Home
ಸುದ್ದಿಜಾಲ

Flipkart ರಿಪಬ್ಲಿಕ್ ಡೇ ಸೇಲ್ 2026: ಸ್ಮಾರ್ಟ್‌ಫೋನ್‌ಗಳಿಗೆ ಬಂಪರ್ ರಿಯಾಯಿತಿ!

ಗಣರಾಜ್ಯೋತ್ಸವದ ಸಂಭ್ರಮದ ಭಾಗವಾಗಿ ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ತನ್ನ 'ರಿಪಬ್ಲಿಕ್ ಡೇ ಸೇಲ್ 2026' ಸೇಲ್ ಅನ್ನು ಪ್ರಕಟಿಸಿದೆ. ಇದೇ ಜನವರಿ 17ರಿಂದ ಜನವರಿ 26ರ ತನಕ ಈ ಈ ವಿಶೇಷ ಮಾರಾಟವನ್ನು ಆಯೋಜಿಸಲಾಗಿದ್ದು, ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಗೃಹೋಪಯೋಗಿ ಸಾಧನಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಾಗಲಿವೆ. ಈ ಲೇಖನದಲ್ಲಿ ಫ್ಲಿಪ್‌ಕಾರ್ಟ್ ಬಹಿರಂಗಪಡಿಸಿರುವ ಆಪಲ್, ಮೊಟೊರೊಲಾ, ರಿಯಲ್‌ಮಿ ಮತ್ತು ವಿವೊದ ಸ್ಮಾರ್ಟ್‌ಫೋನ್‌ಗಳ ಮೇಲಿನ ಕೊಡುಗೆಗಳನ್ನು ನಾವು ಪಟ್ಟಿ ಮಾಡಿದ್ದೇವೆ.

ಈ ಸೇಲ್‌ನ ಪ್ರಮುಖ ಡೀಲ್‌ಗಳಲ್ಲಿ, ಜನಪ್ರಿಯ ಐಫೋನ್ 16 ಸ್ಮಾರ್ಟ್‌ಫೋನ್‌ ಅನ್ನು ರೂ. 69,999 ಬದಲು ರೂ. 56,999ಕ್ಕೆ ಪಡೆಯಬಹುದು. ಅದೇ ರೀತಿ, ಮೋಟೋರೋಲಾ ಬಳಕೆದಾರರಿಗೆ ಜನಪ್ರಿಯವಾಗಿರುವ Motorola Edge 60 Fusion ಫೋನ್‌ನ್ನು ರೂ. 19,999 ದರದಲ್ಲಿ ಖರೀದಿಸಲು ಅವಕಾಶ ದೊರೆಯಲಿದೆ. ವೀವೋ ಬ್ರಾಂಡ್‌ ಅಭಿಮಾನಿಗಳಿಗೂ ಸಹ ಈ ಸೇಲ್ ವಿಶೇಷ ಆಕರ್ಷಣೆಯಾಗಲಿದ್ದು, Vivo T4x 5G ಅನ್ನು ರೂ. 14,249ಕ್ಕೆ ನೀಡಲಾಗುತ್ತಿದೆ. T4 ಸರಣಿಯ ಇತರೆ ಮಾದರಿಗಳಾದ Vivo T4 Lite 5G, Vivo T4 5G ಮತ್ತು Vivo T4R 5G ಕೂಡ ಕಡಿತ ದರದಲ್ಲಿ ಲಭ್ಯವಾಗಲಿವೆ.

Flipkart ರಿಪಬ್ಲಿಕ್ ಡೇ ಸೇಲ್ 2026: ಸ್ಮಾರ್ಟ್‌ಫೋನ್‌ಗಳಿಗೆ ಬಂಪರ್ ರಿಯಾಯಿತಿ!

ಇತ್ತೀಚಿಗೆ ಬಿಡುಗಡೆಯಾಗದ ಗೂಗಲ್ ಪಿಕ್ಸೆಲ್ 10 ಪಟ್ಟಿ ಮಾಡಲಾದ ಬೆಲೆ ರೂ. 74,999 ಬದಲಿಗೆ ರೂ. 60,999 ಕ್ಕೆ ಲಭ್ಯವಿದ್ದರೆ, ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿರುವ ನಥಿಂಗ್ ಕಂಪನಿಯ Phone 3a Pro ಮತ್ತು CMF Phone 2 Pro ಫೋನ್‌ಗಳು ಕೂಡ ರಿಯಾಯಿತಿ ಬೆಲೆಗೆ ದೊರೆಯುತ್ತಿವೆ. Phone 3a Pro ಮತ್ತು CMF Phone 2 Pro ಫೋನ್‌ಗಳು ಕ್ರಮವಾಗಿ ರೂ. 26,999 ಮತ್ತು ರೂ. 16,499 ಕ್ಕೆ ದೊರೆಯುತ್ತಿವೆ. Phone 3a Pro ಪ್ರಸ್ತುತ ಕಂಪನಿಯ ವೆಬ್‌ಸೈಟ್‌ನಲ್ಲಿ ರೂ. 33,999 ಕ್ಕೆ ಪಟ್ಟಿ ಮಾಡಲಾಗಿದ್ದು, CMF Phone 2 Pro ಫ್ಲಿಪ್‌ಕಾರ್ಟ್‌ನಲ್ಲಿ ರೂ. 18,999 ಕ್ಕೆ ಮಾರಾಟವಾಗುತ್ತದೆ.

