Home
ಸುದ್ದಿಜಾಲ

ಬೆಂಗಳೂರಿನಲ್ಲಿ 'ಐಫೋನ್ 17' ಉತ್ಪಾದನೆ ಆರಂಭ!..ಎಲ್ಲಿ ಗೊತ್ತಾ?

ಆಪಲ್‌ನ ಬಹು ನಿರೀಕ್ಷಿತ ಐಫೋನ್ 17-ಸರಣಿಯು ಇದೇ ಸೆಪ್ಟೆಂಬರ್‌ನಲ್ಲಿ ಜಾಗತಿಕವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್ ಐಫೋನ್ 17 ಮಾದರಿಯ ಸಾಮೂಹಿಕ ಉತ್ಪಾದನೆ ಪ್ರಾರಂಭವಾಗಿದೆ ಎಂದು ಇತ್ತೀಚಿನ ವರದಿಯೊಂದು ಸೂಚಿಸಿದೆ. ಚೀನಾದ ಹೊರಗೆ ಫಾಕ್ಸ್‌ಕಾನ್‌ನ ಎರಡನೇ ಅತಿದೊಡ್ಡ ಉತ್ಪಾದನಾ ಘಟಕವೆಂದು ಗುರುತಿಸಲ್ಪಟ್ಟಿರುವ, ನಗರದ ದೇವನಹಳ್ಳಿಯಲ್ಲಿರುವ ಫಾಕ್ಸ್‌ಕಾನ್‌ನ ಹೊಸ ಬೆಂಗಳೂರು ಘಟಕದಲ್ಲಿ ಸ್ಟ್ಯಾಂಡರ್ಡ್ ಐಫೋನ್ 17 ಮಾದರಿಯನ್ನು ಉತ್ಪಾದಿಸಲಾಗುತ್ತಿದೆ ಎಂದು ವರದಿಯು ತಿಳಿಸಿದೆ.

ಆಪಲ್‌ನ ಪ್ರಮುಖ ಪೂರೈಕೆದಾರ ಕಂಪನಿ, ತೈವಾನೀಸ್ ಎಲೆಕ್ಟ್ರಾನಿಕ್ಸ್ ದೈತ್ಯ ಕಂಪೆನಿ ಫಾಕ್ಸ್‌ಕಾನ್‌ ಜೂನ್‌ನಲ್ಲಿ ಚೀನಾದಿಂದ ಮುಂಬರುವ ಐಫೋನ್ 17 ಗಾಗಿ ಘಟಕಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತ್ತು. ಆ ಸಮಯದಲ್ಲಿ, ಐಫೋನ್ 17 ಪ್ರಾಯೋಗಿಕ ಉತ್ಪಾದನಾ ಹಂತದಲ್ಲಿತ್ತು ಎಂದು ವರದಿಯಾಗಿದೆ. ನಿರಂತರ ಗ್ರಾಹಕರ ಬೇಡಿಕೆಯಿಂದಾಗಿ ಆಪಲ್ ಈಗಾಗಲೇ ಫಾಕ್ಸ್‌ಕಾನ್‌ನ ಸೌಲಭ್ಯವನ್ನು ಬಳಸಿಕೊಂಡು ಐಫೋನ್ 16 ಮತ್ತು ಐಫೋನ್ 14 ಅನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ. ಇದೀಗ ಐಫೋನ್ 17 ತಯಾರಿಕೆಯನ್ನು ಆರಂಭಿಸಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ 'ಐಫೋನ್ 17' ಉತ್ಪಾದನೆ ಆರಂಭ!..ಎಲ್ಲಿ ಗೊತ್ತಾ?

ದೇವನಹಳ್ಳಿಯಲ್ಲಿರುವ ಫಾಕ್ಸ್‌ಕಾನ್‌ನ ಬೆಂಗಳೂರು ಘಟಕವು 2023 ರಲ್ಲಿ ಯೋಜನೆಯ ಅನುಮೋದನೆಯನ್ನು ಪಡೆಯಿತು ಮತ್ತು ಸುಮಾರು $2.8 ಬಿಲಿಯನ್ (ಸುಮಾರು25,000 ರೂ. ಕೋಟಿ) ಹೂಡಿಕೆಯೊಂದಿಗೆ ಸ್ಥಾಪಿಸಲಾಯಿತು. ಆಪಲ್ ಭಾರತವನ್ನು ಉತ್ಪಾದನಾ ಕೇಂದ್ರವಾಗಿ ದೊಡ್ಡ ಮಟ್ಟದಲ್ಲಿ ಪರಿಗಣಿಸುತ್ತಿದೆ. ಕಂಪನಿಯು ಭಾರತದಲ್ಲಿ ಐಫೋನ್ ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, 2024-25ರ ಅವಧಿಯಲ್ಲಿ 35-40 ಮಿಲಿಯನ್ ಯುನಿಟ್‌ಗಳಿಂದ 2025 ರ ವೇಳೆಗೆ 60 ಮಿಲಿಯನ್ ಯುನಿಟ್‌ಗಳಿಗೆ ಹೆಚ್ಚಿಸಲು ಯೋಜಿಸಿದೆ ಎಂದು ವರದಿಯಾಗಿದೆ.

