Home
ಸುದ್ದಿಜಾಲ

ಅಮೆಜಾನ್‌ಗೆ ಟಾಂಗ್ ನೀಡುತ್ತಿರುವ ಫ್ಲಿಪ್‌ಕಾರ್ಟ್, ಬಿಗ್ ಶಾಪಿಂಗ್ ಡೇ ಸೇಲ್ ಜುಲೈ 16 ರಿಂದ ಆರಂಭ..!

By Gizbot Bureau

ಜುಲೈ ತಿಂಗಳು ಆನ್ ಲೈನ್ ಗ್ರಾಹಕರಿಗೆ ಬಂಪರ್ ಕೊಡುಗೆಗಳ ಸುರಿಮಳೆಯಾಗಲಿದೆ.ಆನ್ ಲೈನ್ ಮಾರಾಟಗಾರರ ನಡುವಿನ ಸ್ಪರ್ಧೆಯು ಗ್ರಾಹಕನಿಗೆ ಭಾರೀ ಲಾಭವನ್ನೇ ಸೃಷ್ಟಿಸುವ ನಿರೀಕ್ಷೆ ಇದೆ. ಎರಡು ಮಹಾನ್ ಕಂಪೆನಿಗಳ ನಡುವಿನ ಜಿದ್ದಾಜಿದ್ದಿನ ಲಾಭವನ್ನು ನೀವು ಪಡೆದುಕೊಳ್ಳಬೇಕು ಎಂದರೆ ನಿಮ್ಮ ಶಾಪಿಂಗ್ ಪಟ್ಟಿ ಈಗಲೇ ತಯಾರಾಗಬೇಕು.

ಅಮೆಜಾನ್‌ಗೆ ಟಾಂಗ್ ನೀಡುತ್ತಿರುವ ಫ್ಲಿಪ್‌ಕಾರ್ಟ್..!

ಈಗಾಗಲೇ ನಿಮಗೆ ನಾವು ಮಾಹಿತಿ ನೀಡಿರುವಂತೆ, ಜುಲೈ 16 ರ ಮಧ್ಯಾಹ್ನ ಅಮೇಜಾನ್ ಪ್ರೈಮ್ ಡೇ ಸೇಲ್ ಆರಂಭವಾಗುತ್ತಿದೆ ಮತ್ತು ಅದಕ್ಕೆ ಸವಾಲು ಎಸೆಯುವ ದೃಷ್ಟಿಯಿಂದ ಅದೇ ದಿನ ಫ್ಲಿಪ್ ಕಾರ್ಟ್ ಕೂಡ ಬಿಗ್ ಶಾಪಿಂಗ್ ಡೇ ಸೇಲ್ ಆರಂಭಿಸಲು ರೆಡಿಯಾಗಿದೆ.

80 ತಾಸುಗಳ ಫ್ಲಿಪ್‌ಕಾರ್ಟ್ ಸೇಲ್

80 ತಾಸುಗಳ ಫ್ಲಿಪ್‌ಕಾರ್ಟ್ ಸೇಲ್

ಫ್ಲಿಪ್ ಕಾರ್ಟ್ ನ ಸೇಲ್ ಜುಲೈ 16 ರ ಮಧ್ಯಾಹ್ನ 4 ಘಂಟೆಯಿಂದ ಆರಂಭವಾಗುತ್ತಿದ್ದು ಸುಮಾರು 80 ತಾಸುಗಳ ಕಾಲ ನಡೆಯಲಿದೆ ಅಂದರೆ ಜುಲೈ 19 ರ ವರೆಗೆ ಮುಂದುವರಿಯಲಿದೆ. ಆದರೆ ಅಮೇಜಾನ್ ಪ್ರೈಮ್ ಡೇ ಸೇಲ್ ಕೇವಲ 36 ತಾಸುಗಳಿಗೆ ಸೀಮಿತವಾಗಿರಲಿದ್ದು ಜುಲೈ 17 ರ ಮಧ್ಯರಾತ್ರಿಗೆ ಸೇಲ್ ಮುಕ್ತಾಯಗೊಳ್ಳುತ್ತದೆ.

