ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇ ಸೇಲ್..! ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌..!

|

ಫ್ಲಿಪ್ ಕಾರ್ಟ್ ಮತ್ತೆ ಬಿಗ್ ಬಿಲಿಯನ್ ಡೇ ಸೇಲ್ ಆರಂಭಿಸುತ್ತಿದೆ. ಎಲ್ಲಾ ಬಳಕೆದಾರರಿಗೂ ತಿಳಿದಿರುವಂತೆ ಫ್ಲಿಫ್ ಕಾರ್ಟ್ ನ ಈ ಸೇಲ್ ದಿನಗಳಲ್ಲಿ ಭರ್ಜರಿ ಆಫರ್ ಗಳ ಸುರಿಮಳೆಯೇ ಇರುತ್ತದೆ. ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್, ಹಾಗು ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಇನ್ನೂ ಹಲವು ವಸ್ತುಗಳು ಭಾರೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. ಕಂಪೆನಿಯೂ ಕೂಡ ಈ ದಿನಗಳಲ್ಲಿ ಕೋಟಿಗಟ್ಟಲೆ ವ್ಯವಹಾರ ನಡೆಸುತ್ತದೆ. ಕಡಿಮೆ ಹಣದಲ್ಲಿ ಹೆಚ್ಚು ವಸ್ತುಗಳು ಸಿಗುತ್ತದೆ ಅಂದರೆ ಈಗಿನ ಜಮಾನದಲ್ಲಿ ಯಾರು ತಾನೆ ಆ ಅವಕಾಶವನ್ನು ಬಿಡಲು ಇಚ್ಛಿಸುತ್ತಾರೆ ಹೇಳಿ?

ಗೆಜೆಟ್ ಮತ್ತು ಆಕ್ಸಸರೀಸ್ ಗಳ ಮೇಲೆ 80% ರಿಯಾಯಿತಿ ಇದೆ. ಟಿವಿ ಮತ್ತು ಅಪ್ಲಯನ್ಸ್ ಗಳು ಕೂಡ 80% ರಿಯಾಯಿತಿ ದರದಲ್ಲಿ ಲಭ್ಯವಾಗುತ್ತದೆ. ಸ್ಮಾರ್ಟ್ ಡಿವೈಸ್ ಗಳು ಮತ್ತು ಇನ್ನೂ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳಿಗೂ ಕೂಡ ಶೇಕಡಾ 80ರವರೆಗೆ ರಿಯಾಯಿತಿ ಇದೆ. ಫ್ಯಾಷನ್ ಪ್ರಿಯರಿಗೂ ಸಾಕಷ್ಟು ಆಫರ್ ಗಳನ್ನು ಕಂಪೆನಿಯು ನೀಡುತ್ತಿದೆ.

ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇ ಸೇಲ್..! ಮೊಬೈಲ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌

ಹೆಚ್ ಡಿಎಫ್ ಸಿ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಕೆ ಮಾಡುವವರಿಗೆ 10 ಶೇಕಡಾ ಇನ್ಸ್ಟೆಂಟ್ ರಿಯಾಯಿತಿ ಲಭ್ಯವಿದೆ. ಇಎಂಐ ಆಯ್ಕೆ, ಎಕ್ಸ್ ಚೇಂಜ್ ಆಫರ್, ವ್ಯಾರೆಂಟಿ ಖರೀದಿ ಇತ್ಯಾದಿ ಆಫರ್ ಗಳು ಈ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಗ್ರಾಹಕರನ್ನು ಕಾದು ಕುಳಿತಿದೆ. ಬಿಗ್ ಬಿಲಿಯನ್ ಡೇ ಸೇಲ್ ಅಕ್ಟೋಬರ್ 10 ರಿಂದ 14 ರ ವರೆಗೆ ನಡೆಯಲಿದೆ.

