ಹಳೆ ಸ್ಮಾರ್ಟ್‌ಫೋನ್ ಸೇಲ್ ಮಾಡೋರಿಗೆ ಫ್ಲಿಪ್‌ಕಾರ್ಟ್‌ನಿಂದ ಗುಡ್ ನ್ಯೂಸ್!
ಹಳೆಯ ಸ್ಮಾರ್ಟ್‌ಫೋನ್ ಸೇಲ್ ಮಾಡಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದುಕೊಂಡವರಿಗೆ ಫ್ಲಿಪ್‌ಕಾರ್ಟ್ ಗುಡ್ ನ್ಯೂಸ್ ನೀಡಿದೆ. ಹಳೆಯ ಸ್ಮಾರ್ಟ್‌ಫೋನ್ ಸೇಲ್ ಮಾಡುವುದಕ್ಕಾಗಿಯೇ ಫ್ಲಿಪ್‌ಕಾರ್ಟ್ ಹೊಸ 'ಸೆಲ್ ಬ್ಯಾಕ್' ಪ್ರೋಗ್ರಾಂ ಅನ್ನು ಪರಿಚಯಿಸಿದೆ. ಇದರಿಂದ ಬಳಸಿದ ಸ್ಮಾರ್ಟ್‌ಫೋನ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಗ್ರಾಹಕರಿಗೆ ಫ್ಲಿಪ್‌ಕಾರ್ಟ್ ಅವಕಾಶ ನೀಡಲಿದೆ. ಅಲ್ಲದೆ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಗಿಫ್ಟ್ ವೋಚರ್ ರೂಪದಲ್ಲಿ ಬೈಬ್ಯಾಕ್ ಪ್ರೈಸ್ ಅನ್ನು ಸಹ ನೀಡಲಿದೆ.

ಹೌದು, ಹಳೆಯ ಫೋನ್ ಸೇಲ್ ಮಾಡಲು ಬಯಸುವವರಿಗೆ ಫ್ಲಿಪ್‌ಕಾರ್ಟ್ ಹೊಸ ಪ್ರೋಗ್ರಾಂ ಪರಿಚಯಿಸಿದೆ. ಫ್ಲಿಪ್‌ಕಾರ್ಟ್‌ನ ಸೆಲ್ ಬ್ಯಾಕ್ ಪ್ರೋಗ್ರಾಂ ನಲ್ಲಿ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಸೇಲ್ ಮಾಡುವುದಕ್ಕೆ ಉತ್ತಮ ಅವಕಾಶ ನೀಡಲಿದೆ. ಸದ್ಯ ಈ ಪ್ರೋಗ್ರಾಂ ಇದೀಗ ದೆಹಲಿ, ಕೋಲ್ಕತ್ತಾ ಮತ್ತು ಪಾಟ್ನಾದಂತಹ ನಗರಗಳಲ್ಲಿ 1,700 ಪಿನ್ ಕೋಡ್‌ಗಳಲ್ಲಿ ಲೈವ್ ಆಗಿದೆ. ಈ ಪ್ರೋಗ್ರಾಂ ಎಲ್ಲಾ ಮೊಬೈಲ್ ಫೋನ್‌ಗಳಿಗೆ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ನ ಸೆಲ್ ಬ್ಯಾಕ್ ಪ್ರೋಗ್ರಾಂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಲಿಪ್‌ಕಾರ್ಟ್‌ನ ಸೆಲ್ ಬ್ಯಾಕ್ ಪ್ರೋಗ್ರಾಂನಲ್ಲಿ ನೀವು ಈಗಾಗಲೇ ಬಳಸಿದ ಸ್ಮಾರ್ಟ್‌ಫೋನ್‌ಗಳನ್ನು ಸೇಲ್ ಮಾಡಬಹುದಾಗಿದೆ. ಇದರಿಂದ ನೀವು ಹಳೆ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ಬೇರೆ ಕಡೆ ಹುಡುಕಾಡುವ ಅವಶ್ಯಕತೆಯಿದೆ. ಈ ಪ್ರೋಗ್ರಾಂ ದೆಹಲಿ, ಕೋಲ್ಕತ್ತಾ ಮತ್ತು ಪಾಟ್ನಾ ಸೇರಿದಂತೆ ಅನೇಕ ನಗರಗಳಲ್ಲಿ ಲೈವ್ ಆಗಿದೆ. ಸದ್ಯ ಪ್ರತಿ ವರ್ಷ ಸರಿಸುಮಾರು 125 ಮಿಲಿಯನ್ ಬಳಸಿದ ಫೋನ್‌ಗಳು ಭಾರತದಲ್ಲಿ ಲಭ್ಯವಿದ್ದು, ಅದರಲ್ಲಿ 20 ಮಿಲಿಯನ್ ಮಾತ್ರ ಮಾರುಕಟ್ಟೆಯನ್ನು ತಲುಪುತ್ತವೆ ಎಂದು IDC ವರದಿ ಬಹಿರಂಗಪಡಿಸುತ್ತದೆ. ಇದು ಇ-ವೆಸ್ಟ್ ಆಗಿ ಪರಿಣಮಿಸಲಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಫ್ಲಿಪ್‌ಕಾರ್ಟ್ ಹೊಸ ಹೆಜ್ಜೆ ಇಟ್ಟಿದೆ

