Home
ಸುದ್ದಿಜಾಲ

'ಸೂಪರ್‌ಮಾರ್ಟ್' ನಲ್ಲಿ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಪರಿಚಯಿಸಿದ ಫ್ಲಿಪ್‌ಕಾರ್ಟ್ !

ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್ ಈಗಾಗಲೇ ತನ್ನ ಗ್ರಾಹಕರಿಗಾಗಿ ಹಲವಾರು ಹೊಸ ಮಾದರಿಯ ಸೇವೆಗಳನ್ನ ಪರಿಚಯಿಸಿದೆ. ತನ್ನ ಗ್ರಾಹಕರ ಹಿತದೃಷ್ಟಿಯಿಂದ ಹೊಸ ಹೊಸ ಸೇವೆಗಳನ್ನ ಪರಿಚಯಿಸುತ್ತಲೇ ಬಂದಿರುವ ಫ್ಲಿಪ್‌ಕಾರ್ಟ್‌ ಇದೀಗ ತನ್ನ ಸ್ಟೋರ್‌ ಆಪ್ ಸೂಪರ್‌ಮಾರ್ಟ್‌ನಲ್ಲಿ ಎಐ ವಾಯ್ಸ್ ಅಸಿಸ್ಟೆಂಟ್ ಅನ್ನು ಪರಿಚಯಿಸಿದೆ.

ಫ್ಲಿಪ್‌ಕಾರ್ಟ್‌

ಹೌದು, ಇ-ಕಾಮರ್ಸ್‌ ತಾನ ಫ್ಲಿಪ್‌ಕಾರ್ಟ್‌ ತನ್ನ ಸ್ಟೋರ್‌ ಆಪ್‌ನಲ್ಲಿ ಸೂಪರ್‌ ಮಾರ್ಟ್‌ ಎಐ ವಾಯ್ಸ್‌ ಅಸಿಸ್ಟೆಂಟ್‌ ಆಪ್‌ ಅನ್ನು ಪರಿಚಯಿಸಿದೆ. ಇನ್ನು ಈ ವಾಯ್ಸ್‌ ಅಸಿಸ್ಟೆಂಟ್‌ನಲ್ಲಿ ಇದೀಗ ಇಂಗ್ಲಿಷ್ ಮತ್ತು ಹಿಂದಿ ಭಾಷಯೆ ಆಜ್ಞೆಗಳನ್ನು ಸಹ ಅರ್ಥಮಾಡಿಕೊಳ್ಳಲಿದೆ. ಆದರೆ ಕಂಪನಿಯು ಭವಿಷ್ಯದಲ್ಲಿ ಸ್ಥಳೀಯ ಭಾಷೆಗಳಿಗೆ ಸಹ ಈ ವಾಯ್ಸ್‌ ಅಸಿಸ್ಟೆಂಟ್‌ನ ಬೆಂಬಲವನ್ನು ಸೇರಿಸಲು ಯೋಜಿಸಿದೆ. ಅಷ್ಟಕ್ಕೂ ಈ ಆಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಲಿಪ್‌ಕಾರ್ಟ್

ಸದ್ಯ ಫ್ಲಿಪ್‌ಕಾರ್ಟ್ ಹೊಸ ಫೀಚರ್ಸ್‌ ಪರಿಚಯಿಸುವ ಮೂಲಕ ಗ್ರಾಹಕರಿಗೆ ತಮ್ಮ ಧ್ವನಿಯ ಮೂಲಕ ದಿನಸಿ ಸಾಮಾನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಈ AI ಪ್ಲಾಟ್‌ಫಾರ್ಮ್ ಅನ್ನು ಫ್ಲಿಪ್‌ಕಾರ್ಟ್‌ನ ಇಂಟರ್‌ ಟೆಕ್ನಾಲಜಿ ಟೀಮ್‌ ಅಭಿವೃದ್ಧಿಪಡಿಸಿದೆ. ಜೊತೆಗೆ ಇದು ಗ್ರಾಹಕರು ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಅನ್ನೊದನ್ನ ಸಹ ಪತ್ತೆ ಮಾಡುತ್ತದೆ. ನಂತರ ಗ್ರಾಹಕರೊಂದಿಗೆ ಸಂಬಂಧಿತ ಸಂವಾದವನ್ನು ನಡೆಸಬಹುದಾಗಿದೆ. ವಾಯ್ಸ್‌ ಅಸಿಸ್ಟೆಂಟ್‌ ಶಾಪಿಂಗ್ ಅನುಭವವನ್ನು ಹೆಚ್ಚು ವೈಯಕ್ತಿಕ ಮತ್ತು ನ್ಯಾಚುರಲ್‌ ಆಗು ಮಾಡಬಹುದಾಗಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ.

