ಫ್ಲಿಪ್‌ಕಾರ್ಟ್‌ನಲ್ಲಿ ರೂ.18,999, ಅಮೆಜಾನ್‌ನಲ್ಲಿ ರೂ.27,999: 'ಒನ್‌ಪ್ಲಸ್ 3' ಖರೀದಿ ಎಲ್ಲಿ?

5.5 ಇಂಚಿನ ಡಿಸ್‌ಪ್ಲೇ, 6GB RAM ಜೊತೆಗೆ 64GB ಆಂತರಿಕ ಮೆಮೊರಿ ಹೊಂದಿರುವ ಒನ್‌ಪ್ಲಸ್‌ 3 ಖರೀದಿ ಬಗ್ಗೆ ಕನ್‌ಫ್ಯೂಸ್ ಬಗೆಹರಿದಿಲ್ಲ.

By Suneel
|

'ಒನ್‌ಪ್ಲಸ್‌ 3' ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಈಗ ಎಂದಿಗೂ ಬರದ ತಲೆನೋವು ಶುರುವಾಗಿದೆ. ಯಾಕಂದ್ರೆ ನೆನ್ನೆಯಿಂದ 'ಒನ್‌ಪ್ಲಸ್‌ 3' ಡಿವೈಸ್ ಖರೀದಿಸಲು ಪ್ರಖ್ಯಾತ ಆನ್‌ಲೈನ್‌ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಭೇಟಿ ನೀಡಿದವರಿಗೆಲ್ಲಾ ದೊಡ್ಡ ಗೊಂದಲ ಉಂಟಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ 'ಒನ್‌ಪ್ಲಸ್‌ 3' ಖರೀದಿ ಬೆಲೆ ರೂ.18,999 ಇದೆ. ಹಾಗೆ ಅಮೆಜಾನ್‌ನಲ್ಲಿ ಖರೀದಿ ಬೆಲೆ ರೂ.27,999 ಇದೆ. ಆದ್ರೆ ಈ ಗೊಂದಲ ಮಾತ್ರ ಇದುವರೆಗೂ ಬಗೆಹರಿದಿಲ್ಲ.

ಅಮೆಜಾನ್‌ಗಿಂತ 9,000 ಕಡಿಮೆ ಬೆಲೆಗೆ 'ಒನ್‌ಪ್ಲಸ್ 3' ಫ್ಲಿಪ್‌ಕಾರ್ಟ್‌ನಲ್ಲಿ...?

ಅಮೆಜಾನ್‌ಗಿಂತ ರೂ.9,000 ಕಡಿಮೆ ಬೆಲೆಗೆ, ಫ್ಲಿಪ್‌ಕಾರ್ಟ್ ಮಾರಾಟಕ್ಕೆ ಹಾಕಿರುವ ಬ್ಯಾನರ್ ಕುರಿತು, "ಮಾರಾಟಕ್ಕೆ ಡಿವೈಸ್‌ ಅನ್ನು ಹೇಗೆ ಬಿಟ್ಟೀದೀರಿ ಮತ್ತು ವೆಬ್‌ಸೈಟ್‌ನಲ್ಲಿ ಈ ರೀತಿ ಅತಿ ಕಡಿಮೆ ಬೆಲೆಗೆ ಹೇಗೆ ನೀಡುತ್ತಿದ್ದಿರಿ ವಿವರಣೆ ನೀಡಿ ಎಂದು ಒನ್‌ಪ್ಲಸ್ ಸಹ-ಸಂಸ್ಥಾಪಕ 'ಕಾರ್ಲ್ ಪೇಯ್', ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಸಚಿನ್‌ ಬನ್ಸಲ್‌'ರನ್ನು ಕೇಳಿದ್ದಾರೆ.

ಎನ್‌ಡಿಟಿವಿ ಈ ಹಿಂದೆ 'ಒನ್‌ಪ್ಲಸ್‌ 3' ಮಾರಾಟ ಡಿಸೆಂಬರ್ 4PM ನಿಂದ ಆರಂಭವಾಗಲಿದೆ ಎಂದು ವರದಿ ಮಾಡಿತ್ತು. ಆದರೆ ಡಿವೈಸ್‌ ಖರೀದಿಗೆ ಮುನ್ನ 'ಒನ್‌ಪ್ಲಸ್‌ 3' ಆಸಕ್ತರು ಹಲವು ಸತ್ಯ ಮಾಹಿತಿಗಳನ್ನು ತಿಳಿಯಲೇಬೇಕಾಗಿದೆ.