ಫ್ಲಿಪ್‌ಕಾರ್ಟ್ ತನ್ನ ಬಳಕೆದಾರರಿಗೆ ಈ ಡಿವೈಸ್‌ಗಳನ್ನು ಮಾರಾಟ ಮಾಡಲು ಮತ್ತು ಗಳಿಕೆಯೊಂದಿಗೆ ಯಾವುದೇ ಇತರ ಉತ್ಪನ್ನವನ್ನು ಖರೀದಿಸಲು ಅನುಮತಿಸುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಪ್ರೋಗ್ರಾಂ ಲೈವ್ ಆಗಿದ್ದು, ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಅಪ್ಲಿಕೇಶನ್‌ನಲ್ಲಿ ಸೇಲ್ ಬ್ಯಾಕ್ ಪ್ರೋಗ್ರಾಂ ಬಳಸುವ ಮೂಲಕ ನಿಮ್ಮ ಬಳಿ ಇರುವ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಬಹುದು. ನಿಮ್ಮ ಮೊಬೈಲ್‌ಗೆ ತಕ್ಕ ಬೆಲೆಯನ್ನು ಫ್ಲಿಪ್‌ಕಾರ್ಟ್ ನೀಡಲಿದೆ. ಇದನ್ನು ಫ್ಲಿಪ್‌ಕಾರ್ಟ್ ಗಿಫ್ಟ್ ವೋಚರ್ ರೂಪದಲ್ಲಿ ನೀಡಲಿದೆ.

ಇನ್ನು ಈ ಸೇವೆಯನ್ನು ಬಳಸಲು, ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್ ಅನ್ನು ತೆರೆಯಬೇಕಾಗುತ್ತದೆ. ನಂತರ ಅಪ್ಲಿಕೇಶನ್ ಸ್ಕ್ರೀನ್ ಕೆಳಗಿನ ಬಾರ್‌ನಲ್ಲಿ ಇರಿಸಲಾದ "ಸೆಲ್ ಬ್ಯಾಕ್" ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಇದರಲ್ಲಿ ಮೂರು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಗ್ರಾಹಕರು ಸಂಬಂಧಪಟ್ಟ ಫೋನ್‌ನ ಸಂಪೂರ್ಣ ಮೌಲ್ಯವನ್ನು ಪಡೆಯಬಹುದಾಗಿದೆ. ಇದಾದ ಮೇಲೆ 48 ಗಂಟೆಗಳ ಒಳಗೆ ನಿಮ್ಮ ಹಳೆಯ ಹ್ಯಾಂಡ್‌ಸೆಟ್ ಅನ್ನು ತೆಗೆದುಕೊಳ್ಳಲು ಫ್ಲಿಪ್‌ಕಾರ್ಟ್ ಕಾರ್ಯನಿರ್ವಾಹಕರನ್ನು ನಿಯೋಜಿಸುತ್ತದೆ. ಒಮ್ಮೆ ಪರಿಶೀಲನೆ ಮುಗಿದ ನಂತರ, ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ ಗಿಫ್ಟ್ ವೋಚರ್ ಅನ್ನು ಕೆಲವೇ ಗಂಟೆಗಳಲ್ಲಿ ಖರೀದಿದಾರರಿಗೆ ನೀಡಲಿದೆ. ಈ ಗಿಫ್ಟ್ ವೋಚರ್ ಮೂಲಕ ಫ್ಲಿಪ್‌ಕಾರ್ಟ್‌ನಲ್ಲಿ ನೀವು ಶಾಪಿಂಗ್ ಮಾಡಬಹುದಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದಾಗಿ ಇ ವೇಸ್ಟ್ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹೆಚ್ಚಿನ ಜನರು ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಹಳೆ ಸ್ಮಾರ್ಟ್‌ಫೋನ್ ಅನ್ನು ಮೂಲೆಗೆಸೆಯುತ್ತಾರೆ. ಈ ಡಿವೈಸ್‌ಗಳು ಉಪಯೋಗಕ್ಕೆ ಬಾರದೇ ಮೂಲೆಯಲ್ಲಿ ವೇಸ್ಟ್ ಆಗುತ್ತವೆ. ಹೀಗೆ ವ್ಯರ್ಥವಾಗುವ ಡಿವೈಸ್‌ಗಳನ್ನು ಸೇಲ್ ಬ್ಯಾಕ್ ಮೂಲಕ ಖರೀದಿಸಿ ಇ-ವೇಸ್ಟ್ ಪ್ರಮಾಣ ತಪ್ಪಿಸಲು ಫ್ಲಿಪ್‌ಕಾರ್ಟ್ ಮುಂದಾಗಿದೆ. ಇದರಿಂದ ಹಳೆಯ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಬೇಕು ಎಂದುಕೊಂಡವರು ಸುಲಭವಾಗಿ ಮಾರಾಟಮಾಡಬಹುದು.


Click it and Unblock the Notifications








