Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಟಿವಿಗಳ ಮೇಲೆ 46% ಡಿಸ್ಕೌಂಟ್‌ ಸಿಗಲಿದೆ!

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಫ್ಲಿಪ್‌ಕಾರ್ಟ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಇದಲ್ಲದೆ ಆನ್‌ಲೈನ್‌ ಶಾಪಿಂಗ್‌ ಮಾಡುವ ಗ್ರಾಹಕರಿಗೆ ಒಂದಿಲ್ಲೊಂದು ವಿಶೇಷ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಸದ್ಯ ಇದೀಗ ಸ್ಮಾರ್ಟ್‌ಟಿವಿ ಖರೀದಿಸಬೇಕೆಂದು ಕೊಂಡವರಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಿಗ್‌ ಆಫರ್‌ ನೀಡಿದೆ. ಸ್ಮಾರ್ಟ್‌ಟಿವಿಗಳ ಮೇಲೆ 46% ತನಕ ಡಿಸ್ಕೌಂಟ್‌ ನೀಡುತ್ತಿದೆ. ಜೊತೆಗೆ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಖರೀದಿಸುವವರಿಗೆ ಅನಿಯಮಿತ ಕ್ಯಾಶ್‌ಬ್ಯಾಕ್‌ ಕೂಡ ದೊರೆಯಲಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಇದು ಒಳ್ಳೆಯ ಸಮಯ. ಮೂಲಬೆಲೆಗಿಂತ 46% ಡಿಸ್ಕೌಂಟ್‌ ಪಡೆದ ಸ್ಮಾರ್ಟ್‌ಟಿವಿಗಳನ್ನು ಖರೀದಿಸಬಹುದಾಗಿದೆ. ಡಿಸ್ಕೌಂಟ್‌ ಪಡೆದ ಸ್ಮಾರ್ಟ್‌ಟಿವಿಗಳಲ್ಲಿ ಎಲ್‌ಜಿ, ರಿಯಲ್‌ಮಿ, ಸ್ಯಾಮ್‌ಸಂಗ್‌ನಂತಹ ಪ್ರಮುಖ ಬ್ಯಾಂಡ್‌ಗಳ ಟಿವಿಗಳು ಸೇರಿವೆ. ಸದ್ಯ ನೀವು ಕೂಡ ಆಫರ್‌ನಲ್ಲಿ ಸ್ಮಾರ್ಟ್‌ಟಿವಿ ಖರೀದಿಸುವುದಾದರೆ ಇದಕ್ಕಿಂತ ಒಳ್ಳೆ ಟೈಂ ಬೇರೊಂದಿಲ್ಲ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ಡಿಸ್ಕೌಂಟ್‌ ಪಡೆದಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Vu ಪ್ರೀಮಿಯಂ ಅಲ್ಟ್ರಾ ಹೆಚ್‌ಡಿ(55 ಇಂಚು) ಸ್ಮಾರ್ಟ್‌ಟಿವಿ

Vu ಪ್ರೀಮಿಯಂ ಅಲ್ಟ್ರಾ ಹೆಚ್‌ಡಿ(55 ಇಂಚು) ಸ್ಮಾರ್ಟ್‌ಟಿವಿ

Vu ಪ್ರೀಮಿಯಂ 55 ಇಂಚಿನ ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 39,999ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 75,000ರೂ. ಆಗಿದ್ದು, 46% ರಿಯಾಯಿತಿ ದೊರೆಯಲಿದೆ. ಇದಲ್ಲದೆ 1999 ರೂ.ಗಳ ಗೂಗಲ್‌ನೆಸ್ಟ್‌ ಮಿನಿಕೂಡ ದೊರೆಯಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 5% ಅನಿಯಮಿತ ಕ್ಯಾಶ್‌ಬ್ಯಾಕ್ ಅನ್ನು ಸಹ ನೀಡಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 55 ಇಂಚಿನ LED ಸ್ಕ್ರೀನ್‌ ಹೊಂದಿದೆ. ಇದು 400 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ.