ಫ್ಲಿಪ್‌ಕಾರ್ಟ್‌

ಇನ್ನು ಆಂಡ್ರಾಯ್ಡ್‌ ಡಿವೈಸ್‌ಗಳಿಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಮೀಸಲಾದ ಕಿರಾಣಿ ಇ-ಸ್ಟೋರ್ ಅಪ್ಲಿಕೇಶನ್‌ನ ಸೂಪರ್‌ಮಾರ್ಟ್‌ನಲ್ಲಿ ವಾಯ್ಸ್‌ ಅಸಿಸ್ಟೆಂಟ್‌ ಸಾಮರ್ಥ್ಯವನ್ನು ಅಳವಡಿಸಲಾಗಿದೆ. ಇದು ಇ-ಕಾಮರ್ಸ್ ವಿಭಾಗಗಳು ಮತ್ತು ಉತ್ಪನ್ನಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಇದರ ಮೂಲಕ ಪ್ರಾಡಕ್ಟ್‌ಗಳನ್ನ ಸರ್ಚ್‌ ಮಾಡುವ, ಉತ್ಪನ್ನದ ವಿವರಗಳನ್ನು ಅರ್ಥಮಾಡಿಕೊಳ್ಳುವ, ಆದೇಶವನ್ನು ನೀಡುವಂತಹ ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ ಪ್ರಕಾರ, AI ಸಹಾಯಕರು "ವಿವಿಧ ಭಾರತೀಯ ಭಾಷೆಗಳಲ್ಲಿ ಶಾಪಿಂಗ್-ಸಂಬಂಧಿತ ಸಂಭಾಷಣೆಗಳನ್ನು ನಡೆಸುವ ಬಳಕೆದಾರರ ಉದ್ದೇಶವನ್ನು ನಕಲು ಮಾಡಬಹುದು, ಅನುವಾದಿಸಬಹುದು, ಮತ್ತು ಅರ್ಥಮಾಡಿಕೊಳ್ಳಬಹುದು ಎನ್ನಲಾಗಿದೆ.

ಫ್ಲಿಪ್‌ಕಾರ್ಟ್‌

ಇದಲ್ಲದೆ ಶಾಪರ್‌ಗಳು ತಾವು ಯಾವ ಉತ್ಪನ್ನವನ್ನು ಹುಡುಕುತ್ತಿದ್ದೇವೆ ಎಂದು ಮಾತನಾಡಬಹುದು.ಅಲ್ಲದೆ ಗ್ರಾಹಕರಿಗೆ ತಮ್ಮ ಧ್ವನಿಯನ್ನು ಬಳಸಿಕೊಂಡು ತಮ್ಮ ಕಾರ್ಟ್‌ಗೆ ವಸ್ತುಗಳನ್ನು ಸೇರಿಸಲು ಸಹಾಯ ಮಾಡುತ್ತದೆ ಆದರೆ ಚೆಕ್‌ಔಟ್‌ ಮತ್ತು ಪಾವತಿ ಭಾಗವನ್ನು ಮಾತ್ರ ಕೈಯಾರೆ ಮಾಡಬೇಕಾಗುತ್ತದೆ. ಇನ್ನು "ದಿನಸಿಗಾಗಿ ಶಾಪಿಂಗ್ ಮಾಡುವ ಗ್ರಾಹಕರು ನಿರ್ದಿಷ್ಟ ಉತ್ಪನ್ನಗಳ ಜ್ಞಾನದಿಂದ ಖರೀದಿಸುವ ಸ್ಪಷ್ಟ ಉದ್ದೇಶವನ್ನು ಹೊಂದಿರುವುದರಿಂದ, ಫ್ಲಿಪ್‌ಕಾರ್ಟ್‌ನ ಧ್ವನಿ ಸಹಾಯಕ ಬಳಕೆದಾರರು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಖರೀದಿಸಬಹುದಾಗಿದೆ. ಇನ್ನು ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಸೂಪರ್‌ಮಾರ್ಟ್ ಅಪ್ಲಿಕೇಶನ್ ಬಳಸುವ ಇಂಗ್ಲಿಷ್ ಮತ್ತು ಹಿಂದಿ ಮಾತನಾಡುವ ಗ್ರಾಹಕರಿಗೆ ಮಾತ್ರ ವಾಯ್ಸ್ ಅಸಿಸ್ಟೆಂಟ್ ಲಭ್ಯವಿದೆ, ಏಕೆಂದರೆ ಇದು ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಏಕೈಕ ಪ್ಲಾಟ್‌ಫಾರ್ಮ್ ಆಗಿದೆ. ಫ್ಲಿಪ್‌ಕಾರ್ಟ್ ಮುಂಬರುವ ದಿನಗಳಲ್ಲಿ ಐಒಎಸ್ ಮತ್ತು ವೆಬ್‌ಸೈಟ್‌ನಲ್ಲಿಯೂ ಇದರ ಸೇವೆ ಲಭ್ಯವಾಗಲಿದೆ ಎಂದು ಹೇಳಿಕೊಂಡಿದೆ.

Best Mobiles in India

English summary
Flipkart’s voice assistant is capable of understanding and conversing with the customer in English and Hindi right now.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+