ಅಕ್ಟೋಬರ್ 16 ಕ್ಕೆ ಶುರುವಾಗಲಿದೆ ಫ್ಲಿಪ್‌ಕಾರ್ಟ್ “ಬಿಗ್ ಬಿಲಿಯನ್ ಡೇಸ್” ಮೇಳ!
ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ತನ್ನ "ಬಿಗ್ ಬಿಲಿಯನ್ ಡೇಸ್" ಮೇಳ ನಡೆಯುವ ದಿನಾಂಕವನ್ನು ಪ್ರಕಟಿಸಿದೆ. ಈ ಮೂಲಕ ಆನ್‌ಲೈನ್ ಗ್ರಾಹಕರು ಪ್ರತಿವರ್ಷವೂ ಕುತೂಹಲದಿಂದ ಕಾಯುವಂತಹ, ಹಲವು ಆಫರ್ ಗಳ ಮೂಲಕ ಗ್ರಾಹಕರ ಮನಗೆದ್ದಿರುವ ಫ್ಲಿಪ್ ಕಾರ್ಟ್ "ದಿ ಬಿಗ್ ಬಿಲಿಯನ್ ಡೇಸ್" ಇದೇ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದೆ ಮತ್ತು ಅಕ್ಟೋಬರ್ 21 ರವರೆಗೆ ನಡೆಯಲಿದೆ. ಈ ಮೂಲಕ ಈ ವರ್ಷವೂ ಸಹ ಆನ್‌ಲೈನ್ ಮಾರುಕಟ್ಟೆಯಲ್ಲಿ ಮೂಂಚೂಣಿಯಲ್ಲಿದ್ದಕೊಂಡು ಹೊಸ ಭಾಷ್ಯ ಬರೆಯಲು ಫ್ಲಿಪ್‌ಕಾರ್ಟ್ ಮುಂದಾಗಿದೆ.

ಹೌದು, ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ನಡೆಸುವ "ಬಿಗ್ ಬಿಲಿಯನ್ ಡೇಸ್" ಮೇಳ ಇದೇ ಅಕ್ಟೋಬರ್ 16 ರಿಂದ ಪ್ರಾರಂಭವಾಗೋದು ಪಕ್ಕಾ ಆಗಿದೆ. ಇನ್ನು ಈ ಮೇಳದಲ್ಲಿ ಟಿವಿಗಳು, ಉಪಕರಣಗಳು, ಗೃಹ ಮತ್ತು ಪೀಠೋಪಕರಣಗಳು, ಫ್ಯಾಷನ್ ಸಾಮಾಗ್ರಿಗಳು, ಕ್ರೀಡಾ ವಸ್ತುಗಳು, ಸ್ಮಾರ್ಟ್ ಡಿವೈಸ್ ಗಳು, ಮಾರಾಟವಾಗಲಿವೆ. ಜೊತೆಗೆ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣ ಅದರ ಜೊತೆಗೆ ಆಕ್ಸಸ್ಸೆರಿಗಳನ್ನು ಭಾರೀ ಡಿಸ್ಕೌಂಟ್ಸ್ ದರದಲ್ಲಿ ಮಾರಾಟ ಮಾಡಲಾಗುವುದು. ಇದು ಅಕ್ಟೋಬರ್ 21ರವರೆಗೂ ಹಲವು ಆಫರ್ ಗಳ ಮೂಲಕ ವಿವಿಧ ವಸ್ತುಗಳ ಮಾರಾಟ ಮಾಡಲಾಗುತ್ತದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ಅಕ್ಟೋಬರ್ 16 ರಿಂದ ಆಕ್ಟೋಬರ್ 21 ರವರೆಗೂ ನಡೆಯಲಿರುವ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ಈ ಬಾರಿ ಎಸ್‌ಬಿಐ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ತಮ್ಮ ಖರೀದಿಗಳನ್ನು ಮಾಡುವ ಗ್ರಾಹಕರಿಗೆ 10% ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಇದಲ್ಲದೆ, ಕಂಪನಿಯು ಗ್ರಾಹಕರಿಗೆ ಯಾವುದೇ ವೆಚ್ಚವಿಲ್ಲದ ಇಎಂಐಗಳನ್ನು ಬಜಾಜ್ ಫಿನ್‌ಸರ್ವ್ ಇಎಂಐ ಕಾರ್ಡ್‌ಗಳು ಮತ್ತು ಇತರ ಪ್ರಮುಖ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ನೀಡುತ್ತಿದೆ.

