Subscribe to Gizbot

ಒಂದೇ ದಿನದಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿ ಬದಲು!!..ಯಾರು ಗೊತ್ತಾ?

Written By:

ವಿಶ್ವದ ನಂಬರ್ ಒನ್ ಶಾಪಿಂಗ್ ಜಾಲತಾಣ ಅಮೆಜಾನ್ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ.! ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಿಇಓ ಜೆಫ್ ಬೆಜೋಸ್ ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.!! ಈ ಮೂಲಕ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಎರಡನೇ ಸ್ಥಾನಕ್ಕಿಳಿದಿದ್ದಾರೆ.!!

ಗುರುವಾರದ ಮಾರುಕಟ್ಟೆ ಆರಂಭದಲ್ಲಿ ಅಮೆಜಾನ್ ಷೇರು ಬೆಲೆ ಹೆಚ್ಚಾಗಿ, ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಕೆಳಗಿಳಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.!ಹಾಗಾದರೆ, ಪ್ರಸ್ತುತ ನಂಬರ್ ಒನ್ ಶ್ರೀಮಂತನ ಆಸ್ತಿ ಎಷ್ಟು? ಮೊದಲು ಎಷ್ಟನೇ ಸ್ಥಾನದಲ್ಲಿದ್ದರು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!! 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದೇ ದಿನದಲ್ಲಿ ಇಷ್ಟೆಲ್ಲಾ ಬದಲಾವಣೆ!!

ಒಂದೇ ದಿನದಲ್ಲಿ ಇಷ್ಟೆಲ್ಲಾ ಬದಲಾವಣೆ!!

ಕೇವಲ ಒಂದು ದಿನದ ಮಾರುಕಟ್ಟೆ ಷೇರುಗಳ ವ್ಯತ್ಯಾಸದಲ್ಲಿ ಜೆಫ್ ಬೆಜೋಸ್, ಬಿಲ್ ಗೇಟ್ಸ್ ಹಿಂದಿಕ್ಕಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ. ಗುರುವಾರದ ಮಾರುಕಟ್ಟೆಯಲ್ಲಿ ಅಮೆಜಾನ್ ಷೇರು ಬೆಲೆ ಶೇ.1.6 ನಷ್ಟು ಹೆಚ್ಚಾಗಿದ್ದು, ಈ ಬದಲಾವಣೆಗೆ ಕಾರವಾಗಿದೆ.

ನಂಬರ್ ಒನ್ ಶ್ರೀಮಂತನ ಆಸ್ತಿ ಎಷ್ಟು?

ನಂಬರ್ ಒನ್ ಶ್ರೀಮಂತನ ಆಸ್ತಿ ಎಷ್ಟು?

ಪ್ರಸ್ತುತ ನಂಬರ್ ಒನ್ ಶ್ರೀಮಂತ ಆಗಿ ಆಯ್ಕೆ ಆಗಿರುವ ಜೆಫ್ ಬೆಜೋಸ್ 90.6 ಶತಕೋಟಿ ಡಾಲರ್ ಆಸ್ತಿಯನ್ನು ಹೊಂದಿದ್ದರೆ ಬುಧವಾರ ಷೇರು ಮಾರುಕಟ್ಟೆ ಕೊನೆಯಾಗುವ ವೇಳೆಗೆ ಬಿಲ್ ಗೇಟ್ಸ್ ಸಂಪತ್ತು 90 ಶತಕೋಟಿ ಡಾಲರ್‌ನಷ್ಟಿತ್ತು ಎಂದು ಫೋರ್ಬ್ಸ್ ವರದಿಯಲ್ಲಿ ಹೇಳಿದೆ.!!

30 ವರ್ಷಗಳಿಂದ ಆರನೇ ಸ್ಥಾನ!!

30 ವರ್ಷಗಳಿಂದ ಆರನೇ ಸ್ಥಾನ!!

ಕಳೆದ 30 ವರ್ಷಗಳಿಂದ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿಯೇ ಮುಂದುವರೆದಿದ್ದ ಬೆಜೋಸ್ ಇದೀಗ ಮೊದಲ ಸ್ಥಾನಕ್ಕೇರಿದ್ದಾರೆ.! 2013ರ ಮೇ ತಿಂಗಳಿಂದಲೂ ಮೊದಲ ಅಥವಾ ಎರಡನೇ ಸ್ಥಾನದಲ್ಲಿ ಮುಂದುವರೆಯುತ್ತಿರುವ ಬಿಲ್‌ಗೇಟ್ಸ್ಗೆ ಇದೇನು ಆಶ್ಚರ್ಯವಲ್ಲ.!!

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
1.4 ಶತಕೋಟಿ ಡಾಲರ್ ಆದಾಯ!!

1.4 ಶತಕೋಟಿ ಡಾಲರ್ ಆದಾಯ!!

ಒಂದೇ ದಿವಸದಲ್ಲಿ ಅಮೆಜಾನ್ ಶೇರುಗಳ ಬೆಲೆ ಭಾರಿ ಹೆಚ್ಚಾಗಿದ್ದರಿಂದ ಬೆಜೋಸ್‌ಗೆ ಒಂದೆದಿನ 1.4 ಶತಕೋಟಿ ಡಾಲರ್ ಆದಾಯ ಹರಿದುಬಂದಿದೆ. ಅಂದರೆ ರೂಪಾಯಿ ಲೆಕ್ಕದಲ್ಲಿ ಅಂದಾಜು 10,000 ಕೋಟಿ ಆಗುತ್ತದೆ.!!

ಓದಿರಿ:ಮೊಬೈಲ್‌ ಅನ್‌ಲಾಕ್‌ ಮಾಡೋಕೆ ಮಾತ್ರವಲ್ಲ ಫಿಂಗರ್‌ಪ್ರಿಂಟ್!!.ಮತ್ತೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Amazon CEO Jeff Bezos briefly became the world's richest man on Thursday.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot