2000 ಕೋಟಿಗೆ ಮಿಂತ್ರ ಇನ್ನು ಫ್ಲಿಪ್‌ಕಾರ್ಟಿಗೆ
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಈಗ ಒಂದು ಟ್ರೆಂಡ್ ಆಗಿ ಬದಲಾಗಿದೆ. ಶೋರೂಮ್‌ಗಳಲ್ಲಿ ಹೋಗಿ ಖರೀದಿಸುವುದಕ್ಕಿಂತ ಆನ್‌ಲೈನ್ ಖರೀದಿಸುವಿಕೆಯು ಕೆಲವೊಂದು ರಿಯಾಯಿತಿಗಳನ್ನು ಒಳಗೊಂಡಿರುತ್ತದೆ ಮತ್ತು ಮನೆಗೆ ವಿತರಿಸುವ ಸೌಲಭ್ಯ ಕೂಡ ಇದರಲ್ಲಿರುತ್ತದೆ.
ನೀವು ಯಾವುದೇ ವಸ್ತುವನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು ನಿಮಗೆ ಖರೀದಿಯ ಉತ್ತಮ ಮೌಲ್ಯವನ್ನು ಒದಗಿಸುತ್ತದೆ. ನಿಮ್ಮ ಆಯ್ಕೆಯ ಯಾವುದೇ ಉತ್ಪನ್ನವನ್ನು ನೀವು ಖರೀದಿಸುವಾಗ ಉತ್ಪನ್ನದ ವೈಶಿಷ್ಟ್ಯ, ಗುಣಮಟ್ಟ, ನಿಮ್ಮ ಆಯ್ಕೆ ಇಲ್ಲಿ ಮುಖ್ಯವಾಗಿರುತ್ತದೆ.

ಆನ್‌ಲೈನ್ ಫ್ಯಾಶನ್ ಸ್ಟೋರ್ ಆದ ಮಿಂತ್ರಾ ಗುರುವಾರ ಫ್ಲಿಪ್‌ಕಾರ್ಟ್‌ನೊಂದಿಗೆ ಬೆರೆಯಲಿದೆ. ಮಿಂತ್ರವನ್ನು 2000 ಕೋಟಿಗೆ ಖರೀದಿಸಿರುವ ಫ್ಲಿಪ್‌ಕಾರ್ಟ್ ಇನ್ನು ಮಿಂತ್ರಾದ ಎಲ್ಲಾ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ.
ಕಂಪೆನಿಯ ನಡುವಿನ ಈ ವಿಭಜನೆಯು ಕೆಲವೊಂದು ತಿಂಗಳಿನಿಂದ ಕಾರ್ಯರೂಪದಲ್ಲಿದ್ದು ಈಗ ಸಮಾಪ್ತಿಗೆ ಬಂದಿದೆ. ಫ್ಲಿಪ್‌ಕಾರ್ಟ್ ಮಿಂತ್ರಾದೊಂದಿಗಿನ ಈ ಒಪ್ಪಂದವನ್ನು ಈಗ ಕೊನೆಯ ಹಂತಕ್ಕೆ ತಂದಿದ್ದು ಮುಖ್ಯವಾದ ಎಲ್ಲಾ ಒಪ್ಪಂದವನ್ನು ಮಾಡಿಕೊಂಡಿದೆ. ಫ್ಲಿಪ್ ಕಾರ್ಟ್ ಇನ್ನು ಮುಂದೆ ಮಿಂತ್ರಾದ ಎಲ್ಲಾ ನಿರ್ಧಾರಗಳನ್ನು ತಾನೇ ಸ್ವಯಂ ಆಗಿ ತೆಗೆದುಕೊಳ್ಳಲಿದ್ದು ಇವೆರಡೂ ಆನ್‌ಲೈನ್ ತಾಣಗಳು ಇನ್ನು ಮುಂದೆ ಜೊತೆಯಾಗಿ ಕಾರ್ಯನಿರ್ವಹಿಸಲಿವೆ.


Click it and Unblock the Notifications








