. ಇದರಲ್ಲಿ ಬಳಕೆದಾರರು ಶಾಪಿಂಗ್‌ ಮಾಡಿದ ನಂತರ ಸೂಪರ್‌ಕಾಯಿನ್‌ಗಳನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಪ್ಲಸ್‌ ಪ್ರೀಮಿಯಂ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಹೊಸ ಸೇವೆ ಪರಿಚಯಿಸಲು ಫ್ಲಿಪ್‌ಕಾರ್ಟ್‌ ತಯಾರಿ! ಇದು ಸಂಪೂರ್ಣ ಉಚಿತ!

ಏನಿದು ಫ್ಲಿಪ್‌ಕಾರ್ಟ್‌ ಪ್ಲಸ್‌ ಪ್ರೀಮಿಯಂ ಸೇವೆ?
ಹೆಸರೇ ಸೂಚಿಸುವಂತೆ ಫ್ಲಿಪ್‌ಕಾರ್ಟ್‌ನಲ್ಲಿ ಆನ್‌ಲೈನ್ ಶಾಪಿಂಗ್‌ ಮಾಡುವವರಿಗೆ ಹಲವು ಪ್ರೀಮಿಯಂ ಸೇವೆಗಳನ್ನು ನೀಡಲಿದೆ. ಇದು ಫ್ಲಿಪ್‌ಕಾರ್ಟ್ ಪ್ಲಸ್ ಪ್ರೋಗ್ರಾಂಗೆ ಹೋಲಿಸಿದರೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಶಾಪಿಂಗ್‌ ಮಾಡುವ ಬಳಕೆದಾರರು ಸೂಪರ್‌ಕಾಯಿನ್‌ಗಳನ್ನು ಗಳಿಸುತ್ತಾರೆ ಎನ್ನಲಾಗಿದೆ. ಪ್ರೀಮಿಯಂ ಎಂದ ಮಾತ್ರಕ್ಕೆ ಈ ಪ್ರೋಗ್ರಾಂ ಸೇವೆ ಪಡೆದುಕೊಳ್ಳುವುದಕ್ಕೆ ಯಾವುದೇ ಚಂದಾದಾರಿಕೆ ಪಾವತಿಸಬೇಕಾದ ಅವಶ್ಯಕತೆಯಿಲ್ಲ.

ಇನ್ನು ಫ್ಲಿಪ್‌ಕಾರ್ಟ್ ಪ್ಲಸ್ ಪ್ರೀಮಿಯಂ ಸೇವೆಯು ಫ್ಲಿಪ್‌ಕಾರ್ಟ್ ಪ್ಲಸ್‌ನ ವಿಸ್ತರಣೆಯ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಈ ಸೇವೆಯ ನಿರ್ದಿಷ್ಟ ಪ್ರಯೋಜನಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಈ ಸೇವೆಯು ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎನ್ನುವುದರ ಸುಳಿವನ್ನು ಟೀಸರ್‌ ಮೂಲಕ ನೀಡಿದೆ. ಅಲ್ಲದೆ ಮುಂದಿನ ಎರಡು ವಾರಗಳಲ್ಲಿ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಬಳಕೆದಾರರಿಗೆ ಭರವಸೆ ನೀಡಿದೆ.

ಪ್ರಸ್ತುತ ಬಳಕೆದಾರರಿಗೆ ಲಭ್ಯವಾಗುತ್ತಿರುವ ಫ್ಲಿಪ್‌ಕಾರ್ಟ್ ಪ್ಲಸ್ ಮೆಂಬರ್‌ಶಿಪ್‌ ಸಂಪೂರ್ಣವಾಗಿ ಉಚಿತವಾಗಿಲ್ಲ. ಈ ಪ್ರೋಗ್ರಾಂ ಫ್ಲಿಪ್‌ಕಾರ್ಟ್ ಎಕೋ ಸಿಸ್ಟಂನಲ್ಲಿನ ವರ್ಚುವಲ್ ಕರೆನ್ಸಿಯಾದ ಸೂಪರ್‌ ಕಾಯಿನ್ಸ್‌ ಜೊತೆಗೆ ವಿವಿಧ ಪ್ರಯೋಜನಗಳನ್ನು ನೀಡುತ್ತಿದೆ. ಜೊತೆಗೆ ಗ್ರಾಹಕರಿಗೆ ಬಹುಮಾನವನ್ನು ಸಹ ನೀಡುತ್ತಾ ಬಂದಿದೆ. ವೈವಿಧ್ಯಮಯ ಉತ್ಪನ್ನಗಳನ್ನ ಉ ಖರೀದಿ ಮಾಡುವಾಗ ಈ ಬಹುಮಾನಗಳನ್ನು ಫ್ಲಿಪ್‌ಕಾರ್ಟ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ರಿಡೀಮ್ ಮಾಡುವುದಕ್ಕೆ ಅವಕಾಶ ನೀಡಿದೆ.