ಆಪಲ್ ಕಂಪನಿಯು ಸೆಪ್ಟೆಂಬರ್ 9 ರಂದು ತನ್ನ ಐಫೋನ್ 17 ಸರಣಿಯನ್ನು ಬಿಡುಗಡೆ ಮಾಡಲು ನಿರೀಕ್ಷಿಸುತ್ತಿದೆ.! ಈ ಸಾಲಿನಲ್ಲಿ ಸ್ಟ್ಯಾಂಡರ್ಡ್ ಐಫೋನ್ 17, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಇರಬಹುದು. ಈ ವರ್ಷದ ಐಫೋನ್ ಪ್ಲಸ್-ಸರಣಿಯನ್ನು ಬದಲಾಯಿಸುವ ಐಫೋನ್ 17 ಏರ್ ಅನ್ನು ಪರಿಚಯಿಸುವ ಬಗ್ಗೆ ಕೂಡಾ ಕೆಲವು ಕುತೂಹಲಕಾರಿ ಊಹೆಗಳು ಕೇಳಿಸುತ್ತಿವೆ. ಐಫೋನ್ 17 ಏರ್ ಕಂಪನಿಯ ಅತ್ಯಂತ ಸ್ಲಿಮ್ ಪೋನ್ ಆಗಿರಲಿದೆ ಮತ್ತು ಕಡಿಮೆ ಬೆಲೆಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

ಬೆಂಗಳೂರಿನಲ್ಲಿ 'ಐಫೋನ್ 17' ಉತ್ಪಾದನೆ ಆರಂಭ!..ಎಲ್ಲಿ ಗೊತ್ತಾ?

ಐಫೋನ್ 17-ಸರಣಿಯಲ್ಲಿ ಹೊಸ iPhone 17 Air ಅನ್ನು ಪರಿಚಯಿಸಲು ನಿರೀಕ್ಷಿಸಲಾಗಿದೆ, ಇದು ವಿಶೇಷ ಆಕರ್ಷಣೆಯಾಗಿದೆ! ಸೋರಿಕೆಯ ಮಾಹಿತಿಯ ಪ್ರಕಾರ, ಇದು ಆಪಲ್‌ನ ಅತ್ಯಂತ ತೆಳ್ಳಗಿನ ಮತ್ತು ಹಗುರವಾದ ಐಫೋನ್ ಆಗಿದ್ದು, iPhone Plus ಸರಣಿಯನ್ನು ಬದಲಾಯಿಸಲು ಸಿದ್ಧವಾಗಿದೆ. ಫೋನ್‌ನಲ್ಲಿ 6.6-ಇಂಚಿನ 120Hz LTPO AMOLED ಡಿಸ್‌ಪ್ಲೇ ಮತ್ತು 2,800-2,900mAh ಬ್ಯಾಟರಿ ಸಾಮರ್ಥ್ಯವಿರುವುದಾಗಿ ವರದಿಗಳು ತಿಳಿಸುತ್ತವೆ. ಇದರ 5.5-6mm ದಪ್ಪದ ವಿನ್ಯಾಸವು ಕಪ್ಪು, ಬಿಳಿ, ಚಿನ್ನ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದರಲ್ಲಿರುವ A19 ಅಥವಾ A19 Pro ಚಿಪ್‌ಸೆಟ್, 12GB RAM, ವೇಪರ್ ಕೋಲಿಂಗ್ ವ್ಯವಸ್ಥೆ ಮತ್ತು ಆಪಲ್‌ನ 5G ಮೋಡೆಮ್ ಇರುವ ಸಾಧ್ಯತೆ ಇದೆ. ಕ್ಯಾಮೆರಾ ವಿಭಾಗದಲ್ಲಿ 48MP ಪ್ರಾಥಮಿಕ ಕ್ಯಾಮೆರಾ ಮತ್ತು 24MP ಮುಂಭಾಗದ ಕ್ಯಾಮೆರಾ ಇರಲಿದೆ. ಆದರೆ, ಒಂದೇ ಹಿಂಭಾಗದ ಕ್ಯಾಮೆರಾ ಇರುವುದರಿಂದ ವಿಶೇಷ ಫೋಟೋ ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡಲು ಸಾಧ್ಯವಾಗದಿರಬಹುದು. ಪ್ರಾರಂಭಿಕ ಬೆಲೆ $899 ಇರಬಹುದು ಎಂದು ಅಂದಾಜಿಸಲಾಗಿದೆ. ಅಧಿಕೃತ ವಿವರಗಳು ಬಿಡುಗಡೆ ಸಂದರ್ಭದಲ್ಲಿ ಬಹಿರಂಗವಾಗಲಿವೆ.

Best Mobiles in India

English summary
Apple has reportedly begun iPhone 17 production at Foxconn’s Bengaluru facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+