Flipkart Big Diwali Sale: ಐಫೋನ್ 14 ಮೇಲೆ ಸಿಗಲಿದೆ ನಿರೀಕ್ಷೆಗೂ ಮೀರಿದ ಡಿಸ್ಕೌಂಟ್!
ಜನಪ್ರಿಯ ಇ-ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಹಬ್ಬದ ಸಮಯದಲ್ಲಿ ವಿಶೇಷ ರಿಯಾಯಿತಿ ಸೇಲ್‌ಗಳನ್ನು ಆಯೋಜಿಸುತ್ತಿದೆ. ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿಯಿದ್ದು, ಈ ಸಮಯದಲ್ಲಿ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಆಯೋಜಿಸುವುದಕ್ಕೆ ಮುಂದಾಗಿದೆ. ಈ ಸೇಲ್ ಇದೇ ನವೆಂಬರ್ 2 ರಂದು ಪ್ರಾರಂಭವಾಗಲಿದೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಪ್ರಾರಂಭದ ದಿನಾಂಕ ಬಹಿರಂಗವಾಗಿದೆ. ಇನ್ನು ಈ ಸೇಲ್ ಸಮಯದಲ್ಲಿ ಐಫೋನ್ ಮಾಡೆಲ್‌ಗಳ ಮೇಲೆ ವರ್ಷದಲ್ಲಿಯೇ ಅತ್ಯಂತ ಕಡಿಮೆ ಬೆಲೆಗಳನ್ನು ನೀಡುವುದಾಗಿ ಹೇಳುತ್ತಿದೆ. ಅದರಲ್ಲೂ ಐಫೋನ್ 14 ಮೇಲೆ ಬಿಗ್ ಡಿಸ್ಕೌಂಟ್ ನೀಡುವುದಾಗಿ ಘೋಷಣೆ ಮಾಡಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ ಐಫೋನ್ 14 ಮೇಲೆ ಏನೆಲ್ಲಾ ಆಫರ್ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್ 14 ಮೇಲೆ ಫ್ಲಿಪ್‌ಕಾರ್ಟ್ ನೀಡಲಿದೆ ಭರ್ಜರಿ ಆಫರ್
ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಸಮಯದಲ್ಲಿ 128GB ಸ್ಟೋರೇಜ್ ಮಾದರಿಯ ಐಫೋನ್ 14 ಅನ್ನು ನೀವು ಕೇವಲ 49,999ರೂ.ಗಳಿಗೆ ಖರೀದಿಸಬಹುದಾಗಿದೆ. ಇದರಲ್ಲಿ ಫ್ಲಿಪ್‌ಕಾರ್ಟ್ ಹೆಚ್ಚುವರಿ ಬ್ಯಾಂಕ್ ಆಫರ್ ಕೂಡ ಒಳಗೊಂಡಿದೆ. ಇದಲ್ಲದೆ SBI ಕ್ರೆಡಿಟ್ ಕಾರ್ಡ್ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸುವ ಗ್ರಾಹಕರಿಗೆ 4,000ರೂ ರಿಯಾಯಿತಿ ಕೂಡ ಲಭ್ಯವಾಗಲಿದೆ. ಇದರೊಂದಿಗೆ ಗ್ರಾಹಕರು ಕೇವಲ 19,999ರೂ ಡೌನ್‌ಪೇಮೆಂಟ್ ಮಾಡುವ ಮೂಲಕ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಸಹ ಖರೀದಿಸಬಹುದಾಗಿದೆ.

ಐಫೋನ್ 14 ಫೀಚರ್ಸ್ ಹೇಗಿದೆ?
ಐಫೋನ್ 14 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1200 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದ್ದು, ಡಾಲ್ಬಿ ವಿಷನ್‌ಗೆ ಬೆಂಬಲವನ್ನು ಹೊಂದಿದೆ. ಇನ್ನು ಈ ಐಫೋನ್ A15 ಬಯೋನಿಕ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.
ಇನ್ನು ಐಫೋನ್ 14 ಫ್ಲಾಟ್-ಎಡ್ಜ್ ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್ ಅನ್ನು ಸಹ ಪಡೆಯುತ್ತದೆ. ಇದಲ್ಲದೆ ಮುಂಭಾಗದ ಪ್ಯಾನೆಲ್‌ನಲ್ಲಿ ಸೆರಾಮಿಕ್ ಶೀಲ್ಡ್ ವಸ್ತು ಮತ್ತು IP68 ಧೂಳು ಮತ್ತು ನೀರಿನ ಪ್ರತಿರೋಧದ ರೇಟಿಂಗ್ ಅನ್ನು ಹೊಂದಿದೆ.

ಇನ್ನು ಈ ಸರಣಿಯಲ್ಲಿ ಐಫೋನ್ 14 ಪ್ಲಸ್ ಅನ್ನು ಸಹ ಪರಿಚಯಿಸಲಾಗಿತ್ತು. ಇದರ ಫೀಚರ್ಸ್‌ಗಳನ್ನು ನೋಡುವುದಾದರೆ ಐಫೋನ್ 14 ಪ್ಲಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್ ಸಪೋರ್ಟ್ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದು ಐಫೋನ್ 14 ಪ್ಲಸ್ ಫೋನ್ ಸಹ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್ ಪಡೆದಿದೆ.


Click it and Unblock the Notifications