LG ಅಲ್ಟ್ರಾ ಹೆಚ್‌ಡಿ (43 ಇಂಚು) ಸ್ಮಾರ್ಟ್‌ಟಿವಿ

LG ಅಲ್ಟ್ರಾ ಹೆಚ್‌ಡಿ (43 ಇಂಚು) ಸ್ಮಾರ್ಟ್‌ಟಿವಿ

LG ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 36,999ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲಬೆಲೆ 59,990ರೂ.ಆಗಿದ್ದು 38% ಡಿಸ್ಕೌಂಟ್‌ ಸಿಗಲಿದೆ. ಇದಲ್ಲದೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿ 5% ಅನಿಯಮಿತ ಕ್ಯಾಶ್‌ಬ್ಯಾಕ್ ಜೊತೆಗೆ 500ರೂ. ರಿಯಾಯಿತಿಯನ್ನು ಸಹ ಪಡೆಯಬಹುದು. ಇನ್ನು ಈ ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 43 ಇಂಚಿನ ಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. ಇದು 20W ಸ್ಪೀಕರ್‌ ಔಟ್‌ಪುಟ್‌ ಹೊಂದಿದ್ದು, ಸರೌಂಡ್‌ ಸೌಂಡ್‌ ಬೆಂಬಲಿಸಲಿದೆ.

ಮಿ 5X ಅಲ್ಟ್ರಾ HD (50 ಇಂಚು)

ಮಿ 5X ಅಲ್ಟ್ರಾ HD (50 ಇಂಚು)

ಮಿ 5X ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್‌ಟಿವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ 41,999 ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಟಿವಿ ಮೂಲ ಬೆಲೆ 59,999ರೂ.ಆಗಿದ್ದು, 30% ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ನೀವು ಸಿಟಿ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ ಹೆಚ್ಚುವರಿ 2500ರೂ.ಗಳ ತನಕ ರಿಯಾಯಿತಿ ದೊರೆಯಲಿದೆ. ಇದಲ್ಲದೆ ಸಿಟಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ 2000ರೂ. ರಿಯಾಯಿತಿ ಪಡೆಯಬಹುದು.

ರಿಯಲ್‌ಮಿ ಅಲ್ಟ್ರಾ ಹೆಚ್‌ಡಿ (43 ಇಂಚು)

ರಿಯಲ್‌ಮಿ ಅಲ್ಟ್ರಾ ಹೆಚ್‌ಡಿ (43 ಇಂಚು)

43 ಇಂಚಿನ ರಿಯಲ್‌ಮಿ ಅಲ್ಟ್ರಾ ಹೆಚ್‌ಡಿ ಟಿವಿ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 30,999ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ 32,999ರೂ.ಆಗಿದೆ. ಈ ಸ್ಮಾರ್ಟ್‌ಟಿವಿ ಖರೀದಿಸುವಾಗ 100ರೂ. ಮೌಲ್ಯದ ಫ್ಲಿಪ್‌ಕಾರ್ಟ್ ಗಿಫ್ಟ್ ವೋಚರ್‌ ಪಡೆಯಬಹುದು. ಹೆಚ್ಚುವರಿಯಾಗಿ, ತಿಂಗಳಿಗೆ 1060ರೂ. ಗಳಿಂದ ಪ್ರಾರಂಭವಾಗುವ EMI ಆಯ್ಕೆ ಕೂಡ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಟಿವಿ ಡಾಲ್ಬಿ ಅಟ್ಮಾಸ್, ಡಿಟಿಎಸ್, ಕ್ವಾಡ್ ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ ಕ್ರಿಸ್ಟಲ್ 4K ಅಲ್ಟ್ರಾ ಹೆಚ್‌ಡಿ ಟಿವಿ

ಸ್ಯಾಮ್‌ಸಂಗ್‌ ಕ್ರಿಸ್ಟಲ್ 4K ಅಲ್ಟ್ರಾ ಹೆಚ್‌ಡಿ ಟಿವಿ

ಸ್ಯಾಮ್‌ಸಂಗ್‌ ಕ್ರಿಸ್ಟಲ್‌ 4K ಅಲ್ಟ್ರಾ ಹೆಚ್‌ಡಿ ಟಿವಿ 37,990ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲಬೆಲೆ 52,900ರೂ.ಆಗಿದೆ. ಈ ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 43 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಕ್ರಿಸ್ಟಲ್ 4K ಪ್ರೊಸೆಸರ್ ಹೊಂದಿದೆ. ಇದನ್ನು ಖರೀದಿಸಿದರೆ ನೀವು ಫ್ಲಿಪ್‌ಕಾರ್ಟ್ ಪೇ ಲೇಟರ್‌ಗೆ ಸೈನ್ ಅಪ್ ಮಾಡಬಹುದು. ಜೊತೆಗೆ 100 ರೂಪಾಯಿ ಮೌಲ್ಯದ ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್ ಪಡೆಯಬಹುದು.

Best Mobiles in India

English summary
Flipkart offers are being made on a wide range of Smart TVs, and customers are also getting a chance to save thousands of rupees during this time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+