ಫ್ಲಿಪ್‌ಕಾರ್ಟ್‌ನಿಂದ ಮತ್ತೊಂದು ಇ ಕಾರ್ಮಸ್ ಲಾಂಚ್; ಇಲ್ಲೇನು ಸಿಗುತ್ತೆ..?
ಭಾರತೀಯ ಇ ಕಾರ್ಮಸ್ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಫ್ಲಿಪ್‌ಕಾರ್ಟ್ ಮತ್ತೊಂದು ಹೊಸ ಮಾದರಿಯಲ್ಲಿ ಇ ಕಾರ್ಮಸ್ ವೆಬ್‌ಸೈಟ್ ಅನ್ನು ಬಳಕೆಗೆ ನೀಡುತ್ತಿದೆ. ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರದಲ್ಲಿ ಹೊಸದಾಗಿ ನವೀಕರಣಗೊಂಡ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಲು 2GUD ವೆಬ್ ಸೈಟಿಗೆ ಚಾಲನೆಯನ್ನು ನೀಡಿದೆ.

ಸದ್ಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಸೇರಿದಂತೆ ಎಲ್ಲಾ ಮಾದರಿಯ ಫಸ್ಟ್ ಹಾಂಡಲ್ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಫ್ಲಿಪ್‌ಕಾರ್ಟ್, ಈ ಬಾರಿ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಮಾರುಕಟ್ಟೆಯಲ್ಲಿ ನವೀಕರಣಗೊಂಡ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರವೇ ಮಾರಾಟ ಮಾಡುವ ಅನೇಕ ವೆಬ್‌ಸೈಟ್‌ಗಳಿದ್ದ, ಇದರ ಮಧ್ಯದಲ್ಲಿ ಎಲ್ಲಾ ಮಾದರಿಯ ನವೀಕರಣಗೊಂಡ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ವೇದಿಕೆಯನ್ನು ನಿರ್ಮಿಸಲು ಮುಂದಾಗಿದೆ.

2GUD ವೆಬ್ ಸೈಟ್:
ಸದ್ಯ ಮಾರುಕಟ್ಟೆಯಲ್ಲಿ ನವೀಕರಣಗೊಂಡ ಸ್ಮಾರ್ಟ್‌ಫೋನ್ ಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಅಲ್ಲದೇ ಬೇಡಿಕೆಯೂ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಫ್ಲಿಪ್‌ಕಾರ್ಟ್ ನವೀಕರಣಗೊಂಡ ಸ್ಮಾರ್ಟ್‌ಫೋನ್ ಸೇರಿದಂತೆ ಎಲ್ಲಾ ಮಾದರಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಲು ವೇದಿಕೆಯನ್ನು 2GUD ವೆಬ್ ಸೈಟ್ ಮೂಲಕ ನಿರ್ಮಿಸಿದೆ.

ಸರ್ಟಿಫೈಡ್ ವಸ್ತು:
2GUD ವೆಬ್ ಸೈಟಿನಲ್ಲಿ ಬಳಕೆದಾರರಿಗೆ ನವೀಕರಣಗೊಂಡ ಸರ್ಟಿಫೈಡ್ ವಸ್ತುಗಳನ್ನು ಮಾತ್ರವೇ ಮಾರಾಟ ಮಾಡಲಿದ್ದು, ಇವುಗಳ ಬೆಲೆಯೂ ಇಲ್ಲಿ ಭಾರೀ ಕಡಿಮೆ ಇರಲಿದೆ. ಇದರಿಂದಾಗಿ ಕಡಿಮೆ ಬೆಲೆಗೆ ಉತ್ತಮ ಫೋನ್ ಬೇಕು ಎನ್ನುವವರಿಗೆ ಇದು ಬೆಸ್ಟ್ ಆಯ್ಕೆ ಎನ್ನಲಾಗಿದೆ.

