Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ ಮೊಬೈಲ್ ಬೊನಾನ್ಜಾ ಸೇಲ್‌ನಲ್ಲಿ ಬಿಗ್‌ ಡಿಸ್ಕೌಂಟ್‌!

ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆ ಫ್ಲಿಪ್‌ಕಾರ್ಟ್‌ ಗುಡ್‌ ನ್ಯೂಸ್‌ ನೀಡಿದೆ. ಇತ್ತೀಚೆಗಷ್ಟೇ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಮುಗಿಸಿರುವ ಫ್ಲಿಪ್‌ಕಾರ್ಟ್‌ ಇದೀಗ ಮೊಬೈಲ್ ಬೊನಾನ್ಜಾ ಸೇಲ್‌ ಅನ್ನು ಆಯೋಜಿಸುತ್ತಿದೆ. ಈಗಾಗಲೇ ಫ್ಲಿಪ್‌ಕಾರ್ಟ್‌ನ ಅಧಿಕೃತ ಸೈಟ್‌ನಲ್ಲಿ ಸೇಲ್‌ ಲೈವ್ ಆಗಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲಾಗ್ತಿದೆ. ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುವವರಿಗೆ ಇದ್ದು ಉತ್ತಮ ಸಮಯವಾಗಿದೆ. ಈ ಸೇಲ್‌ ಇದೇ ಆಗಸ್ಟ್ 23 ರವರೆಗೆ ಮುಂದುವರಿಯುತ್ತದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಐದು ದಿನಗಳ ಕಾಲ ಮೊಬೈಲ್‌ ಬೊನಾನ್ಜಾ ಸೇಲ್‌ ಅನ್ನು ಆಯೋಜಸಿದೆ. ಇನ್ನು ಫ್ಲಿಪ್‌ಕಾರ್ಟ್ ಸೇಲ್‌ನ ಸಮಯದಲ್ಲಿ ಐಫೋನ್ 12 ಮಿನಿ, ಪೊಕೊ ಎಂ 3 ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಡೀಲ್‌ಗಳು ಮತ್ತು ಆಫರ್‌ಗಳನ್ನು ನೀಡುತ್ತಿದೆ. ಅಷ್ಟೇ ಅಲ್ಲದೆ ಬ್ಯಾಂಕ್ ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳು ಕೂಡ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ ಪ್ರಿಯರಿಗಾಗಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮೊಬೈಲ್‌ ಬೊನಾನ್ಜಾ ಸೇಲ್‌ ಹೊರತಂದಿದೆ. ಇಂದಿನಿಂದ ಶುರುವಾಗಿರುವ ಈ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್‌ ಹೆಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಸಹಭಾಗಿತ್ವ ಹೊಂದಿದ್ದು ಆಯ್ದ ಫೋನ್‌ಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ನೀಡುತ್ತದೆ. ಫ್ಲಿಪ್‌ಕಾರ್ಟ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಜನಪ್ರಿಯ ಫೋನ್‌ಗಳಲ್ಲಿ ನೋ ಕಾಸ್ಟ್‌ ಇಎಂಐ ಆಯ್ಕೆಗಳನ್ನು ಮತ್ತು ವಿನಿಮಯ ಕೊಡುಗೆಗಳನ್ನು ಸಹ ನೀಡುತ್ತದೆ.

ಸ್ಮಾರ್ಟ್‌ಫೋನ್‌

ನೀವು 10,000ರೂ. ಗಿಂತ ಕಡಿಮೆ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ, ನೀವು ಇನ್ಫಿನಿಕ್ಸ್ ಹಾಟ್ 10 ಪ್ಲೇ ಅನ್ನು 7,999ರೂ.ಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ 13MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದಲ್ಲದೆ 8MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಮೀಡಿಯಾ ಟೆಕ್ ಹೆಲಿಯೋ G35 ಚಿಪ್‌ಸೆಟ್ ಅನ್ನು ಹೊಂದಿದೆ, ಹಾಗೆಯೇ 3GB RAM + 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ 6,000mAh ಬ್ಯಾಟರಿಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೇಲೆ 7,450ರೂ ವರೆಗಿನ ಎಕ್ಸ್ಚೇಂಜ್ ಆಫರ್ ಕೂಡ ಇದೆ, ಇದು ಡೀಲ್ ಅನ್ನು ಸ್ವೆಟರ್ ಮಾಡುತ್ತದೆ.

ಮೊಬೈಲ್

ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾನ್ಜಾ ಸೇಲ್‌ ಟೈಂ ನಲ್ಲಿ, ಐಫೋನ್ 12 ಮಿನಿ 59,999ರೂ, ಗಳಿಗೆ ಖರೀದಿಸಬಹುದು. ಇದನ್ನು ಮೂಲತಃ ಭಾರತದಲ್ಲಿ 69,900ರೂ,ಗೆ ಬಿಡುಗಡೆ ಮಾಡಲಾಯಿತು. ಅಗ್ಗದ ಐಫೋನ್ ಹುಡುಕುತ್ತಿರುವವರು ಐಫೋನ್ ಎಸ್‌ಇ (2020) ಖರೀದಿಸಬಹುದು. ಏಕೆಂದರೆ ಇದು ರಿಯಾಯಿತಿ ದರದಲ್ಲಿ 34,999 ರೂ.ಗೆ ಲಭ್ಯವಾಗಲಿದೆ. ಇದೇ ಡಿವೈಸ್‌ ಈ ಹಿಂದೆ 39,900ರೂ,ಗೆ ಲಭ್ಯವಿತ್ತು.

ಐಫೋನ್

ಇನ್ನು ಸುಮಾರು 50,000ರೂ, ಬೆಲೆಯಲ್ಲಿ ಖರೀದಿಸುವವರು ಐಫೋನ್ 11 ಅನ್ನು ಪರಿಗಣಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ 48,999 ರೂ,ಗೆ ಪಟ್ಟಿ ಮಾಡಲಾಗಿದೆ. ಈ ಐಫೋನ್ XR ಸಹ ಮಾರಾಟದಲ್ಲಿದೆ. ಇದರ ಬೆಲೆ 41,999 ರೂ.ಆಗಿದೆ. ಇದಲ್ಲದೆ ರಿಯಲ್‌ಮಿ ಎಕ್ಸ್ 7 ಮ್ಯಾಕ್ಸ್ 5ಜಿ ಕೂಡ 24,999ರೂ, ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 1,200 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ Poco M3 ಸ್ಮಾರ್ಟ್‌ಫೋನ್‌ನಲ್ಲಿ 500 ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ, ಆದ್ದರಿಂದ ನೀವು ಅದನ್ನು 10,499 ರೂಗಳಿಗೆ ಪಡೆಯಬಹುದು.

Best Mobiles in India

English summary
During the five-day Flipkart sale, the e-commerce giant is offering deals and offers on popular smartphones.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+