ಫ್ಲಿಪ್‌ಕಾರ್ಟ್ 'ಮಂತ್ ಎಂಡ್ ಸೇಲ್' ಆರಂಭ!..ಮೊಬೈಲ್ ಖರೀದಿಗೆ ಬೆಸ್ಟ್ ಟೈಮ್!

|

ಪ್ರತಿ ತಿಂಗಳು ಏನೇನಾದರೂ ಆಫರ್ ಅನ್ನು ಪ್ರಕಟಿಸುವ ಫ್ಲಿಪ್‌ಕಾರ್ಟ್ ಈ ಬಾರಿ ಮಂತ್ ಎಂಡ್ ಮೊಬೈಲ್ ಫೆಸ್ಟ್ ಮೂಲಕ ಆಫರ್ ಸೇಲ್ ನಡೆಸುತ್ತಿದೆ. ಇದೇ 27 ನೇ ತಾರೀಖಿನಿಂದ ಆರಂಭವಾಗಿರುವ ಈ ಸೇಲ್‌ನಲ್ಲಿ ಮೊಬೈಲ್ ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್ ವಿಶೇಷ ದರಕಡಿತ ಆಫರ್ ಪ್ರಕಟಿಸಿದ್ದು, ಹೈ ಎಂಡ್ ಫೋನ್‌ಗಳ ಖರೀದಿಗೆ ಈ ಸೇಲ್ ಅತ್ಯುತ್ತಮವಾಗಿದೆ.

ಆಪಲ್ ಐಫೋನ್ ಎಕ್ಸ್, ನೋಕಿಯಾ 5.1 ಪ್ಲಸ್, ನೋಕಿಯಾ 6.1 ಪ್ಲಸ್, ಸ್ಯಾಮ್‌ಸಂಗ್ ಗ್ಯಾಲಕ್ಸಿ A20, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 ಸಹಿತ ಎಲ್ಲ ಪ್ರೀಮಿಯಂ ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‌ಕಾರ್ಟ್ ವಿಶೇಷ ಆಫರ್ ಘೋಷಿಸಿದೆ. ಜೊತೆಗೆ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ ಶೇ. 5 ಕ್ಯಾಶ್‌ಬ್ಯಾಕ್ ಆಫರ್ ಸಹ ದೊರೆಯುತ್ತಿದೆ.

ಫ್ಲಿಪ್‌ಕಾರ್ಟ್ 'ಮಂತ್ ಎಂಡ್ ಸೇಲ್' ಆರಂಭ!..ಮೊಬೈಲ್ ಖರೀದಿಗೆ ಬೆಸ್ಟ್ ಟೈಮ್!

ಈ ಮಂತ್ ಎಂಡ್ ಮೊಬೈಲ್ ಫೆಸ್ಟ್ ಮಾರಾಟದಲ್ಲೂ ಕುಡ ಆಪಲ್ ಐಫೋನ್ ಎಕ್ಸ್ (64 ಜಿಬಿ) ರೂ. 66,499 ಗಳಿಗೆ (ಎಂಆರ್‌ಪಿ ರೂ.91,900) ದೊರೆಯುತ್ತಿದೆ. ಬಿಗ್ ಶಾಪಿಂಗ್ ಡೇಸ್ ಮಾರಾಟದ ಸಂದರ್ಭದಲ್ಲಿ ನೀವು ಈ ಐಫೋನ್ ಎಕ್ಸ್ ಆಫರ್ ಅನ್ನು ತಪ್ಪಿಸಿಕೊಂಡರೆ, ರಿಯಾಯಿತಿ ದರದಲ್ಲಿ ಐಫೋನ್ ಎಕ್ಸ್ ಅನ್ನು ಪಡೆದುಕೊಳ್ಳಲು ಇನ್ನೊಂದು ಅವಕಾಶ ಇದಾಗಿದೆ.

ಇನ್ನು ನೋಕಿಯಾ 5.1 ಪ್ಲಸ್ (3 ಜಿಬಿ, 32 ಜಿಬಿ) ಪ್ರಸ್ತುತ ರೂ. 8,199 (ಎಂಆರ್‌ಪಿ ರೂ 13,199) ಮತ್ತು ಹಾನರ್ 9ಎನ್ ರೂ. 8,499 (ಎಂಆರ್‌ಪಿ ರೂ 13,999). ಹಾನರ್ 10 ಲೈಟ್ (4 ಜಿಬಿ, 64 ಜಿಬಿ) ರೂ. 11,999 (ಎಂಆರ್‌ಪಿ ರೂ 16,999). ಹಾಗೂ ನೋಕಿಯಾ 6.1 (3 ಜಿಬಿ, 32 ಜಿಬಿ) ರೂ. 6,999 (ಎಂಆರ್‌ಪಿ ರೂ 17,979) ದರಗಳಲ್ಲಿ ಈ ಸೇಲ್‌ನಲ್ಲಿ ಲಭ್ಯವಿವೆ.

ಫ್ಲಿಪ್‌ಕಾರ್ಟ್ 'ಮಂತ್ ಎಂಡ್ ಸೇಲ್' ಆರಂಭ!..ಮೊಬೈಲ್ ಖರೀದಿಗೆ ಬೆಸ್ಟ್ ಟೈಮ್!

ಎಕ್ಸಿಸ್ ಬ್ಯಾಂಕ್ ಗ್ರಾಹಕರ ಜತೆಗೆ ಎಚ್‌ಡಿಎಫ್‌ಸಿ ಮತ್ತು ಬಜಾಬ್‌ ಫಿನ್‌ಸರ್ವ್ ಕಾರ್ಡ್‌ ಬಳಸಿದರೆ, ನೋ ಕಾಸ್ಟ್ ಇಎಂಐ ಕೂಡ ದೊರೆಯುತ್ತದೆ. ಉಳಿದಂತೆ ಎಕ್ಸ್‌ಚೇಂಜ್ ಬೋನಸ್ ಕೊಡುಗೆ, ಮೊಬೈಲ್ ಪ್ರೊಟೆಕ್ಷನ್ ಪ್ಲ್ಯಾನ್ ಕೂಡ ಲಭ್ಯವಾಗುತ್ತಿದೆ. ಮೇ 31 ಶುಕ್ರವಾರದವರೆಗೆ ಸೇಲ್ ನಡೆಯಲಿದ್ದು, ನೀವು ಸ್ಮಾರ್ಟ್‌ಫೋನ್ ಖರೀದಿಸಲು ಇದು ಬೆಸ್ಟ್ ಸೇಲ್ ಎನ್ನಬಹುದು.

ಓದಿರಿ: ಯೂರೋಪ್‌ನಲ್ಲಿ ಪವಾಡವನ್ನೇ ಮಾಡಿದ ಒಂದು ಚೆಡ್ಡಿಯ ಕಥೆ ಓದಿ!

Best Mobiles in India

English summary
Flipkart is running another sale on mobile phones this week. The sale, titled Month-End Mobiles Fest, will run till May 31. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X