Home
ಸುದ್ದಿಜಾಲ

ಅಮೆಜಾನ್‌ಗೆ ಪೈಪೋಟಿ ನೀಡಲು ಫ್ಲಿಪ್‌ಕಾರ್ಟ್‌ನಿಂದ ಉಚಿತ ಸೇವೆ!

ದೇಶದ ಇ ಕಾಮರ್ಸ್ ಉದ್ಯಮದ ಪ್ರತಿಸ್ಪರ್ಧಿ ಅಮೆಜಾನ್‌ಗೆ ಪೈಪೋಟಿ ನೀಡುವ ಸಲುವಾಗಿ ಫ್ಲಿಪ್‌ಕಾರ್ಟ್ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ದೇಶದಲ್ಲಿ ಮಾರುಕಟ್ಟೆ ವಿಸ್ತರಣೆ ಮತ್ತು ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್, ಉಚಿತ ಚಲನಚಿತ್ರ, ವೀಡಿಯೋ ಸ್ಟ್ರೀಮಿಂಗ್ ಸೇವೆಯನ್ನು ಒದಗಿಸಲು ಸಿದ್ಧತೆ ನಡೆಸಿದೆ.

ಅಮೆಜಾನ್‌ಗೆ ಪೈಪೋಟಿ ನೀಡಲು ಫ್ಲಿಪ್‌ಕಾರ್ಟ್‌ನಿಂದ ಉಚಿತ ಸೇವೆ!

ಹೌದು, ದೇಶದಲ್ಲಿ ಫ್ಲಿಪ್‌ಕಾರ್ಟ್ ಹತ್ತಿರದ ಪ್ರತಿಸ್ಪರ್ಧಿಯಾಗಿರುವ ಅಮೆಜಾನ್ ತನ್ನ ಪ್ರೈಮ್ ವಿಡಿಯೋ ಮೂಲಕ ಇ ಕಾಮರ್ಸ್ ವೇದಿಕೆಯಲ್ಲಿ ತನ್ನೆಲ್ಲಾ ಪ್ರಯತ್ನಗಳನ್ನು ದ್ವಿಗುಣಗೊಳಿಸುತ್ತಿದೆ. ಇದನ್ನು ಮನಗಂಡಿರುವ ಫ್ಲಿಪ್‌ಕಾರ್ಟ್ ಕೂಡ ಮನರಂಜನೆ ಲೋಕಕ್ಕೆ ಕಾಲಿಡಲು ಸಜ್ಜಾಗಿದ್ದು, ಗ್ರಾಹಕರನ್ನು ಸೆಳೆಯುವ ಸಲುವಾಗಿ ವಿಡಿಯೋ ಸ್ಟ್ರೀಮಿಂಗ್ ಸೇವೆಗಳಿಗೆ ತೆರೆದುಕೊಳ್ಳುತ್ತಿದೆ.

ಇದಕ್ಕಾಗಿ ಫ್ಲಿಪ್‌ಕಾರ್ಟ್ ನೂತನ ವಿಡಿಯೋ ಸ್ಟ್ರೀಮಿಂಗ್ ಆಪ್ ಒಂದನ್ನು ಬಿಡುಗಡೆ ಮಾಡಲಿದ್ದು, ಅದರ ಮೂಲಕ, ಚಲನಚಿತ್ರ, ವಿಡಿಯೋ ಮತ್ತು ವೆಬ್‌ ಸಿರೀಸ್‌ಗಳನ್ನು ಒದಗಿಸಲಿದೆ. ಇದು ಫ್ಲಿಪ್‌ಕಾರ್ಟ್ ಪ್ಲಸ್ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ ಎಂದು ಹೇಳಲಾಗಿದೆ. ಆದರೆ, ಈ ಸೇವೆಯನ್ನು ಉಚಿತವಾಗಿ ಬಳಸಲು 300 ರಿವಾರ್ಡ್ ಪಾಯಿಂಟ್‌ಗಳನ್ನು ಸಂಗ್ರಹಿಸಬೇಕಿದೆ.