ಕ್ರೇಜ್‌ ಹುಟ್ಟಿಸೋ ಡೀಲ್ ಗಳು - ಪ್ರತಿ ಎಂಟು ಗಂಟೆಗೆ ಹೊಸ ಡೀಲ್: 

ಕ್ರೇಜ್‌ ಹುಟ್ಟಿಸೋ ಡೀಲ್ ಗಳು - ಪ್ರತಿ ಎಂಟು ಗಂಟೆಗೆ ಹೊಸ ಡೀಲ್: 

ಪ್ರತಿ ಎಂಟು ಗಂಟೆಗಳಿಗೊಮ್ಮೆ ಈ ಆಫರ್ ಗಳ ಅಡಿಯಲ್ಲಿ ಕೆಲವು ವಸ್ತುಗಳ ಮೇಲೆ ಹೊಸ ಡೀಲ್ ಗಳು ಲಭ್ಯವಾಗುತ್ತದೆ. ಇದರ ಮೂಲಕ ನೀವು ಯಾವಾಗಲೂ ಹೊಸ ಡೀಲ್ ಗಳಿಗೆ ಅಪ್ ಡೇಟ್ ಆಗುತ್ತಲೇ ಇರಬಹುದು.

ಮಹಾ ಪ್ರೈಸ್ ಡ್ರಾಪ್ – ಲಿಮಿಟೆಡ್ ಸಮಯ, ಹೆಚ್ಚುವರಿ 20% ರಿಯಾಯಿತಿ: 

ಮಹಾ ಪ್ರೈಸ್ ಡ್ರಾಪ್ – ಲಿಮಿಟೆಡ್ ಸಮಯ, ಹೆಚ್ಚುವರಿ 20% ರಿಯಾಯಿತಿ: 

ಶೇಕಡಾ 20 ರ ವರೆಗೆ ಮಹಾ ಪ್ರೈಸ್ ಡ್ರಾಪ್ ನಲ್ಲಿ ನಿಮಗೆ ಸಿಗಬಹುದು. ಇದು ಸೇಲ್ ನ ಎಲ್ಲಾ ಸಮಯದಲ್ಲೂ ಲಭ್ಯವಿರುವುದಿಲ್ಲ. ಕೆಲವು ಘಂಟೆಗಳ ಅವಧಿಯಲ್ಲಿ ಮಾತ್ರ ಲಭ್ಯವಿರುವ ಆಫರ್ ಆಗಿರುತ್ತದೆ. ಹಾಗಾಗಿ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.

ರಷ್ ಅವರ್ – ಮೊದಲ ಎರಡು ಘಂಟೆ ಹೆಚ್ಚುವರಿ ರಿಯಾಯಿತಿ: 

ರಷ್ ಅವರ್ – ಮೊದಲ ಎರಡು ಘಂಟೆ ಹೆಚ್ಚುವರಿ ರಿಯಾಯಿತಿ: 

ರಷ್ ಅವರ್ ಡೀಲ್ ನ ಒಂದು ಭಾಗವಾಗಿ, ನಿಮ್ಮ ಇಷ್ಟದ ಸರಕಿನ ಮೇಲೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಲು ಅವಕಾಶವಿರುತ್ತದೆ. ಆದರೆ ಈ ಡೀಲ್ ಸೇಲ್ ಆರಂಭವಾದ ಎರಡು ಘಂಟೆಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ.

ಫ್ಲ್ಯಾಶ್ ಸೇಲ್ – 120 ಘಂಟೆ -120 ಡೀಲ್ ಗಳು: 

ಫ್ಲ್ಯಾಶ್ ಸೇಲ್ – 120 ಘಂಟೆ -120 ಡೀಲ್ ಗಳು: 

ಫ್ಲ್ಯಾಶ್ ಸೇಲ್ 120 ವಿಭಿನ್ನ ಡೀಲ್ ಗಳನ್ನು ಬೇರೆಬೇರೆ ವಸ್ತುಗಳ ಮೇಲೆ ಹೊಂದಿದೆ. ಇದು ಒಟ್ಟಾರೆ 120 ಘಂಟೆಗಳ ಅವಧಿಗೆ ಫಿಕ್ಸ್ ಆಗಿರುತ್ತದೆ. ಖಂಡಿತವಾಗಿ ಈ ಸೇಲ್ ನಲ್ಲಿ ನಿಮಗೆ ಇದರಿಂದ ಲಾಭವಾಗಲಿದೆ.

