ಟ್ರಂಪ್‌ಗೆ ಸೆಡ್ಡು ಹೊಡೆಯಲು ಟಾಂಗ್ ಕೊಟ್ಟ ಚೀನಾ..!

|

ಅಮೆರಿಕಾದಲ್ಲಿ ಚೀನಾ ವಸ್ತುಗಳನ್ನು ಮಾರಾಟ ಮಾಡದಂತೆ ನಿರ್ಭಂದವನ್ನು ವಿಧಿಸುವ ಮೂಲಕ ಚೀನಾವನ್ನು ಆರ್ಥಿಕವಾಗಿ ದುರ್ಬಲ ಗೊಳಿಸಲು ಮುಂದಾಗಿದ್ದ ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಚೀನಾ ಹೊಸದೊಂದು ಟಾಂಗ್ ಅನ್ನು ನೀಡಿದೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ಆಪಲ್ ಐಫೋನ್ ಗಳನ್ನು ಅನೇಕ ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಮಾದರಿಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐಫೋನ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಇದರ ಬಳಕೆಯಲ್ಲಿ ತೊಂದರೆಯನ್ನು ಅನುಭವಿಸಿದ್ದಾರೆ.

ಟ್ರಂಪ್‌ಗೆ ಸೆಡ್ಡು ಹೊಡೆಯಲು ಟಾಂಗ್ ಕೊಟ್ಟ ಚೀನಾ..!

ಆದರೆ ಅವರು ಬಳಕೆ ಮಾಡಿಕೊಳ್ಳುತ್ತಿರುವ ಐಫೋನ್ ಅನ್ನು ಬೇರೆಯವರು ಟ್ರಾಪ್ ಮಾಡುವ ಸಾಧ್ಯತೆ ಎನ್ನುವ ಮಾತು ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐಫೋನ್ ಬಳಕೆಯನ್ನು ನಿಲ್ಲಿಸಬೇಕು ಎನ್ನುವ ಮಾತುಗಳನ್ನು ಹೇಳಿದ್ದಾರೆ. ಇದಕ್ಕೆ ಚೀನಾ ಟಾಂಗ್ ನೀಡಿದೆ.

ಅಮೆರಿಕಾದ ಆಪಲ್ ಐಫೋನ್ ಬಳಕೆಯನ್ನು ಮಾಡುವುದಕ್ಕೆ ಹೆದರಿಕೆ ಇದ್ದರೆ ನೀವು ಚೀನಾ ಮೂಲದ ಹುವಾವೆ ಫೋನ್ ಗಳನ್ನು ಬಳಕೆ ಮಾಡಿಕೊಳ್ಳಿ ಎನ್ನುವ ಮೂಲಕ ಚೀನಾ ಟ್ರಂಪ್ಗೆ ಸೆಡ್ಡು ಹೊಡೆದಿದೆ. ಈ ಮೂಲಕ ಚೀನಾ ವಸ್ತುಗಳು ಅಮೆರಿಕಾ ಮಾತ್ರವಲ್ಲದೇ ಎಲ್ಲಾ ಕಡೆಗಳಲ್ಲಿಯೂ ಬೇಡಿಕೆಯನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಅಮೆರಿಕಾ ಸಹ ಚೀನಾ ವಸ್ತುಗಳನ್ನು ಬಹಿಷ್ಕರಿಸ ಸಾಧ್ಯವಿಲ್ಲ ಎನ್ನುವುದನ್ನು ಈ ಮೂಲಕ ತಿಳಿಸಿದೆ.

ಇದರಿಂದಾಗಿ ಅಮೆರಿಕಾ ಆರ್ಥಿಕವಾಗಿ ಚೀನಾವನ್ನು ದುರ್ಬಲಗೊಳಿಸುವ ಸಲುವಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಚೀನಾ ಅಮೆರಿಕಾಗೆ ಸೆಡ್ಡು ಹೊಡೆದು ಬೇರೆ ಬೇರೆ ದೇಶಗಳ್ಲಲ್ಲಿ ತನ್ನ ಮಾರುಕಟ್ಟೆಯನ್ನು ಹುಡುಕಿಕೊಂಡಿದೆ. ಅಲ್ಲದೇ ಅಮೆರಿಕಾ ಬೇಕಾಗಿಲ್ಲ ಬೇರೆ ದೇಶಗಳೆ ನಮಗೆ ಸಾಕು ಎಂದು ತಿಳಿಸಿದೆ.

ಒಂದು ಮಾದರಿಯಲ್ಲಿ ಅಮೆರಿಕಾದಲ್ಲಿ ಬದಲಾವಣೆಯನ್ನು ಹುಟ್ಟಿಸುವ ಕನಸು ತೋರಿಸುತ್ತಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಾದಲ್ಲಿ ಬೇರೆ ದೇಶದವರಿಗೆ ಜಾಗ ಇಲ್ಲ ಎನ್ನುವ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಇದರಿಂದ ಮಂದೆ ಅಮೆರಿಕಾಗೆ ತೊಂದರೆ ಎದುರಾಗಲಿದೆ.

ಒಟ್ಟಿನಲ್ಲಿ ಚೀನಾ ಒಂದೊದೇ ಮಾದರಿಯಲ್ಲಿ ಅಮೆರಿಕಾಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಅಲ್ಲದೇ ಸಿಕ್ಕ ಸಂದರ್ಭದಲ್ಲಿ ಟಾಂಗ್ ಅನ್ನು ನೀಡುತ್ತಿದೆ ಎನ್ನಲಾಗಿದೆ.

Best Mobiles in India

English summary
Forget the iPhone and go for Huawei: China to Trump. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X