ಫ್ಲಿಪ್‌ಕಾರ್ಟ್ ತಿಳಿಸಿರುವಂತೆ, ಈ ಮೇಲೆ ತಿಳಿಸದಲಾದ ಬೆಲೆಗಳಲ್ಲಿ ಬ್ಯಾಂಕ್ ಆಫರ್‌, ಕ್ಯಾಶ್‌ಬ್ಯಾಕ್ ಮತ್ತು ಎಕ್ಸ್‌ಚೇಂಜ್ ಬೋನಸ್‌ಗಳೂ ಸೇರಿವೆ. ಗ್ರಾಹಕರು ರಿಪಬ್ಲಿಕ್ ಡೇ ಸೇಲ್ 2026 ಮಾರಾಟ ಆರಂಭಕ್ಕೂ ಮೊದಲು ತಮ್ಮ ಇಷ್ಟದ ಉತ್ಪನ್ನಗಳನ್ನು ವಿಶ್‌ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು. ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಫ್ಲಿಪ್‌ಕಾರ್ಟ್ ಬ್ಲಾಕ್ ಸದಸ್ಯರಿಗೆ 24 ಗಂಟೆಗಳ ಮುಂಚಿತ ಪ್ರವೇಶ ಸಿಗಲಿದೆ. ಜೊತೆಗೆ, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 10 ಶೇಕಡಾ ತಕ್ಷಣದ ರಿಯಾಯಿತಿ ಕೂಡ ಲಭ್ಯವಿದೆ. ಅಂದರೆ, ಈ ಹೊಸ ದರಗಳು ಸಾಮಾನ್ಯ ದಿನಗಳ ಬೆಲೆಗಿಂತ ಸ್ಪಷ್ಟವಾದ ಉಳಿತಾಯವನ್ನು ನೀಡುತ್ತವೆ.

ಒಟ್ಟಾರೆಯಾಗಿ, ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2026 ಹೊಸ ವರ್ಷದಲ್ಲಿ ಸ್ಮಾರ್ಟ್‌ಫೋನ್ ಅಥವಾ ಎಲೆಕ್ಟ್ರಾನಿಕ್ಸ್ ಅಪ್‌ಗ್ರೇಡ್ ಮಾಡಲು ಯೋಚಿಸುತ್ತಿರುವವರಿಗೆ ಒಂದು ಉತ್ತಮ ಅವಕಾಶವಾಗಿದೆ. ಈ ಸೇಲ್‌ನಲ್ಲಿ ಗ್ರಾಹಕರು ಆಪಲ್‌, ಮೋಟೋರೋಲಾ, ವೀವೋ, ನಥಿಂಗ್ ಹಾಗೂ ಗೂಗಲ್‌ ಸೇರಿದಂತೆ ಪ್ರಮುಖ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸುವ ಅವಕಾಶ ಪಡೆಯುತ್ತಾರೆ. ಫ್ಲಿಪ್‌ಕಾರ್ಟ್ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಪ್ರೀಮಿಯಂ ಮತ್ತು ಮಿಡ್‌ರೇಂಜ್ ಎರಡೂ ವಿಭಾಗದ ಫೋನ್‌ಗಳ ಮೇಲೂ ಆಕರ್ಷಕ ಆಫರ್‌ಗಳು ಲಭ್ಯವಿವೆ. ಹಾಗಾಗಿ, ಈ ಸೇಲ್‌ನಲ್ಲಿ ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀವು ಹುಡುಕಬಹುದು.

Best Mobiles in India

English summary
Flipkart Republic Day Sale 2026 runs from January 17 to January 26, offering huge discounts on smartphones and electronics. Popular phones like iPhone 16, Motorola Edge 60 Fusion, and Vivo T4 series are available at significantly reduced prices with attractive bank offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+