ಎಲ್ಲಾ ಮಾದರಿಯ ವಸ್ತು:
2GUD ವೆಬ್ ಸೈಟಿನಲ್ಲಿ ಫ್ಲಿಪ್‌ಕಾರ್ಟ್ ಎಲ್ಲಾ ಮಾದರಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಲಿದೆ. ಉದಾಹರಣೆಗೆ ಟಿವಿ, ಫ್ರಿಡ್ಜ್, ಲ್ಯಾಪ್‌ಟಾಪ್, ಮೊಬೈಲ್, ಪವರ್ ಬ್ಯಾಂಕ್ ಸೇರಿದಂತೆ ಎಲ್ಲಾ ಮಾದರಿಯ ನವೀಕರಣಗೊಂಡ ಸರ್ಟಿಫೈಡ್ ವಸ್ತುಗಳನ್ನು ಮಾರಾಟ ಮಾಡಲಿದೆ.

ವರ್ಗಗಳಿದೆ:
ಒಟ್ಟು ಐದು ಮಾದರಿಯಲ್ಲಿ ವಸ್ತುಗಳು ಇಲ್ಲಿ ಮಾರಾಟವಾಗಲಿದೆ.
1. ಹೊಸ ರೀತಿಯಲ್ಲಿಯೇ: ಇದನ್ನು ಬಳಸಿರುವುದಿಲ್ಲ, ಸ್ಕ್ರಾಚ್ ಇರುವುದಿಲ್ಲ ಜೊತೆಗೆ 12 ತಿಂಗಳ ಗ್ಯಾರೆಂಟಿ ಇರುತ್ತದೆ.
2. ಸೂಪರ್ ಆಗಿ ನವೀಕರಿಸಿದ: ಕನಿಷ್ಟ ಸ್ಕ್ರಾಚ್ ಗಳೊಂದಿಗೆ ಕಾಣಿಸಿಕೊಳ್ಳಲಿದ್ದು, ಕಡಿಮೆ ಪ್ರಮಾಣದಲ್ಲಿ ಬಳಸಿರಲಾಗುತ್ತದೆ.
3. ಅತ್ಯತ್ತಮವಾಗಿ ಉತ್ತಮವಾಗಿ ನವೀಕರಿಸಿದ: ಮಧ್ಯಮ ಪ್ರಮಾಣದ ಸ್ಕ್ರಾಚ್‌ಗಳೊಂದಿಗೆ ಮಧ್ಯಮವಾಗಿ ಬಳಸಲಾಗಿರುತ್ತದೆ.
4. ಉತ್ತಮವಾಗಿ ನವೀಕರಿಸಿದ: ಹೆಚ್ಚು ಸ್ಕ್ರಾಚ್‌ಗಳನ್ನು ಹೊಂದಿರುತ್ತದೆ.
5. ನವೀಕರಿಸಲಾದ: ಹೆಚ್ಚು ಪ್ರಮಾಣದ ಗೀರುಗಳನ್ನು ಹೊಂದಿರುವ ವಸ್ತುಗಳು.

ವಿಶೇಷತೆಗಳೇನು..?
ನವೀಕರಣಗೊಂಡ ಸರ್ಟಿಫೈಡ್ ವಸ್ತುಗಳು ಸಾಮಾನ್ಯವಾಗಯೇ ಇರಲಿದೆ. ಇವುಗಳನ್ನು ಕಡಿಮೆ ಬಳಸಲಾಗಿರುತ್ತದೆ ಮತ್ತು ಸಣ್ಣ ಪುಟ್ಟ ಸ್ಕ್ರಾಚ್ ಗಳನ್ನು ಹೊಂದಿರುತ್ತವೆ ಎನ್ಲಾಗಿದೆ. ಆದರೆ ಹೊಸ ವಸ್ತುವಿನ ಮಾದರಿಯಲ್ಲಿಯೇ ಬಾಕ್ಸಿಂಗ್ ಹೊಂದಿರುತ್ತದೆ.


Click it and Unblock the Notifications








