Home
ಸುದ್ದಿಜಾಲ

Fossil: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಫೊಸಿಲ್‌ ಹೈಬ್ರೀಡ್‌HR ಸ್ಮಾರ್ಟ್‌ವಾಚ್‌!

ಭಾರತದ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಭಾರಿ ಬೇಡಿಕೆ ಇದೆ. ಅದರಲ್ಲೂ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳು ಬಾರಿ ಜನಪ್ರಿಯತೆಯನ್ನ ಪಡೆದುಕೊಂಡಿವೆ. ಇದಲ್ಲದೆ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳು ಲಭ್ಯವಿದ್ದು, ಗ್ರಾಹಕರು ತಮ್ಮ ನೆಚ್ಚಿನ ಆಕರ್ಷಕ ಫೀಚರ್ಸ್‌ಗಳನ್ನ ಒಳಗೊಂಡ ಸ್ಮಾರ್ಟ್‌ವಾಚ್‌ಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಜನಪ್ರಿಯ ಸ್ಮಾರ್ಟ್‌ವಾಚ್‌ ತಯಾರಿಕ ಕಂಪೆನಿ ಆಗಿರುವ ಫೊಸಿಲ್‌ ಸ್ಮಾರ್ಟ್‌ವಾಚ್‌ ಕಂಪೆನಿ ತನ್ನ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ.

ಅಮೆರಿಕಾ

ಹೌದು, ಅಮೆರಿಕಾ ಮೂಲದ ಫೊಸಿಲ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಹೈಬ್ರಿಡ್ HR ಸ್ಮಾರ್ಟ್ ವಾಚ್ ಅನ್ನು ದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ವಾಚ್ ರೌಂಡ್-ಡಯಲ್ ಮಾದರಿಯ ವೈವಿಧ್ಯಮಯ ಡಯಲ್ ಮತ್ತು ಸ್ಟ್ರಾಪ್ ಆಯ್ಕೆಗಳನ್ನ ಹೊಂದಿದ್ದು, ಎರಡು ವಾರಗಳಿಗಿಂತ ಹೆಚ್ಚು ಬ್ಯಾಟರಿ ಅವಧಿಯನ್ನು ನೀಡಲಿದ್ದು, ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡೋ ಸೂಚನೆ ನೀಡಿದೆ.

ಕಂಪೆನಿಯ

ಫೊಸಿಲ್‌ ಕಂಪೆನಿಯ ಹೈಬ್ರಿಡ್‌ HR ಸ್ಮಾರ್ಟ್‌ವಾಚ್‌ ಒಂದು ರೌಂಡ್ ಡಯಲ್, ಎರಡು ಮೆಕಾನಿಕಲ್‌ ಹ್ಯಾಂಡ್ಸ್‌ ಮತ್ತು 27mm ಡಿಸ್‌ಪ್ಲೇಯನ್ನ ಹೊಂದಿದೆ. ಇದು ಹಾರ್ಟ್‌ ಬೀಟ್‌ ರೇಟಿಂಗ್‌ ಟ್ರ್ಯಾಕಿಂಗ್‌ ಮಾನಿಟರ್‌, ನೈಜ-ಸಮಯದ ಹವಾಮಾನ, ಕಾಲ್‌ ಮತ್ತು ಪಠ್ಯ ಪೂರ್ವವೀಕ್ಷಣೆ ಹಾಗೂ ಆಕ್ಟಿವಿಟಿಗಳ ಬಗ್ಗೆ ಗಮನಹರಿಸುವ ಟ್ರ್ಯಾಕಿಂಗ್‌ ಒಳಗೊಂಡಿದೆ. ಅಲ್ಲದೆ ನಿದ್ರೆಯ ಟ್ರ್ಯಾಕಿಂಗ್ ಅನ್ನು ಸಹ ಒಳಗೊಂಡಿದೆ. ಇದರಲ್ಲಿ ಒಳಬರುವ ಪಠ್ಯ ಸಂದೇಶಗಳು, ಅಪ್ಲಿಕೇಶನ್ ಆಲರ್ಟ್, ವೆದರ್‌ ಆಪ್ಡೇಟ್‌, ಸೆಕೆಂಡ್‌ ಟೈಂ ಝೋನ್ ಅನ್ನು ಹೊಂದಿದೆ.