ಇದಲ್ಲದೆ ಫ್ಲಿಪ್‌ಕಾರ್ಟ್‌ ಪ್ಲಸ್‌ ಪ್ರೋಗ್ರಾಂನಲ್ಲಿ ಭಾಗವಹಿಸಬೇಕಾದರೆ ಗ್ರಾಹಕರು ಸೂಪರ್‌ಕಾಯಿನ್ಸ್‌ ಬಳಸಿಕೊಂಡು ಲಾಯಲ್ಟಿ ಪ್ರೋಗ್ರಾಂಗೆ ಸೇರಬೇಕಾಗುತ್ತದೆ. ಅವರು ವೆಬ್‌ಸೈಟ್‌ನಲ್ಲಿ ಮಾಡಿದ ಪ್ರತಿ ಖರೀದಗೆ ಸೂಪರ್‌ಕಾಯಿನ್ಸ್‌ಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತಾರೆ. ಅದರಂತೆ ಫ್ಲಿಪ್‌ಕಾರ್ಟ್‌ ಪ್ಲಸ್‌ನಲ್ಲಿ ಗ್ರಾಹಕರು ಉಚಿತ ಶಿಪ್ಪಿಂಗ್‌, ವೇಗವರ್ಧಿತ ಸೂಪರ್‌ ಕಾಯಿನ್ಸ್‌ ಗಳಿಕೆ, ಡೀಲ್‌ಗಳಿಗೆ ಆರಂಭಿಕ ಪ್ರವೇಶ ಮತ್ತು ಆದ್ಯತೆಯ ಗ್ರಾಹಕ ಬೆಂಬಲ ನೀಡುವ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಭಾರತದಲ್ಲಿ ಹೊಸ ಸೇವೆ ಪರಿಚಯಿಸಲು ಫ್ಲಿಪ್‌ಕಾರ್ಟ್‌ ತಯಾರಿ! ಇದು ಸಂಪೂರ್ಣ ಉಚಿತ!

Flipkart Plus ನಲ್ಲಿ ಭಾಗವಹಿಸಲು, ಗ್ರಾಹಕರು SuperCoins ಬಳಸಿಕೊಂಡು ಲಾಯಲ್ಟಿ ಪ್ರೋಗ್ರಾಂಗೆ ಸೇರಬಹುದು, ಅವರು ವೆಬ್‌ಸೈಟ್‌ನಲ್ಲಿ ಮಾಡಿದ ಪ್ರತಿ ಖರೀದಿಯೊಂದಿಗೆ ಗಳಿಸುತ್ತಾರೆ. ಅಸ್ತಿತ್ವದಲ್ಲಿರುವ Flipkart Plus ಈಗಾಗಲೇ ಉಚಿತ ಶಿಪ್ಪಿಂಗ್, ವೇಗವರ್ಧಿತ SuperCoins ಗಳಿಕೆಗಳು, ಡೀಲ್‌ಗಳಿಗೆ ಆರಂಭಿಕ ಪ್ರವೇಶ ಮತ್ತು ಆದ್ಯತೆಯ ಗ್ರಾಹಕ ಬೆಂಬಲದಂತಹ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರೊಂದಿಗೆ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಾಗಲು ಬಳಕೆದಾರರು 200 ಸೂಪರ್‌ಕಾಯಿನ್‌ಗಳನ್ನು ಬಳಸಿಕೊಳ್ಳಬಹುದಾಗಿದೆ.

ಇನ್ನು ಫ್ಲಿಪ್‌ಕಾರ್ಟ್ ಪ್ಲಸ್ ಪ್ರೀಮಿಯಂ ಪ್ರೋಗ್ರಾಂ ಪರಿಚಯಿಸಲು ತಯಾರಿ ನಡೆಸುತ್ತಿದ್ದ ಹಾಗೇ ಫ್ಲಿಪ್‌ಕಾರ್ಟ್‌ ಹೆಚ್ಚಿನ ಸುಧಾರಿತ ಶಾಪಿಂಗ್ ಅನುಭವವನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ. ಇದೇ ಕಾರಣಕ್ಕೆ ಈ ಪ್ರೋಗ್ರಾಂ ಅನ್ನು ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಅನಾವರಣಗೊಳಿಸುವ ಸಾಧ್ಯತೆಯಿದೆ.

Best Mobiles in India

English summary
Flipkart is gearing up to introduce 'Flipkart Plus Premium' program in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+