ಭಾರತದಲ್ಲಿ ಫಾಸಿಲ್ ಜನ್ 5E ಸ್ಮಾರ್ಟ್‌ವಾಚ್ ಲಾಂಚ್!
ಜನಪ್ರಿಯ ಫಾಸಿಲ್ ಕಂಪೆನಿ ತನ್ನ ಹೊಸ ಫಾಸಿಲ್ ಜನ್ 5E ಸ್ಮಾರ್ಟ್‌ವಾಚ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಜನ್ 5E ಎಂಬುದು ಫಾಸಿಲ್ ಜನ್ 5ರ ಟೋನ್ಡ್ ಡೌನ್ ಆವೃತ್ತಿಯಾಗಿದೆ. ಇನ್ನು ಈ ಸ್ಮಾರ್ಟ್ ವಾಚ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 3100 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ತ್ವರಿತ ಚಾರ್ಜ್, 3ATM ವಾಟರ್ ರೆಸಿಸ್ಟೆನ್ಸ್ ಮತ್ತು ಹಾರ್ಟ್ ಬೀಟ್ ಮಾನಿಟರಿಂಗ್ ಫೀಚರ್ಸ್‌ಗಳನ್ನು ಹೊಂದಿದೆ. ಫಾಸಿಲ್ ಜನ್ 5E ಅನ್ನು ಅನೇಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಹೌದು ಫಾಸಿಲ್ ಕಂಪೆನಿ ತನ್ನ ಹೊಸ ಫಾಸಿಲ್ ಜನ್ 5E ಸ್ಮಾರ್ಟ್‌ವಾಚ್ ಅನ್ನು ಭಾರತದಲ್ಲಿ ಅನಾವರಣ ಮಾಡಿದೆ. ಇನ್ನು ಈ ಸ್ಮಾರ್ಟ್‌ವಾಚ್ 44mm ಮತ್ತು 42mm ಗಾತ್ರದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ 1.19 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಫೀಚರ್ಸ್ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಾಸಿಲ್ ಜನ್ 5E ಸ್ಮಾರ್ಟ್‌ವಾಚ್ 44mm ಮತ್ತು 42mm ಗಾತ್ರದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಈ ಎರಡೂ ರೂಪಾಂತರಗಳು ಒಂದೇ ವಿಶೇಷಣಗಳನ್ನು ಹೊಂದಿವೆ. ಇನ್ನು ಫಾಸಿಲ್ ಜನ್ 5E ಸ್ಮಾರ್ಟ್ ವಾಚ್ 390x390 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 1.19 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 328ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇದಲ್ಲದೆ ಈ ವಾಚ್ ಸ್ಮೋಕ್ ಸ್ಟೇನ್ಲೆಸ್ ಸ್ಟೀಲ್ 5ATM ವಾಟರ್ ರೆಸಿಸ್ಟೆನ್ಸ್ ಅನ್ನು ಸಹ ಹೊಂದಿದೆ.

ಇನ್ನು ಈ ಸ್ಮಾರ್ಟ್ ವಾಚ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ವೇರ್ 3100 SoC ಪ್ರೊಸೆಸರ್ ಅನ್ನು ಹೊಂದಿದೆ. ಹಾಗೆಯೇ 1GB RAM ಮತ್ತು 4GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇನ್ನು ಫಿಟ್‌ನೆಸ್ ಟ್ರ್ಯಾಕಿಂಗ್ ವಿಷಯದಲ್ಲಿ, ಇದು ಗೂಗಲ್ ಫಿಟ್‌ನೊಂದಿಗೆ ಬರುತ್ತದೆ ಮತ್ತು ಚಟುವಟಿಕೆಯ ಗುರಿಗಳು, ಹಂತಗಳು, ನಿದ್ರೆ, ಹೃದಯ ಬಡಿತ, ಕಾರ್ಡಿಯೋ ಮಟ್ಟಗಳನ್ನು ಟ್ರ್ಯಾಕ್ ಮಾಡಬಹುದು. ಇದಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 4.2 LE, NFC ಮತ್ತು Wi-Fi ಅನ್ನು ಬೆಂಬಲಿಸಲಿದೆ.

ಇದಲ್ಲದೆ ಈ ವಾಚ್ ಆಫ್-ಬಾಡಿ ಐಆರ್ ಮತ್ತು ಪಿಪಿಜಿ ಹೃದಯ ಬಡಿತ ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು ಈ ವಾಚ್ ವಿಸ್ತೃತ ಮೋಡ್‌ನಲ್ಲಿ, ಬ್ಯಾಟರಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯುತ್ತದೆ ಎಂದು ಫಾಸಿಲ್ ಕಂಪೆನಿ ಹೇಳಿದ್ದು, ಇದನ್ನು 50 ನಿಮಿಷಗಳಲ್ಲಿ 80 ಪ್ರತಿಶತಕ್ಕೆ ಚಾರ್ಜ್ ಮಾಡಬಹುದು. ಡೈಲಿ ಮೋಡ್, ವಿಸ್ತೃತ ಮೋಡ್, ಟೈಮ್ ಓನ್ಲಿ ಮೋಡ್ ಮತ್ತು ಕಸ್ಟಮ್ ಮೋಡ್ ಸೇರಿದಂತೆ ಅನೇಕ ಬ್ಯಾಟರಿ ಮೋಡ್‌ಗಳನ್ನು ಸಹ ಹೊಂದಿದೆ. ಇನ್ನು ಈ ವಾಚ್ ಬೆಲೆ ಜಿಎಸ್‌ಟಿ ಸೇರಿದಂತೆ 18,490 ರೂ ಹೊಂದಿದ್ದು, ಇದು ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.


Click it and Unblock the Notifications