ಅಮೆಜಾನ್‌ಗೆ ಪೈಪೋಟಿ ನೀಡಲು ಫ್ಲಿಪ್‌ಕಾರ್ಟ್‌ನಿಂದ ಉಚಿತ ಸೇವೆ!

ಗ್ರಾಹಕರಿಗೆ ಬೇಡಿಕೆಯ ಮೇಲೆ ವೀಡಿಯೊವನ್ನು ಉಚಿತವಾಗಿ ನೀಡಲು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಅರ್ಹರಾಗುತ್ತಾರೆ. ಆದರೆ, ಇದಕ್ಕಾಗಿ ಫ್ಲಿಪ್‌ಕಾರ್ಟ್ ಖರೀದಿದಾರರು 300 ಸೂಪರ್ ಕಾಯಿನ್ಗಳನ್ನು ಅಥವಾ ರಿವಾರ್ಡ್ ಪಾಯಿಂಟ್‌ಗಳನ್ನು ಸಂಗ್ರಹಿಸಬೇಕು. ಪ್ರತಿ ಫ್ಲಿಪ್‌ಕಾರ್ಟ್ 100 ರೂ.ಗಳ ಖರೀದಿಗೆ 2 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.

ಇಂಟರ್‌ನೆಟ್ ಆಧಾರಿತ ವಿಡಿಯೋ ಸ್ಟ್ರೀಮಿಂಗ್ ಸೇವೆಗಳಿಗೆ ಅಧಿಕ ಬೇಡಿಕೆ ವ್ಯಕ್ತವಾಗುತ್ತಿದೆ. ಕಡಿಮೆ ದರಕ್ಕೆ ಲಭ್ಯವಾಗುತ್ತಿರುವ ಇಂಟರ್‌ನೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯ ವಿಸ್ತಾರದಿಂದ ಮನರಂಜನೆಯ ಸೇವೆಗಳು ಜನಪ್ರಿಯವಾಗುತ್ತಿದೆ. ಹೀಗಾಗಿ ಇ ಕಾಮರ್ಸ್ ಜೊತೆಗೆ ಸ್ಟ್ರೀಮಿಂಗ್ ಮಾರುಕಟ್ಟೆ ಪಾಲು ಪಡೆಯಲು ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್ ಮುಂದಾಗಿದೆ.

ಸಿನೆಮಾದಲ್ಲೇ ವಾಸಿಸುವ ಮತ್ತು ಉಸಿರಾಡುವ ದೇಶದಲ್ಲಿ ವೀಡಿಯೊಗೆ ಹೆಚ್ಚು ಮಾರುಕಟ್ಟೆ ಇದೆ. 2016ರಲ್ಲಿ ಭಾರತದಲ್ಲಿ ಅಮೆಜಾನ್‌ನ ಪ್ರೈಮ್ ವಿಡಿಯೋ ಪ್ಲಾಟ್‌ಫಾರ್ಮ್ ಬಿಡುಗಡೆ ಕಂಡ ನಂತರ 13 ಮಿಲಿಯನ್ ಬಳಕೆದಾರರನ್ನು ಹೊಂದಿರುವುದು ಹಾಗೂ ಹಾಟ್‌ಸ್ಟಾರ್, ಎಂಎಕ್ಸ್ ಪ್ಲೇಯರ್ ನಂತರ ಸಂಸ್ಥೆಗಳು ಹೆಚ್ಚು ಜನಪ್ರಿಯತೆ ಹೊಂದಿರುವುದನ್ನು ನಾವು ನೋಡಬಹುದು.

Best Mobiles in India

English summary
Amazon strays ahead of Flipkart owing to its Prime service. To compete with which Flipkart had recently introduced its Flipkart Plus Premium services. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+