ಇದಲ್ಲದೆ, ಫ್ಲಿಪ್ಕಾರ್ಟ್ ಸಹ Paytm ನೊಂದಿಗೆ ಪಾಲುದಾರಿಕೆ ಹೊಂದಿದ್ದು, Paytm Wallet ಮತ್ತು Paytm UPI ಮೂಲಕ ಪಾವತಿಸುವ ಗ್ರಾಹಕರಿಗೆ ಕ್ಯಾಶ್ಬ್ಯಾಕ್ ನೀಡುತ್ತದೆ. ಇದಲ್ಲದೆ, ಗ್ರಾಹಕರು ತಮ್ಮ ‘ಸೂಪರ್ ನಾಣ್ಯಗಳನ್ನು' ಪ್ಲಾಟ್‌ಫಾರ್ಮ್‌ನಲ್ಲಿ ಶಾಪಿಂಗ್ ಮಾಡುವಾಗ ಹಿಂದೆಂದೂ ಮಾಡದ ವ್ಯವಹಾರಗಳಿಗೆ ‘ರಿವಾರ್ಡ್ಸ್ ಪಾಸ್' ಪಡೆಯಲು ಮತ್ತು ಹೆಚ್ಚುವರಿ ಶಾಪಿಂಗ್‌ಗಾಗಿ 2,000 ಬೋನಸ್ ನಾಣ್ಯಗಳನ್ನು ಬಳಸಿಕೊಳ್ಳಬಹುದಾಗಿದೆ. ಇದಲ್ಲದೆ ಈ ವರ್ಷ, ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ 70,000ಕ್ಕೂ ಹೆಚ್ಚಿನ ಸೇಲ್ ಆಗುವ ಸಾದ್ಯತೆ ಇದೆ.

ಅಲ್ಲದೆ ಫ್ಲಿಪ್ಕಾರ್ಟ್ ಪ್ಲಸ್ ಗ್ರಾಹಕರಿಗೆ ಆಕ್ಟೋಬರ್ 15 ರಿಂದಲೇ 'ದಿ ಬಿಗ್ ಬಿಲಿಯನ್ ಡೇಸ್' ಅವಕಾಶಗಳ ಬಾಗಿಲು ತೆರೆಯಲಿದ್ದು, ಹೆಚ್ಚು ಹೆಚ್ಚು ಆಫರ್‌ಗಳು ದೊರೆಕಲಿದೆ. ಪ್ರತಿನಿತ್ಯ ಯಾವೆಲ್ಲಾ ವಸ್ತುಗಳ ಮಾರಾಟವಾಗುತ್ತದೆ ಎಂಬ ವಿಷಯವನ್ನು ದಿನದಾರಂಭದಲ್ಲಿ ಮಾಹಿತಿ ನೀಡಲಿದೆ. ಈ ಬಾರಿ ಗ್ಯಾಜೆಟ್ಸ್, ಗೃಹೋಪಯೋಗಿ ಸಲಕರಣೆಗಳು ಮತ್ತು ಫ್ಯಾಷನ್ ಉತ್ಪನ್ನಗಳ ಮೇಲೆ ಹೆಚ್ಚು ರಿಯಾಯಿತಿ ಸಿಗುವ ಮುನ್ಸೂಚನೆಯನ್ನು ಫ್ಲಿಪ್‌ಕಾರ್ಟ್ ನೀಡಿರುವುದನ್ನು ಸಹ ನಾವಿಲ್ಲಿ ನೋಡಬಹುದು.

ಈ ವರ್ಷದಲ್ಲಿ ಫ್ಲಿಪ್ ಕಾರ್ಟ್ ತನ್ನ ಪೂರೈಕೆ ಸರಣಿಯನ್ನು ಹೆಚ್ಚಿಸಿದ್ದು, ಗ್ರಾಹಕರು ಮತ್ತು ಮಾರಾಟಗಾರರ ಅಗತ್ಯಗಳನ್ನು ಪೂರೈಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೊಸದಾಗಿ 50,000 ಕಿರಾಣಿ ಅಂಗಡಿಗಳನ್ನು ತನ್ನ ಜಾಲಕ್ಕೆ ಸೇರಿಸಿಕೊಂಡಿದೆ. ಮೇಳದಲ್ಲಿ ವಿವಿಧ ವರ್ಗಗಳಲ್ಲಿ ಮಾರಾಟ ನಡೆಯಲಿದ್ದು, ದಿ ಬಿಗ್ ಬಿಲಿಯನ್ ಡೇಸ್ ಗಾಗಿ ದೇಶದ ಪ್ರಮುಖ ತಾರೆಗಳಾದ ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ, ಆಲಿಯಾ ಭಟ್, ರಣಬೀರ್ ಕಪೂರ್, ಕಿಚ್ಚ ಸುದೀಪ್ ಮತ್ತು ಮಹೇಶ್ ಬಾಬು ಅವರು ಫ್ಲಿಪ್‌ಕಾರ್ಟ್ ಪ್ರಚಾರ ರಾಯಭಾರಿಗಳಾಗಿದ್ದಾರೆ.


Click it and Unblock the Notifications