ಮೊಬೈಲ್ ಗಳ ಮೇಲೆ ಭರ್ಜರಿ ರಿಯಾಯಾತಿ

ಮೊಬೈಲ್ ಗಳ ಮೇಲೆ ಭರ್ಜರಿ ರಿಯಾಯಾತಿ

ಹುಬ್ಬೇರಿಸುವಂತಹ ಕೆಲವು ಮೊಬೈಲ್ ಆಫರ್ ಗಳು ಈ ಸೇಲ್ ನಲ್ಲಿ ಗ್ರಾಹಕರನ್ನು ಸೆಳೆಯಲಿದೆ. ಈ ಡೀಲ್ ಗಳಲ್ಲಿ - ಗ್ಯಾರೆಂಟಿ, ಉತ್ತಮ ಎಕ್ಸ್ ಚೇಂಜ್ ಆಫರ್,ಮಾಸ್ಟರ್ ಕಾರ್ಡ್ ಮೂಲಕ ಮೊದಲ ಬಾರಿಗೆ ಆನ್ ಲೈನ್ ಪೇಮೆಂಟ್ ಮಾಡುವವರಿಗೆ 10% ಇನ್ಸ್ ಟೆಂಟ್ ರಿಯಾಯಿತಿ,ಇಎಂಐ ಟ್ರಾನ್ಸ್ಯಾಕ್ಷನ್ ನ್ನು ಹೆಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವವರಿಗೆ 5% ರಿಯಾಯಿತಿ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 5% ರಿಯಾಯಿತಿ ಲಭ್ಯವಾಗಲಿದೆ. ನೋಕಿಯಾ,ಓಪ್ಪೋ,ಒನ್ ಪ್ಲಸ್, ಸ್ಯಾಮ್ ಸಂಗ್, ಆಪಲ್ ಸೇರಿದಂತೆ ಹಲವು ಕಂಪೆನಿಯ ಫೋನ್ ಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

ಫ್ಯಾಷನ್ – 90% ರಿಯಾಯಿತಿ: 

ಫ್ಯಾಷನ್ – 90% ರಿಯಾಯಿತಿ: 

ಫ್ಯಾಷನ್ ಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವವರಿಗೆ ಕೆಲವು ಗ್ರೇಟ್ ಬೆನಿಫಿಟ್ ಗಳು ಸಿಗಲಿದೆ. ಬ್ರ್ಯಾಂಡೆಡ್ ಬಟ್ಟೆಗಳು, ಶೂ, ಕಾಸ್ಮೆಟಿಕ್ಸ್, ಆಕ್ಸಸರೀಸ್ ಗಳು ಇತ್ಯಾದಿಗಳಿಗೆ ಶೇಕಡಾ 90 ರ ರಿಯಾಯಿತಿ ಇದೆ.5000 ರುಪಾಯಿ ಖರೀದಿಗೆ ಹೆಚ್ಚುವರಿ 1000 ರುಪಾಯಿ ಆಫರ್ ಇದೆ. ಫೋನ್ ಪೇ ಮೂಲಕ ಪಾವತಿ ಮಾಡಿದರೆ ಶೇಕಡಾ 10 ರಷ್ಟು ರಿಯಾಯಿತಿ. ಲಿವೈಸ್, ಲಿವೀಸ್, ನೈಕ್ ಸೇರಿದಂತೆ ಹಲವು ಬ್ರ್ಯಾಂಡ್ ಗಳ ವಸ್ತುಗಳ ಮೇಲೆ ಉತ್ತಮ ರಿಯಾಯಿತಿ ಈ ಸೇಲ್ ನಲ್ಲಿ ಲಭ್ಯವಾಗಲಿದೆ.

ಟಿವಿ ಮತ್ತು ಅಪ್ಲಯನ್ಸಸ್ -80% ರಿಯಾಯಿತಿ: 

ಟಿವಿ ಮತ್ತು ಅಪ್ಲಯನ್ಸಸ್ -80% ರಿಯಾಯಿತಿ: 

55 ಇಂಚಿನ ಟಿವಿಯ ಬೆಲೆ 43 ಇಂಚಿನ ಟಿವಿ ಬೆಲೆಯಲ್ಲಿ ಲಭ್ಯವಾಗುತ್ತದೆ. ಸುಮಾರು 20k+ ನಷ್ಟು ಸಣ್ಣ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತದೆ.ಶೇಕಡಾ 80 ರಷ್ಟು ರಿಯಾಯಿತಿ ಇದೆ. ಫುಲಿ ಆಟೋಮ್ಯಾಟಿಕ್ ಆಗಿರುವ ವಾಷಿಂಗ್ ಮಷೀನ್ ಗಳು ಸೆಮಿ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಗಳ ಬೆಲೆಯಲ್ಲಿ ಲಭ್ಯವಾಗುತ್ತದೆ. 500L ರೆಫ್ರಿಜರೇಟರ್ 400L ರೆಫ್ರಿಜರೇಟರ್ ನ ಬೆಲೆಯಲ್ಲಿ ಸಿಗುತ್ತದೆ. ಹೀಗೆ ಪ್ರತಿ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ ಇದೆ.

