ವಿಶ್ವದ ಸಿರಿವಂತರ ಪಟ್ಟಿ ಬಿಡುಗಡೆ!!..ಅಂಬಾನಿ ಈಗ ವಿಶ್ವದ ಎಷ್ಟನೇ ಶ್ರೀಮಂತ ವ್ಯಕ್ತಿ ಗೊತ್ತಾ?!
ವಜ್ರ ವ್ಯಾಪಾರಿ ನೀರವ್ ಮೋದಿ, ಪಾಪಾ ಜಾನ್ಸ್ ಪಿಜ್ಜಾ ಸಂಸ್ಥಾಪಕ ಜಾನ್ ಸ್ಕ್ಯಾಂಟರ್ ಸೇರಿದಂತೆ ಹಲವರನ್ನು ಈ ಬಾರಿಯ ಪಟ್ಟಿಯಿಂದ ಕೈ ಬಿಡಲಾಗಿದ್ದು, ಈ ವರ್ಷ ಜಾಗತಿಕವಾಗಿ ಶ್ರೀಮಂತರ ಪಟ್ಟಿಯಲ್ಲಿ ಹಲವು ಬದಲಾವಣೆಗಳಾಗಿವೆ.!
18 ವರ್ಷಗಳಿಂದ ವಿಶ್ವದ ಶ್ರೀಮಂತರ ವ್ಯಕ್ತಿ ಎಂಬ ಪಟ್ಟವನ್ನು ಬಿಲಿಗೇಟ್ಸ್ ಅವರು ಕಳೆದುಕೊಂಡಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್‌ನ ಮಾಲಿಕ ಮುಕೇಶ್ ಅಂಬಾನಿ ಅವರು ಸತತ 11ನೇ ವರ್ಷವೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಫೋರ್ಬ್ಸ್ ಬಿಡುಗಡೆ ಮಾಡಿರುವ ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.!!
ಈ ವರ್ಷ ವಿಶ್ವದ ಒಟ್ಟು 2,043 ಸಿರಿವಂತರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಭಾರತದಲ್ಲಿ 18 ಕುಬೇರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. 2018ರ ಫೆಬ್ರುವರಿ 9ರ ವರೆಗಿನ ಷೇರುಗಳ ಮೌಲ್ಯವನ್ನು ಆಧರಿಸಿ ಸಿರಿವಂತರ ಪಟ್ಟಿ ತಯಾರಿಸಿರುವುದಾಗಿ ಫೋರ್ಬ್ಸ್ ತಿಳಿಸಿದೆ.!!

ವಜ್ರ ವ್ಯಾಪಾರಿ ನೀರವ್ ಮೋದಿ, ಪಾಪಾ ಜಾನ್ಸ್ ಪಿಜ್ಜಾ ಸಂಸ್ಥಾಪಕ ಜಾನ್ ಸ್ಕ್ಯಾಂಟರ್ ಸೇರಿದಂತೆ ಹಲವರನ್ನು ಈ ಬಾರಿಯ ಪಟ್ಟಿಯಿಂದ ಕೈ ಬಿಡಲಾಗಿದ್ದು, ಈ ವರ್ಷ ಜಾಗತಿಕವಾಗಿ ಶ್ರೀಮಂತರ ಪಟ್ಟಿಯಲ್ಲಿ ಹಲವು ಬದಲಾವಣೆಗಳಾಗಿವೆ.! ಹಾಗಾದರೆ, ವಿಶ್ವದ ಶ್ರೀಮಂತರ ವ್ಯಕ್ತಿ ಯಾರು? ಪ್ರಪಂಚದಲ್ಲಿ ಅಂಬಾನಿ ಎಷ್ಟನೇ ಶ್ರೀಮಂತ ಎಂಬುದನ್ನು ಮುಂದೆ ತಿಳಿಯಿರಿ.!!

