ಕರ್ನಾಟಕಕ್ಕೆ ಕಾಲಿರಿಸಲಿರುವ ಫೋಕ್ಸನ್ ಕಂಪೆನಿ
$131.8 ಬಿಲಿಯನ್ ತೈವಾನ್‌ನ ಇಲೆಕ್ಟ್ರಾನಿಕ್ಸ್ ದೈತ್ಯ ಫೋಕ್ಸನ್ ಕಂಪೆನಿ ಕೆಲವು ದಿನಗಳ ಹಿಂದೆ ಕರ್ನಾಟಕ ಸರಕಾರವನ್ನು ಅಧಿಕೃತವಾಗಿ ಭೇಟಿ ಮಾಡಿದೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ ರತ್ನ ಪ್ರಭ ಕೆಲವು ದಿನಗಳ ಹಿಂದೆ ಈ ತಂಡ ನನ್ನನ್ನು ಸಂಪರ್ಕಿಸಿದ್ದು ವಾರಗಳಲ್ಲಿ ಕರ್ನಾಟಕಕ್ಕೆ ಇವರುಗಳು ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಓದಿರಿ: ಐಫೋನ್ ಬದಲಿಗೆ ಪ್ರೆಶ್ಶರ್ ಕುಕ್ಕರ್: ಅಪರಾಧಿಗಳು ಬಲೆಗೆ
ಥೈವಾನ್‌ನ ಈ ಕಂಪೆನಿ ದೇಶದಲ್ಲಿ ಕೆಲವೊಂದು ಯೋಜನೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿದ್ದು ಕೆಲವೊಂದು ರಾಜ್ಯಗಳೀಗೆ ಭೇಟಿ ನೀಡುವ ಮೂಲಕ ಸಂಭವನೀಯ ರಾಜ್ಯಗಳಲ್ಲಿ ಲಭ್ಯವಿರುವ ಮೂಲಭೂತ ಅಂಶಗಳನ್ನು ಪರಿಶೀಲಿಸಲಿದೆ.

ಕಲಬುರುಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 29,087 ಕೋಟಿಗಿಂತಲೂ ಹೆಚ್ಚು ಹೂಡಿಕೆಯೊಂದಿಗೆ 28 ಕೈಗಾರಿಕಾ ಯೋಜನೆಗಳನ್ನು ಕರ್ನಾಟಕ ಸರಕಾರ ಸಂಪೂರ್ಣಗೊಳಿಸಿದೆ. 11 ಕೈಗಾರಿಕಾ ಯೋಜನೆಗಳನ್ನು ಕಲಬುರ್ಗಿಯಲ್ಲಿ ಮತ್ತು 17 ಯೋಜನೆಗಳನ್ನು ಯಾದಗಿರಿಯಲ್ಲಿ ಸರಕಾರ ಪೂರ್ಣಗೊಳಿಸಿದೆ. ಇದ ಒಟ್ಟಾರೆ 15,472 ಉದ್ಯೋಗಿಗಳನ್ನು ನೀಡುತ್ತಿದೆ.

ಯಾದಗಿರಿ ಜಿಲ್ಲೆಯಲ್ಲಿರುವ ಕಡೆಚೂರ್ ಮತ್ತು ಬಡಿಯಾಲ್ ಹಳ್ಳಿಗಳಲ್ಲಿ ಕೋಚ್ ಬಿಲ್ಡಿಂಗ್ ಫ್ಯಾಕ್ಟ್ರಿಗೆ ರೈಲ್ವೇಗಾಗಿ 150 ಕೋಟಿಗಳನ್ನು ಮಂಜೂರು ಮಾಡಲಾಗಿದೆ. ಇನ್ನು ಇದೇ ಹಳ್ಳಿಗಳಲ್ಲಿ ಕೋಕಾ ಕೋಲಾ ಪಾನೀಯ ಬಾಟಲ್‌ಗಳ ತಯಾರಿಕೆಗಾಗಿ 250 ಕೋಟಿಗಳನ್ನು ಮಂಜೂರು ಮಾಡಲಾಗಿದೆ.


Click it and Unblock the Notifications