Home
ಸುದ್ದಿಜಾಲ

Flipkart Black Friday Sale 2025: ಈ ವಾರಾಂತ್ಯದಿಂದ ಆರಂಭ!

ಭಾರತದಲ್ಲಿ ಆನ್‌ಲೈನ್ ಖರೀದಿ ಪ್ರಿಯರಿಗಾಗಿ ಈ ನವೆಂಬರ್ ಮತ್ತೊಮ್ಮೆ ವಿಶೇಷವಾಗುತ್ತಿದೆ. ಇ-ಕಾಮರ್ಸ್ ದೈತ್ಯ Flipkart ತನ್ನ Black Friday Sale 2025 ಅನ್ನು ಈ ವಾರಾಂತ್ಯದಿಂದ ಪ್ರಾರಂಭಿಸುವುದಾಗಿ ಪ್ರಕಟಿಸಿದ್ದು, 'Bag The Biggest Deals' ಎಂಬ ಟ್ಯಾಗ್‌ಲೈನ್ ಜೊತೆಗೆ ಈ ಸೇಲ್‌ಗಾಗಿ ಟೀಸರ್ ಬಿಡುಗಡೆಗೊಳಿಸಿದೆ. ಜೊತೆಗೆ ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಟಿವಿಗಳು, ಲ್ಯಾಪ್‌ಟಾಪ್‌ಗಳು, ಪಿಸಿಗಳು, ವಾಷಿಂಗ್ ಮೆಷಿನ್‌ಗಳು ಮತ್ತು ರೆಫ್ರಿಜರೇಟರ್‌ಗಳಂತಹ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ದೃಢಪಡಿಸಲಾಗಿದೆ.

Flipkart ದೃಢಪಡಿಸಿದಂತೆ, ದೇಶದಲ್ಲಿ Black Friday Sale 2025 ಸೇಲ್ ಇದೇ ನವಂಬರ್ 23ರಿಂದ ಪ್ರಾರಂಭವಾಗಲಿದೆ. ಈ ಸೇಲ್‌ಗಾಗಿ ವಿಶೇಷ ಮೈಕ್ರೋಸೈಟ್ ಈಗಾಗಲೇ ಲೈವ್ ಆಗಿದ್ದು, ಇದರಲ್ಲಿ ಗ್ರಾಹಕರು ಬಹಳಷ್ಟು ಎಲೆಕ್ಟ್ರಾನಿಕ್ಸ್ ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ಕಡಿಮೆ ಬೆಲೆಗೆ ಪಡೆಯುವ ಅವಕಾಶ ಪಡೆಯಲಿರುವ ಬಗ್ಗೆ ತಿಳಿಸಲಾಗಿದೆ. ಈ ಸೇಲ್‌ನಲ್ಲಿ Samsung, LG ಮುಂತಾದ ಜನಪ್ರಿಯ ಬ್ರ್ಯಾಂಡ್‌ಗಳ ಉತ್ಪನ್ನಗಳಿಗೂ ವಿಶೇಷ ಕಡಿತ ಬೆಲೆ ಲಭ್ಯವಾಗಲಿದೆ. ಮೈಕ್ರೋಸೈಟ್‌ನಲ್ಲಿ ಕಾಣಿಸಿದ Asus Chromebook ಕೂಡ ಈ ಬಾರಿ ರಿಯಾಯಿತಿಯೊಂದಿಗೆ ಬರುತ್ತಿರುವ ಸಾಧ್ಯತೆ ಇದೆ.