ವಿಶ್ವದ ಶ್ರೀಮಂತ ಜೆಫ್ ಬೆಜೊಸ್!!
ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಅವರು ಸ್ಥಾನ ಸಂಪಾದಿಸಿದ್ದಾರೆ. 18 ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಬಿಲಿಗೇಟ್ಸ್ ಅವರು ಈ ವರ್ಷ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.!! ಕೆಲ ದಿನಗಳ ಹಿಂದಯೇ ಈ ಸುದ್ದಿ ಹರಿದಾಡಿದ್ದರೂ ಸಹ ಫೋರ್ಬ್ಸ್ ಪಟ್ಟಿಯಲ್ಲಿ ಈ ಪ್ರಕಟವಾಗಿದೆ.!!

ಮೊದಲ ಶತ ಕೋಟ್ಯಧಿಪತಿ!!
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಅವರು ವಿಶ್ವದಲ್ಲಿಯೇ ಮೊದಲ ‘ಶತ ಕೋಟ್ಯಧಿಪತಿ'ಯಾಗಿ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ. 7.28 ಲಕ್ಷ ಕೋಟಿ ಆಸ್ತಿಯ ಒಡೆಯರಾಗಿರುವ ಜೆಫ್ ಬೆಜೊಸ್ ಅವರ ಆಸ್ತಿ ಕೇವಲ ಒಂದು ವರ್ಷದಲ್ಲಿಯೇ ಸುಮಾರು 2.5 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ.!!

ಜಾಕ್‌ಮಾ ಅವರನ್ನು ಹಿಂದಿಕ್ಕಿದ ಅಂಬಾನಿ!!
ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಸಿರಿವಂತರ ಪಟ್ಟಿಯಲ್ಲಿ ಕಳೆದ 8 ವರ್ಷಗಳಿಂದಲೂ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಖೇಶ್ ಅಂಬಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಜೊತೆಗೆ ಚೀನಾದ ಜಾಕ್‌ಮಾಅವರನ್ನು ಹಿಂದಿಕ್ಕಿರುವ ಅಂಬಾನಿ 33ನೇ ಸ್ಥಾನದಿಂದ ಈ ವರ್ಷ 19ನೇ ಸ್ಥಾನಕ್ಕೆ ಜಿಗಿದಿದ್ದಾರೆ.!!

ನೀರವ್ ಮೋದಿಗೆ ಸ್ಥಾನವಿಲ್ಲ.!!
ಸಾವಿರಾರು ಕೋಟಿ ವಂಚನೆ ಪ್ರಕರಣದಲ್ಲಿ ದೇಶಬಿಟ್ಟು ಹೋಗಿರುವ ವಜ್ರ ವ್ಯಾಪಾರಿ ನೀರವ್ ಮೋದಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿರುವ ಸಿರಿವಂತರ ಪಟ್ಟಿಯಲ್ಲಿ ಕೈಬಿಡಲಾಗಿದೆ. ಇನ್ನು ಪ್ರಪಂಚದಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಅಲ್ವೀದ್ ಬಿನ್ ತಲಾಲ್ ಅಲ್ ಸೌದ್, ಕ್ರಿಸ್ಟೊಫೆಲ್ ಮತ್ತು ಜಾನ್ ಸ್ಕ್ಯಾಂಟರ್ ಅವರನ್ನು ಕೈಬಿಡಲಾಗಿದೆ.!!


ಬಾಲಕೃಷ್ಣಗೆ 274ನೇ ಸ್ಥಾನ !!
ಪಂತಜಲಿ ಆಯುರ್ವೇದ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಅವರು ಆಸ್ತಿ ಭಾರೀ ಹೆಚ್ಚಳವಾಗಿದೆ. ಈ ವರ್ಷದ ಸಿರಿವಂತರ ಪಟ್ಟಿಯಲ್ಲಿ ಪಂತಜಲಿ ಆಯುರ್ವೇದ ಸಂಸ್ಥೆಯ ಆಚಾರ್ಯ ಬಾಲಕೃಷ್ಣ 274ನೇ ಸ್ಥಾನ ಪಡೆದಿದ್ದಾರೆ. ಕೋಟ್ಯಧಿಪತಿ ಅಧ್ಯಕ್ಷ ಎಂದು ಖ್ಯಾತಿ ಗಳಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 544ನೇ ಸ್ಥಾನದಿಂದ 766ನೇ ಸ್ಥಾನಕ್ಕೆ ಕುಸಿದಿದ್ದಾರೆ.!!


Click it and Unblock the Notifications