ಎಸ್‌ಬಿಐ  ಕ್ರೆಡಿಟ್ ಕಾರ್ಡ್ ಆಫರ್

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಆಫರ್

ಫ್ಲಿಪ್ ಕಾರ್ಟ್ ತನ್ನ ಸೇಲ್ ಬಗ್ಗೆ ಹೆಚ್ಚೇನೂ ಹೇಳಿಕೊಂಡಿಲ್ಲ. ಆದರೆ ನಾವು ಏನನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಕೆಲವು ಸೂಚನೆಗಳನ್ನು ನೀಡಿದೆ.ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಶೇಕಡಾ 10 ರ ಇನ್ಸ್ ಟೆಂಟ್ ರಿಯಾಯಿತಿಯನ್ನು ನಿರೀಕ್ಷಿಸಬಹುದಾಗಿದೆ. ಪ್ರತಿ ಎಂಟು ಘಂಟೆಗಳಿಗೊಮ್ಮೆ ಫ್ಲಿಪ್ ಕಾರ್ಟ್ ನ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆಯಂತೆ. ಜುಲೈ 16 ರ ಮಧ್ಯಾಹ್ನ 4 ಘಂಟೆಯಿಂದ ಸಂಜೆ 6 ಘಂಟೆಯವರೆಗಿನ ಸೇಲ್ ನಲ್ಲಿ ರಶ್ ಅವರ್ ಡೀಲ್ಸ್ ಎಂದು ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆಯಂತೆ. ಕೆಲವು ಪ್ರಮುಖ ವಿಭಾಗಗಳ ವಸ್ತುಗಳಿಗೆ ಭಾರೀ ರಿಯಾಯಿತಿ ಇರಲಿದೆ ಎಂದು ಫ್ಲಿಫ್ ಕಾರ್ಟ್ ಹೇಳಿಕೊಂಡಿದೆ.

ಶೇ.80 ರಷ್ಟು ರಿಯಾಯಿತಿ ನಿರೀಕ್ಷೆ

ಶೇ.80 ರಷ್ಟು ರಿಯಾಯಿತಿ ನಿರೀಕ್ಷೆ

ಈ ಸೇಲ್ ನಲ್ಲಿ ಫ್ಲಿಫ್ ಕಾರ್ಟ್ ಸ್ಯಾಮ್ ಸಂಗ್, ಗೂಗಲ್ ಪಿಕ್ಸಲ್, ವಿವೋ, ಮತ್ತು ಆಸೂಸ್ ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡಲಿದೆ. ಜೊತೆಗೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಸುಮಾರು ಶೇಕಡಾ 80 ರಷ್ಟು ರಿಯಾಯಿತಿ ಸಿಗುವ ನಿರೀಕ್ಷೆ ಇದ್ದು ಲ್ಯಾಪ್ ಟಾಪ್, ಹೆಡ್ ಫೋನ್ ಮತ್ತು ಸ್ಪೀಕರ್ ಗಳು ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಮನೆಯ ಅಲಂಕಾರಿಕ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಉದಾಹರಣೆಗೆ ಸ್ಯಾಮ್ ಸಂಗ್ ಟಿವಿ, ವಿಯು ಹಾಗು ಇತ್ಯಾದಿಗಳೂ ಕೂಡ ಕಡಿಮೆ ಬೆಲೆಗೆ ಈ ಸೇಲ್ ನಲ್ಲಿ ಕೊಂಡುಕೊಳ್ಳುವ ಅವಕಾಶ ಗ್ರಾಹಕರಿಗೆ ಇದೆ.