ಗ್ಯಾಜೆಟ್ಸ್ ಮತ್ತು ಆಕ್ಸಸರೀಸ್ – 80% ರಿಯಾಯಿತಿ :

ಗ್ಯಾಜೆಟ್ಸ್ ಮತ್ತು ಆಕ್ಸಸರೀಸ್ – 80% ರಿಯಾಯಿತಿ :

ಕೆಲವು ಗ್ಯಾಜೆಟ್ ಆಕ್ಸಸರೀಸ್ ಗಳು 80% ಆಫರ್ ನಲ್ಲಿ ಮಾರಾಟಕ್ಕಿರುತ್ತದೆ. ಲ್ಯಾಪ್ ಟಾಪ್ ಗಳು 50 ಸಾವಿರ ರುಪಾಯಿ ಆಫರ್ ನಲ್ಲಿ ಸಿಗುತ್ತದೆ. ಡೆಲ್, ಆಪಲ್, ಲೆನೊವಾ ಮತ್ತು ಇತರೆ ಕಂಪೆನಿಯ ಲ್ಯಾಪ್ ಟಾಪ್ ಗಳೂ ಕೂಡ ಲಭ್ಯ. ಹೆಡ್ ಫೋನ್ ಗಳು, ಸ್ಪೀಕರ್ ಗಳು ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಎಂಐ, ಫಿಲಿಪ್ಸ್ ಮತ್ತು ಸ್ಯಾಮ್ ಸಂಗ್ ಕಂಪೆನಿಯ ಪವರ್ ಬ್ಯಾಂಕ್ ಗಳು ಆಫರ್ ನಲ್ಲಿವೆ. ಟ್ಯಾಬ್ಲೆಟ್ ಗಳು ಶೇಕಡಾ 50 ರ ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ.

ಮನೆ & ಪೀಠೊಪಕರಣಗಳು - 50-90% ರಿಯಾಯಿತಿ:

ಮನೆ & ಪೀಠೊಪಕರಣಗಳು - 50-90% ರಿಯಾಯಿತಿ:

ಈ ಪ್ರೊಡಕ್ಟ್ ಗಳು ಶೇಕಡಾ 50 ರಿಂದ 90 ರ ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ. ಕೆಲವು ಲೈಟಿಂಗ್ ಸಂಬಂಧಿತ ವಸ್ತುಗಳ ಆರಂಭಿಕ ಬೆಲೆ 99 ರುಪಾಯಿ, ಅಡುಗೆ ಮನೆಯ ಕೆಲವು ವಸ್ತುಗಳು 49 ರುಪಾಯಿ ಆರಂಭಿಕ ಬೆಲೆಯನ್ನು ಹೊಂದಿದೆ. ಲಿವಿಂಗ್ ರೂಮ್ ಪಿಠೋಪಕರಣಗಲು 999 ರುಪಾಯಿ ಬೆಲೆಯಲ್ಲಿ ಸಿಗುತ್ತದೆ. 599 ರುಪಾಯಿಗೆ ಹೆಚ್ಚಿನ ಮನೆ ಸಂಬಂಧಿತ ವಸ್ತುಗಳು ಲಭ್ಯವಾಗುತ್ತದೆ.

ಜಾಕ್ ಪಾಟ್ ಡೀಲ್ ನಲ್ಲಿ 90 ಶೇಕಡಾ ರಿಯಾಯಲ್ಲಿ ಬೆಡ್ ಗಳು, ಬೆಡ್ ಶೀಟ್ ಗಳು ಹಾಗು ಇತರೆ ವಸ್ತುಗಲು ಸಿಗುತ್ತದೆ. ಪ್ರೆಸ್ಟೀಜ್ , ಹೋಮ್ ಟೌನ್, BOSCH ಮತ್ತು ಬಾಂಬೆ ಡೈಯಿಂಗ್ ಕಂಪೆನಿಯ ವಸ್ತುಗಳು 40-70% ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ.ಕೆಲವು ಡ್ಯೂರೇಬಲ್ ಫರ್ನೀಚರ್ ಗಳನ್ನು ಇಎಂಐ ಮೂಲಕ 500 ರುಪಾಯಿ ಮಾಸಿಕ ಕಂತಿನಲ್ಲಿ ಖರೀದಿಸಬಹುದು. ಫೇಸ್ಟೀವ್ ಗಿಫ್ಟ್ ಗಳು ಸೇರಿದಂತೆ ಹಲವು ಪ್ರೊಡಕ್ಟ್ ಗಳು 99 ರುಪಾಯಿಯಿಂದ 999 ರುಪಾಯಿಗಳ ವರೆಗೂ ಲಭ್ಯವಾಗುತ್ತದೆ.