ಇದಲ್ಲದೆ

ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಕಸ್ಟಮ್‌ ಗೋಲ್‌ ಟ್ರ್ಯಾಕಿಂಗ್, ವರ್ಕ್‌ಔಟ್‌ ಮೋಡ್‌, ಆಟೋ ಟೈಂ ಸೆಲೆಕ್ಷನ್‌, ಸೆಕೆಂಡರಿ ಟೈಂ ಜೋನ್‌,ಮ್ಯೂಸಿಕ್‌ ಕಂಟ್ರೋಲ್‌,ನೋಟಿಫೀಕೆಶನ್‌ ಆಲರ್ಟ್‌, ಅಲಾರಾಂ ಗಡಿಯಾರ, ಟೈಮರ್, ಸ್ಟಾಪ್‌ವಾಚ್, ಹಾಗೂ ಫೋನ್‌ ಎಲ್ಲಿದೆ ಎಂದು ಗುರ್ತಿಸಬಲ್ಲ ಫೀಚರ್ಸ್‌ಗಳನ್ನ ಒಳಗೊಂಡಿದ್ದು, ಉತ್ತಮ ವಿನ್ಯಾಸದೊಂದಿಗೆ ಈ ಸ್ಮಾರ್ಟ್‌ವಾಚ್‌ ಅನ್ನ ತಯಾರಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಇನ್ನು

ಇನ್ನು ಈ ಸ್ಮಾರ್ಟ್‌ವಾಚ್‌ ಒಂದೇ ಚಾರ್ಜ್‌ನಲ್ಲಿ ಎರಡು ವಾರಗಳಿಗಿಂತ ಹೆಚ್ಚಿನ ಅವಧಿಯ ಬ್ಯಾಟರಿ ಪ್ಯಾಕ್‌ಆಪ್‌ ನೀಡಲಿದ್ದು, ಚಾರ್ಜ್‌ ಮಾಡಲು 50 ನಿಮಿಷಗಳ ತೆಗೆದುಕೊಳ್ಳುತ್ತದೆ ಎಂದು ಕಂಪೆನಿ ಹೇಳಿದೆ. ಇದು ಐಒಎಸ್‌10+ ಮತ್ತು ಅದಕ್ಕಿಂತ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಹಾಗೂ ಆಂಡ್ರಾಯ್ಡ್‌ 5.0 ಮೇಲಿನ ಫೋನ್‌ಗಳಿಗೆ ಈ ಸ್ಮಾರ್ಟ್‌ವಾಚ್‌ ಹೊಂದಿಕೊಳ್ಳಲಿದ್ದು, ಕನೆಕ್ಟಿವಿಟಿಯನ್ನ ಬೆಂಬಲಿಸಲಿದೆ. ಸ್ಮಾರ್ಟ್‌ವಾಚ್‌ಗಳ ಆಪ್‌ ಬಳಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ ಡಯಲ್‌ ಕಸ್ಟಮೈಸ್‌ ಹಾಗೂ ಡೆಪ್ತ್‌ ಡೇಟಾವನ್ನು ವೀಕ್ಷಿಸಬಹುದಾಗಿದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ 3ATM ವಾಟರ್‌ ಪ್ರೂಪ್‌ ಒಳಗೊಂಡಿದ್ದು, ಅಕ್ಸೆಲೆರೊಮೀಟರ್‌ ಅನ್ನು ಸಂಯೋಜಿಸಲಿದ್ದು , ಬ್ಲೂಟೂತ್‌ ಅನ್ನು ಬೆಂಬಲಿಸಲಿದೆ. ಸದ್ಯ ಫೊಸಿಲ್‌ ಹೈಬ್ರಿಡ್ HR ಸ್ಮಾರ್ಟ್‌ವಾಚ್ ಭಾರತದಲ್ಲಿ 14,995, ರೂ. ಬೆಲೆಯನ್ನ ಹೊಂದಿದ್ದು, ಈಗಾಗಲೇ ಅಮೆಜಾನ್ ಇಂಡಿಯಾದಲ್ಲಿ ನೋ ಕಾಸ್ಟ್‌ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಸಿಲಿಕೋನ್ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಪಟ್ಟಿಗಳಲ್ಲಿ ಐದು ಆಯ್ಕೆಗಳಲ್ಲಿ ಈ ಸ್ಮಾರ್ಟ್‌ವಾಚ್‌ ಲಭ್ಯವಿದೆ.

Best Mobiles in India

English summary
The Fossil Hybrid HR smartwatch is priced in India at Rs. 14,995, and is already on sale on Amazon India with no-cost EMI options and bank offers.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+