Home
ಸುದ್ದಿಜಾಲ

ಮನೆ ಮುರಿದ ಗೇಮ್‌..! 200 ಡೈವರ್ಸ್‌ಗೆ ಕಾರಣವಾದ ಫೋರ್ಟ್‌ನೈಟ್‌..!

ಗಂಡ ಹೆಂಡತಿ ಡೈವೋರ್ಸ್ ಆಗುವುದಕ್ಕೆ ಕಾರಣ ಏನು ಇರುತ್ತೆ ಹೇಳಿ? ಗಂಡ ಚೆನ್ನಾಗಿ ನೋಡಿಕೊಳ್ಳುವುದಿಲ್ಲ, ಹೆಂಡತಿ ಮನೆ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ, ಗಂಡ ಹೆಂಡತಿ ನಡುವೆ ಸಾಮರಸ್ಯ ಇಲ್ಲ,ಗಂಡನ ಮನೆಯಲ್ಲಿ ಕಿರುಕುಳ, ಗಂಡನ ಪುರುಷತ್ವ ಕೊರತೆ ಇತ್ಯಾದಿಗಳು.

ಮನೆ ಮುರಿದ ಗೇಮ್‌..! 200 ಡೈವರ್ಸ್‌ಗೆ ಕಾರಣವಾದ ಫೋರ್ಟ್‌ನೈಟ್‌..!

ಆದರೆ ಒಂದು ವೀಡಿಯೋ ಗೇಮ್ ವಿಚ್ಛೇದನಕ್ಕೆ ಕಾರಣವಾಗುತ್ತೆ ಅಂದರೆ ನಂಬುತ್ತೀರಾ? ನಂಬಲೇಬೇಕು. ಆಗಿದ್ರೇ ಈ ಸ್ಟೋರಿ ನೋಡಿ.

ಏನಿದು ಆಟ..?

ಏನಿದು ಆಟ..?

ಪ್ರಸಿದ್ಧವಾಗಿರುವ ಮತ್ತು ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ ಫೋರ್ಟ್ ನೈಟ್ ಸದ್ಯ ಹೆಚ್ಚು ಜನರು ಮಾರುಕಟ್ಟೆಯಲ್ಲಿ ಆಡುತ್ತಿರುವ ಮತ್ತು ಹೊಸ ಆಟಗಾರರ ಸೇರ್ಪಡೆಯಿಂದ ಆಟಗಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒಂದು ಪ್ರಮುಖ ಆಟಗಳಲ್ಲಿ ಒಂದೆನಿಸಿದೆ. ಎಲ್ಲಾ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಈ ಆಟ ಲಭ್ಯವಿಲ್ಲ. ಆದರೂ ಆಟಗಾರರ ಸಂಖ್ಯೆಗೆ ಮಾತ್ರ ಕೊರತೆ ಇಲ್ಲ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇಲ್ಲ..!

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇಲ್ಲ..!

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಗೇಮ್‌ ಇಲ್ಲ. ಎಕ್ಸ್ಟರ್ನಲ್ ಸೋರ್ಸ್ ಮೂಲಕವೂ ಈ ಗೇಮ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಆದರೆ ಅದನ್ನು ಅನುಸರಿಸುವುದು ಸೂಕ್ತವಲ್ಲ.

200 ಡೈವೋರ್ಸ್ ಪ್ರಕರಣಕ್ಕೆ ಕಾರಣವಾದ ಗೇಮ್:

200 ಡೈವೋರ್ಸ್ ಪ್ರಕರಣಕ್ಕೆ ಕಾರಣವಾದ ಗೇಮ್:

ಬ್ಯಾಟಲ್ ರಾಯಲ್ ಗೇಮ್ ಫೋರ್ಟ್ ನೈಟ್ ಒಂದು ರೀತಿಯಲ್ಲಿ ಚಟಕ್ಕೆ ಬೀಳಿಸುವ ಆಟ. ಈ ಚಟ ಯಾವ ಮಟ್ಟಕ್ಕೆ ಪರಿಣಾಮ ಬೀರಿದೆ ಎಂದರೆ ಯುಕೆನಲ್ಲಿ ಸುಮಾರು 200 ಡೈವೋರ್ಸ್ ಪ್ರಕರಣಕ್ಕೆ ಕಾರಣ ಈ ಆಟವೇ ಆಗಿದೆಯಂತೆ. ಡೈವೋರ್ಸ್ ಆನ್ ಲೈನ್ ನೀಡಿರುವ ಮಾಹಿತಿಯ ಪ್ರಕಾರ, 2018 ರ ಸಾಲಿನಲ್ಲಿ ಇದುವರೆಗೆ ಬಂದಿರುವ ಡೈವೋರ್ಸ್ ಪ್ರಕರಣಗಳಲ್ಲಿ ಸುಮಾರು 200 ವಿಚ್ಛೇದನಕ್ಕೆ ಕಾರಣ ಫೋರ್ಟ್ ನೈಟ್ ಗೇಮ್ ಮತ್ತು ಇತರೆ ಆನ್ ಲೈನ್ ಗೇಮ್ ಗಳು ಇದು ಬರೆಯಲಾಗಿದೆ. 4,665 ಡೈವೋರ್ಸ್ ಮನವಿಗಳಲ್ಲಿ ಶೇಕಡಾ 5 ರಷ್ಟಕ್ಕೆ ಕಾರಣಗಳು ಇದೇ ಆಗಿದೆ.