ಸೌಂದರ್ಯವರ್ಧಕ, ಆಟದ ವಸ್ತುಗಳು, ಸ್ಪ್ರೋರ್ಟ್ಸ್ ಮತ್ತು ಇತರೆ - 50-90% ರಿಯಾಯಿತಿ:

ಸೌಂದರ್ಯವರ್ಧಕ, ಆಟದ ವಸ್ತುಗಳು, ಸ್ಪ್ರೋರ್ಟ್ಸ್ ಮತ್ತು ಇತರೆ - 50-90% ರಿಯಾಯಿತಿ:

ಈ ಪ್ರೊಡಕ್ಟ್ ಗಳನ್ನು ನೀವು 50-90 % ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ.ಕುತೂಹಲಕಾರಿ ಅಂಶವೆಂದರೆ ನೀವು ಮೆಬಲಿನ್ ಪ್ರೊಡಕ್ಟ್ ಗಳನ್ನು ಖರೀದಿಸಿದರೆ ನ್ಯೂಯಾರ್ಕ್ ಗೆ ಟ್ರಿಪ್ ಹೋಗುವ ಚಾನ್ಸ್ ನ್ನು ಗೆಲ್ಲಬಹುದು. ಲಾರಿಯಲ್ ಪ್ರೊಡಕ್ಟ್ ಗಳನ್ನು ಖರೀದಿಸಿದರೆ ಐಶ್ವರ್ಯ ರೈ ಯನ್ನು ಭೇಟಿ ಮಾಡುವ ಅವಕಾಶ ಸಿಗಬಹುದು. ಪಾರ್ಕ್ ಅವೆನ್ಯೂ ದಿಂದ ಶಾಪಿಂಗ್ ಮಾಡಿದರೆ ಮಾರುತಿ ಬಲೆನೋ ವಿನ್ ಆಗುವ ಸದವಕಾಶ ಲಭ್ಯವಾಗಬಹುದು.ಮೇಕ್ ಮೈ ಟ್ರಿಪ್ ವೋಚರ್ ನ್ನು ಇನ್ನೂ ಇತರೆ ಕೆಲವು ಪ್ರೊಡಕ್ಟ್ ಗಳ ಖರೀದಿಯಲ್ಲಿ ಗೆಲ್ಲುವ ಅವಕಾಶವಿದೆ.

ಫ್ಲಿಪ್ ಕಾರ್ಟ್ ಮನೆಯಿಂದ - 70% ರಿಯಾಯಿತಿ :

ಫ್ಲಿಪ್ ಕಾರ್ಟ್ ಮನೆಯಿಂದ - 70% ರಿಯಾಯಿತಿ :

ಕೆಲವು ಡ್ಯೂರೇಬಲ್ ಫರ್ನಿಚರ್ ಮತ್ತು ಇತರೆ ವಸ್ತುಗಳನ್ನು ಶೇಕಡಾ 70 ರ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವಿದೆ. ಒಟ್ಟಾರೆ ಕಡಿಮೆ ದುಡ್ಡಿನಲ್ಲಿ ಹೆಚ್ಚು ವಸ್ತುಗಳನ್ನು ಖರೀದಿ ಮಾಡಬಹುದಾದ ದೊಡ್ಡ ಅವಕಾಶ ಇದು. ಸೋ ಫ್ಲಿಪ್ ಕಾರ್ಟ್ ನಲ್ಲಿ ಆಗುವ ಅಪ್ ಡೇಟ್ ಗಳನ್ನು ಗಮನಿಸುತ್ತಿರಿ. Gizbot ಕೂಡ ನಿಮಗೆ ಎಲ್ಲಾ ಮಾಹಿತಿಗಳನ್ನು ನೀಡುತ್ತಲೇ ಇರುತ್ತದೆ.

Best Mobiles in India

English summary
Flipkart's 'The Big Billion Day Sale' deals: Get discounts on smartphones, laptops and more. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X