ಪ್ರೈಮ್ ಸದಸ್ಯತ್ವಕ್ಕೆ ಪ್ರೈಮ್ ಡೇ ಸೇಲ್

ಪ್ರೈಮ್ ಸದಸ್ಯತ್ವಕ್ಕೆ ಪ್ರೈಮ್ ಡೇ ಸೇಲ್

ಇನ್ನೊಂದೆಡೆ ಅಮೇಜಾನ್ ಕೂಡ ಸುಮಾರು 200 ವಸ್ತುಗಳನ್ನು ಈ ವಿಶೇಷ ಮಾರಾಟದ ದಿನದಲ್ಲಿ ಬಿಡುಗಡೆಗೊಳಿಸಲಿದೆ. ಆದರೆ, ಈ ಮಾರಾಟವು ಕೇವಲ ಅಮೇಜಾನ್ ಚಂದಾದಾರಿಕೆ ಇರುವವರಿಗೆ ಮಾತ್ರ ಲಭ್ಯವಾಗುತ್ತದೆ. ಸೇಲ್ ನ ಲಾಭವನ್ನು ಪಡೆಯಬೇಕು ಎಂದರೆ ನೀವು ಪ್ರೈಮ್ ಸದಸ್ಯತ್ವವನ್ನು ಪಡೆದಿರಬೇಕಾಗುತ್ತದೆ. ಪ್ರೈಮ್ ಸದಸ್ಯತ್ವವನ್ನು ತಿಂಗಳಿಗೆ ಬೇಕಿದ್ದರೂ ಕೊಂಡುಕೊಳ್ಳುವ ಅವಕಾಶವನ್ನು ಅಮೇಜಾನ್ ನೀಡಿದ್ದು ಅದಕ್ಕಾಗಿ 129 ರುಪಾಯಿಯ ಮಾಸಿಕ ಚಂದಾದಾರಿಕೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ.

ವರ್ಚುವಲ್ ರಿಯಾಲಿಟಿ ಅನುಭವ

ವರ್ಚುವಲ್ ರಿಯಾಲಿಟಿ ಅನುಭವ

ಅಮೇಜಾನ್ ದೆಹಲಿ, ಮುಂಬೈ,ಚೈನೈ, ಮತ್ತು ಕೋಲ್ಕತ್ತಾ ಗ್ರಾಹಕರಿಗೆ ಜುಲೈ 17 ರ ವರೆಗೆ ವರ್ಚುವಲ್ ರಿಯಾಲಿಟಿ ಅನುಭವವನ್ನು ಪಡೆಯುವ ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ. ಇದರ ಪ್ರಕಾರ ಗ್ರಾಹಕರು ವಸ್ತುವನ್ನು ಖರೀದಿಸುವ ಮುನ್ನ ಆ ವಸ್ತುವಿನ ಗುಣಮಟ್ಟದ ಪರಿಶೀಲನೆಗೆ ಅವಕಾಶ ಕೊಡಲಾಗುತ್ತದೆ. ವರ್ಚುವಲ್ ಅನುಭವದ ಒಂದು ಭಾಗವಾಗಿ, ವಸ್ತುವಿನ ಸೈಜ್, ಹತ್ತಿರದಿಂದ ವಸ್ತುವು ಹೇಗಿದೆ ಎಂಬ ಸಂಪೂರ್ಣ 360 ಡಿಗ್ರಿ ಕೋನದ ವಿವರಣೆಯೂ ಕೂಡ ಇದರಲ್ಲಿ ಲಭ್ಯವಾಗುತ್ತದೆ. ಅವರು ಯಾವ ವಾತಾವರಣದಲ್ಲಿ ಆ ವಸ್ತುವನ್ನು ಬಳಕೆ ಮಾಡಬೇಕು ಎಂದುಕೊಂಡಿದ್ದಾರೋ ಅದಕ್ಕೆ ಗ್ರಾಹಕರು ಖರೀದಿಸಬೇಕು ಎಂದುಕೊಳ್ಳುವ ವಸ್ತು ಹೊಂದಿಕೆಯಾಗಲಿದೆಯಾ ಎಂಬುದನ್ನು ಕೂಡ ಪರೀಕ್ಷೆ ಮಾಡಿಕೊಳ್ಳಬಹುದು.

Best Mobiles in India

English summary
Flipkart takes on Amazon Prime Day Sale with Big Shopping Days from July 16. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+