ಆನ್‌ಲೈನ್‌ ಗೇಮ್‌ ಕಾರಣವಾಯಿತಲ್ಲ..!

ಆನ್‌ಲೈನ್‌ ಗೇಮ್‌ ಕಾರಣವಾಯಿತಲ್ಲ..!

ಇದುವರೆಗೂ ಡ್ರಗ್ಸ್, ಆಲ್ಕೋಹಾಲ್, ಅತ್ಯಾಚಾರ, ಲೈಂಗಿಕ ನಿರಾಸಕ್ತಿ ಇತ್ಯಾದಿಗಳು ಡೈವೋರ್ಸ್ ಪ್ರಕರಣಕ್ಕೆ ಕಾರಣಗಳಾಗಿರುತ್ತಿತ್ತು. ಆದರೆ ಇದೀಗ ಆನ್ ಲೈನ್ ಗೇಮಿಂಗ್ ಗಳಿಂದಾಗಿ ಹೊಸದೊಂದು ಚಟವು ಸೇರ್ಪಡೆಯಾಗಿದೆ. ಸಾಮಾಜಿಕ ಜಾಲತಾಣ ಮತ್ತು ಗೇಮಿಂಗ್ ನಂತಹ ಡಿಜಿಟಲ್ ಎಡಿಕ್ಷನ್ ಗಳಿಂದಾಗಿ ವಿಚ್ಛೇದನ ಪ್ರಕರಣಗಳು ನಡೆಯುತ್ತಿರುವುದು ಆಶ್ಚರ್ಯವೇ ಸರಿ. ಯಾವ ರೀತಿಯ ಅಧ್ಯಯನವನ್ನು ಈ ಡಾಟಾ ಕಲೆಹಾಕುವುದಕ್ಕಾಗಿ ನಡೆಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಆದರೆ ಆನ್ ಲೈನ್ ಗೇಮ್ ಗಳು ಇಂತಹ ಸಮಸ್ಯೆಯನ್ನು ತಂದೊಡ್ಡುತ್ತಿದೆ ಎಂಬುದೇನೋ ನಿಜ.

ಯುಕೆಯಲ್ಲಿ ಬೆಳಕಿಗೆ ಬಂದಿದೆ

ಯುಕೆಯಲ್ಲಿ ಬೆಳಕಿಗೆ ಬಂದಿದೆ

ಅದ್ರಲ್ಲೂ ಪ್ರಮುಖವಾಗಿ ಹೆಚ್ಚು ಪ್ರಸಿದ್ಧಿಯಾಗಿರುವ ಫೋರ್ಟ್ ನೈಟ್ ಮತ್ತು ಇತರೆ ರಾಯಲ್ ಬ್ಯಾಟಲ್ ಗೇಮ್ ಗಳು ಮದುವೆ ಮುರಿದು ಬೀಳಲು ಕಾರಣವಾಗುತ್ತಿರುವುದಂತೂ ದಿಟ. ಆದರೆ ಈ ಡಾಟಾವು ಕೇವಲ ಯುಕೆಗೆ ಮಾತ್ರ ಸಂಬಂಧಿಸಿರುವುದಾಗಿದೆ. ಒಂದು ವೇಳೆ ಇಡೀ ವಿಶ್ವಕ್ಕೆ ಪರಿಗಣಿಸಿದರೆ ಇದರ ಸಂಖ್ಯೆ ಇನ್ನೂ ಅಧಿಕವಾಗಿರುವ ಸಾಧ್ಯತೆ ಇದೆ. ಒಟ್ಟಾರೆ ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿಯಾಗುತ್ತಿರುವ ಆನ್ ಲೈನ್ ಗೇಮ್ ಗಳು ಸಂಬಂಧಗಳನ್ನು ಹಾಳು ಮಾಡುತ್ತಿದೆ ಎಂಬುದು ಮಾತ್ರ ದುರದೃಷ್ಟಕರ.

Best Mobiles in India

English summary
Fortnite Video Game Caused Over 200 Divorces. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+