ಪಾವತಿ ಆಯ್ಕೆಗಳು ಮತ್ತು ಹೆಚ್ಚುವರಿ ಆಫರ್‌ಗಳು
Flipkart ತನ್ನ Black Friday Sale 2025 ಸೇಲ್‌ನಲ್ಲಿ ಗ್ರಾಹಕರು UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬಹುದು ಹಾಗೂ EMI ಪ್ಲ್ಯಾನ್‌ಗಳೂ ಲಭ್ಯವಿರುತ್ತವೆ. ಈ Black Friday Sale 2025 ಸೇಲ್ ಸಮಯದಲ್ಲಿ ವೇಗವಾಗಿ ಚೆಕ್‌ಔಟ್ ಮಾಡಲು, ಪಾವತಿ ವಿವರಗಳನ್ನು ಈಗಲೇ ಖಾತೆಗೆ ಸೇರಿಸಿಕೊಳ್ಳುವಂತೆ Flipkart ಸಲಹೆ ನೀಡಿದೆ. ಆದರೆ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ರಿಯಾಯಿತಿಗಳಿಗಾಗಿ ಪಾಲುದಾರ ಬ್ಯಾಂಕ್‌ಗಳ ಹೆಸರುಗಳನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಇದರ ಕುರಿತು ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

Flipkart Black Friday Sale 2025: ಈ ವಾರಾಂತ್ಯದಿಂದ ಆರಂಭ!

ಈ ಬಾರಿಯ FlipkartBlack Friday Sale 2025 ಸೇಲ್‌ನಲ್ಲಿ ವಿಶೇಷವಾಗಿ ಈ ಕೆಳಗೆ ಪಟ್ಟಿ ಮಾಡಿರುವ ಎಲ್ಲಾ ವಸ್ತುಗಳು ಗಮನ ಸೆಳೆಯುತ್ತವೆ ಎಂದು ತಿಳಿಸಲಾಗಿದೆ.

  • ಸ್ಮಾರ್ಟ್‌ಫೋನ್‌ಗಳು
  • ಲ್ಯಾಪ್‌ಟಾಪ್‌ಗಳು ಮತ್ತು PCs
  • ಸ್ಮಾರ್ಟ್‌ವಾಚ್‌ಗಳು
  • ಟಿವಿಗಳು, ಹೋಂ ಥಿಯೇಟರ್‌ಗಳು
  • ಫ್ರಿಡ್ಜ್, ವಾಶಿಂಗ್ ಮಶೀನ್, ಡಿಶ್‌ವಾಷರ್
  • ಏರ್ ಕಂಡಿಷನರ್‌ಗಳು
  • ಪ್ರಿಂಟರ್‌ಗಳು, ಮಿಕ್ಸರ್‌ಗಳು, ಫ್ಯಾನ್‌ಗಳು
  • ಚಳಿಗಾಲದ ಉಪಕರಣಗಳು: ರೂಂ ಹೀಟರ್, ಗೀಸರ್

Flipkart ತನ್ನ Black Friday ಸೇಲ್ ದಿನಾಂಕ ಘೋಷಿಸಿದ ಹಿನ್ನೆಲೆಯಲ್ಲಿ, ಅದರ ಪ್ರತಿಸ್ಪರ್ಧಿ ಅಮೆಜಾನ್ ಶೀಘ್ರದಲ್ಲೇ ತನ್ನ Black Friday ಸೇಲ್ 2025 ಅನ್ನು ಘೋಷಿಸಬಹುದು. ಗಮನಿಸುವುದಾದರೆ, ಕಳೆದ ಅಕ್ಟೋಬರ್ 11 ರಂದು ಪ್ರಾರಂಭವಾದ ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ 2025 ರ ನಂತರ ಇದು ಫ್ಲಿಪ್‌ಕಾರ್ಟ್‌ನ ಮೊದಲ ಪ್ರಮುಖ ಸೇಲ್ ಈವೆಂಟ್ ಆಗಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ. ನೀವು ಕೂಡ Flipkart Black Friday ಸೇಲ್‌ಗಾಗಿ ಕಾಯುತ್ತೀದ್ದೀರಾ?, ಈ ಬಾರಿ ನೀವು ಖರೀದಿಸಲು ನಿರೀಕ್ಷಿಸಿರುವ ಪ್ರಮುಖ ವಸ್ತು ಯಾವುವು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Flipkart’s Black Friday Sale 2025 is set to begin on November 23. A dedicated microsite for the event is already live, revealing that shoppers will be able to grab a wide range of electronics and everyday essentials at significantly discounted prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+