ಅಮೆಜಾನ್‌ಗಿಂತ 9,000 ಕಡಿಮೆ ಬೆಲೆಗೆ 'ಒನ್‌ಪ್ಲಸ್ 3' ಫ್ಲಿಪ್‌ಕಾರ್ಟ್‌ನಲ್ಲಿ...?

ನಿಜಾಂಶವೆಂದರೆ ಒನ್‌ಪ್ಲಸ್ ಅಮೆಜಾನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ ಹೊರತು, ಫ್ಲಿಪ್‌ಕಾರ್ಟ್‌ನೊಂದಿಗೆ ಅಲ್ಲಾ ಎಂಬುದನ್ನು ತಿಳಿಯಲೇಬೇಕು. ಈ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್ 'ಒನ್‌ಪ್ಲಸ್‌ 3' ಸ್ಮಾರ್ಟ್‌ಫೋನ್‌ ಮಾರಾಟಕ್ಕೆ ಹೇಗೆ ವೆಬ್‌ಸೈಟ್‌ನಲ್ಲಿ ಹಾಕಿದೆ ಎಂಬುದು ಮುಖ್ಯ ಪ್ರಶ್ನೆ ಅಗಿದೆ.

ಅಮೆಜಾನ್‌ಗಿಂತ 9,000 ಕಡಿಮೆ ಬೆಲೆಗೆ 'ಒನ್‌ಪ್ಲಸ್ 3' ಫ್ಲಿಪ್‌ಕಾರ್ಟ್‌ನಲ್ಲಿ...?

ಸಚಿನ್ ಬನ್ಸಾಲ್‌ ಅಥವಾ ಫ್ಲಿಪ್‌ಕಾರ್ಟ್ ಅಗತ್ಯವಾಗಿ ಒನ್‌ಪ್ಲಸ್ ಸಹ-ಸಂಸ್ಥಾಪಕರ ಪ್ರಶ್ನೆಗೆ ಉತ್ತರಿಸಬೇಕಿತ್ತು. ಆದರೆ ಫ್ಲಿಪ್‌ಕಾರ್ಟ್‌ ಎನ್‌ಡಿಟಿವಿಯೊಂದಿಗೆ " ಫ್ಲಿಪ್‌ಕಾರ್ಟ್ ಒಂದು ಮಾರುಕಟ್ಟೆ ಸ್ಥಳವಾಗಿದೆ, ಇದು ದೇಶದಾದ್ಯಂತರ ಗ್ರಾಹಕರೊಂದಿಗೆ ಮಾರಾಟಗಾರರನ್ನು ಸಂಪರ್ಕಿಸುತ್ತದೆ. ಎಲ್ಲಾ ನಮ್ಮ ಮಾರಾಟಗಾರರು ಕಡ್ಡಾಯವಾಗಿ ಕಟ್ಟುನಿಟ್ಟಾದ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು. ಬೆಲೆ ಮತ್ತು ರಿಯಾಯಿತಿ ಎಲ್ಲಾ ಕಂಪನಿಗಳ ಮಾರಾಟಗಾರರಿಗೆ, ಬ್ರ್ಯಾಂಡ್‌ಗಳು ಮತ್ತು ಮಾರಾಟಗಾರರು ಭಾಗವಹಿಸುವಿಕೆಯಿಂದ ನಿಶ್ಚಯವಾಗುತ್ತದೆ" ಎಂದು ಹೇಳಿದೆ. ಆದರೆ ಫ್ಲಿಪ್‌ಕಾರ್ಟ್‌ನ ಈ ಅಸ್ಪಷ್ಟ ಹೇಳಿಕೆ ಒನ್‌ಪ್ಲಸ್ 3 ಸ್ಮಾರ್ಟ್‌ಫೋನ್ ಮಾರಾಟ ಮಾಡುತ್ತಿರುವುದಕ್ಕೆ ಸರಿಯಾದ ಉತ್ತರವಲ್ಲ.

ಅಮೆಜಾನ್‌ಗಿಂತ 9,000 ಕಡಿಮೆ ಬೆಲೆಗೆ 'ಒನ್‌ಪ್ಲಸ್ 3' ಫ್ಲಿಪ್‌ಕಾರ್ಟ್‌ನಲ್ಲಿ...?

ಈ ಹಿನ್ನೆಲೆಯಲ್ಲಿ ಚೀನಾ ಸ್ಮಾರ್ಟ್‌ಫೋನ್‌ ತಯಾರಕ ಒನ್‌ಪ್ಲಸ್, ಸ್ಮಾರ್ಟ್‌ಫೋನ್ ಖರೀದಿಸುವ ಆಸಕ್ತರಿಗೆ ಎಚ್ಚರಿಗೆ ನೀಡಿದೆ. ಒನ್‌ಪ್ಲಸ್ ಕೇವಲ ಅಮೆಜಾನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಅಮೆಜಾನ್‌ ಇಂಡಿಯಾ ಅಧಿಕೃತ ವೆಬ್‌ಸೈಟ್‌ ಮೂಲಕವೇ ಖರೀದಿಸಿ ಮಾಡಬೇಕು. ಇತರೆ ಯಾವುದೇ ವೆಬ್‌ಸೈಟ್‌ನಲ್ಲಿ ಖರೀದಿಸದರೆ ಗ್ಯಾರಂಟಿ ದೃಢೀಕರಣ ಪ್ರಾಡಕ್ಡ್‌ಗೆ ಇರುವುದಿಲ್ಲ ಎಂದು ಹೇಳಿದೆ.

ಒನ್‌ಪ್ಲಸ್‌ 3 ಸ್ಮಾರ್ಟ್‌ಫೋನ್‌ ಖರೀದಿ ಆಸಕ್ತರು ಡಿವೈಸ್‌ ಖರೀದಿಗೆ ಮುನ್ನ ಅದು ನಿಜವಾದ 'ಒನ್‌ಪ್ಲಸ್‌ 3' ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕಿದೆ. ಅಲ್ಲದೇ ವಾರಂಟಿಯೊಂದಿಗೆ ಬಂದಿದೆಯೇ ಎಂಬುದರ ದೃಢೀಕರಣ ಪಡೆಯಬೇಕಿದೆ.

ಅಮೆಜಾನ್‌ಗಿಂತ 9,000 ಕಡಿಮೆ ಬೆಲೆಗೆ 'ಒನ್‌ಪ್ಲಸ್ 3' ಫ್ಲಿಪ್‌ಕಾರ್ಟ್‌ನಲ್ಲಿ...?

ಒನ್‌ಪ್ಲಸ್‌ 3 ಸ್ಮಾರ್ಟ್‌ಫೋನ್‌ ಫೀಚರ್‌ಗಳು
ಖರೀದಿಗೆ ಬೆಲೆ ರೂ.27,999ವಿಶೇಷತೆಗಳು
* 5.5 ಇಂಚಿನ ಡಿಸ್‌ಪ್ಲೇ
* 1.6GHz ಕ್ವಾಡ್-ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 820 ಪ್ರೊಸೆಸರ್
* 6GB RAM ಜೊತೆಗೆ 64GB ಆಂತರಿಕ ಮೆಮೊರಿ
* 16MP ಹಿಂಭಾಗ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ
* ಆಂಡ್ರಾಯ್ಡ್ 6.0.1 ಓಎಸ್
* ವೈಫೈ 802.11 a/b/g/n/ac, ಜಿಪಿಎಸ್, ಬ್ಲೂಟೂತ್ v 4.20, ಎಫ್‌ಎಂ, ಡ್ಯುಯಲ್ ಸಿಮ್ ಸಪೋರ್ಟ್, 4G LTE
* 7 ರೀತಿಯ ಸೆನ್ಸಾರ್ ಫೀಚರ್‌ಗಳು
* 3000mAh ಬ್ಯಾಟರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Flipkart Sale: OnePlus 3 to Be Available at Rs. 18,999 but Confusion Continues. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X